AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

New Labour Laws: ಹೊಸ ಕಾರ್ಮಿಕ ಕಾನೂನು ಜಾರಿಗೆ ಭಾರತ ಸರ್ಕಾರ ಸಿದ್ಧತೆ; ನಿಮ್ಮ ಟೇಕ್ ಹೋಮ್ ಸ್ಯಾಲರಿ ಮೇಲೇನು ಪರಿಣಾಮ

ಹೊಸ ಕಾರ್ಮಿಕ ಸಂಹಿತೆಯಡಿ ಏನೆಲ್ಲಾ ಬದಲಾವಣೆ ಆಗಲಿದೆ ಎಂಬ ವಿವರಗಳು ಇಲ್ಲಿವೆ.

New Labour Laws: ಹೊಸ ಕಾರ್ಮಿಕ ಕಾನೂನು ಜಾರಿಗೆ ಭಾರತ ಸರ್ಕಾರ ಸಿದ್ಧತೆ; ನಿಮ್ಮ ಟೇಕ್ ಹೋಮ್ ಸ್ಯಾಲರಿ ಮೇಲೇನು ಪರಿಣಾಮ
ಸಾಂದರ್ಭಿಕ ಚಿತ್ರ
S Chandramohan
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Jun 29, 2022 | 11:49 AM

Share

ಭಾರತದಲ್ಲಿ ಹೊಸ ಕಾರ್ಮಿಕ ಕಾನೂನು ಜಾರಿಗೆ (New Labour Laws) ತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಿದ್ದತೆ ನಡೆಸಿವೆ. ಹೊಸ ಕಾರ್ಮಿಕ ಸಂಹಿತೆ ಜಾರಿಯಾದರೆ, ಕಾರ್ಮಿಕರ ಸಾಮಾಜಿಕ ಭದ್ರತೆಗೆ (Employees Social Welfare) ಹೆಚ್ಚಿನ ಒತ್ತು ಸಿಗುತ್ತದೆ. ಉದ್ಯೋಗಿಗಳಿಗೆ ವಾರದ ರಜೆ (Weekly Off) ಹೆಚ್ಚಾಗುತ್ತಾವೆ. ಓವರ್ ಟೈಮ್ ಡ್ಯೂಟಿಗೆ (Overtime Duty) ಹೆಚ್ಚಿನ ವೇತನ ನೀಡಲಾಗುತ್ತೆ. ಹೊಸ ಕಾರ್ಮಿಕ ಸಂಹಿತೆಯಡಿ ಏನೆಲ್ಲಾ ಬದಲಾವಣೆ ಆಗಲಿದೆ ಎಂಬ ವಿವರಗಳು ಇಲ್ಲಿವೆ.

ತಿದ್ದುಪಡಿಯಾದ ಕಾರ್ಮಿಕ ಕಾನೂನುಗಳ ಅಡಿಯಲ್ಲಿ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳ ಅನುಷ್ಠಾನಕ್ಕೆ ದೇಶವು ಸಿದ್ಧವಾಗಿದೆ. ಈ ಸಂಹಿತಗೆ ಅನುಗುಣವಾಗಿ ಹಲವು ರಾಜ್ಯಗಳು ತಮ್ಮ ಕರಡು ನಿಯಮಗಳನ್ನು ಸಲ್ಲಿಸುತ್ತಿವೆ. ಹೊಸ ಕಾರ್ಮಿಕ ಸಂಹಿತೆಗಳ ಅಡಿಯಲ್ಲಿ, ಉದ್ಯೋಗಿ-ಉದ್ಯೋಗದಾತರ ಸಂಬಂಧ ಮರುವ್ಯಾಖ್ಯಾನಗೊಳ್ಳಲಿದೆ. ಕಾರ್ಮಿಕರ ಸಾಮಾಜಿಕ ಭದ್ರತೆಗೆ ಆದ್ಯತೆ ಸಿಗಲಿದೆ. ಅದರಡಿಯಲ್ಲಿ ಉದ್ಯೋಗಿಯ ಸಂಬಳ, ಪಿಎಫ್ ಕೊಡುಗೆಗಳು ಮತ್ತು ಕೆಲಸದ ಸಮಯ ಸೇರಿದಂತೆ ಹಲವು ಇತರ ವಿಷಯಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗುತ್ತದೆ. ಈ ಕಾನೂನುಗಳು ಒಮ್ಮೆ ಜಾರಿಗೆ ಬಂದರೆ, ದೇಶಾದ್ಯಂತ ಕಂಪನಿಗಳ ಕಾರ್ಯನಿರ್ವಹಣೆ ಬದಲಾಗುವುದು ಅನಿವಾರ್ಯವಾಗಲಿದೆ.

ಹೊಸ ಕಾರ್ಮಿಕ ಕಾನೂನುಗಳು ಜಾರಿಯಾದಾಗ ಅನುಷ್ಠಾನಗೊಳ್ಳಲಿರುವ ಒಂದು ಪ್ರಮುಖ ವಿಷಯವೆಂದರೆ ಕೆಲಸದ ಸಮಯದ ಬದಲಾವಣೆ. ನೌಕರರು ದಿನಕ್ಕೆ 12 ಗಂಟೆಗಳ ಕಾಲ ಕೆಲಸ ಮಾಡುವ ಆಯ್ಕೆಯನ್ನು ಪಡೆಯುತ್ತಾರೆ. ಕಂಪನಿಗಳ ತೀರ್ಮಾನದ ಆಧಾರದ ಮೇಲೆ ಪ್ರತಿ ವಾರ ಮೂರು ದಿನಗಳ ರಜೆಯನ್ನು ಪಡೆಯುತ್ತಾರೆ.

‘ದೈನಂದಿನ ಕೆಲಸದ ಸಮಯವನ್ನು 12 ಗಂಟೆಗೆ, ವಾರದ ಕೆಲಸದ ಸಮಯವನ್ನು 48 ಗಂಟೆಗೆ ಮಿತಿಗೊಳಿಸಲಾಗಿದೆ. ಅಧಿಕ ಅವಧಿ ಪಾವತಿಗಳಿಗೆ ಒಳಪಟ್ಟು 4 ದಿನಗಳ ಕೆಲಸದ ವಾರವನ್ನು ಆಯ್ಕೆ ಮಾಡುವ ಫೆಕ್ಸಿಬಿಲಿಟಿಯನ್ನು ಉದ್ಯೋಗಿಗಳಿಗೆ ನೀಡಲಾಗುತ್ತದೆ. ಇದು ನೌಕರರು ವಾರದಲ್ಲಿ ಕಡಿಮೆ ದಿನಗಳು ಕೆಲಸ ಮಾಡಲು ಕಾರಣವಾಗಬಹುದು. ಈ ಆಯ್ಕೆಯ ಉಪಯೋಗ ಪಡೆದುಕೊಳ್ಳಲು ಅವರು ಪ್ರತಿದಿನ ಕೆಲಸ ಮಾಡಬೇಕಾದ ಅವಧಿ ಹೆಚ್ಚಾಗುತ್ತದೆ ಎಂದು ಇಂಡಸ್ಲಾ ಸಂಸ್ಥೆಯ ಪಾಲುದಾರರಾದ ವೈಭವ್ ಭಾರದ್ವಾಜ್ ಹೇಳಿದರು.

ಹೊಸ ನಿಯಮಗಳ ಪ್ರಕಾರ ನೀವು ವಾರಕ್ಕೆ 48 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡಿದರೆ ನಿಮ್ಮ ನಿಯಮಿತ ವೇತನದ ದುಪ್ಪಟ್ಟು ಹೆಚ್ಚುವರಿ ಸಮಯದ ವೇತನವನ್ನು ನಿಮಗೆ ನೀಡಲಾಗುತ್ತದೆ. ‘ಕಾರ್ಮಿಕ ಸಂಹಿತೆಗಳು ನಿಯಮಿತ ಕೆಲಸದ ಸಮಯವನ್ನು ಮೀರಿದ ಕೆಲಸಕ್ಕೆ ಸಾಮಾನ್ಯ ವೇತನಕ್ಕಿಂತ ಎರಡು ಪಟ್ಟು ಅಧಿಕ ಅವಧಿಯ ವೇತನವನ್ನು ಪಾವತಿಸಲು ಅವಕಾಶ ನೀಡುತ್ತಾವೆ. ಇದಕ್ಕೆ ಸಂಸ್ಥೆಗಳು ತಮ್ಮ ಓವರ್‌ಟೈಮ್ ನೀತಿಗಳನ್ನು ಸುವ್ಯವಸ್ಥಿತಗೊಳಿಸುವುದು ಅಗತ್ಯವಾಗಿದೆ’ ಎಂದು ಡೆಲಾಯ್ಟ್ ಇಂಡಿಯಾದ ಪಾಲುದಾರರಾದ ಸರಸ್ವತಿ ಕಸ್ತೂರಿರಂಗನ್ ಹೇಳಿದ್ದಾರೆ.

ಹೊಸ ಕಾರ್ಮಿಕ ಕಾನೂನುಗಳು ನಿಮ್ಮ ಪಿಎಫ್ ಕೊಡುಗೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಮತ್ತು ಮನೆಗೆ ತೆಗೆದುಕೊಂಡು ಹೋಗುವ ಸಂಬಳವನ್ನು ಹೇಗೆ ನಿರ್ಧರಿಸುತ್ತಾವೆ ಎಂಬುದು ಮುಖ್ಯ ಅಂಶವಾಗಿದೆ. ಇದು ತರಲಿರುವ ಮತ್ತೊಂದು ಪ್ರಮುಖ ಬದಲಾವಣೆಯೆಂದರೆ ಟೇಕ್ ಹೋಮ್ ಸಂಬಳದ ಅನುಪಾತ ಮತ್ತು ಭವಿಷ್ಯ ನಿಧಿಯಲ್ಲಿ ಉದ್ಯೋಗಿಗಳು ಮತ್ತು ಉದ್ಯೋಗದಾತರ ಕೊಡುಗೆ. ಹೊಸ ಕೋಡ್‌ಗಳ ನಿಬಂಧನೆಗಳ ಪ್ರಕಾರ, ಉದ್ಯೋಗಿಯ ಮೂಲ ವೇತನವು ಒಟ್ಟು ವೇತನದ ಶೇ 50ರಷ್ಟಿರಬೇಕು. ಇದರರ್ಥ ಉದ್ಯೋಗಿ ಮತ್ತು ಉದ್ಯೋಗದಾತರ ಪಿಎಫ್ ಕೊಡುಗೆಗಳು ಹೆಚ್ಚಾಗುತ್ತವೆ. ಇದರಿಂದ ಕೆಲವು ಉದ್ಯೋಗಿಗಳಿಗೆ ಟೇಕ್ ಹೋಮ್ ಸಂಬಳ ಕಡಿಮೆಯಾಗುತ್ತದೆ.

‘ಉದ್ಯೋಗಿಗಳು ಗ್ರಾಚ್ಯುಟಿ ರೂಪದಲ್ಲಿ ಉತ್ತಮ ನಿವೃತ್ತಿ ಪ್ರಯೋಜನಗಳನ್ನು ಪಡೆಯುವ ನಿರೀಕ್ಷೆಯಿದೆ. ಪಿಎಫ್ ವೇತನವು ಶಾಸನಬದ್ಧ ವೇತನದ ಸೀಲಿಂಗ್‌ಗಿಂತ ಕಡಿಮೆ ಅಂದರೆ ಪ್ರತಿ ತಿಂಗಳ ವೇತನ ₹ 15,000 ಕಡಿಮೆ ಇರುವ ನೌಕರರಿಗೆ ಸಂಬಂಧಿಸಿದಂತೆ, ಪಿಎಫ್ ಮತ್ತು ಪಿಂಚಣಿ ಕೊಡುಗೆಗಳು ಹೆಚ್ಚಾಗುತ್ತವೆ’ ಎಂದು ಸರಸ್ವತಿ ಕಸ್ತೂರಿರಂಗನ್ ಅಭಿಪ್ರಾಯಪಡುತ್ತಾರೆ. ‘ಸಂಭವನೀಯ ಹಣಕಾಸಿನ ವೆಚ್ಚವನ್ನು ನಿರ್ಣಯಿಸಲು ಹೊಸ ವ್ಯಾಖ್ಯಾನದ ಬೆಳಕಿನಲ್ಲಿ ಸಂಸ್ಥೆಗಳು ತಮ್ಮ ಪರಿಹಾರ ರಚನೆಯನ್ನು ಮರು-ಭೇಟಿ ಮಾಡಬೇಕಾಗಬಹುದು. ಉದಾಹರಣೆಗೆ ಗ್ರಾಚ್ಯುಟಿ ಪಾವತಿಯನ್ನು ಪ್ರಸ್ತುತ ಮೂಲ ವೇತನ ಮತ್ತು ತುಟ್ಟಿಭತ್ಯೆ (ಯಾವುದಾದರೂ ಇದ್ದರೆ) ವೇತನದ ಅಂಶದ ಮೇಲೆ ಲೆಕ್ಕಹಾಕಲಾಗುತ್ತದೆ’ ಎಂದು ಭಾರದ್ವಾಜ್ ಹೇಳಿದ್ದಾರೆ.

ಹೊಸ ಕರಡು ನಿಯಮಗಳ ನಿಬಂಧನೆಗಳ ಅಡಿಯಲ್ಲಿ ನಿವೃತ್ತಿಯ ನಂತರ ಪಡೆಯುವ ಹಣ ಮತ್ತು ಗ್ರಾಚ್ಯುಟಿ ಮೊತ್ತವೂ ಹೆಚ್ಚಾಗುತ್ತದೆ. ‘ಒಮ್ಮೆ ಹೊಸ ನಿಯಮಗಳನ್ನು ಜಾರಿಗೆ ತಂದರೆ, ವೇತನದ ಹೊಸ ವ್ಯಾಖ್ಯಾನದ ಮೇಲೆ ಗ್ರಾಚ್ಯುಟಿಯನ್ನು ಲೆಕ್ಕಾಚಾರ ಮಾಡಬೇಕಾಗುತ್ತದೆ, ಇದು ಹೆಚ್ಚಿನ ಗ್ರಾಚ್ಯುಟಿ ಪಾವತಿಗೆ ಕಾರಣವಾಗಬಹುದು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Published On - 11:48 am, Wed, 29 June 22