ಸ್ಪೇಸ್ ಡಾಕಿಂಗ್ ಆಯ್ತು; 2025ರ ಮೊದಲಾರ್ಧದಲ್ಲಿ ಭಾರತದಿಂದ ಬಾಹ್ಯಾಕಾಶ ಯೋಜನೆಗಳ ಸರಮಾಲೆ

Space missions from India: 2024ರಲ್ಲಿ ಭಾರತದಿಂದ 15 ಬಾಹ್ಯಾಕಾಶ ಮಿಷನ್​ಗಳು ಜಾರಿಯಾಗಿದ್ದವು. ಸ್ಪೇಸ್ ಡಾಕಿಂಗ್ ಪ್ರಯೋಗ ಯಶಸ್ವಿಯಾಗಿತ್ತು. 2025ರಲ್ಲಿ ಕೆಲ ಮಹತ್ವದ ಸ್ಪೇಷ್ ಮಿಷನ್​ಗಳು ನಡೆಯಲಿವೆ. ಮಹಿಳಾ ರೋಬೋವೊಂದನ್ನು ಗಗನಕ್ಕೆ ಕಳುಹಿಸಲಾಗುತ್ತಿದೆ. ವಿಶ್ವದ ಅತ್ಯಂತ ದುಬಾರಿ ಸೆಟಿಲೈಟ್ ಅನ್ನು ಭಾರತದಿಂದ ಲಾಂಚ್ ಮಾಡಲಾಗುತ್ತಿದೆ.

ಸ್ಪೇಸ್ ಡಾಕಿಂಗ್ ಆಯ್ತು; 2025ರ ಮೊದಲಾರ್ಧದಲ್ಲಿ ಭಾರತದಿಂದ ಬಾಹ್ಯಾಕಾಶ ಯೋಜನೆಗಳ ಸರಮಾಲೆ
ಇಸ್ರೋ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 01, 2025 | 4:52 PM

ನವದೆಹಲಿ, ಜನವರಿ 1: 2025ರ ವರ್ಷವು ಭಾರತದ ಪಾಲಿಗೆ ಬಹಳ ಮಹತ್ವದ್ದೆನಿಸಿದೆ. ಅದರಲ್ಲೂ ಇಸ್ರೋಗೆ ಕೈತುಂಬಾ ಕೆಲಸಗಳಿವೆ. 2024ರ ವರ್ಷಾಂತ್ಯದಲ್ಲಿ ಸ್ಪೇಸ್ ಡಾಕಿಂಗ್​ನಂತಹ ಮಹತ್ತರ ಪ್ರಯೋಗ ಮಾಡಿದ ಇಸ್ರೋ, 2025ರ ಮೊದಲಾರ್ಧದಲ್ಲಿ ಐದಕ್ಕೂ ಹೆಚ್ಚು ದೊಡ್ಡ ಮಿಷನ್​ಗಳನ್ನು ಹೊಂದಿದೆ. ರೋಬೋ ನಾರಿಯೊಬ್ಬಳನ್ನು ಗಗನಕ್ಕೆ ಕಳುಹಿಸುವುದು, ಅಮೆರಿಕದ ಸೆಟಿಲೈಟ್ ಅನ್ನು ಉಡಾಯಿಸುವುದೂ ಇತ್ಯಾದಿ ಯೋಜನೆಗಳು ಇದರಲ್ಲಿ ಸೇರಿವೆ. ಕೇಂದ್ರ ಬಾಹ್ಯಾಕಾಶ ಸಚಿವ ಜಿತೇಂದ್ರ ಸಿಂಗ್ ಈ ಯೋಜನೆಗಳನ್ನು ಆರಂಭಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

2024ರಲ್ಲಿ ಭಾರತದಿಂದ 15 ಬಾಹ್ಯಾಕಾಶ ಯೋಜನೆಗಳು ಯಶಸ್ವಿಯಾಗಿ ಜಾರಿಯಾಗಿವೆ. ಇದರಲ್ಲಿ ಸ್ಪೇಸ್ ಡಾಕಿಂಗ್ ಪ್ರಯೋಗವೂ ಸೇರಿದೆ. ಸ್ಪೇಸ್ ಡಾಕಿಂಗ್ ಎಂದರೆ ಆಕಾಶದಲ್ಲಿ ಒಂದಕ್ಕಿಂತ ಹೆಚ್ಚು ನೌಕೆಗಳು ಸಂಯೋಜಿತ ರೀತಿಯಲ್ಲಿ ಇರುವಂಥದ್ದು. ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ನಿರ್ಮಾಣಕ್ಕೆ ಇದು ಪೂರ್ವಭಾವಿ ಪ್ರಯೋಗವಾಗಿದೆ. ಈ ರೀತಿಯ ಸ್ಪೇಸ್ ಡಾಕಿಂಗ್ ಮಾಡಿದ ನಾಲ್ಕನೇ ದೇಶ ಭಾರತವಾಗಿದೆ. ಅಮೆರಿಕ, ರಷ್ಯಾ ಮತ್ತು ಚೀನಾ ಮಾತ್ರವೇ ಈ ತಂತ್ರಜ್ಞಾನದಲ್ಲಿ ಪಳಗಿರುವುದು.

ಇದನ್ನೂ ಓದಿ: ಈಸ್ ಮೈಟ್ ಟ್ರಿಪ್ ಸಿಇಒ ಸ್ಥಾನಕ್ಕೆ ನಿಶಾಂತ್ ಪಿಟ್ಟಿ ರಾಜೀನಾಮೆ; ಸಹೋದರ ರಿಕಾಂತ್ ಪಿಟ್ಟಿ ನೂತನ ಸಿಇಒ

2024ರಲ್ಲಿ ಆದಿತ್ಯ ಎಲ್1 ಸೌರಯಾನ ಯಶಸ್ವಿಯಾಗಿತ್ತು. ಸೂರ್ಯನ ಹೇಲೋ ಕಕ್ಷೆಗೆ ನೌಕೆಯನ್ನು ಕಳುಹಿಸಲಾಯಿತು. ಯೂರೋಪ್​ನ ಪ್ರೋಬಾ-3 ಮಿಷನ್ ಅನ್ನು ಪಿಎಸ್​ಎಲ್​ವಿ ಸಿ59 ರಾಕೆಟ್ ಮೂಲಕ ಉಡಾವಣೆ ಮಾಡಲಾಯಿತು. ವಿವಿಧ ಸೆಟಿಲೈಟ್​ಗಳೂ ಕೂಡ 2024ರಲ್ಲಿ ಭಾರತದಿಂದ ಉಡಾವಣೆಗೊಂಡವು.

2025ರಲ್ಲೂ ಹಲವು ಮಹತ್ವದ ಯೋಜನೆಗಳು ಇವೆ. ಇಸ್ರೋದಿಂದ ನಾಲ್ಕು ಜಿಎಸ್​ಎಲ್​ವಿ ರಾಕೆಟ್​ಗಳು ಹಾಗೂ ಮೂರು ಪಿಎಸ್​ಎಲ್​ವಿ ರಾಕೆಟ್​ಗಳು, ಹಾಗೂ ಒಂದು ಎಸ್​ಎಸ್​ಎಲ್​ವಿ ರಾಕೆಟ್ ಅನ್ನು ಉಡಾಯಿಸಲಾಗುತ್ತಿದೆ.

ವಿಶ್ವದ ಅತ್ಯಂತ ದುಬಾರಿ ಸೆಟಿಲೈಟ್

ನಾಸಾ ಮತ್ತು ಇಸ್ರೋ ಜಂಟಿಯಾಗಿ ನಿರ್ಮಿಸಿರುವ ಎಸ್​ಎಆರ್ (NISAR) ಸೆಟಿಲೈಟ್ ಅನ್ನು ಮಾರ್ಚ್ ತಿಂಗಳಲ್ಲಿ ಉಡಾವಣೆ ಮಾಡಲಾಗುತ್ತಿದೆ. ಬರೋಬ್ಬರಿ 12,505 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಇದು ವಿಶ್ವದ ಅತ್ಯಂತ ದುಬಾರಿ ಸೆಟಿಲೈಟ್ ಎನಿಸಿದೆ. ಇದನ್ನು ಗಗನಕ್ಕೆ ಕಳುಹಿಸುವ ಹೊಣೆ ಭಾರತಕ್ಕೆ ಸಿಕ್ಕಿರುವುದು ಗಮನಾರ್ಹ. ಈ ಸೆಟಿಲೈಟ್ ಭೂಮಿಯ ಎಲ್ಲಾ ನೆಲ ಹಾಗೂ ಮಂಜುಗಡ್ಡೆಯನ್ನು ಪ್ರತೀ 12 ದಿನಗಳಿಗೊಮ್ಮೆ ಸ್ಕ್ಯಾನ್ ಮಾಡುತ್ತದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಭಾರತದಿಂದ ಕಾಫಿ ರಫ್ತು; ಮೊದಲ ಬಾರಿ ಒಂದು ಬಿಲಿಯನ್ ಡಾಲರ್ ಮೈಲಿಗಲ್ಲು

ಮಹಿಳಾ ಹ್ಯೂಮನಾಯ್ಡ್

2025ರಲ್ಲಿ ಭಾರತದ ಬಾಹ್ಯಾಕಾಶ ಯೋಜನೆಗಳಲ್ಲಿ ಪ್ರಮುಖವಾದುದು ಎಂದರೆ ಅದು ಗಗನಕ್ಕೆ ರೋಬೋವನ್ನು ಕಳುಹಿಸುವುದು. ವ್ಯೋಮಮಿತ್ರಾ ಮಿಷನ್​ನಲ್ಲಿ ಮಹಿಳಾ ಹ್ಯೂಮನಾಯ್ಡ್ ಅನ್ನು ಗಗನಕ್ಕೆ ಕಳುಹಿಸಲಾಗುತ್ತದೆ. ಗಗನಯಾತ್ರಿಗಳನ್ನು ಆಗಸಕ್ಕೆ ಕಳುಹಿಸುವ ಗಗನಯಾನ ಯೋಜನೆಗೆ ಪೂರ್ವಭಾವಿ ಪ್ರಯೋಗವಾಗಿ ವ್ಯೋಮಮಿತ್ರಾ ಮಿಷನ್ ಅನ್ನು ನಡೆಸಲಾಗುತ್ತಿದೆ. ಇದು ಯಶಸ್ವಿಯಾದಲ್ಲಿ ಮನುಷ್ಯರನ್ನು ಗಗನಯಾನದಲ್ಲಿ ಕಳುಹಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ