ಹಿಂದಿನ ಸರ್ಕಾರ ದೊಡ್ಡ ಸಾಲದ ಮೊತ್ತವನ್ನು ಬಿಟ್ಟುಹೋಗಿರದಿದ್ದರೆ ಬಸ್ ಟಿಕೆಟ್ ದರ ಹೆಚ್ಚಿಸುತ್ತಿರಲಿಲ್ಲ: ರಾಮಲಿಂಗಾರೆಡ್ಡಿ

ಹಿಂದಿನ ಸರ್ಕಾರ ದೊಡ್ಡ ಸಾಲದ ಮೊತ್ತವನ್ನು ಬಿಟ್ಟುಹೋಗಿರದಿದ್ದರೆ ಬಸ್ ಟಿಕೆಟ್ ದರ ಹೆಚ್ಚಿಸುತ್ತಿರಲಿಲ್ಲ: ರಾಮಲಿಂಗಾರೆಡ್ಡಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 03, 2025 | 4:54 PM

ಶಕ್ತಿ ಯೋಜನೆ ಜಾರಿ ಮಾಡಿದಾಗಿನಿಂದ ರಾಜ್ಯ ಸಾರಿಗೆ ಸಂಸ್ಥೆಗಳಿಗೆ ಆಗುತ್ತಿರುವ ನಷ್ಟದ ಪ್ರಮಾಣ ಕೊಂಚ ಕಡಿಮೆಯಾಗಲಿದೆ ಎಂದು ಹೇಳಿದ ಸಚಿವ ರಾಮಲಿಂಗಾರೆಡ್ಡಿ, ಈ ಬಾರಿಯ ಬಜೆಟ್​​ನಲ್ಲಿ ಸರ್ಕಾರ ತಮ್ಮ ಇಲಾಖೆಗೆ ಹೆಚ್ಚು ಅನುದಾನ ಬಿಡುಗಡೆ ಮಾಡಿದರೆ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಬಸ್​ಗಳನ್ನು ಖರೀದಿಸಲಾಗಿವುದು, ಕೇಂದ್ರ ಸರ್ಕಾರ ತಮ್ಮ ಸಂಸ್ಥೆಗೆ ಬಸ್ ನೀಡುವುದನ್ನು ನಿಲ್ಲಿಸಿದೆ ಎಂದರು.

ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರ ರಾಜ್ಯದ ಸಾರಿಗೆ ಸಂಸ್ಥೆಗಳ ಮೇಲೆ ₹ 5,900 ಕೋಟಿ ಸಾಲ ಬಿಟ್ಟು ಹೋಗಿದ್ದರಿಂದ ಅನಿವಾರ್ಯವಾಗಿ ಬಸ್ ಟಿಕೆಟ್ ದರವನ್ನು ಶೇಕಡ 15ರಷ್ಟು ಹೆಚ್ಚಿಸಬೇಕಾಯಿತು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು. ನಗರದಲ್ಲಿಂದು ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ನಾಯಕರು ಎಲ್ಲಾದಕ್ಕೂ ಪ್ರತಿಭಟನೆ ಮಾಡುತ್ತಾರೆ, ಆದರೆ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಮತ್ತು ಎಲ್​ಪಿಜಿ ಗ್ಯಾಸ್ ಸಿಲಿಂಡರ್ ಗಳ ಬೆಲೆಯೇರಿಸಿದಾಗ ಪ್ರತಿಭಟನೆ ಮಾಡಲಿಲ್ಲ, ಕೇಂದ್ರ ಸರ್ಕಾರವು ಗಾಳಿ ಮತ್ತು ಬೆಳಕು ಎರಡನ್ನು ಬಿಟ್ಟು ಉಳಿದೆಲ್ಲವುಗಳ ಮೇಲೆ ಜಿಎಸ್ ಟಿ ಹೇರುತ್ತಿದೆ ಎಂದು ಸಚಿವ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಕಾಂಗ್ರೆಸ್​ನವರು ಬರೀ ಸುಳ್ಳು ಹೇಳ್ತಾರೆ, ನಿರ್ಲಜ್ಜರು: ಬಸ್ ಟಿಕೆಟ್ ದರ ಹೆಚ್ಚಳ ಖಂಡಿಸಿ ಪ್ರಹ್ಲಾದ್ ಜೋಶಿ ವಾಗ್ದಾಳಿ