Best Local Food: ರೈಲಿನಲ್ಲಿ ಪ್ರಯಾಣಿಸಿದರೆ ,ಈ 5 ರೈಲ್ವೇ ನಿಲ್ದಾಣಗಳ ಪುಡ್ ಸವಿಯಲು ಮರೆಯದಿರಿ
ಪ್ರಯಾಣದ ಸಮಯದಲ್ಲಿ ನೀವು ಸೇವಿಸುವ ಆಹಾರಗಳು ನಿಮ್ಮ ಪ್ರಯಾಣದಂತೆ ಸದಾ ನೆನಪಿನಲ್ಲಿರಬೇಕು ಎಂದು ನೀವು ಬಯಸುತ್ತೀರಾ? ಹಾಗಿದ್ದರೆ ಭಾರತದ ರೈಲ್ವೇ ಸ್ಟೇಷನ್ಗಳಲ್ಲಿ ಸಿಗುವ ಪ್ರಮುಖ 5 ಜನಪ್ರಿಯ ತಿಂಡಿಗಳ ಕುರಿತು ಮಾಹಿತಿ ಇಲ್ಲಿದೆ.
ಪ್ರಯಾಣದ ಸಮಯದಲ್ಲಿ ನೀವು ಸೇವಿಸುವ ಆಹಾರಗಳು ನಿಮ್ಮ ಪ್ರಯಾಣದಂತೆ ಸದಾ ನೆನಪಿನಲ್ಲಿರಬೇಕು ಎಂದು ನೀವು ಬಯಸುತ್ತೀರಾ? ಹಾಗಿದ್ದರೆ ಭಾರತದ ರೈಲ್ವೇ ಸ್ಟೇಷನ್ಗಳಲ್ಲಿ ಸಿಗುವ ಪ್ರಮುಖ 5 ಜನಪ್ರಿಯ ತಿಂಡಿಗಳ ಕುರಿತು ಮಾಹಿತಿ ಇಲ್ಲಿದೆ. ಸಾಕಷ್ಟು ಜನರು ರೈಲ್ವೇ ಸ್ಟೇಷನ್ಗಳಲ್ಲಿ ಸಿಗುವ ತಿಂಡಿಗಳನ್ನು ತಿನ್ನಲು ಇಷ್ಟ ಪಡುವುದಿಲ್ಲ . ಯಾಕೆಂದರೆ ರುಚಿಯೂ ಚೆನ್ನಾಗಿರುವುದಿಲ್ಲ, ಜೊತೆಗೆ ಕಳಪೆ ಗುಣಮಟ್ಟದ ಆಹಾರ ಎಂದು ಸಾಕಷ್ಟು ಜನರ ಅಭಿಪ್ರಾಯ. ಆದರೆ ಕೆಲವೊಂದು ರೈಲ್ವೇ ಸ್ಟೇಷನ್ ಫುಡ್ಗಳು ಸದಾ ನೆನಪಿನಲ್ಲಿರುವಂತೆ ಮಾಡುತ್ತದೆ. ಅಂತದ್ದೇ ಪ್ರಮುಖ 5 ರೈಲ್ವೆ ನಿಲ್ದಾಣಗಳ ಪುಡ್ಗಳ ಕುರಿತು ಮಾಹಿತಿ ಇಲ್ಲಿದೆ.
ರುಚಿಕರ ಸ್ಥಳೀಯ ಆಹಾರವನ್ನು ನೀಡುವ ಟಾಪ್ 5 ಭಾರತೀಯ ರೈಲ್ವೆ ನಿಲ್ದಾಣಗಳು ಇಲ್ಲಿವೆ:
ಜಾರ್ಖಂಡ್‌ನ ಟಾಟಾನಗರದಲ್ಲಿನ ಮೀನು ಕರಿ:
ರುಚಿಕರವಾದ ಮೀನಿನ ಕರಿಯ ಜೊತೆಗೆ, ಮಸಾಲೆಯೊಂದಿನ ಅನ್ನವನ್ನು ನೀವು ಇಲ್ಲಿ ಸವಿಯಬಹುದು. ಜೊತೆಗೆ ಕೊತ್ತಂಬರಿ ಸೊಪ್ಪು, ಈರುಳ್ಳಿ ಮತ್ತು ಟೊಮೆಟೊ ಸಲಾಡ್‌ಗಳನ್ನು ಕೂಡ ನೀವಿಲ್ಲಿ ಆನಂದಿಸಬಹುದು.
ರಾಜಸ್ಥಾನದ ಅಜ್ಮೀರ್ ನಿಲ್ದಾಣದಲ್ಲಿ ಕಧಿ ಕಚೋರಿ:
ನೀವು ಅಜ್ಮೀರ್ ರೈಲ್ವೇ ನಿಲ್ದಾಣದಲ್ಲಿದ್ದರೆ, ಒಂದು ಪ್ಲೇಟ್ ಕಧಿ ಕಚೋರಿಯನ್ನು ಪಡೆಯಲು ಮರೆಯಬೇಡಿ. ಇಲ್ಲಿ, ಗರಿಗರಿಯಾದ ಗೋಲ್ಡನ್-ಬ್ರೌನ್ ಬೇಳೆಯ ಕಚೋರಿಗಳನ್ನು ಚಟ್ನಿಯ ಜೊತೆಗೆ ಬಡಿಸಲಾಗುತ್ತದೆ.
ಬಿಹಾರದ ಪಾಟ್ನಾದ ರೈಲ್ವೇ ಸ್ಟೇಷನ್‌ನಲ್ಲಿ ಲಿಟ್ಟಿ-ಚೋಖಾ ಸವಿಯಿರಿ:
ಬಿಹಾರದಲ್ಲಿ ಲಿಟ್ಟಿ-ಚೋಖಾ ನೀವು ಸವಿಯಲೇಬೇಕಾದ ವಿಶಿಷ್ಟ ಆಹಾರ ಪದಾರ್ಥವಾಗಿದೆ. ಲಿಟ್ಟಿ ಎಂಬುದು ಗೋಧಿ ಹಿಟ್ಟಿನಿಂದ ಮಾಡಿದ ಆಹಾರವಾಗಿದ್ದು, ಜೊತೆಗೆ ತುಪ್ಪ ,ಬದನೆ ಆಲೂಗಡ್ಡೆ, ಬೆಳ್ಳುಳ್ಳಿ, ಸಾಸಿವೆ ಎಣ್ಣೆ ಮತ್ತು ಟೊಮೆಟೊಗಳ ಸುವಾಸನೆಯ ಮಿಶ್ರಣದೊಂದಿಗೆ ತಯಾರಿಸಲಾಗುತ್ತದೆ.
ಇದನ್ನೂ ಓದಿ: ವಿದೇಶದಲ್ಲಿ ಬ್ಯಾನ್, ಆದರೆ ಭಾರತದಲ್ಲಿ ಇನ್ನೂ ಜನಪ್ರಿಯ ಈ ಫುಡ್ಗಳು
ತಮಿಳುನಾಡಿನ ಚೆನ್ನೈ ನಿಲ್ದಾಣದ ರವಾ ದೋಸೆ:
ಚೆನ್ನೈ ಸೆಂಟ್ರಲ್ ಸ್ಟೇಷನ್‌ನಲ್ಲಿ ಮಾರಾಟಗಾರರು ರುಚಿಕರವಾದ ರವಾ ದೋಸೆಗಳನ್ನು ಮಾರಾಟ ಮಾಡುತ್ತಿರುವುದನ್ನು ನೀವೂ ಬೇಟಿ ನೀಡಿದಾಗ ಕಾಣಬಹುದು. ಈ ಗರಿಗರಿಯಾದ ದಕ್ಷಿಣ ಭಾರತೀಯ ದೋಸೆಯನ್ನು ಬಿಸಿ ಸಾಂಬಾರ್ ಮತ್ತು ತೆಂಗಿನಕಾಯಿ ಚಟ್ನಿಯೊಂದಿಗೆ ಬಡಿಸಲಾಗುತ್ತದೆ.
ಮಹಾರಾಷ್ಟ್ರದ ಮುಂಬೈ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ವಡಾ ಮತ್ತು ಪಾವ್ ಭಾಜಿ:
ಪಾವ್ ಭಾಜಿಯು ಮೃದುವಾದ ಬನ್, ಹಿಸುಕಿದ ಆಲೂಗಡ್ಡೆ, ಮಸಾಲೆಯುಕ್ತ ಗ್ರೇವಿಯೊಂದಿಗೆ ಬಡಿಸಲಾಗುತ್ತದೆ. ನೀವು ಹುರಿದ ಏನನ್ನಾದರೂ ತಿನ್ನಲು ಹಂಬಲಿಸುತ್ತಿದ್ದರೆ, ವಡಾ ಉತ್ತಮ ಆಯ್ಕೆಯಾಗಿದೆ. ನೀವು ಮಹಾರಾಷ್ಟ್ರಕ್ಕೆ ರೈಲು ಮೂಲಕ ಪ್ರಯಾಣಿಸಿದರೆ ಈ ಪುಡ್ ಸವಿಯಲು ಮರೆಯದಿರಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:30 pm, Sun, 15 January 23