Banned Food: ವಿದೇಶದಲ್ಲಿ ಬ್ಯಾನ್​, ಆದರೆ ಭಾರತದಲ್ಲಿ ಇನ್ನೂ ಜನಪ್ರಿಯ ಈ ಫುಡ್​ಗಳು

ಭಾರತದ ಕೆಲವೊಂದು ಜನಪ್ರಿಯ ತಿಂಡಿಗಳು ವಿದೇಶಗಳಲ್ಲಿ ನಿಷೇಧಿಸಲ್ಪಟ್ಟಿದೆ. ಆ ತಿಂಡಿಗಳು ಯಾವುವು? ಮತ್ತು ಯಾಕೆ ವಿದೇಶಗಳಲ್ಲಿ ನಿಷೇದಿಸಲ್ಪಟ್ಟಿದೆ? ಎಂಬ ಎಲ್ಲಾ ಪ್ರಶ್ನೆಗೆ ಸಂಪೂರ್ಣ ವಿವರ ಇಲ್ಲಿದೆ.

Banned Food: ವಿದೇಶದಲ್ಲಿ ಬ್ಯಾನ್​, ಆದರೆ ಭಾರತದಲ್ಲಿ ಇನ್ನೂ ಜನಪ್ರಿಯ ಈ ಫುಡ್​ಗಳು
Follow us
| Updated By: ಅಕ್ಷತಾ ವರ್ಕಾಡಿ

Updated on:Jan 14, 2023 | 7:00 PM

ಕೆಲವು ಆಹಾರಗಳು ಆ ದೇಶದ ಇತಿಹಾಸ, ಪರಂಪರೆ ಮತ್ತು ಸಂಸ್ಕೃತಿಯನ್ನು ತಿಳಿಸುತ್ತದೆ. ಜೊತೆಗೆ ಹವಾಮಾನ, ಆರ್ಥಿಕ ಕಾರಣಗಳಿಂದ ಭಕ್ಷ್ಯಗಳು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತವೆ. ಒಂದು ದೇಶದಲ್ಲಿ ಅತಿ ಬೇಡಿಕೆಯಿರುವ ತಿಂಡಿಗಳು, ಮತ್ತೊಂದೆಡೆ ಇಡೀ ದೇಶದಲ್ಲಿಯೇ ನಿಷೇಧಿಸಲಾಗಿರುತ್ತದೆ. ಆದ್ದರಿಂದ ಭಾರತದ ಕೆಲವೊಂದು ಜನಪ್ರಿಯ ತಿಂಡಿಗಳು ವಿದೇಶಗಳಲ್ಲಿ ನಿಷೇಧಿಸಲ್ಪಟ್ಟಿದೆ. ಆ ತಿಂಡಿಗಳು ಯಾವುವು? ಮತ್ತು ಯಾಕೆ ವಿದೇಶಗಳಲ್ಲಿ ನಿಷೇದಿಸಲ್ಪಟ್ಟಿದೆ? ಎಂಬ ಎಲ್ಲಾ ಪ್ರಶ್ನೆಗೆ ಸಂಪೂರ್ಣ ವಿವರ ಇಲ್ಲಿದೆ.

ವಿದೇಶದಲ್ಲಿ ನಿಷೇಧಿಸಲ್ಪಟ್ಟ ಪ್ರಮುಖ 5 ಫುಡ್​​ಗಳು ಇಲ್ಲಿವೆ:

ತುಪ್ಪ:

ಭಾರತದ ಪ್ರತಿ ಮನೆಯ ಅಡುಗೆ ಕೋಣೆಯಲ್ಲಿ ತುಪ್ಪವಂತೂ ಇದ್ದೇ ಇರುತ್ತದೆ. ಜೊತೆಗೆ ತುಪ್ಪದಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಕಾಣಬಹುದು. ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ತುಪ್ಪವನ್ನು ಅಮೇರಿಕಾದಲ್ಲಿ ನಿಷೇಧಿಸಲಾಗಿದೆ. ಏಕೆಂದರೆ ತುಪ್ಪವು ರಕ್ತದೊತ್ತಡ, ಹೃದಯಾಘಾತ ಮತ್ತು ಸ್ಥೂಲಕಾಯತೆಯಂತಹ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಅಮೇರಿಕಾದ ಆಹಾರ ಮತ್ತು ಔಷಧ ಆಡಳಿತವು ವರದಿ ನೀಡಿದೆ.

ಕೆಚಪ್:

ಸಮೋಸಾ, ಪಕೋಡದಿಂದ ನೂಡಲ್ಸ್ ಮತ್ತು ಸ್ಯಾಂಡ್‌ವಿಚ್‌ಗಳವರೆಗೆ ಅದರ ರುಚಿಯನ್ನು ಹೆಚ್ಚಿಸಲು ಕೆಚಪ್ ಬಹುತೇಕರು ಬಳಸುತ್ತಾರೆ. ಕರಿದ ಆಹಾರಗಳಿಗೆ ಕೆಚಪ್ ಇಲ್ಲದ್ದಿದ್ದರೆ, ತಿನ್ನದೇ ಇರುವವರೂ ಇದ್ದಾರೆ. ಆದರೆ ಫ್ರೆಂಚ್ ಸರ್ಕಾರವು ಹದಿಹರೆಯದವರಲ್ಲಿ ಅತಿಯಾದ ಸೇವನೆಯನ್ನು ಗಮನಿಸಿದ ನಂತರ ದೇಶವು ಕೆಚಪ್ ಅನ್ನು ನಿಷೇಧಿಸಿದೆ.

ಸಮೋಸ:

ಇದಂತೂ ಭಾರತದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರ ವರೆಗೂ ಅತ್ಯಂತ ಜನಪ್ರಿಯ ತಿಂಡಿಯಾಗಿದೆ. ಆದರೆ ದಕ್ಷಿಣ ಆಫ್ರಿಕಾದಲ್ಲಿ 2011 ರಿಂದ ಈ ಸಮೋಸವನ್ನು ನಿಷೇಧಿಸಿದೆ. ಈ ತಿಂಡಿಯ ಆಕಾರವೇ ಇದನ್ನು ನಿಷೇಧಿಸಲು ಪ್ರಮುಖ ಕಾರಣವಾಗಿದೆ. ದೇಶದ ಕಾನೂನಿನ ಪ್ರಕಾರ, ತಿಂಡಿಯ ತ್ರಿಕೋನ ಆಕಾರವು ಅಲ್-ಶಬಾಬ್ ಕ್ರಿಶ್ಚಿಯನ್ ಧರ್ಮದ ಸಂಕೇತವಾಗಿದೆ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: ಮಿಸ್ ಯೂನಿವರ್ಸ್​ನಲ್ಲಿ ಸ್ಪರ್ಧೆಗೂ ಮುನ್ನವೇ ವಿಶ್ವದ ಮನಗೆದ್ದ ಮಿಸ್ ಥೈಲ್ಯಾಂಡ್

ಚವಾನ್‌ಪ್ರಾಶ್:

ಔಷಧೀಯ ಸಸ್ಯಗಳಿಂದ ತಯಾರಿಸಲ್ಪಡುವ ಆರೋಗ್ಯಕರ ಪೋಷಕಾಂಶಗಳಿಂದ ತುಂಬಿದೆ ಎಂದು ಹೇಳಲಾಗುತ್ತದೆ. ಜೊತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಭಾರತದಲ್ಲಿ ಉಪಯೋಗಿಸಲಾಗುತ್ತದೆ. ಇಷ್ಟೆಲ್ಲಾ ಪ್ರಯೋಜನಗಳನ್ನು ಹೊಂದಿರುವ ಚವಾನ್‌ಪ್ರಾಶ್​​ನ್ನು 2005ರಿಂದ ಕೆನಡಾದಲ್ಲಿ ನಿಷೇಧಿಸಿದ್ದಾರೆ. ಕೆನಡಾ ಸರ್ಕಾರದ ವರದಿಯ ಪ್ರಕಾರ ಈ ಉತ್ಪನ್ನದಲ್ಲಿ ಹೆಚ್ಚಿನ ಮಟ್ಟದ ಸೀಸ ಮತ್ತು ಪಾದರಸವಿದೆ ಎಂದು ಉಲ್ಲೇಖಿಸಿ ನಿಷೇಧವನ್ನು ಹೇರಲಾಯಿತು.

ಚೂಯಿಂಗ್ ಗಮ್:

ಸಿಂಗಾಪುರವು ತನ್ನ ಸ್ವಚ್ಛತೆಗೆ ಹೆಸರುವಾಸಿಯಾಗಿದ್ದು, ಜೊತೆಗೆ ಸ್ವಚ್ಛತೆಗೆಂದೇ ಕಠಿಣ ನಿಯಮಗಳನ್ನು ಹೊಂದಿದೆ. ಇದಕ್ಕಾಗಿಯೇ, ಸಿಂಗಾಪುರವು 1992 ರಲ್ಲಿ, ಚೂಯಿಂಗ್ ಗಮ್‌ಗಳ ಬಳಕೆ, ವಿತರಣೆ ಮತ್ತು ವ್ಯಾಪಾರವನ್ನು ನಿರ್ಬಂಧಿಸಿತು. ಆದಾಗ್ಯೂ, ಅಂತರರಾಷ್ಟ್ರೀಯ ಒತ್ತಡದಿಂದಾಗಿ, ಹಲ್ಲಿನ ಸಾಕಷ್ಟು ಪ್ರಯೋಜನಗಳನ್ನು ಹೊಂದಿರುವ ಚಿಕಿತ್ಸಕ ದಂತ ಚೂಯಿಂಗ್ ಗಮ್‌ಗಳ ಸೇವನೆಯನ್ನು 2004 ರಲ್ಲಿ ಅನುಮತಿ ನೀಡಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 7:00 pm, Sat, 14 January 23

ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
Nithya Bhavishya: ಈ ರಾಶಿಯವರು ವ್ಯಾವಹಾರದಲ್ಲಿ ಇಂದು ಬದಲಾವಣೆಯನ್ನು ತರು
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್