Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekend​​ನಲ್ಲಿ ಆರೋಗ್ಯಕರ ಜೋಳದ ಸಲಾಡ್ ತಯಾರಿಸಿ, ಇಲ್ಲಿದೆ ರೆಸಿಪಿ

ಸಲಾಡ್ ಮಾಡುವುದು ರುಚಿರಕವಾದ, ಆರೋಗ್ಯಕರವಾದ ಕಲೆಯಾಗಿದ್ದು, ಸಲಾಡ್ ಊಟವಲ್ಲ- ಇದು ಒಂದು ಶೈಲಿಯಾಗಿದೆ. ಸಲಡ್ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಈ ವಾರಾಂತ್ಯದಲ್ಲಿ ದೇಹಕ್ಕೆ ಪೌಷ್ಟಿದಾಯಕವಾದುದನ್ನು ಪಡೆಯಲು ರೂಟ್ ಟು ಫ್ರೂಟ್ ಮತ್ತು ಜ್ವಾರ್ ಸಲಾಡ್ ರೆಸಿಪಿಯನ್ನು ಟ್ರೆ ಮಾಡಿ.

Weekend​​ನಲ್ಲಿ ಆರೋಗ್ಯಕರ ಜೋಳದ ಸಲಾಡ್ ತಯಾರಿಸಿ, ಇಲ್ಲಿದೆ ರೆಸಿಪಿ
ಸಾಮದರ್ಭಿಕ ಚಿತ್ರ Image Credit source: HT
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 14, 2023 | 4:58 PM

ಸಲಾಡ್ ಮಾಡುವುದು ರುಚಿರಕವಾದ, ಆರೋಗ್ಯಕರವಾದ ಕಲೆಯಾಗಿದ್ದು, ಸಲಾಡ್ ಊಟವಲ್ಲ- ಇದು ಒಂದು ಶೈಲಿಯಾಗಿದೆ. ಸಲಡ್ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಈ ವಾರಾಂತ್ಯದಲ್ಲಿ ದೇಹಕ್ಕೆ ಪೌಷ್ಟಿದಾಯಕವಾದುದನ್ನು ಪಡೆಯಲು ರೂಟ್ ಟು ಫ್ರೂಟ್ (Root To Fruit) ಮತ್ತು ಜ್ವಾರ್ ಸಲಾಡ್ ರೆಸಿಪಿಯನ್ನು ಟ್ರೆ ಮಾಡಿ. ರೂಟ್ ಟು ಫ್ರೂಟ್ ಮತ್ತು ಜ್ವಾರ್ ಸಲಾಡ್‌ಗಳನ್ನು ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದಾಗಿದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದರಿಂದ ಹಿಡಿದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ ಈ ಸಾಲಡ್. ಕೆಟ್ಟ ಕೊಲೆಸ್ಟಾಲ್ ಕಡಿಮೆ ಮಾಡುವುದು, ಕರುಳಿನ ಚಲನೆಯನ್ನು ಸಾಮಾನ್ಯವಾಗುವಂತೆ ಮಾಡುವುದು ಇತ್ಯಾದಿ ಆರೋಗ್ಯ ಪ್ರಯೋಜನವನ್ನು ಹಸಿರು ಎಲೆಗಳ ಸಲಾಡ್ ತಿನ್ನುವುವದಿಂದ ಲಭಿಸುತ್ತದೆ. ಇದು ನಿಮ್ಮ ಹಸಿವನ್ನು ಕೂಡಾ ಹೆಚ್ಚಿಸುತ್ತದೆ. ಇಂತಹ ರೂಟ್ ಟು ಫ್ರೂಟ್ ಮತ್ತು ಜೋಳದ ಸಲಾಡ್ ಪಾಕ ವಿಧಾನದ ಬಗ್ಗೆ ತಿಳಿಸಿಕೊಡುತ್ತೇವೆ.

ರೂಟ್ ಟು ಫ್ರೂಟ್

ಬೇಕಾಗುವ ಪದಾರ್ಥಗಳು: ತಾಜಾ ಅರಶಿನ 1 ತುಂಡು, ಒಂದು ಹಿಡಿಯಷ್ಟು ತುಳಸಿ ಎಲೆ, 70mlಲಿಚಿ ಜ್ಯೂಸ್, ೨೦ml ನಿಂಬೆ ರಸ, 90ml ಸೋಡಾ.

ವಿಧಾನ: ಕಾಕ್ಟೆಲ್ ಶೇಖರ್‌ನಲ್ಲಿ ಎಲ್ಲಾ ಪದಾರ್ಥಗಳನ್ನು ಸಂಗ್ರಹಿಸಿ ಮತ್ತು ಅದಕ್ಕೆ ಐಸ್ ಹಾಕಿ ಶೇಕ್ ಮಾಡಿ. ನಂತರ ಒಂದು ಗಾಜಿನ ಲೋಟದಲ್ಲಿ ಐಸ್‌ಕ್ಯೂಬ್‌ಗಳನ್ನು ಹಾಕಿ ಅದಕ್ಕೆ ಮೊದಲೇ ಶೇಕ್ ಮಾಡಿ ಇಟ್ಟುಕೊಂಡಿದ್ದಂತಹ ಪದಾರ್ಥಗಳನ್ನು ಹಾಕಿ ನಂತರ ಸೋಡಾವನ್ನು ಹಾಕಿದರೆ ಆರೋಗ್ಯಕರ ಪಾನೀಯ ಸವಿಯಲು ಸಿದ್ಧ.

ಜೋಳದ ಸಲಾಡ್:

ಬೇಕಾಗುವ ಪದಾರ್ಥಗಳು: 100 ಗ್ರಾಂ ಬಿಳಿ ಜೋಳ, 100 ಗ್ರಾಂ ಕೆಂಪು ಜೋಳ, 80 ಗ್ರಾಂ ಕತ್ತರಿಸಿದ ಸೌತೆಕಯಿ, 10 ಗ್ರಾಂ ಹಸಿ ಮಾವಿನ ತುಂಡುಗಳು, 5ರಿಂದ 6 ಎಲೆಕೋಸು ಎಲೆಗಳು, 40ಗ್ರಾಂ ಚೆಡ್ಡಾರ್ ಚೀಸ್ ಮೊಸರು, 10 ರಿಂದ 15 ಚೇರಿ ಟೊಮ್ಯಾಟೊ, 20ml ಆಲಿವ್ ಎಣ್ಣೆ, 1 tsp ಸಬ್ಜಾ ಬೀಜ, 3 tsp ಆಪಲ್ ಸೈಡರ್ ವಿನೆಗರ್, ಕರಿ ಮೆಣಸಿನ ಪುಡಿ, ಉಪ್ಪು.

ಇದನ್ನು ಓದಿ:lifestyle: ನಿಮ್ಮ ಮಾನಸಿಕ ಆರೋಗ್ಯಕ್ಕೆ ಈ 6 ಅಭ್ಯಾಸಗಳು ಉತ್ತಮ

ಪಾಕ ವಿಧಾನ: ಜೋಳವನ್ನು ರಾತ್ರಿಯಿಡಿ ನೆನೆಸಿಡಿ. ಮರುದಿನ ಬೆಳಗ್ಗೆ ತಾಜಾ ನೀರು ಸೇರಿಸಿ ಜೋಳ ಮೃದುವಾಗುವವರೆಗೆ ಬೇಯಿಸಿಕೊಳ್ಳಿ. ನಂತರ ನೀರನ್ನು ಸೋಸಿ ಅದನ್ನು ತಣ್ಣಗಾಗಲು ಇಟ್ಟುಬಿಡಿ. ಈಗ ಒಂದು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿಮಾಡಿ ಅದಕ್ಕೆ ಎಲೆಕೋಸನ್ನು ಹಾಕಿ ಅದು ಗರಿ ಗರಿ ಆಗುವವರೆಗೆ ಹುರಿಯಿರಿ. ಅದಕ್ಕೆ ಸ್ವಲ್ಪ ಉಪ್ಪನ್ನು ಸೇರಿಸಿ, ಇದಾದ ಬಳಿಕ ಮೊದಲೇ ಕತ್ತರಿಸಿಟ್ಟ ಇತರ ತಾಜಾ ತರಕಾರಿಗಳನ್ನು ಒಂದು ಬೌಲ್‌ನಲ್ಲಿ ಹಾಕಿ ಮಿಶ್ರಣ ಮಾಡಿಕೊಳ್ಳಿ. ಅದರ ಡ್ರೆಸ್ಸಿಂಗ್‌ಗಾಗಿ ಆಲಿವ್ ಎಣ್ಣೆ ಮತ್ತು ವಿನೆಗರ್‌ನ್ನು ಸುರಿಯಿರಿ ಹಾಗೂ ಕಾಳುಮೆಣಸಿನ ಪುಡಿಯನ್ನು ಕೂಡಾ ಸಿಂಪಡಿಸಿ ನಂತರ ಈ ಎಲ್ಲಾ ತರಕಾರಿ ಮಿಶ್ರಿತ ಬೌಲ್‌ನ ಮೇಲೆ ಚೀಸ್‌ನ್ನು ಗಾರ್ನಿಶಿಂಗ್ ಮಾಡಿದರೆ ಆರೋಗ್ಯಕರ ಜೋಳದ ಸಲಾಡ್ ಸವಿಯಲು ಸಿದ್ಧ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:58 pm, Sat, 14 January 23