Gollabhama Saree: ಗೊಲ್ಲ ಸಮುದಾಯದ ಮಹಿಳೆಯ ಚಿತ್ರದ ವಿಶಿಷ್ಟ ನೇಯ್ಗೆ, ಗೊಲ್ಲಭಾಮ ಸೀರೆ

ತೆಲಂಗಾಣದ ಗ್ರಾಮೀಣ ಭಾಗದ ಕುರುಬ ಗೊಲ್ಲ ಅಥವಾ ಯಾದವ ಸಮುದಾಯದ ಮಹಿಳೆಯರ ಸುಂದರ ಚಿತ್ರಣವನ್ನು ಈ ಸೀರೆಯಲ್ಲಿ ಕ್ರಿಯಾತ್ಮಕವಾಗಿ ನೇಕಾರರು ಚಿತ್ರಿಸುತ್ತಾರೆ.

Gollabhama Saree: ಗೊಲ್ಲ ಸಮುದಾಯದ ಮಹಿಳೆಯ ಚಿತ್ರದ ವಿಶಿಷ್ಟ ನೇಯ್ಗೆ, ಗೊಲ್ಲಭಾಮ ಸೀರೆ
ಗೊಲ್ಲಭಾಮ ಸೀರೆ
Follow us
| Updated By: ಅಕ್ಷತಾ ವರ್ಕಾಡಿ

Updated on:Jan 14, 2023 | 11:13 AM

ಎಷ್ಟೇ ಫ್ಯಾಶನ್ ಡಿಸೈನಿಂಗ್ ಸೀರೆಗಳು ಬಂದರೂ ಕೂಡ ನೇಯ್ಗೆ ಸೀರೆಯ ಚಂದಾನೇ ಬೇರೇ. ಸೀರೆಗಳು ಹೆಣ್ಣಿನ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೇ ಆಕೆಯನ್ನು ಸಮಾಜ ಗೌರವದಿಂದ ಕಾಣುವಂತೆ ಮಾಡುತ್ತದೆ. ಅಂತಹ ಶಕ್ತಿ ಸೀರೆಗಿದೆ. ಸೀರೆಗಳು ಕಾಲಕ್ಕೆ ತಕ್ಕಂತೆ ವಿಭಿನ್ನ ಶೈಲಿಗಳಲ್ಲಿ ಮಾರುಕಟ್ಟೆಗೆ ಬರುತ್ತಿದೆ. ಫ್ಯಾಶನ್ ಡಿಸೈನಿಂಗ್ ಸೀರೆಗಳ ಟ್ರೆಂಡ್ ಹೆಚ್ಚಾಗುತ್ತಿದ್ದಂತೆ ಇಂದು ನೇಯ್ಗೆ ಸೀರೆಗಳು ಕಣ್ಮರೆಯಾಗುತ್ತಿವೆ. ಅಂತದ್ದೇ ನೇಯ್ಗೆ ಸೀರೆಗಳಲ್ಲಿ ಒಂದಾದ ಗೊಲ್ಲಭಾಮ ಸೀರೆಯ ಕುರಿತು ಮಾಹಿತಿ ಇಲ್ಲಿದೆ.

ಏನಿದು ಗೊಲ್ಲಭಾಮ ಸೀರೆ:

ಹೈದರಾಬಾದ್‌ನಿಂದ ಉತ್ತರಕ್ಕೆ 100 ಕಿಮೀ ದೂರದಲ್ಲಿರುವ ಸಿದ್ದಿಪೇಟೆ ಎಂಬ ಸಣ್ಣ ಪಟ್ಟಣದಲ್ಲಿ ನೇಕಾರರು ತಯಾರಿಸುವ ಮಗ್ಗದ ಸೀರೆಯಾಗಿದೆ. ತೆಲಂಗಾಣದ ಗ್ರಾಮೀಣ ಭಾಗದ ಕುರುಬ ಗೊಲ್ಲ ಅಥವಾ ಯಾದವ ಸಮುದಾಯದ ಮಹಿಳೆಯರ ಸುಂದರ ಚಿತ್ರಣವನ್ನು ಈ ಸೀರೆಯಲ್ಲಿ ಕ್ರಿಯಾತ್ಮಕವಾಗಿ ನೇಕಾರರು ಚಿತ್ರಿಸುತ್ತಾರೆ. ಗೊಲ್ಲ ಸಮುದಾಯದ ನಾರಿಯರು ಸೀರೆಯುಟ್ಟು ಮನೆ ಮನೆಗೆ ಮೊಸರು ಹಂಚುವ ಸುಂದರ ಚಿತ್ರಣವನ್ನು ಈ ಸೀರೆಯಲ್ಲಿ ಕಾಣಬಹುದು.

1960 ರ ದಶಕದಲ್ಲಿ, ಸಿದ್ದಿಪೇಟೆಯಲ್ಲಿ ಸುಮಾರು 2,000 ನೇಕಾರರು ಮತ್ತು ನೂರಾರು ಮಗ್ಗಗಳು ಇದ್ದವು ಎಂದು ಹೇಳಲಾಗುತ್ತದೆ. ಆದರೆ ಇಂದಿನ ಹೊಸ ಹೊಸ ಫ್ಯಾನ್ಸಿ ಸೀರೆಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಂತೆ ಈ ಸೀರೆಯ ಬೇಡಿಕೆಯು ಕಮ್ಮಿಯಾಗುತ್ತಾ ಹೋಯಿತು ಎಂದು ಇಲ್ಲಿನ ನೇಕಾರರು ಹೇಳುತ್ತಾರೆ. ಹೊಸ ಹೊಸ ಟ್ರೆಂಡಿ ಸೀರೆಗಳು ಇಂದು ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆಯನ್ನು ಪಡೆದುಕೊಳ್ಳುತ್ತಿದಂತೆ, ಸಾಂಪ್ರದಾಯಿಕ ಹಳೆಯ ಕೈಮಗ್ಗಗಳ ಸೀರೆಗಳು ಕಣ್ಮರೆಯಾಗುತ್ತಿದ್ದು, ಇದು ಸಾಕಷ್ಟು ನೇಕಾರರನ್ನು ಆರ್ಥಿಕವಾಗಿ ಕುಗ್ಗುವಂತೆ ಮಾಡಿದೆ.

ಇದನ್ನೂ ಓದಿ: Makar Sankranti 2023: ಕೈಗಳ ಅಂದವನ್ನು ಹೆಚ್ಚಿಸುವ ಮೆಹಂದಿ ಡಿಸೈನ್ಸ್​ಗಳು ಇಲ್ಲಿವೆ

ಆದರೆ ಖುಷಿಯ ಸುದ್ದಿ ಏನೆಂದರೆ ಇತ್ತೀಚಿಗಷ್ಟೇ ಗೊಲ್ಲಭಾಮ ಸೀರೆ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಂಸ್ಕೃತಿ ಸಂಸ್ಥೆಯ (ಯುನೆಸ್ಕೋ) ವಿಶ್ವದ ಸಾಂಪ್ರದಾಯಿಕ ಜವಳಿ ಕರಕುಶಲ ಪಟ್ಟಿಯಲ್ಲಿ ಇದು ಸ್ಥಾನವನ್ನು ಪಡೆದುಕೊಂಡಿದೆ. ಜನಪ್ರಿಯ ಗೊಲ್ಲಭಾಮ ಸೀರೆಗಳು ಸೇರಿದಂತೆ ತೆಲಂಗಾಣದ ರಾಜ್ಯಗಳ ಮೂರು ವಸ್ತುಗಳು ಯುನೆಸ್ಕೋ ನೀಡಿದ ವರದಿಯ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಆರು ವರ್ಷಗಳ ಹಿಂದೆ ಜಾಕ್ವಾರ್ಡ್ ನೇಯ್ಗೆ ಯಂತ್ರದ ಪ್ರವೇಶದಿಂದ ನೇಕಾರರು ಗೊಲ್ಲಭಾಮ ಸೀರೆಗಳನ್ನು ಗುಣಮಟ್ಟ ಮತ್ತು ಪ್ರಮಾಣ ಎರಡರಲ್ಲೂ ಅದರ ಹೊಳಪು ಮತ್ತು ವೈಭವವನ್ನು ಕಳೆದುಕೊಳ್ಳದೆ ಹಳೆಯ-ಸಾಂಪ್ರದಾಯಿಕ ಕರಕುಶಲತೆಯನ್ನು ಉಳಿಸಿಕೊಂಡು ಬಂದಿದೆ.

ಗೊಲ್ಲಭಾಮ ನೇಯ್ಗೆಯು ಶ್ರಮದಾಯಕ ಮತ್ತು ದೀರ್ಘಾವಧಿಯ ಪ್ರಕ್ರಿಯೆಯಾಗಿದೆ. ಇದು ಪ್ರತಿ ದಿನ ಎಂಟು ಗಂಟೆಗಳ ಕೆಲಸವನ್ನು ತೆಗೆದುಕೊಳ್ಳುತ್ತದೆ. ನಾನು ಈಗ 40 ವರ್ಷಗಳಿಂದ ಮಾಡುತ್ತಿದ್ದೇನೆ ಎಂದು ಸಿದ್ದಿಪೇಟೆಯ ಆದರ್ಶ ಕೈಮಗ್ಗ ನೇಕಾರರ ಸಹಕಾರಿ ಸಂಘದ ಸದಸ್ಯರಾದ ನೇಕಾರ ಕೈಲಾಶಮ್ ಸಂದರ್ಶನವೊಂದರಲ್ಲಿ  ಹೇಳಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 11:13 am, Sat, 14 January 23

ಈದ್ ಮಿಲಾದ್ ಮೆರವಣಿಗೆಯಲ್ಲಿ ಎದುರಾದ ಕೂಡಲಸಂಗಮ ಸ್ವಾಮೀಜಿ; ಪರಸ್ಪರ ಘೋಷಣೆ
ಈದ್ ಮಿಲಾದ್ ಮೆರವಣಿಗೆಯಲ್ಲಿ ಎದುರಾದ ಕೂಡಲಸಂಗಮ ಸ್ವಾಮೀಜಿ; ಪರಸ್ಪರ ಘೋಷಣೆ
ನಾವು ಇಲ್ಲದಿದ್ರೆ ಬೆಂಗಳೂರು ಖಾಲಿ ಎಂದ ಮಹಿಳೆಗೆ ಕರವೇ ನಾರಾಯಣಗೌಡ ಎಚ್ಚರಿಕೆ
ನಾವು ಇಲ್ಲದಿದ್ರೆ ಬೆಂಗಳೂರು ಖಾಲಿ ಎಂದ ಮಹಿಳೆಗೆ ಕರವೇ ನಾರಾಯಣಗೌಡ ಎಚ್ಚರಿಕೆ
ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಸಾವಿನ ನಂತರದ ಕಥೆ; ಸ್ಮಶಾನದಲ್ಲಿ ಭೈರಾದೇವಿ ಶೂಟಿಂಗ್; ರಮೇಶ್ ಹೇಳಿದ್ದಿಷ್ಟು
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಮಹಿಷಾ ದಸರಾ ಆಚರಣೆ ಬಗ್ಗೆ ಸಂಸದ ಯದುವೀರ್ ಏನಂದ್ರು ಗೊತ್ತಾ?
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಕಿಯೋನಿಕ್ಸ್ 400 ಕೋಟಿ ರೂ. ಅಕ್ರಮ ಪ್ರಕರಣ; ಅಶ್ವತ್ಥನಾರಾಯಣ ಹೇಳಿದ್ದಿಷ್ಟು
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಹಿಂದೂ ಮೆರವಣಿಗೆಯಲ್ಲಿ ರಕ್ಷಣೆಗೆ ಶಸ್ತ್ರ ಸಮೇತ ನಾವು ಸಜ್ಜು: ಶ್ರೀರಾಮ ಸೇನೆ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ಕಾಳಿ ವೇಷ ಧರಿಸುತ್ತಿದ್ದಂತೆ ಏನಾಗುತ್ತಿತ್ತು, ವಿವರಿಸಿದ ನಟಿ ರಾಧಿಕಾ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
ವಾರಣಾಸಿಯಲ್ಲಿ ಗಂಗಾ ಆರತಿ ವೀಕ್ಷಿಸಿದ ಕಾಂಗ್ರೆಸ್ ನಿಯೋಗ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Daily Devotional: ಹನುಮಾನ್ ಕಾರ್ಯಫಲ ಮಂತ್ರ ಬಗ್ಗೆ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 23 ರಿಂದ 29ರ ವಾರ ಭವಿಷ್ಯ ತಿಳಿಯಿರಿ