Updated on: Jan 13, 2023 | 5:45 PM
ಸಾಮಾನ್ಯವಾಗಿ ಮೂಗು, ಕಿವಿ ಚುಚ್ಚಿಸಿಕೊಳ್ಳುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಈಗೀಗಾ ದೇಹದ ವಿವಿಧ ಭಾಗಗಳಲ್ಲಿ ಚುಚ್ಚುಸಿಕೊಳ್ಳುವ ಟ್ರೆಂಡ್ ಶುರುವಾಗಿದೆ.
ಹುಬ್ಬುಗಳಲ್ಲಿ ಚುಚ್ಚಸುವುದು: ಹುಬ್ಬಿನ ಸ್ವಲ್ಪ ಮೇಲೆ ಲಂಬವಾದ ಚುಚ್ಚಿಸುವುದು. ಈ ರೀತಿಯ ಚುಚ್ಚುವಿಕೆಯನ್ನು ಉಂಗುರು ಮತ್ತು ಸ್ಟಡ್‌ಗಳು ಸೇರಿದಂತೆ ವಿವಿಧ ಆಭರಣಗಳೊಂದಿಗೆ ಧರಿಸಬಹುದು.
ನಾಲಿಗೆ ಚುಚ್ಚುವಿಕೆ: ನಾಲಿಗೆಯ ಮಧ್ಯ ಭಾಗದಲ್ಲಿ ಚುಚ್ಚಿಸಿಕೊಳ್ಳುವುದು. ಇಂದು ಹದಿಹರೆಯದವರು ಹೆಚ್ಚಾಗಿ ಈ ನಾಲಿಗೆ ಚುಚ್ಚುವಿಕೆಗೆ ಮರುಳಾಗುತ್ತಿದ್ದಾರೆ. ಆದರೆ ಇದು ಸುರಕ್ಷಿತ ಎಂದು ತಿಳಿದಿಲ್ಲ.
ತುಟಿಗೆ ಚುಚ್ಚಿಕೊಳ್ಳುವುದು: ತುಟಿಯ ಮೇಲಿನ ಅಥವಾ ಕೆಳಗಿನ ಭಾಗಗಳಲ್ಲಿ ಚುಚ್ಚಿಸಿಕೊಳ್ಳುವುದಾಗಿದೆ. ಇದು ಸಿನಿಮಾ ಪಾತ್ರಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.
ಇಂಡಸ್ಟ್ರಿಯಲ್ ಪಿನ್ಚಿಂಗ್: ಇದನ್ನು ಸ್ಕ್ಯಾಫೋಲ್ಡ್ ಪಿನ್ಚಿಂಗ್ ಎಂದು ಕೂಡ ಕರೆಯುತ್ತಾರೆ. ಸಾಮಾನ್ಯವಾಗಿ ಮೇಲಿನ ಕಿವಿಯ ಮೇಲ್ಭಾದಲ್ಲಿ ಇದನ್ನು ನೀವು ಕಾಣಬಹುದು.
ಕಿವಿ ಚುಚ್ಚಿಸಿಕೊಳ್ಳುವುದು: ಇದು ಸಾಂಪ್ರದಾಯಿಕವಾಗಿದ್ದರೂ ಕೂಡ, ಈಗ ಇದರಲ್ಲಿ ಸಾಕಷ್ಟು ಆಯ್ಕೆಗಳನ್ನು ಕಾಣಬಹುದು. ಕೆಲವರಂತೂ ಕಿವಿ ಪೂರ್ತಿಯಾಗಿ ಚುಚ್ಚಿಸಿಕೊಳ್ಳುತ್ತಾರೆ.