ಕಿವಿ ಹಣ್ಣು: ಕಿವಿ ಹಣ್ಣಿನಲ್ಲಿ ವಿಟಮಿನ್ ಕೆ ಮತ್ತು ವಿಟಮಿನ್ ಸಿ ಸಮೃದ್ದವಾಗಿದ್ದು, ಇದು ನಿಮ್ಮ ದೇಹದಲ್ಲಿ ಬಿಳಿ ರಕ್ತದ ಕಣಗಳು ಹೆಚ್ಚಾಗಲು ಸಹಾಯ ಮಾಡುತ್ತದೆ. ಬಿಳಿ ರಕ್ತದ ಕಣಗಳು ನಿಮಗೆ ಯಾವುದೇ ಸೋಂಕುಗಳು ವೇಗವಾಗಿ ಹರಡದಂತೆ ತಡೆಯುತ್ತದೆ. ಆದ್ದರಿಂದ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕಿವಿ ಹಣ್ಣು ಸೇವಿಸಿ.
ಪಪ್ಪಾಯಿ ಹಣ್ಣು: ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಪಪ್ಪಾಯಿ ಹಣ್ಣು ಉತ್ತಮ ಆಯ್ಕೆಯಾಗಿದೆ. ಇದರಲ್ಲಿ ಪೊಟ್ಯಾಸಿಯಮ್, ಫೈಬರ್, ಮೆಗ್ನೀಸಿಯಮ್ ಮತ್ತು ವಿಟಮಿನ್ ಸಿ, ಬಿ ಮತ್ತು ಇ ಗಳನ್ನು ಸಮೃದ್ದವಾಗಿವೆ.
ಕಲ್ಲಂಗಡಿ: ಕಲ್ಲಂಗಡಿಯಲ್ಲಿ ಪೊಟ್ಯಾಸಿಯಮ್, ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ ಮತ್ತು ಗ್ಲುಟಾಥಿಯೋನ್ ಸಮೃದ್ದವಾಗಿದ್ದು, ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ದಾಳಿಂಬೆ: ದಾಳಿಂಬೆ ಸೇವನೆಯು ನಿಮ್ಮ ದೇಹದಲ್ಲಿ ಸಾಲ್ಮೊನೆಲ್ಲಾ ಮತ್ತು ಲಿಸ್ಟೇರಿಯಾದಂತಹ ಬ್ಯಾಕ್ಟೀರಿಯಾಗಳ ಹೆಚ್ಚಳವನ್ನು ತಡೆಯುತ್ತದೆ. ಇದು ಹಲ್ಲಿನ ಪ್ಲೇಕ್ ಮತ್ತು ಒಸಡಿನ ಕಾಯಿಲೆ ಬೆಳವಣಿಗೆಯನ್ನು ತಡೆಗಟ್ಟುವಲ್ಲಿ ಸಹಾಯಕವಾಗಿದೆ.
ನೀವು ಸಹ ವಿಟಮಿನ್ ಡಿ ಕೊರತೆಯನ್ನು ಎದುರಿಸುತ್ತಿದ್ದರೆ ನಾವು ನಿಮಗೆ ಕೆಲವು ವಿಟಮಿನ್ ಡಿ ಭರಿತ ಆಹಾರಗಳ ಬಗ್ಗೆ ತಿಳಿಸುತ್ತೇವೆ. ನೀವು ಮಾಂಸಾಹಾರಿಗಳಾಗಿದ್ದರೆ ಮತ್ತು ವಿಟಮಿನ್ ಡಿ ಕೊರತೆಯೊಂದಿಗೆ ಹೋರಾಡುತ್ತಿದ್ದರೆ, ಮೊಟ್ಟೆಗಳನ್ನು ತಿನ್ನುವುದರಿಂದ ಈ ಕೊರತೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನಿವಾರಿಸಬಹುದು. ಮೊಟ್ಟೆಯಲ್ಲಿ ಪ್ರೋಟೀನ್ ಜೊತೆಗೆ ವಿಟಮಿನ್ ಡಿ ಕೂಡ ಇದೆ.
ಅರಶಿನ ಪುಡಿ: ಭಾರತೀಯ ಆಹಾರ ಪದಾರ್ಥಗಳಲ್ಲಿ ಬಳಸಲಾಗುವ ಅರಶಿನದ ಪುಡಿಯಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನಗಳಿವೆ. ಇದು ಉರಿಯೂತ ನಿವಾರಕವಾಗಿದೆ. ಶೀತ, ಕೆಮ್ಮ ಸೋಂಕಿನಿಂದ ನಿಮ್ಮನ್ನು ಕಾಪಾಡುವಲ್ಲಿಯೂ ಕೂಡ ಸಹಾಯಕವಾಗಿದೆ.
ಬಾದಾಮಿ: ಬಾದಾಮಿಯಲ್ಲಿ ವಿಟಮಿನ್ ಇ ಸಮೃದ್ದವಾಗಿದ್ದು, ಇದು ನಿಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯಕವಾಗಿದೆ. ಜೊತೆಗೆ, ಆರೋಗ್ಯಕರ ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿರ್ವಹಿಸಲು ಅಗತ್ಯವಾದ ಕೊಬ್ಬನ್ನು ದೇಹಕ್ಕೆ ಒದಗಿಸುತ್ತದೆ.
ಸಿಟ್ರಸ್ ಹಣ್ಣುಗಳಾದ ಲಿಂಬೆ, ದ್ರಾಕ್ಷಿ, ಕಿತ್ತಳೆ ಹಣ್ಣುಗಳನ್ನು ಸೇವಿಸುವುದರಿಂದ ಇದು ನಿಮ್ಮ ದೇಹಕ್ಕೆ ವಿಟಮಿನ್ ಸಿ ಯನ್ನು ಒದಗಿಸುತ್ತದೆ. ಇದು ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯಕವಾಗಿದೆ.
Published On - 3:58 pm, Fri, 13 January 23