AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೆಲಿಬ್ರಿಟಿಗಳ ಮದುವೆಗೆ ಉಡುಪು ವಿನ್ಯಾಸ ಮಾಡಿಕೊಡುವ ಸವ್ಯಸಾಚಿ ಮುಖರ್ಜಿ ಸಹ ಒಬ್ಬ ದೊಡ್ಡ ಸೆಲಿಬ್ರಿಟಿ!

ಸೆಲಿಬ್ರಿಟಿಗಳ ಮದುವೆಗೆ ಉಡುಪು ವಿನ್ಯಾಸ ಮಾಡಿಕೊಡುವ ಸವ್ಯಸಾಚಿ ಮುಖರ್ಜಿ ಸಹ ಒಬ್ಬ ದೊಡ್ಡ ಸೆಲಿಬ್ರಿಟಿ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Dec 11, 2021 | 6:56 PM

Share

ಪ್ರಾಯಶಃ ಇದು ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ. ನಿಕ್ ಜೋನಾಸ್ ರನ್ನು ಮದುವೆಯಾದ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ ಅವರು ಮದುವೆ ದಿನ ತೊಟ್ಟಿದ್ದ ಲೆಹೆಂಗಾವನ್ನು ತಯಾರು ಮಾಡಲು ಸವ್ಯಸಾಚಿ ಅವರಿಗೆ 3,720 ಗಂಟೆ ಸಮಯ ಹಿಡಿದಿತ್ತು.

ಕತ್ರೀನಾ ಕೈಫ್-ವಿಕ್ಕಿ ಕೌಶಲ್ ಮದುವೆ ಅದ್ದೂರಿಯಾಗಿ ನೆರವೇರಿದೆ. ಮದುವೆ ನಡೆದ ದಿನದಂದೇ ಮದುಮಕ್ಕಳ ಫೋಟೋಗಳು ಲೀಕ್ ಆಗಿದ್ದವು. ಫೋಟೋಗಳನ್ನು ನೋಡಿದ ನಂತರ ಜನರ ಬಾಯಲ್ಲಿ ಬಂದಿದ್ದು ಒಂದೇ ಉದ್ಗಾರ-ವಧು ಮತ್ತು ವರ ತೊಟ್ಟ ವಸ್ತ್ರಗಳು ಅದೆಷ್ಟು ಸೊಗಸಾಗಿವೆ! ಕತ್ರೀನಾ ಅವರನ್ನು ನೋಡಿ ಬಾಲಿವುಡ್ನ ಅದೆಷ್ಟು ನಟಿಮಣಿಯರು ಹೊಟ್ಟಿಯುರಿದುಕೊಂಡರೋ? ಓಕೆ, ಕತ್ರೀನಾ, ದೀಪಿಕಾ ಪಡುಕೋಣೆ, ಅನುಷ್ಕಾ ಶರ್ಮ, ಬಿಪಾಶಾ ಬಸು, ಪ್ರಿಯಾಂಕಾ ಚೋಪ್ರಾ ಮತ್ತು ವಿದ್ಯಾ ಬಾಲನ್-ಇವರೆಲ್ಲರ ಮದುವೆಯಲ್ಲಿ ಒಂದು ಸಂಗತಿ ಕಾಮನ್ ಆಗಿದೆ. ಏನು ಅಂತ ಊಹಿಸಲ್ಲಿರಾ? ಇವರೆಲ್ಲರ ಮದುವೆ ಉಡುಗೆಗಳನ್ನು ಡಿಸೈನ್ ಮಾಡಿದ್ದು ಈಗ ಸೆಲಿಬ್ರಿಟಿ ಡಿಸೈನರ್ ಎಂದು ಕರೆಸಿಕೊಳ್ಳುತ್ತಿರುವ ಸವ್ಯಸಾಚಿ ಮುಖರ್ಜಿ!

ಹೌದು, ಫ್ಯಾಶನ್ ಡಿಸೈನಿಂಗ್ಗೆ ಸಂಬಂಧಿಸಿದಂತೆ ಹೇಳುವುದಾದರೆ, ಸವ್ಯಸಾಚಿ ಅವರು ಉದ್ದಿಮೆ ಖ್ಯಾತನಾಮರನ್ನು ಹಿಂದಿಕ್ಕಿದ್ದಾರೆಂದರೆ ಉತ್ಪ್ರೇಕ್ಷೆ ಅನಿಸದು. ವಿದ್ಯಾ ಬಾಲನ್ ತಮ್ಮ ಮದುವೆಯಲ್ಲಿ ಸವ್ಯಸಾಚಿ ವಿನ್ಯಾಸಗೊಳಿಸಿದ್ದ 18 ಬೇರೆ ಬೇರೆ ಸೀರೆಗಳನ್ನು ಧರಿಸಿದ್ದರು. ಕ್ಯಾನೆ 2013 ಉತ್ಸವನಲ್ಲಿ ವಿದ್ಯಾ ಪ್ಯಾನೆಲೊಂದರ ಜ್ಯೂರಿಯಾಗಿ ಕಾರ್ಯ ನಿರ್ವಹಿಸುವಾಗ ಧರಿಸಿದ ಉಡುಪುಗಳಲ್ಲಿ 7 ಅನ್ನು ಸವ್ಯಸಾಚಿ ಡಿಸೈನ್ ಮಾಡಿದ್ದರು.

ಸರಿಯಾಗಿ 4 ವರ್ಷಗಳ ಹಿಂದೆ ಇದೇ ದಿನ (ಡಿಸೆಂಬರ್ 11, 2017) ನಡೆದ ತಮ್ಮ ಮದುವೆಯಲ್ಲಿ ಅನುಷ್ಕಾ ಶರ್ಮ ಧರಿಸಿದ ಪಿಂಕ್ ಬಣ್ಣದ ಲೆಹೆಂಗಾ ಮತ್ತು ವಿರಾಟ್ ಕೊಹ್ಲಿ ಧರಿಸಿದ್ದ ರೇಶ್ಮೆ ಶೇರ್ವಾನಿಯನ್ನು ಸವ್ಯಸಾಚಿ ಡಿಸೈನ್ ಮಾಡಿದ್ದರು. ನವೆಂಬರ್ 14, 2018ರಲ್ಲಿ ನಡೆದ ಕನ್ನಡದ ಹುಡುಗಿ ದೀಪಿಕಾ ಪಡುಕೋಣೆ ಮತ್ತು ಸಿಂಧಿ ಹುಡುಗ ರಣವೀರ್ ಸಿಂಗ್ ಅವರ ಮದುವೆ ಡ್ರೆಸ್ ತಯಾರಿಸಿಕೊಟ್ಟಿದ್ದು ಸವ್ಯಸಾಚಿ.

ಪ್ರಾಯಶಃ ಇದು ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ. ನಿಕ್ ಜೋನಾಸ್ ರನ್ನು ಮದುವೆಯಾದ ವಿಶ್ವ ಸುಂದರಿ ಪ್ರಿಯಾಂಕಾ ಚೋಪ್ರಾ ಅವರು ಮದುವೆ ದಿನ ತೊಟ್ಟಿದ್ದ ಲೆಹೆಂಗಾವನ್ನು ತಯಾರು ಮಾಡಲು ಸವ್ಯಸಾಚಿ ಅವರಿಗೆ 3,720 ಗಂಟೆ ಸಮಯ ಹಿಡಿದಿತ್ತು.

ಇವರೆಲ್ಲ ಅಲ್ಲದೆ, ಸಮಂತಾ ಪ್ರಭು, ಶ್ರದ್ಧಾ ಕಪೂರ್, ಕನ್ನಡತಿ ರಾಧಿಕಾ ಪಂಡಿತ್, ಕರೀನಾ ಕಪೂರ್, ದಿವಂಗತ ಶ್ರೀದೇವಿ, ಮತ್ತು ವಿದೇಶಿ ನಟಿಯರಾಗಿರುವ ರೆನೀ ಜೆಲ್ವೀಗರ್, ರೀಸಿ ವಿದರ್ಸ್ಪೂನ್ ಮೊದಲಾದವರಿಗೆಲ್ಲ ಸವ್ಯಸಾಚಿ ಉಡುಪುಗಳನ್ನು ವಿನ್ಯಾಸ ಮಾಡಿಕೊಟ್ಟಿದ್ದಾರೆ.

ಇದನ್ನೂ ನೋಡಿ:  ಕತ್ರಿನಾ​ ಕೈಫ್​-ವಿಕ್ಕಿ ಕೌಶಲ್​​ ಅರಿಶಿಣ ಶಾಸ್ತ್ರದ ಕಲರ್​ಫುಲ್​ ಫೋಟೋಗಳು ವೈರಲ್​; ಇಲ್ಲಿದೆ ಫೋಟೋ ಆಲ್ಬಂ