Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಫೋನ್ ಎಕ್ಸ್ ಆರ್ ಫೋನು ಇಷ್ಟು ಕಡಿಮೆ ಬೆಲೆಗೆ ಯಾವತ್ತೂ ಸಿಕ್ಕಿರಲಿಲ್ಲ, ಅಮೇಜಾನ್​​​​ನಲ್ಲಿ ಕೇವಲ ನಿಗದಿತ ಅವಧಿಗೆ ಮಾತ್ರ ಈ ಆಫರ್

ಐಫೋನ್ ಎಕ್ಸ್ ಆರ್ ಫೋನು ಇಷ್ಟು ಕಡಿಮೆ ಬೆಲೆಗೆ ಯಾವತ್ತೂ ಸಿಕ್ಕಿರಲಿಲ್ಲ, ಅಮೇಜಾನ್​​​​ನಲ್ಲಿ ಕೇವಲ ನಿಗದಿತ ಅವಧಿಗೆ ಮಾತ್ರ ಈ ಆಫರ್

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Dec 11, 2021 | 5:26 PM

ಐಫೋನ್ ಎಕ್ಸ್ ಆರ್ ಫೋನ್ ಹೊಸ ಯುನಿಟ್​ಗಳು ಚಾರ್ಜಿಂಗ್ ಆಡಾಪ್ಟರ್​​​​ನೊಂದಿಗೆ ಬರೋದಿಲ್ಲ. ಅದರೊಂದಿಗೆ ಸೆಲ್ ಮತ್ತು ಯುಎಸ್​ಬಿ-ಸಿ ಕೇಬಲ್​ಗೆ ಲೈಟ್ನಿಂಗ್ ಮಾತ್ರ ಸಿಗುತ್ತದೆ.

ಐಫೋನ್ ಎಕ್ಸ್ ಆರ್ ಫೋನನ್ನು ಕೇವಲ ರೂ. 18,599 ಗಳಿಗೆ ಸಿಗುತ್ತಿದೆ ಅಂತ ನಾವು ಹೇಳಿದರೆ, ಸುಮ್ನಿರಿ ಮಾರಾಯ್ರೇ, ನಿಮಗೆಲ್ಲೋ ಭ್ರಾಂತು ಎನ್ನುತ್ತಾ ನೀವು ಮಾರಾಯ್ರೇ, ಅಪ್ಪಟ ಸತ್ಯ. 64ಜಿಬಿ ಸ್ಟೋರೇಜ್ ಸಾಮರ್ಥ್ಯದ ಐಫೋನ್ ಎಕ್ಸ್ ಆರ್ ಫೋನನ್ನು ಇ-ಕಾಮರ್ಸ್ ದೈತ್ಯ ಅಮೆಜಾನ್ ಕೇವಲ ರೂ. 18,599ಗಳಿಗೆ ಮಾರಾಟ ಮಾಡುತ್ತಿದೆ. ಆದರೆ ಫೋನನ್ನು ಈ ಬೆಲೆಗೆ ಖರೀದಿ ಮಾಡುವ ಮೊದಲು ಕೆಲವು ಷರತ್ತುಗಳನ್ನು ಪೂರೈಸಬೇಕೆಂದು ಅಮೇಜಾನ್ ಹೇಳಿದೆ.

ಐಫೋನ್ ಯಾರಿಗೆ ಇಷ್ಟವಾಗಲಾರದು? ಜನ ಅದರಲ್ಲೂ ಯುವ ಜನಾಂಗ ಈ ಬ್ರ್ಯಾಂಡಿನ ಫೋನುಗಳಿಗೆ ತವಕಿಸುತ್ತಿರುತ್ತದೆ. ಈಗ ಸದ್ಯಕ್ಕೆ ಅಮೇಜಾನ್ ನಲ್ಲಿ ಐಫೋನ್ ಎಕ್ಸ್ ಆರ್ ಬೇಸ್ ಆವೃತ್ತಿ ಫೋನಿನ ಅಸಲು ಬೆಲೆ ರೂ. 34,999. ಸದರಿ ಬೆಲೆಯು ಪ್ರಾಡಕ್ಟ್ ರೆಡ್ ವೇರಿಯಂಟ್ ಸೇರಿದಂತೆ ಎಲ್ಲ ಬಣ್ಣದ ಆವೃತ್ತಿಗಳಿಗೆ ಅನ್ವಯಿಸುತ್ತದೆ.

ಇಲ್ಲಿ ನೀವು ಗಮನದಲ್ಲಿಟ್ಟುಕೊಳ್ಳಬೇಕಿರುವ ಸಂಗತಿಯೇನೆಂದರೆ, ಐಫೋನ್ ಎಕ್ಸ್ ಆರ್ ಫೋನ್ ಹೊಸ ಯುನಿಟ್​ಗಳು ಚಾರ್ಜಿಂಗ್ ಆಡಾಪ್ಟರ್​​​​ನೊಂದಿಗೆ ಬರೋದಿಲ್ಲ. ಅದರೊಂದಿಗೆ ಸೆಲ್ ಮತ್ತು ಯುಎಸ್​ಬಿ-ಸಿ ಕೇಬಲ್​ಗೆ ಲೈಟ್ನಿಂಗ್ ಮಾತ್ರ ಸಿಗುತ್ತದೆ.

ನಿಮ್ಮ ಹಳೆಯ ಫೋನನ್ನು ವಿನಿಮಯ ಮಾಡಿಕೊಂಡರೆ ಅಮೇಜಾನ್ ವಿನಿಮಯ ಬೋನಸ್ ರೂಪದಲ್ಲಿ ಹೆಚ್ಚು ಕಡಿಮೆ ರೂ 14,900ಗಳ ಆಫರ್ ನೀಡುತ್ತದೆ. ಇದಲ್ಲದೆ ನೀವು ಯೆಸ್ ಬ್ಯಾಂಕ್ ಇಲ್ಲವೇ ಅಮೇರಿಕನ್ ಎಕ್ಸ್ಪ್ರೆಸ್ ಕ್ರೆಡಿಟ್ ಕಾರ್ಡ್ ಮೂಲಕ ಮಾಸಿಕ ಕಂತುಗಳನ್ನು ಪಾವತಿಸಿದರೆ ಹೆಚ್ಚುವರಿ ರೂ. 1,500 ರಿಯಾಯಿತಿ ಸಿಗಲಿದೆ. ಇವೆಲ್ಲವನ್ನು ನೀವು ಮಾಡಿದ್ದೇಯಾದರೆ, ಐಫೋನ್ ಎಕ್ಸ್ ಆರ್ ಫೋನಿನ ಬೆಲೆ ರೂ. 18,599 ಕ್ಕೆ ಇಳಿಯುತ್ತದೆ.

ಇದನ್ನೂ ಓದಿ:    Child Marriage: ರಾಜಸ್ಥಾನದಲ್ಲಿ ಇನ್ನೂ ಚಾಲ್ತಿಯಲ್ಲಿದೆ ಬಾಲ್ಯವಿವಾಹ; ಮಕ್ಕಳ ಮದುವೆಯ ಶಾಕಿಂಗ್ ವಿಡಿಯೋ ವೈರಲ್