ಜಡೆ ಹೆಣೆದುಕೊಳ್ಳುವುದು ನಿಮ್ಮ ಕೂದಲಿಗೆ ಮಾತ್ರವಲ್ಲ ಆರೋಗ್ಯಕ್ಕೂ ಒಳ್ಳೆಯದು!
ಕೂದಲನ್ನು ಚೆಂದವಾಗಿ ಜಡೆ ಹೆಣೆದುಕೊಳ್ಳುವುದು ಕೇವಲ ಅಲಂಕಾರಕ್ಕಾಗಿ ಮಾತ್ರವಲ್ಲ ಇದರಿಂದ ಆರೋಗ್ಯಕ್ಕೂ ಹಲವು ರೀತಿಯ ಪ್ರಯೋಜನಗಳಿವೆ. ಸಾಮಾನ್ಯವಾಗಿ ಮನೆಯಲ್ಲಿರುವ ಹಿರಿಯರು ಕೂದಲು ಬಿಟ್ಟುಕೊಂಡಿದ್ದರೆ ಬೈಯುತ್ತಾರೆ. "ಲಕ್ಷಣವಾಗಿ ಜಡೆ ಹಾಕ್ಕೋ" ಅಂತ ಬುದ್ದಿ ಹೇಳುತ್ತಾರೆ. ಆದರೆ ಇದರ ಹಿಂದೆ ನಮಗೆ ಗೊತ್ತೇ ಇರದಂತಹ ಪ್ರಯೋಜನಗಳಿರುತ್ತವೆ. ಹೌದು. ಜಡೆ ಹಾಕುವುದರಿಂದ ನಮ್ಮ ದೇಹ ಆರೋಗ್ಯವಾಗಿರುತ್ತೆ ಎಂದರೆ ನೀವು ನಂಬಲೇ ಬೇಕು. ಹಾಗಾದರೆ ಇದರಿಂದ ಆರೋಗ್ಯಕ್ಕೆ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳಿ.

ಸಾಮಾನ್ಯವಾಗಿ ಕೂದಲು ಬಿಟ್ಟುಕೊಂಡಿರುವ ಹುಡುಗಿಯರಿಗಿಂತ ಲಕ್ಷಣವಾಗಿ ಜಡೆ ಹೆಣೆದುಕೊಂಡಿರುವವರು (Girls, braiding) ಬೇಗ ಗಮನ ಸೆಳೆಯುತ್ತಾರೆ. ನಮ್ಮ ಹಿಂದೂ ಧರ್ಮದಲ್ಲಿಯೂ ಹೆಣ್ಣಿನ ಜಡೆಗೆ (Women’s Braids) ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಕೆಲವರು ಕೂದಲನ್ನು ಜಡೆ ಹೆಣೆದುಕೊಳ್ಳುವುದು ಅಲಂಕಾರಕ್ಕಾಗಿ ಮಾತ್ರ ಎಂದು ಭಾವಿಸುತ್ತಾರೆ. ಅದಕ್ಕಾಗಿಯೇ ಶುಭ ಸಮಾರಂಭಗಳಲ್ಲಿ ಮಾತ್ರ ಹೂವು ಮೂಡಿದು ಅಂದವಾಗಿ ಜಡೆಯನ್ನು ಹೆಣೆದುಕೊಳ್ಳುತ್ತಾರೆ. ಆದರೆ ಅಲಂಕಾರ ಮಾಡಿಕೊಳ್ಳಲು ಮಾತ್ರ ಜಡೆ ಹಾಕುವುದು ತಪ್ಪು. ಪ್ರತಿನಿತ್ಯವೂ ಕೂದಲು ಬಿಟ್ಟುಕೊಂಡಿರುವುದಕ್ಕಿಂತ ಜಡೆ ಹಾಕಿಕೊಳ್ಳುವ ಅಭ್ಯಾಸ ಮಾಡಿಕೊಂಡರೆ ನಿಮ್ಮ ಆರೋಗ್ಯ (Health) ಚೆನ್ನಾಗಿರುತ್ತೆ. ಹೌದು ಜಡೆ ಹಾಕುವುದರಿಂದ ನಮ್ಮ ದೇಹ ಆರೋಗ್ಯವಾಗಿರುತ್ತೆ ಎಂದರೆ ನೀವು ನಂಬಲೇ ಬೇಕು. ಹಾಗಾದರೆ ಇದರಿಂದ ಯಾವ ರೀತಿಯ ಪ್ರಯೋಜನಗಳಿವೆ ಎಂಬುದನ್ನು ತಿಳಿದುಕೊಳ್ಳಿ.
ಜಡೆ ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತವೆ:
ನೀವು ಪ್ರತಿನಿತ್ಯ ಜಡೆ ಹಾಕಿಕೊಳ್ಳುವುದರಿಂದ ನಿಮ್ಮ ಕೂದಲಿನ ನೈಸರ್ಗಿಕ ತೇವಾಂಶವನ್ನು ಇದು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಈ ರೀತಿಯಾಗಿ, ಪರಿಸರದಲ್ಲಿ ಯಾವುದೇ ರೀತಿಯ ಬದಲಾವಣೆ ಆದರೂ ಕೂಡ ಇದು ನಿಮ್ಮ ಕೂದಲನ್ನು ರಕ್ಷಿಸುತ್ತದೆ.
ನೆತ್ತಿಯ ರಕ್ಷಣೆ:
ಕೂದಲು ಆರೋಗ್ಯವಾಗಿರಬೇಕು ಎಂದರೆ ನೆತ್ತಿಯ ಮೇಲಿನ ಚರ್ಮ ಚೆನ್ನಾಗಿರುವುದು ಬಹಳ ಮುಖ್ಯವಾಗುತ್ತದೆ. ನೆತ್ತಿಯ ಮೇಲಿನ ಚರ್ಮ ಒಣಗದಂತೆ ನೋಡಿಕೊಳ್ಳಲು, ಎಣ್ಣೆಯ ಜೊತೆಗೆ ಪ್ರತಿನಿತ್ಯ ಜಡೆ ಹಾಕಿಕೊಳ್ಳುವುದು ಕೂಡ ಒಳ್ಳೆಯದು. ಏಕೆಂದರೆ ಇದು ನೆತ್ತಿಯ ಮೇಲಿನ ಶಿಲೀಂಧ್ರ ಸಮಸ್ಯೆಗಳನ್ನು ದೂರವಿಡಲು ಸಹಾಯ ಮಾಡುತ್ತದೆ. ಪರಿಣಾಮವಾಗಿ, ಯಾವುದೇ ರೀತಿಯಲ್ಲಿಯೂ ತುರಿಕೆ ಮತ್ತು ತಲೆಹೊಟ್ಟಿನ ಸಮಸ್ಯೆ ಕಂಡು ಬರುವುದಿಲ್ಲ.
ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ:
ಪ್ರತಿನಿತ್ಯ ಕಾಡುವ ವಾಯು ಮಾಲಿನ್ಯ, ಸೂರ್ಯನ ಬೆಳಕು ಸೇರಿದಂತೆ ಶಾಖಕ್ಕೆ ಅತಿಯಾಗಿ ಒಡ್ಡಿಕೊಳ್ಳುವುದರಿಂದ ಕೂದಲು ಒಡೆಯಬಹುದು. ಪರಿಣಾಮವಾಗಿ ಇದು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಹಲವಾರುಪ್ರತಿನಿತ್ಯ ಬೇರೆ ಬೇರೆ ರೀತಿಯ ಹೇರ್ ಸ್ಟೈಲ್ ಮಾಡುವುದು ಕೂಡ ಕೂದಲಿನ ತುದಿಗಳಿಗೆ ಹಾನಿಯಾಗುವುದಕ್ಕೆ ಪ್ರಮುಖ ಕಾರಣವಾಗಬಹುದು. ಆದ್ದರಿಂದ, ಕೂದಲನ್ನು ಕಟ್ಟುವುದರಿಂದ ಅದಕ್ಕೆ ಪೋಷಣೆ ಸಿಗುತ್ತದೆ ಇದರಿಂದ ತುದಿ ಒಡೆಯುವ ಸಮಸ್ಯೆ ಕಡಿಮೆಯಾಗುತ್ತದೆ. ಕೂದಲು ಉದುರುವುದಿಲ್ಲ ಇದರಿಂದ ಆರೋಗ್ಯಕರ ಕೂದಲಿನ ಬೆಳವಣಿಗೆಯಾಗುತ್ತದೆ.
ಇದನ್ನೂ ಓದಿ: ಈ ಮನೆಮದ್ದಿನಿಂದ ಕೇವಲ ಒಂದೇ ರಾತ್ರಿಯಲ್ಲಿ ನರಹುಲಿ ಕಡಿಮೆ ಮಾಡಬಹುದು
ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ:
ಜಡೆಗಳು ಆರೋಗ್ಯಕರ ಕೂದಲನ್ನು ಕಾಪಾಡಿಕೊಳ್ಳಲು ಮತ್ತು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಪ್ರತಿದಿನ ಜಡೆ ಹಾಕುವುದರಿಂದ ಕೂದಲು ಚೆನ್ನಾಗಿ ಬೆಳೆಯುತ್ತದೆ. ಆದರೆ ಜಡೆಯನ್ನು ಬಿಗಿಯಾಗಿ ಹಾಕಬಾರದು. ಆದಷ್ಟು ಸಡಿಲವಾಗಿ ಬಿಡುವುದು ಒಳ್ಳೆಯದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








