ಅತಿಸಾರ, ಮಲಬದ್ಧತೆಯಂತಹ ಸಮಸ್ಯೆಗೆ ಈ ಎಲೆಯ ರಸವೇ ಔಷಧ!
ದಾಳಿಂಬೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ದಾಳಿಂಬೆ ಹಣ್ಣಿಗಿಂತ ಅವುಗಳ ಎಲೆಯಲ್ಲಿಯೇ ಹೆಚ್ಚಿನ ಪ್ರಯೋಜನಗಳಿವೆ ಎಂದರೆ ನೀವು ನಂಬುತ್ತೀರಾ? ಹೌದು. ಅದಕ್ಕಾಗಿಯೇ ಆರೋಗ್ಯ ತಜ್ಞರು ಇವುಗಳನ್ನು ಪ್ರತಿದಿನವೂ ಸೇವನೆ ಮಾಡಿ ಎಂದು ಹೇಳುತ್ತಾರೆ. ಏಕೆಂದರೆ ಇವುಗಳಲ್ಲಿ ಅಷ್ಟು ಆರೋಗ್ಯ ಪ್ರಯೋಜನಗಳಿವೆ. ಜೀರ್ಣಕ್ರಿಯೆ ಸಮಸ್ಯೆಯಿಂದ ಹಿಡಿದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದರ ವರೆಗೆ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗೂ ಇದು ರಾಮಬಾಣವಾಗಿ ಕೆಲಸ ಮಾಡುತ್ತದೆ.

ದಾಳಿಂಬೆ ಹಣ್ಣು (Pomegranate) ತಿನ್ನುವುದಕ್ಕೆ ರುಚಿಕರವಾಗಿರುವುದಲ್ಲದೆ, ಆರೋಗ್ಯಕ್ಕೂ (Health) ತುಂಬಾ ಒಳ್ಳೆಯದು. ಈ ಕಾರಣಕ್ಕಾಗಿಯೇ ಅನೇಕರು ಈ ದಾಳಿಂಬೆ ಹಣ್ಣನ್ನು ತಿನ್ನುವುದಕ್ಕೆ ಇಷ್ಟಪಡುತ್ತಾರೆ. ಆದರೆ ದಾಳಿಂಬೆ ಹಣ್ಣು ಮಾತ್ರವಲ್ಲ ಅದರ ಎಲೆ ಕೂಡ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದರೆ ನಂಬುತ್ತೀರಾ? ಪ್ರತಿನಿತ್ಯ ಸೊಪ್ಪು, ತರಕಾರಿಗಳ (Green vegetables) ಸೇವನೆ ಮಾಡುವವರಿಗೆ ಇದರ ಬಗ್ಗೆ ತಿಳಿದಿರಬಹುದು. ಆದರೆ ಈ ಎಲೆಯ ಪ್ರಯೋಜನಗಳ ಬಗ್ಗೆ ಜನರಿಗೆ ಅಷ್ಟಾಗಿ ಮಾಹಿತಿ ಇಲ್ಲ. ದಾಳಿಂಬೆ ಹಣ್ಣಿಗೆ ಹೋಲಿಸಿದರೆ ಇವುಗಳ ಎಲೆಯಲ್ಲಿಯೇ ಹೆಚ್ಚು ಆರೋಗ್ಯಕರ ಗುಣಗಳಿವೆ ಎಂದು ಹೇಳಲಾಗುತ್ತದೆ. ಹಾಗಾದರೆ ಇದು ಯಾವ ರೀತಿಯ ಆರೋಗ್ಯ ಸಮಸ್ಯೆಗೆ ಒಳ್ಳೆಯದು? ಯಾರು ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.
ದಾಳಿಂಬೆ ಎಲೆಯಲ್ಲಿದೆ ನಂಬಲು ಅಸಾಧ್ಯವಾಗದ ಆರೋಗ್ಯ ಪ್ರಯೋಜನ:
ದಾಳಿಂಬೆ ಎಲೆಗಳು ಉತ್ತಮ ಔಷಧೀಯ ಗುಣಗಳನ್ನು ಹೊಂದಿವೆ. ಅದಕ್ಕಾಗಿಯೇ ಈ ಎಲೆಗಳನ್ನು ಆಯುರ್ವೇದದಲ್ಲಿ ಬಳಕೆ ಮಾಡಲಾಗುತ್ತದೆ. ಅದಲ್ಲದೆ ಕಾಮೋತ್ತೇಜಕ ಕಾಯಿಲೆಗಳು, ಅತಿಸಾರ ಮತ್ತು ಮಲಬದ್ಧತೆ ಮುಂತಾದ ಕಾಯಿಲೆಗಳಿಂದ ಬಳಲುತ್ತಿರುವವರು ಇದರ ರಸವನ್ನು ಕುಡಿಯುವುದರಿಂದ ಬೇಗನೆ ಪರಿಹಾರ ಸಿಗುತ್ತದೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ, ಇದು ಸರಾಗ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹೊಟ್ಟೆ ನೋವು, ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆ, ಮಲಬದ್ಧತೆ ಅಥವಾ ಅತಿಸಾರ ಸೇರಿದಂತೆ ನಾನಾ ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಈ ಎಲೆಗಳು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಪ್ರತಿದಿನ ಬೆಳಿಗ್ಗೆ ಒಂದು ಬೌಲ್ ದಾಳಿಂಬೆ ಸೇವಿಸಿದ್ರೆ ರಕ್ತದಲ್ಲಿ ಈ ಬದಲಾವಣೆ ಖಂಡಿತ
ದಾಳಿಂಬೆ ಎಲೆಯಿಂದ ಮಾಡಿದ ಕಷಾಯ ಕುಡಿದಿದ್ದೀರಾ?
ಹಿಂದಿನ ಕಾಲದಲ್ಲಿ ಈ ದಾಳಿಂಬೆ ಎಲೆಗಳಿಂದ ಕಷಾಯ ಮಾಡಿ ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ಅಥವಾ ರಾತ್ರಿ ಮಲಗುವ ಮುನ್ನ ಕುಡಿಯಲಾಗುತ್ತಿತ್ತು. ಏಕೆಂದರೆ ಇದು ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗೂ ರಾಮಬಾಣವಾಗಿ ಕೆಲಸ ಮಾಡುತ್ತಿತ್ತು. ಇನ್ನು ಆರೋಗ್ಯ ತಜ್ಞರು ಹೇಳುವ ಪ್ರಕಾರ, ಈ ಎಲೆಯ ಸೇವನೆಯಿಂದ ದೇಹಕ್ಕೆ ಉತ್ತಮ ಪೋಷಕಾಂಶಗಳು ದೊರೆಯುತ್ತವೆ ಎಂದು ಹೇಳಲಾಗುತ್ತದೆ. ಇದು ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಈ ಎಲೆಗಳ ರಸವನ್ನು ಪ್ರತಿದಿನ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಅದೇ ರೀತಿ, ಕೆಮ್ಮು ಮತ್ತು ಶೀತದಂತಹ ಕಾಲೋಚಿತ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಈ ಎಲೆಗಳ ರಸವು ವರದಾನವಾಗಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈ ರಸವನ್ನು ಬಿಸಿ ಮಾಡಿ ಕುಡಿಯುವುದರಿಂದ ಶೀತ ಮತ್ತು ಕೆಮ್ಮಿನ ಸಮಸ್ಯೆಗಳಿಂದ ಪರಿಹಾರ ಸಿಗುತ್ತದೆ. ಇನ್ನು ಈ ಎಲೆಯಿಂದ ತಯಾರಿಸಲಾದ ಪೇಸ್ಟ್ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರದಂತೆ ರಕ್ಷಣೆ ನೀಡುತ್ತದೆ. ಕರ್ನಾಟಕದ ಕೆಲವು ಭಾಗದಲ್ಲಿ ಈ ಎಲೆಗಳಿಂದ ಚಟ್ನಿ, ತಂಬುಳಿ ಹೀಗೆ ಅನೇಕ ರೀತಿಯಲ್ಲಿ ಈ ಎಲೆಯನ್ನು ಬಳಸಲಾಗುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ