ಇದಕ್ಕೆ ಹೇಳೋದು ವಾರದಲ್ಲಿ ಒಮ್ಮೆಯಾದರೂ ಮಶ್ರೂಮ್ ತಿನ್ನಿ ಅಂತ
ಮಶ್ರೂಮ್ ಪ್ರಯೋಜನಗಳು: ಅಣಬೆಗಳು ನಮ್ಮ ಆರೋಗ್ಯವನ್ನು ಹಲವು ರೀತಿಯಲ್ಲಿ ಸುಧಾರಿಸುತ್ತದೆ, ಇದೊಂದು ನೈಸರ್ಗಿಕ ಆಹಾರವಾಗಿದ್ದು ಅವುಗಳಯಾರೂ ಬೇಕಾದರೂ ಸೇವನೆ ಮಾಡಬಹುದಾಗಿದೆ. ಅದಕ್ಕಾಗಿಯೇ ಇವುಗಳನ್ನು ಪ್ರತಿನಿತ್ಯವೂ ಸೇವನೆ ಮಾಡಬೇಕು ಎನ್ನಲಾಗುತ್ತದೆ. ಪ್ರತಿದಿನ ತಿನ್ನಲು ಸಾಧ್ಯವಾಗದಿದ್ದರೆ ಕನಿಷ್ಠ ವಾರದಲ್ಲಿ ಒಮ್ಮೆಯಾದರೂ ಇದನ್ನು ಯಾವುದಾದರೂ ರೀತಿಯಲ್ಲಿ ನಿಮ್ಮ ಆಹಾರದಲ್ಲಿ ಬಳಸಿಕೊಳ್ಳಿ. ಇದರಿಂದ ಅವುಗಳಲ್ಲಿರುವ ವಿಶೇಷ ಪೋಷಕಾಂಶಗಳು ದೇಹವನ್ನು ಸೇರುತ್ತದೆ. ಕ್ಯಾನ್ಸರ್ ಬರುವುದನ್ನು ಕೂಡ ತಡೆಯುತ್ತದೆ.

ಅಣಬೆ (mushrooms) ಎಂದರೆ ಕೆಲವರಿಗೆ ಆಗುವುದಿಲ್ಲ ಅದರಲ್ಲಿ ರುಚಿಯೇ ಇಲ್ಲ ಎನ್ನುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ ಇದು ನಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅದಕ್ಕಾಗಿಯೇ ಇವುಗಳನ್ನು ನಮ್ಮ ಆಹಾರದಲ್ಲಿ ಬಳಕೆ ಮಾಡಬೇಕು. ಇವು ನಾವು ನಂಬಲು ಅಸಾಧ್ಯವಾದಷ್ಟು ಆರೋಗ್ಯ (health) ಪ್ರಯೋಜನಗಳನ್ನು ನೀಡುತ್ತದೆ. ಮಶ್ರೂಮ್ ಗಲು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದರ ಜೊತೆಗೆ ಕ್ಯಾನ್ಸರ್ (cancer) ತಡೆಯುವವರೆಗೆ ಹಲವು ರೀತಿಯ ಗಂಭೀರ ಕಾಯಿಲೆಗಳಿಂದ ನಮ್ಮನ್ನು ರಕ್ಷಿಸುತ್ತದೆ. ಪ್ರತಿನಿತ್ಯ ತಿನ್ನುವುದಕ್ಕೆ ಸಾಧ್ಯವಾಗದಿದ್ದರೂ ಕೂಡಾ ವಾರದಲ್ಲಿ ಒಮ್ಮೆಯಾದರೂ ಇದನ್ನು ಸೇವನೆ ಮಾಡಿ ನೋಡಿ. ಹಾಗಾದರೆ ಇವುಗಳನ್ನು ಯಾಕಾಗಿ ಸೇವನೆ ಮಾಡಬೇಕು? ಯಾವ ರೀತಿಯ ಪ್ರಯೋಜನಗಳು ಸಿಗುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳಿ.
ಮಶ್ರೂಮ್ ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನ:
- ಮಶ್ರೂಮ್ ಅಥವಾ ಅಣಬೆಗಳಲ್ಲಿ ಕಂಡುಬರುವ ಉತ್ಕರ್ಷಣ ನಿರೋಧಕಗಳು ನಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ಅವು ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ.
- ಅಣಬೆಗಳಲ್ಲಿ ಕಂಡುಬರುವ ನೈಸರ್ಗಿಕ ಪೋಷಕಾಂಶಗಳು ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ಮಶ್ರೂಮ್ ಅಥವಾ ಅಣಬೆಗಳು ಹೃದಯ ಸಂಬಂಧಿ ಕಾಯಿಲೆಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
- ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಅಣಬೆಗಳು ತುಂಬಾ ಒಳ್ಳೆಯದು. ಅವುಗಳಲ್ಲಿ ಕ್ಯಾಲೋರಿಗಳು ಕಡಿಮೆ ಇರುವುದರಿಂದ, ಇವುಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಬೇಗನೆ ಹಸಿವಾಗುವುದಿಲ್ಲ. ಇದು ಕ್ರಮೇಣವಾಗಿ ತೂಕ ಹೆಚ್ಚಾಗುವುದನ್ನು ತಡೆಯುತ್ತದೆ.
- ಅಣಬೆಗಳಲ್ಲಿ ವಿಟಮಿನ್ ಡಿ ಅಧಿಕವಾಗಿದ್ದು ಇದು ಮೂಳೆಯ ಆರೋಗ್ಯಕ್ಕೆ ಬಹಳ ಅವಶ್ಯಕ.
- ಅಣಬೆಗಳು ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.
- ಈ ಅಣಬೆಗಳು ದೇಹವನ್ನು ಡಿಟಾಕ್ಸ್ ಮಾಡಲು ಸಹಾಯ ಮಾಡುತ್ತದೆ. ಕೆಟ್ಟ ಪದಾರ್ಥಗಳನ್ನು ವೇಗವಾಗಿ ಹೊರಹಾಕುವ ಕೆಲಸವನ್ನು ಮಾಡುತ್ತದೆ.
- ಅಣಬೆಗಳಲ್ಲಿರುವ ವಿಟಮಿನ್, ಮಿನರಲ್ಸ್‌ನಿಂದ ಚರ್ಮವು ಆರೋಗ್ಯವಾಗಿ ಕಾಣುತ್ತದೆ, ಕೂದಲು ಸುಂದರವಾಗಿ ಬೆಳೆಯುತ್ತದೆ.
- ಮಶ್ರೂಮ್ ಅಥವಾ ಅಣಬೆಗಳುಗಳಲ್ಲಿ ಇರುವ ಎರ್ಗೋಥಿಯೋನಿನ್ ಎಂಬ ಆಂಟಿಆಕ್ಸಿಡೆಂಟ್ ಕ್ಯಾನ್ಸರ್ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ನಿತ್ಯ 18 ಗ್ರಾಂ ಅಣಬೆ ಸೇವಿಸುವುದರಿಂದ ಕ್ಯಾನ್ಸರ್‌ನ ಅಪಾಯ 45% ವರೆಗೆ ಕಡಿಮೆಯಾಗುತ್ತದೆ ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ.
- ಮಶ್ರೂಮ್ ಕಡಿಮೆ ಸೋಡಿಯಂ, ಹೆಚ್ಚಿನ ಪೊಟ್ಯಾಷಿಯಂ ಹಾಗೂ ಫೈಬರ್ ಹೊಂದಿರುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಇನ್ನು ಇದರಲ್ಲಿರುವ ಬೆಟಾ-ಗ್ಲೂಕನ್ ಹೃದಯ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:45 pm, Sat, 7 June 25








