Viral: ಅಣಬೆ ಕೃಷಿಯಿಂದ ತಿಂಗಳಿಗೆ 4 ಲಕ್ಷ ರೂ. ಗಳಿಸುತ್ತಿರುವ ಮಾಜಿ ಮೈಕ್ರೋಬಯಾಲಜಿ ಪ್ರೊಫೆಸರ್‌

ಯಾವುದೇ ಕೆಲಸವನ್ನು ಇಷ್ಟಪಟ್ಟು ಮಾಡಿದ್ರೆ ಅದ್ರಲ್ಲಿ ಖಂಡಿತ ಯಶಸ್ಸು ಸಿಕ್ಕೇ ಸಿಗುತ್ತದೆ. ಇದಕ್ಕೆ ಸೂಕ್ತ ನಿದರ್ಶನವೆಂಬಂತೆ ಇಲ್ಲೊಬ್ರು ಮಹಿಳೆ ತನ್ನ ಪ್ರೊಫೆಸರ್‌ ಉದ್ಯೋಗವನ್ನು ತೊರೆದ ನಂತರ ಕೃಷಿಯಲ್ಲಿ ಆಸಕ್ತಿ ತೋರಿಸಿ ಅಣಬೆ ಕೃಷಿಯನ್ನು ಆರಂಭಿಸಿ ಪ್ರಸ್ತುತ ತಿಂಗಳಿಗೆ 4 ಲಕ್ಷ ರೂ. ಸಂಪಾದನೆ ಮಾಡುತ್ತಿದ್ದಾರೆ. ಇವರ ಈ ಯಶಸ್ಸಿನ ಕಥೆ ಇದೀಗ ಭಾರೀ ವೈರಲ್‌ ಆಗುತ್ತಿದೆ.

Viral: ಅಣಬೆ ಕೃಷಿಯಿಂದ ತಿಂಗಳಿಗೆ 4 ಲಕ್ಷ ರೂ. ಗಳಿಸುತ್ತಿರುವ ಮಾಜಿ ಮೈಕ್ರೋಬಯಾಲಜಿ ಪ್ರೊಫೆಸರ್‌
ತೃಪ್ತಿ ಧಾಕಟೆ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on:Nov 17, 2024 | 4:40 PM

ಕೆಲಸದಲ್ಲಿ ಆಸಕ್ತಿ ಇದ್ರೆ ಯಾವುದೇ ಕ್ಷೇತ್ರದಲ್ಲಿ ಕೂಡಾ ಸಾಧನೆ ಮಾಡಬಹುದು ಎಂದು ಹೇಳುತ್ತಾರೆ. ಅದೇ ರೀತಿ ಇಲ್ಲೊಬ್ಬರು ಮಹಿಳೆ ಕೂಡಾ ತನ್ನ ಪ್ರೊಫೆಸರ್‌ ಕೆಲಸ ಬಿಟ್ಟು ಅಣಬೆ ಕೃಷಿಯಲ್ಲಿ ತೊಡಗಿ ಇದೀಗ ತಿಂಗಳಿಗೆ 4 ಲಕ್ಷ ರೂ. ಸಂಪಾದನೆ ಮಾಡುತ್ತಿದ್ದಾರೆ. ಹೌದು ಒಂದು ಕಾಲದಲ್ಲಿ ಮೈಕ್ರೋಬಯಾಲಜಿ ಪ್ರೊಫೆಸರ್‌ ಆಗಿ ಕೆಲಸ ಮಾಡುತ್ತಿದ್ದ ತೃಪ್ತಿ ಧಾಕಟೆ ಇಂದು ಅಣಬೆ ಕೃಷಿಯಿಂದ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಇವರ ಈ ಯಶಸ್ಸಿನ ಪಯಣದ ಬಗ್ಗೆ ತಿಳಿದುಕೊಳ್ಳೋಣ.

ಜೈವಿಕ ತಂತ್ರಜ್ಞಾನ ಮತ್ತು ಸಸ್ಯಶಾಸ್ತ್ರದಲ್ಲಿ Msc ಪದವಿಯನ್ನು ಪಡೆದ ತೃಪ್ತಿ ಢಕಾಟೆ ನಾಗ್ಪುರ ವಿಶ್ವವಿದ್ಯಾನಿಲಯದಿಂದ ಸಸ್ಯಶಾಸ್ತ್ರದಲ್ಲಿ ಚಿನ್ನದ ಪದಕವನ್ನು ಕೂಡಾ ಗಳಿಸಿದ್ದಾರೆ. ಪದವಿ ಪಡೆದ ಬಳಿಕ ಅವರು ಪ್ರಾದ್ಯಾಪಕಿಯಾಗಿ ಕೆಲಸವನ್ನು ಆರಂಭಿಸಿದರು. ವಾರ್ಧದ ಜೆಬಿ ಕಾಲೇಜ್‌ ಆಫ್‌ ಸೈನ್ಸ್‌ನಲ್ಲಿ ಪ್ರಾಧ್ಯಾಪಕರಾಗಿ ಮತ್ತು ಮದುವೆಯ ಮುಂಚೆ ಡಾ. ಡಿವೈ ಪಾಟೀಲ್‌ ಬಯೋಟೆಕ್ನಾಲಜಿ ಮತ್ತು ಬಯೋ ಇನ್ಫರ್ಮ್ಯಾಟಿಕ್ಸ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಪ್ರೊಫೆಸರ್‌ ಆಗಿ ಕೆಲಸ ಮಾಡುತ್ತಿದ್ದರು. ಮದುವೆಯ ಬಳಿಕ ತಮ್ಮ ಪತಿಯೊಂದಿಗೆ ಪುಣೆಗೆ ಶಿಫ್ಟ್‌ ಆದ ತೃಪ್ತಿ ತಮ್ಮ ಉದ್ಯೋಗವನ್ನು ತೊರೆಯುತ್ತಾರೆ. ಮತ್ತು ಇವರು ಕೃಷಿಯಲ್ಲಿ ಆಸಕ್ತಿಯನ್ನು ತೋರುತ್ತಾರೆ. ಕಾಲೇಜಿನಲ್ಲಿ ಪ್ರಾದ್ಯಾಪಕರಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅವರು ಸಿಂಪಿ ಅಣಬೆ ಮತ್ತು ಮಿಲ್ಕೀ ಮಶ್ರೂಮ್ ಅಣಬೆ ಪ್ರಭೇದಗಳ ಸಂಶೋಧನೆ ಮತ್ತು ಕೃಷಿಯಲ್ಲಿ ಮೊದಲ ಅನುಭವವನ್ನು ಪಡೆದರು. ಈ ಅನುಭವದಿಂದಲೇ ಇವರು ಸಿಂಪಿ ಅಣಬೆ ಕೃಷಿಯನ್ನು ಆರಂಭಿಸಿ ಪ್ರಸ್ತುತ ʼಕ್ವಾಲಿಟಿ ಮಶ್ರೂಮ್‌ʼ ಉದ್ದಿಮೆಯಿಂದ ತಿಂಗಳಿಗೆ 4 ನಾಲ್ಕು ಲಕ್ಷ ರೂ. ಗಳಿಸುತ್ತಿದ್ದಾರೆ.

ಇದನ್ನೂ ಓದಿ: ಡೆಲಿವರಿ ಬಾಯ್ಸ್‌ ಈ ಲಿಫ್ಟ್‌ ಉಪಯೋಗಿಸುವಂತಿಲ್ಲ; ಮಂತ್ರಿಮಾಲ್‌ನಲ್ಲಿ ಇದೆಂಥಾ ರೂಲ್ಸ್‌

ಅಣಬೆ ಕೃಷಿ:

ತೃಪ್ತಿ 2018 ರಲ್ಲಿ ಅಣಬೆ ಕೃಷಿಯನ್ನು ಪ್ರಾರಂಭಿಸಿದರು. ಇವರ ಪ್ರತಿ ಹೆಜ್ಜೆಗೂ ಬೆನ್ನೆಲುಬಾಗಿದ್ದ ಇವರ ಪತಿ 2018 ರಲ್ಲಿ, ಪುಣೆಯ ಉಪನಗರವಾದ ಧಯಾರಿಯ ವಾಣಿಜ್ಯ ಪ್ರದೇಶದಲ್ಲಿ 2,000 ಚದರ ಅಡಿ ಭೂಮಿಯನ್ನು ಗುತ್ತಿಗೆಗೆ ತೆಗೆದುಕೊಂಡರು. ಸರಿಸುಮಾರು 3.5 ಲಕ್ಷ ರೂ.ಗಳ ಬಂಡವಾಳದಲ್ಲಿ ಅಗತ್ಯ ಉಪಕರಣಗಳನ್ನು ಅಳವಡಿಸಿ ಪತ್ನಿಯ‌ ಸಿಂಪಿ ಅಣಬೆ ಕೃಷಿಗೆ ಸಹಾಯ ಮಾಡಿದರು. ಆರಂಭದಲ್ಲಿ ತೃಪ್ತಿ 20 ಕೆಜಿ ಅಣಬೆಯನ್ನು ಬೆಳೆದರು. ಆದರೆ, ಅವುಗಳನ್ನು ಮಾರಾಟ ಮಾಡುವುದು ತುಂಬಾ ಕಷ್ಟಕರವಾಗಿತ್ತು. ಸಿಂಪಿ ಅಣಬೆಗಳ ಬಗ್ಗೆ ಜನರಿಗೆ ಹೆಚ್ಚು ತಿಳಿದಿರದ ಕಾರಣ ಜನರು ಅವುಗಳನ್ನು ಖರೀದಿಸಲು ಹೆಚ್ಚು ಆಸಕ್ತಿಯನ್ನು ತೋರಲಿಲ್ಲ. ಇದರಿಂದ ಕುಗ್ಗದೆ ಛಲ ಬಿಡದ ತೃಪ್ತಿ ತನ್ನ ವ್ಯಾಪಾರ ತಂತ್ರವನ್ನು ಬದಲಾಯಿಸಿ ಸ್ವತಃ ತಾವೇ ಮಾರುಕಟ್ಟೆಗಳಿಗೆ ಭೇಟಿ ನೀಡಿ ಸಿಂಪಿ ಅಣಬೆ ಪದಾರ್ಥವನ್ನು ಸವಿಯಲು ಜನರನ್ನು ವಿನಂತಿಸಿದರು. ಮತ್ತು ಈ ಅಣಬೆಯ ಪ್ರಯೋಜನಗಳ ಬಗ್ಗೆ ಜನರಿಗೆ ಅರಿವು ಮೂಡಿಸುವ ಪ್ರಯತ್ನವನ್ನೂ ಮಾಡಿದರು. ಕ್ರಮೇಣ ಜನರು ಈ ಅಣಬೆಯ ರುಚಿಯನ್ನು ಇಷ್ಟಪಡಲಾರಂಭಿಸಿದರು. ನಂತರ ತೃಪ್ತಿ ಮಾರುಕಟ್ಟೆಯಲ್ಲಿ 200 ಗ್ರಾಂ ಸಿಂಪಿ ಅಣಬೆಯನ್ನು 80 ರೂ. ಗೆ ಮಾರಲು ಆರಂಭಿಸಿದರು. ಹೀಗೆ ಕ್ರಮೇಣ ತೃಪ್ತಿ ಈ ಕೃಷಿಯಲ್ಲಿ ಯಶಸ್ಸನ್ನು ಸಾಧಿಸುತ್ತಾ ಬಂದರು.

ಒಂದು ಕಾಲದಲ್ಲಿ ಅಣಬೆಯನ್ನು ಖರೀದಿಸಿ ಎಂದು ಮಾರುಕಟ್ಟೆಯಲ್ಲಿ ಜನರಲ್ಲಿ ಬೇಡಿಕೊಳ್ಳುತ್ತಿದ್ದ ತೃಪ್ತಿ ಇಂದು ʼಕ್ವಾಲಿಟಿ ಮಶ್ರೂಮ್‌ʼ ಬ್ರಾಂಡ್‌ ಸ್ಥಾಪಿಸಿ ಪ್ರತಿದಿನ 50 ಕೆಜಿ ಅಣಬೆಗಳನ್ನು ಉತ್ಪಾದನೆ ಮಾಡುತ್ತಿದ್ದಾರೆ. ಇದರೊಂದಿಗೆ, ಅವರು ಅಣಬೆಯ ಕುಕ್ಕಿಸ್‌ ಇತ್ಯಾದಿ ಉತ್ಪನ್ನಗಳು ಮತ್ತು ವರ್ಮಿಕಾಂಪೋಸ್ಟ್ ಅನ್ನು ಸಹ ತಯಾರಿಸುತ್ತ ತಿಂಗಳಿಗೆ 4 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಅವರ ಈ ಕಥೆ ಅನೇಕರಿಗೆ ಸ್ಫೂರ್ತಿಯಾಗಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 4:38 pm, Sun, 17 November 24

ಸ್ವಿಮ್ಮಿಂಗ್ ಫುಲ್​ನಲ್ಲಿ ದುರಂತ ಅಂತ್ಯಕಂಡ ಯುವತಿಯರ ಕೊನೆ ಕ್ಷಣದ ವಿಡಿಯೋ!
ಸ್ವಿಮ್ಮಿಂಗ್ ಫುಲ್​ನಲ್ಲಿ ದುರಂತ ಅಂತ್ಯಕಂಡ ಯುವತಿಯರ ಕೊನೆ ಕ್ಷಣದ ವಿಡಿಯೋ!
ಸ್ಕೂಟಿ​ ಡಿಕ್ಕಿಯೊಳಗೆ ಹಾವು ಪ್ರತ್ಯಕ್ಷ, ಬೆಚ್ಚಿಬಿದ್ದ ಚಾಲಕ, ಮುಂದೇನಾಯ್ತು
ಸ್ಕೂಟಿ​ ಡಿಕ್ಕಿಯೊಳಗೆ ಹಾವು ಪ್ರತ್ಯಕ್ಷ, ಬೆಚ್ಚಿಬಿದ್ದ ಚಾಲಕ, ಮುಂದೇನಾಯ್ತು
ಬಿಪಿಎಲ್ ಕಾರ್ಡ್ ರದ್ದು: ಸರ್ಕಾರ ನಡೆ ಸ್ವಾಗತಿಸಿದ ಬಿಜೆಪಿ ಎಂಪಿ ರಾಘವೇಂದ್ರ
ಬಿಪಿಎಲ್ ಕಾರ್ಡ್ ರದ್ದು: ಸರ್ಕಾರ ನಡೆ ಸ್ವಾಗತಿಸಿದ ಬಿಜೆಪಿ ಎಂಪಿ ರಾಘವೇಂದ್ರ
ಬಾಲನಟ ರೋಹಿತ್​ಗೆ ಅಪಘಾತ ಆಗಿದ್ದು ಹೇಗೆ? ಈಗ ಆರೋಗ್ಯ ಹೇಗಿದೆ?
ಬಾಲನಟ ರೋಹಿತ್​ಗೆ ಅಪಘಾತ ಆಗಿದ್ದು ಹೇಗೆ? ಈಗ ಆರೋಗ್ಯ ಹೇಗಿದೆ?
PDO ಪರೀಕ್ಷೆಯಲ್ಲೂ ಎಡವಟ್ಟು, ಅರ್ಧಂಬರ್ಧ ಪ್ರಶ್ನೆ ಪತ್ರಿಕೆ ಕಳುಹಿಸಿದ KPSC
PDO ಪರೀಕ್ಷೆಯಲ್ಲೂ ಎಡವಟ್ಟು, ಅರ್ಧಂಬರ್ಧ ಪ್ರಶ್ನೆ ಪತ್ರಿಕೆ ಕಳುಹಿಸಿದ KPSC
ಎಸ್​ಎಸ್​ಎಲ್​ಸಿಯಲ್ಲಿ ಫೇಲ್ ಆಗಿದ್ದಕ್ಕೆ ವಿಗ್ರಹ ವಿರೂಪಗೊಳಿಸಿದ ಬಾಲಕ
ಎಸ್​ಎಸ್​ಎಲ್​ಸಿಯಲ್ಲಿ ಫೇಲ್ ಆಗಿದ್ದಕ್ಕೆ ವಿಗ್ರಹ ವಿರೂಪಗೊಳಿಸಿದ ಬಾಲಕ
ಪ್ರಧಾನಿ ಮೋದಿಯನ್ನು ಆತ್ಮೀಯತೆಯಿಂದ ಬರಮಾಡಿಕೊಂಡ ನೈಜೀರಿಯಾದ ಜನ
ಪ್ರಧಾನಿ ಮೋದಿಯನ್ನು ಆತ್ಮೀಯತೆಯಿಂದ ಬರಮಾಡಿಕೊಂಡ ನೈಜೀರಿಯಾದ ಜನ
ಮಣಿಪುರ ಹಿಂಸಾಚಾರ, ಮುಖ್ಯಮಂತ್ರಿ, ಶಾಸಕರ ಮನೆಗೆ ನುಗ್ಗಲು ಯತ್ನ
ಮಣಿಪುರ ಹಿಂಸಾಚಾರ, ಮುಖ್ಯಮಂತ್ರಿ, ಶಾಸಕರ ಮನೆಗೆ ನುಗ್ಗಲು ಯತ್ನ
ಪತಿ-ಪತ್ನಿ ಒಂದೇ ರಾಶಿಯವರಾಗಿದ್ದರೆ ಏನರ್ಥ? ವಿಡಿಯೋ ನೋಡಿ
ಪತಿ-ಪತ್ನಿ ಒಂದೇ ರಾಶಿಯವರಾಗಿದ್ದರೆ ಏನರ್ಥ? ವಿಡಿಯೋ ನೋಡಿ
ವಾರ ಭವಿಷ್ಯ: ನವೆಂಬರ್​ 18 ರಿಂದ 24ರವರೆಗೆ ವಾರ ಭವಿಷ್
ವಾರ ಭವಿಷ್ಯ: ನವೆಂಬರ್​ 18 ರಿಂದ 24ರವರೆಗೆ ವಾರ ಭವಿಷ್