ಮುಂಬೈನಲ್ಲಿರೋ ಕನ್ನಡಿಗರಿಗೆ ಮರಾಠಿ ಬರುತ್ಯೆ? ಕನ್ನಡ ಕಲಿಯಿರಿ ಎಂದ ಈ ಸಿಇಒ ಅಭಿಪ್ರಾಯಕ್ಕೆ ಆನ್​ಲೈನ್​ನಲ್ಲಿ ಬಿಸಿಬಿಸಿ ಚರ್ಚೆ

Pro Kannada vs Anti Kannada: ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಇರುವವರು ಕನ್ನಡ ಕಲಿಯಬೇಕು. ಇಲ್ಲದಿದ್ದರೆ ಅದು ಅಗೌರವ ತೋರಿದಂತೆ ಎಂದು ಮೊನ್ನೆ ಜೋಹೋ ಸಿಇಒ ಶ್ರೀಧರ್ ವೆಂಬು ಹೇಳಿದ್ದರು. ಚಂದ್ರ ಶ್ರೀಕಾಂತ್ ಎನ್ನುವ ಪತ್ರಕರ್ತೆ ಕನ್ನಡ ಕಲಿಕೆಯ ವಿಚಾರವಾಗಿ ಹಾಕಿದ ಒಂದು ಪೋಸ್ಟ್​ಗೆ ವೆಂಬು ಪ್ರತಿಕ್ರಿಯೆ ಅದು. ಈ ಸಂವಾದಕ್ಕೆ ವಾದ ಮತ್ತು ಪ್ರತಿವಾದಗಳು ಸೇರಿಕೊಂಡು ಇಂಟರ್ನೆಟ್​ನಲ್ಲಿ ಬಿಸಿಬಿಸಿ ಚರ್ಚೆಗಳಾದವು.

ಮುಂಬೈನಲ್ಲಿರೋ ಕನ್ನಡಿಗರಿಗೆ ಮರಾಠಿ ಬರುತ್ಯೆ? ಕನ್ನಡ ಕಲಿಯಿರಿ ಎಂದ ಈ ಸಿಇಒ ಅಭಿಪ್ರಾಯಕ್ಕೆ ಆನ್​ಲೈನ್​ನಲ್ಲಿ ಬಿಸಿಬಿಸಿ ಚರ್ಚೆ
ಕನ್ನಡ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 17, 2024 | 1:54 PM

ನವದೆಹಲಿ, ನವೆಂಬರ್ 17: ಬೆಂಗಳೂರಿನಲ್ಲಿ ಇದ್ದವರು ಕನ್ನಡ ಕಲಿಯಬೇಕು ಎಂಬುದು ಕನ್ನಡಿಗರು ಹಲವು ವರ್ಷಗಳ ಕೂಗು. ಇದು ಆಗಾಗ್ಗೆ ಮರುಕಳಿಸುತ್ತಲೇ ಇರುತ್ತದೆ. ಹೊರಗಿನವರು ಇದಕ್ಕೆ ಟಾಂಟ್ ಕೊಡುವುದೂ ಇದೆ. ಮೂರು ದಿನಗಳಿಂದ ಈ ಪರ ವಿರೋಧ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿ ನಡೆಯುತ್ತಿದೆ. ಪತ್ರಕರ್ತೆ ಚಂದ್ರ ಆರ್ ಶ್ರೀಕಾಂತ್ ಅವರು ಬೆಂಗಳೂರಿನಲ್ಲಿರುವ ಹೊರಗಿನವರು ಕನ್ನಡ ಕಲಿಯದೆ, ಕನ್ನಡ ಗೊತ್ತಿಲ್ಲ ಎಂದು ಜಂಭದಿಂದ ಹೇಳಿಕೊಳ್ಳುವುದನ್ನು ಟೀಕಿಸಿ ಎಕ್ಸ್ ಅಕೌಂಟ್​ನಿಂದ ನವೆಂಬರ್ 14ರಂದು ಒಂದು ಪೋಸ್ಟ್ ಹಾಕಿದ್ದರು. ಝೋಹೋ ಸಂಸ್ಥೆಯ ಸಿಇಒ ಶ್ರೀಧರ್ ವೆಂಬು ಮೊನ್ನೆ ಇದಕ್ಕೆ ಪ್ರತಿಕ್ರಿಯಿಸಿ, ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಇದ್ದವರು ಕನ್ನಡ ಕಲಿಯದಿದ್ದರೆ ಅದು ಈ ನಾಡಿಗೆ ಅಗೌರವ ತೋರಿದಂತೆ ಎಂಬರ್ಥದಲ್ಲಿ ಅಭಿಪ್ರಾಯವ್ಯಕ್ತಪಡಿಸಿದ್ದರು.

ಈ ಪೋಸ್ಟ್​ಗಳು ನಾನಾ ರೀತಿಯ ಪರ ವಿರೋಧ ಚರ್ಚೆಗೆ ಕಾರಣವಾಗಿವೆ. ಕೆಲ ಗಂಭೀರ ವಿಚಾರಗಳು, ಪ್ರಶ್ನೆಗಳೂ ಎದುರಾಗಿವೆ. ಬೆಂಗಳೂರಿನಲ್ಲಿ ಬಹುಸಂಖ್ಯಾತ ಜನರ ಮಾತೃಭಾಷೆ ಕನ್ನಡವೇ ಅಲ್ಲ. ಹೇಗೆ ಇದು ಸ್ಥಳೀಯ ಭಾಷೆಯಾಗುತ್ತೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ತಾನು ಒಂದು ದಿನಕ್ಕೆ ಬೆಂಗಳೂರಿಗೆ ಬಂದರೂ ಕನ್ನಡ ಕಲಿಯಬೇಕಾ ಎಂದು ಮತ್ತೊಬ್ಬರು ಕುಚೋದ್ಯ ಮಾಡಿದ್ದಾರೆ.

ಇದನ್ನೂ ಓದಿ: ಮ್ಯಾನೇಜ್ಮೆಂಟ್ ಸ್ಕೂಲ್​ಗಳಲ್ಲಿ ಕಲಿತವರನ್ನು ಐಎಎಸ್, ಐಪಿಎಸ್ ಹುದ್ದೆಗೆ ನೇಮಿಸಲಿ: ಇನ್ಫೋಸಿಸ್ ನಾರಾಯಣಮೂರ್ತಿ ಸಲಹೆ

ಸ್ಮಿತಾ ದೇಶಮುಖ್ ಅವರು ಮರಾಠಿ ವಿಚಾರದ ಮೂಲಕ ಕೌಂಟರ್ ಕೊಟ್ಟಿದ್ದಾರೆ. ಮುಂಬೈನಲ್ಲಿ ಹಲವಾರು ವರ್ಷಗಳಿಂದ ಇರುವ ಕನ್ನಡಿಗರಿಗೆ ಮರಾಠಿಯೇ ಬರುವುದಿಲ್ಲ. ಮಹಾರಾಷ್ಟ್ರದವರಾಗಿ ನಾವೇನು ಮಾಡಬೇಕು ಹೇಳಿ ಎಂದು ಸ್ಮಿತಾ ಕೇಳಿದ್ದಾರೆ.

ಆಫೀಸ್​ನಲ್ಲಿ ಸಂವಹನವೆಲ್ಲಾ ಇಂಗ್ಲೀಷ್​ನಲ್ಲೇ ಆಗುತ್ತೆ. ಆನ್​ಲೈನ್​ನಲ್ಲಿ ಕ್ಯಾಬ್ ಬುಕ್ ಮಾಡಿ ಹೋಗುತ್ತೇವೆ. ಯಾರ ಜೊತೆ ಮಾತನಾಡಿ ಕನ್ನಡ ಕಲಿಯಬಹುದು? ಬೆಂಗಳೂರಿನಲ್ಲಿರುವ ಬಹುತೇಕ ಜನರಿಗೆ ಇಂಗ್ಲೀಷ್ ಮತ್ತು ಹಿಂದಿ ಬರುತ್ತೆ. ಸಂವಹನಕ್ಕೆ ಅದಿದ್ದರೆ ಸಾಕಲ್ವಾ? ಕನ್ನಡ ಯಾಕೆ ಎನ್ನುವ ಅನುಮಾನವನ್ನೂ ಕೆಲವರು ವ್ಯಕ್ತಪಡಿಸಿದ್ದಾರೆ.

ಸಿದ್ ಎನ್ನುವ ಅಕೌಂಟ್ ಹೆಸರಿನ ವ್ಯಕ್ತಿಯು ಬಲವಂತಪಡಿಸುವುದನ್ನು ಆಕ್ಷೇಪಿಸಿದ್ದಾರೆ. ಆಯ್ಕೆ ಮತ್ತು ಬಲವಂತ ಮಧ್ಯೆ ವ್ಯತ್ಯಾಸ ಇದೆ. ನೀವು ಜನರನ್ನು ಬಲವಂತಪಡಿಸತೊಡಗಿದರೆ ಪ್ರತಿಭಟನೆಗೆ ಕಾರಣವಾಗುತ್ತದೆ. ವೈವಿಧ್ಯಮಯವಾಗಿರುವ ಈ ದೇಶದಲ್ಲಿ ಹಲವು ಭಾಷೆಗಳನ್ನು ಕಲಿಯವುದು ವಾಸ್ತವವಾಗಿ ಅಸಾಧ್ಯ ಎಂಬುದು ಈ ವ್ಯಕ್ತಿಯ ವಾದ.

ಇದನ್ನೂ ಓದಿ: ಐಟಿಆರ್ ಸಲ್ಲಿಕೆ ವೇಳೆ ಈ ಆದಾಯ ಮರೆಮಾಚಿದರೆ 10 ಲಕ್ಷ ರೂ ದಂಡ: ಆದಾಯ ತೆರಿಗೆ ಇಲಾಖೆ ಸೂಚನೆ

ಝೋಹೋ ಸಿಇಒ ಶ್ರೀಧರ್ ವೆಂಬು, ಚಿಂತಕ ಅಭಿಜಿತ್ ಅಯ್ಯರ್ ಮಿತ್ರಾ ಮೊದಲಾದ ಹಲವರು, ಕನ್ನಡ ಕಲಿಯುವುದರ ಪರವಾಗಿ ಬ್ಯಾಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ