Viral: ಆಸ್ಪತ್ರೆಯಲ್ಲಿ ಕಾಣೆಯಾಯ್ತು ಮೃತ ವ್ಯಕ್ತಿಯ ಎಡಗಣ್ಣು; ಇದಕ್ಕೆ ಇಲಿಗಳು ಕಾರಣ ಎಂದ ವೈದ್ಯರು
ಪ್ರತಿನಿತ್ಯ ಒಂದಲ್ಲಾ ಒಂದು ಚಿತ್ರವಿಚಿತ್ರ ಘಟನೆಗಳ ಸುದ್ದಿಗಳು ಕೇಳಿಬರುತ್ತಿರುತ್ತವೆ. ಇದೀಗ ಅಂತಹದ್ದೇ ಸುದ್ದಿಯೊಂದು ಕೇಳಿ ಬಂದಿದ್ದು, ಆಸ್ಪತ್ರೆಯಲ್ಲಿದ್ದ ಮೃತ ವ್ಯಕ್ತಿಯ ಎಡಗಣ್ಣು ನಾಪತ್ತೆಯಾದ ಘಟನೆ ನಡೆದಿದೆ. ಈ ಕುರಿತು ಮೃತ ವ್ಯಕ್ತಿಯ ಕುಟುಂಬಸ್ಥರು ಪ್ರತಿಭಟನೆಯನ್ನು ಮಾಡಿದ್ದು, ಇದಕ್ಕೆಲ್ಲಾ ಇಲಿಗಳು ಕಾರಣ ಎಂದು ವೈದ್ಯರು ಹೇಳಿದ್ದಾರೆ. ಈ ಸುದ್ದಿ ಇದೀಗ ಸಖತ್ ವೈರಲ್ ಆಗುತ್ತಿದೆ.
ಈ ಪ್ರಪಂಚದಲ್ಲಿ ನಡೆಯುವ ಕೆಲವೊಂದು ವಿದ್ಯಮಾನಗಳು, ವಿಚಿತ್ರ ಘಟನೆಗಳನ್ನು ನೋಡಿದಾಗ ಹಿಂಗೆಲ್ಲಾ ನಡುತ್ತಾ ಎಂದು ತಲೆ ಕೆರೆದುಕೊಳ್ಳುತ್ತೇವೆ. ಇದೀಗ ಇಲ್ಲೊಂದು ಇಂತಹದ್ದೇ ವಿಚಿತ್ರ ಘಟನೆಯೊಂದು ನಡೆದಿದ್ದು, ಆಸ್ಪತ್ರೆಯಲ್ಲಿಯೇ ಮೃತ ವ್ಯಕ್ತಿಯೊಬ್ಬನ ಕಣ್ಣು ನಾಪತ್ತೆಯಾಗಿದೆ. ಇದಕ್ಕೆಲ್ಲಾ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಮೃತ ವ್ಯಕ್ತಿಯ ಕುಟುಂಬಸ್ಥರು ಆರೋಪಿಸಿದರೆ, ವೈದ್ಯರು ಮಾತ್ರ ಇದಕ್ಕೆಲ್ಲಾ ಇಲಿಗಳು ಕಾರಣ ಎಂದು ಹೇಳಿದ್ದಾರೆ. ಈ ಕುರಿತ ಸುದ್ದಿಯೊಂದು ಇದೀಗ ಭಾರೀ ವೈರಲ್ ಆಗುತ್ತಿದೆ.
ಬಿಹಾರದ ರಾಜಧಾನಿ ಪಾಟ್ನಾದ ನಳಂದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ (ಎನ್‌ಎಂಸಿಎಚ್) ಮೃತ ವ್ಯಕ್ತಿಯೊಬ್ಬನ ಕಣ್ಣುಗಳು ನಾಪತ್ತೆಯಾದ ಆಘಾತಕಾರಿ ಘಟನೆಯೊಂದು ನಡೆದಿದೆ. ವೈದ್ಯರ ನಿರ್ಲಕ್ಷ್ಯವೇ ಇದಕ್ಕೆಲ್ಲಾ ಕಾರಣ ಎಂದು ಆರೋಪಿಸಿ ಮೃತ ವ್ಯಕ್ತಿಯ ಕುಟುಂಬಸ್ಥರು ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆಯನ್ನು ನಡೆಸಿದ್ದಾರೆ.
ವಾಸ್ತವವಾಗಿ, ನಳಂದದಲ್ಲಿ ನಡೆದ ಹಿಂಸಾಚಾರದಲ್ಲಿ ಫುಂತೂಶ್ ಎಂಬ ವ್ಯಕ್ತಿಗೆ ಗುಂಡೇಟು ತಗುಲಿ ಆತನನ್ನು ನವೆಂಬರ್ 14 ರಂದು NMCH ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಕಾರಣ ಆತನನ್ನು ಐಸಿಯುಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನವೆಂಬರ್ 15 ರಂದು ಫಂತೂಶ್ ಮೃತಪಟ್ಟನು. ರಾತ್ರಿಯಾಗಿದ್ದ ಕಾರಣ ಮರಣೋತ್ತರ ಪರೀಕ್ಷೆಯನ್ನು ನಡೆಸದೆ ವೈದ್ಯರು ಮೃತದೇಹವನ್ನು ಐಸಿಯುನಲ್ಲೇ ಇರಿಸಿದ್ದರು. ಆದರೆ ಮರುದಿನ ಬೆಳಗ್ಗೆ ಮರಣೋತ್ತರ ಪರೀಕ್ಷೆಗೆ ಸಿದ್ಧತೆ ನಡೆಸುವ ಸಂದರ್ಭದಲ್ಲಿ ಮೃತ ಫಂತೂಶ್‌ನ ಎಡಗಣ್ಣು ನಾಪತ್ತೆಯಾಗಿತ್ತು. ಮೃತ ದೇಹ ಇರಿಸಿದ್ದ ಸ್ಟ್ರೆಚರ್ ಮೇಲೆ ಸರ್ಜಿಕಲ್ ಬ್ಲೇಡ್ ಇರುವುದನ್ನು ಮೃತನ ಕುಟುಂಬಸ್ಥರು ಗಮನಿಸಿದ್ದು, ವೈದ್ಯರೇ ಸಾವಿನ ನಂತರ ಫಂತೂಶ್‌ನ ಕಣ್ಣನ್ನು ತೆಗೆದಿದ್ದಾರೆ ಎಂದು ಗಂಭೀರ ಆರೋಪವನ್ನು ಮಾಡಿ ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆಯನ್ನು ಮಾಡಿದ್ದಾರೆ.
ಇದನ್ನೂ ಓದಿ: ಬಿಯರ್ ಬಾಟಲ್ ಏಕೆ ಹಸಿರು ಅಥವಾ ಕಂದು ಬಣ್ಣದಲ್ಲಿರುತ್ತವೆ ಗೊತ್ತಾ?
ಆದರೆ ವೈದ್ಯರು ಮಾತ್ರ ಬಹುಶಃ ಇಲಿಗಳು ಕಣ್ಣನ್ನು ಕಚ್ಚಿರಬಹುದು ಎಂದು ಇಲಿಗಳ ಮೇಲೆ ಆರೋಪಿಸಿದ್ದಾರೆ. ಇನ್ನೂ ಆಸ್ಪತ್ರೆಯಲ್ಲಿ ಮೃತ ವ್ಯಕ್ತಿಯ ಕುಟುಂಬಸ್ಥರ ಪ್ರತಿಭಟನೆ ಗಂಭೀರ ಸ್ವರೂಪಕ್ಕೆ ತಿರುಗುತ್ತಿದ್ದಂತೆ, ಎನ್ ಎಂಸಿಎಚ್ ಆಸ್ಪತ್ರೆ ಅಧೀಕ್ಷಕ ಡಾ.ವಿನೋದ್ ಕುಮಾರ್ ಅವರು ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು “ಈ ಬಗ್ಗೆ ತನಿಖೆ ನಡೆಸಲು ವೈದ್ಯಕೀಯ ತಂಡವನ್ನು ರಚಿಸಲಾಗಿದೆ, ಇದೊಂದು ಗಂಭೀರ ಪ್ರಕರಣವಾಗಿದ್ದು, ತಪ್ಪಿತಸ್ಥರ ವಿರುದ್ಧ ಖಂಡಿತವಾಗಿಯೂ ಕಠಿಣ ಕ್ರಮ ಕೈಗೊಳ್ಳುತ್ತೇವೆ, ವೈದ್ಯರು ಇಲಿಗಳು ಮೃತ ವ್ಯಕ್ತಿಯ ಕಣ್ಣನ್ನು ಕಚ್ಚಿರಬಹುದು ಎಂದು ಶಂಕಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸಲಾಗುವುದು” ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ