Viral: ಹೀಗೆ ಬಟ್ಟೆ ತೊಡುವುದು ಸುರಕ್ಷಿತವೇ; ಅರೆಬರೆ ಬಟ್ಟೆ ತೊಟ್ಟು ಗಂಡಸರ ಬಳಿ ಅಭಿಪ್ರಾಯ ಕೇಳಿದ ಯುವತಿ

ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುವ ಕೆಲವೊಂದು ದೃಶ್ಯಗಳು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಿರುತ್ತವೆ. ಇದೀಗ ಅಂತಹದ್ದೇ ಪೋಸ್ಟ್‌ ಒಂದು ವೈರಲ್‌ ಆಗಿದ್ದು, ಯುವತಿಯೊಬ್ಬಳು ಅರೆಬರೆ ಬಟ್ಟೆ ತೊಟ್ಟು, ಕೈಯಲ್ಲೊಂದು ಮೈಕ್‌ ಹಿಡಿದುಕೊಂಡು ಬೀದಿಗಿಳಿದು ಗಂಡಸರ ಬಳಿ ತಾನು ತೊಟ್ಟ ಬಟ್ಟೆ ಸುರಕ್ಷಿತವೇ ಎಂಬ ಪ್ರಶ್ನೆಗಳನ್ನು ಕೇಳಿದ್ದಾಳೆ. ಈಕೆಯ ಈ ಅಸಹ್ಯಕರ ಅವತಾರವನ್ನು ಕಂಡು ನೋಡುಗರು ಫುಲ್‌ ಗರಂ ಆಗಿದ್ದಾರೆ.

Viral: ಹೀಗೆ ಬಟ್ಟೆ ತೊಡುವುದು ಸುರಕ್ಷಿತವೇ; ಅರೆಬರೆ ಬಟ್ಟೆ ತೊಟ್ಟು ಗಂಡಸರ ಬಳಿ ಅಭಿಪ್ರಾಯ ಕೇಳಿದ ಯುವತಿ
ವೈರಲ್​​ ವಿಡಿಯೋ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 18, 2024 | 2:33 PM

ಈಗಂತೂ ಕೈಯಲ್ಲೊಂದು ಮೈಕ್‌ ಹಿಡಿದು ದಾರಿಯಲ್ಲಿ ಹೋಗಿ ಬರುವವರಲ್ಲಿ ಯಾವುದಾದ್ರೂ ಒಂದು ವಿಷಯದ ಬಗ್ಗೆ ಫನ್ನಿ ಪ್ರಶ್ನೆಗಳನ್ನು ಕೇಳಿ ಆ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡುವಂತಹ ಟ್ರೆಂಡ್‌ ಒಂದಿದೆ. ಅದೇ ರೀತಿ ಇಲ್ಲೊಬ್ಬಳು ಯುವತಿ ಅಸಹ್ಯಕರ ರೀತಿಯ ತುಂಡುಡುಗೆ ತೊಟ್ಟು, ಕೈಯಲ್ಲೊಂದು ಮೈಕ್‌ ಹಿಡಿದು ದಾರಿಯಲ್ಲಿ ಹೋಗುವಂತ ಗಂಡಸರ ಬಳಿ ಬಂದು ಹೀಗೆ ಬಟ್ಟೆ ತೊಡುವುದು ನಮ್ಮ ಸಮಾಜದಲ್ಲಿ ಸುರಕ್ಷಿತವೇ ಎಂಬ ಪ್ರಶ್ನೆಗಳನ್ನು ಕೇಳಿದ್ದಾಳೆ. ಈಕೆಯ ಈ ಅವತಾರಕ್ಕೆ ನೆಟ್ಟಿಗರಂತೂ ಫುಲ್‌ ಗರಂ ಆಗಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಅರೆಬರೆ ಬಟ್ಟೆ ತೊಟ್ಟು ಓಡಾಡಿದ್ರೆ ಯಾರು ಕೂಡಾ ಇಷ್ಟ ಪಡೊಲ್ಲ. ಅಂತದ್ರಲ್ಲಿ ಕೊಲ್ಕತ್ತಾದ ಮಾಡೆಲ್‌ ಹೇಮಶ್ರೀ ಭದ್ರ ಎಂಬಾಕೆ ತುಂಡುಡುಗೆ ತೊಡುವುದು ಸಮಾಜದಲ್ಲಿ ಸುರಕ್ಷಿತವೇ ಎಂಬ ಅಭಿಪ್ರಾಯವನ್ನು ಕೇಳಲು ಸ್ವತಃ ತಾನೇ ಮುಜುಗರ ತರಿಸುವಂತಹ ಅರೆಬರೆ ಬಟ್ಟೆ ತೊಟ್ಟು, ಕೈಯಲ್ಲೊಂದು ಮೈಕ್‌ ಹಿಡಿದು ಬೀದಿಗಿಳಿದಿದ್ದಾಳೆ. ಈಕೆಯ ಅವತಾರಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ಕುರಿತ ಪೋಸ್ಟ್‌ ಒಂದನ್ನು ಜೈಕಿ ಯಾದವ್‌ (Jaiky Yadav16) ಎಂಬವರು ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದು, “ಇದೆಲ್ಲಾ ನಡೆಯುತ್ತಿರುವುದು ಸಾರ್ವಜನಿಕ ಸ್ಥಳದಲ್ಲಿ; ಅಹಸ್ಯಕರ ರೀತಿಯ ಬಟ್ಟೆ ಧರಿಸಿ ಎಲ್ಲರ ಅಭಿಪ್ರಾಯವನ್ನು ಕೇಳುತ್ತಿದ್ದಾಳೆ. ಇಂತಹ ವೈರಸ್‌ ಕೂಡಾ ವೇಗವಾಗಿ ಹರಡುತ್ತಿದ್ದು, ನಮ್ಮ ಸರ್ಕಾರ ಇಂತಹ ವೈರಸ್‌ಗಳನ್ನು ಕೊಲ್ಲಲು ಲಸಿಕೆಗಳ ವ್ಯವಸ್ಥೆ ಮಾಡಬೇಕು” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುವಂತ ವಿಡಿಯೋದಲ್ಲಿ ಹೀಗೆ ಬಟ್ಟೆ ತೊಡುವುದು ಸುರಕ್ಷಿತವೇ ಎಂದು ಮಾಡೆಲ್‌ ಹೇಮಶ್ರೀ ಸ್ವತಃ ತಾನೇ ಸಾರ್ವಜನಿಕ ಸ್ಥಳದಲ್ಲಿ ಅಸಹ್ಯಕರ ತುಂಡುಡುಗೆ ತೊಟ್ಟು, ಕೈಯಲ್ಲೊಂದು ಮೈಕ್‌ ಹಿಡಿದು ಗಂಡಸರ ಅಭಿಪ್ರಾಯವನ್ನು ಕೇಳುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಆಸ್ಪತ್ರೆಯಲ್ಲಿ ಕಾಣೆಯಾಯ್ತು ಮೃತ ವ್ಯಕ್ತಿಯ ಎಡಗಣ್ಣು; ಇದಕ್ಕೆ ಇಲಿಗಳು ಕಾರಣ ಎಂದ ವೈದ್ಯರು

ನವೆಂಬರ್‌ 17 ರಂದು ಹಂಚಿಕೊಳ್ಳಲಾದ ಈ ಪೋಸ್ಟ್‌ 9.4 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಾಚಿಕೆಗೇಡಿನ ವರ್ತನೆ ಈಕೆಯದ್ದುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಸಾರ್ವಜನಿಕ ಸ್ಥಳದಲ್ಲಿ ಹೀಗೆ ಲಜ್ಜೆಗೆಟ್ಟು ವರ್ತಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕುʼ ಎಂದು ಕಿಡಿ ಕಾರಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ