Interesting Facts: ಬಿಯರ್ ಬಾಟಲ್ ಏಕೆ ಹಸಿರು ಅಥವಾ ಕಂದು ಬಣ್ಣದಲ್ಲಿರುತ್ತವೆ ಗೊತ್ತಾ?
ಭಾರತದಲ್ಲಿ ನೂರಾರು ಬಗೆಯ ಬಿಯರ್‌ಗಳಿದ್ದರೂ, ಅವುಗಳ ಬಾಟಲಿಗಳು ಹೆಚ್ಚಾಗಿ ಹಸಿರು ಅಥವಾ ಕಂದು ಬಣ್ಣದಲ್ಲಿರುತ್ತವೆ. ಇದಕ್ಕೆ ಕಾರವೇನು ಎಂದು ತಿಳಿದಿದೆಯೇ? ಈ ಕುರಿತು ಭಾರತದ ಅತಿದೊಡ್ಡ ಬಿಯರ್ ತಯಾರಕ ಕಂಪನಿ ಯುನೈಟೆಡ್ ಬ್ರೂವರೀಸ್ ಏನು ಹೇಳುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಭಾರತದಲ್ಲಿ 100 ಕ್ಕೂ ಹೆಚ್ಚು ವಿಧದ ಬಿಯರ್ ಅನ್ನು ತಯಾರಿಸಲಾಗುತ್ತದೆ, ಆದರೆ ಬಿಯರ್ ಬಾಟಲಿಗಳು ವಿಭಿನ್ನ ಬಣ್ಣಗಳಲ್ಲಿ ಬರುವುದಿಲ್ಲ, ಬದಲಿಗೆ ಈ ಬಾಟಲಿಗಳು ಹೆಚ್ಚಾಗಿ ಹಸಿರು ಅಥವಾ ಕಂದು ಬಣ್ಣವನ್ನು ಹೊಂದಿರುತ್ತವೆ. ಬಿಯರ್ ಬಾಟಲಿಗಳು ಹೆಚ್ಚಾಗಿ ಹಸಿರು ಅಥವಾ ಕಂದು ಬಣ್ಣದಲ್ಲಿ ಏಕೆ ಇರುತ್ತವೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?
19 ನೇ ಶತಮಾನದಿಂದಲೂ ಇಂದಿನ ವರೆಗೆ ಬಿಯರ್ ಅನ್ನು ಗಾಜಿನಲ್ಲಿ ಬಾಟಲಿಗಳಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಏಕೆಂದರೆ ಬಿಯರ್ ತಾಜಾವಾಗಿಡಲು ಗಾಜನ್ನು ಅತ್ಯುತ್ತಮ ವಸ್ತುವೆಂದು ಪರಿಗಣಿಸಲಾಗಿದೆ. ಆದರೆ ಬಿಯರ್ ಬಾಟಲಿಗಳು ಹೆಚ್ಚಾಗಿ ಹಸಿರು ಅಥವಾ ಕಂದು ಬಣ್ಣದಲ್ಲಿ ಏಕೆ ಇರುತ್ತವೆ ಎಂಬುದಕ್ಕೆ ಉತ್ತರ ಇಲ್ಲಿದೆ. ಯಾಕೆಂದರೆ ಸರಳ ಬಾಟಲಿಗಳಲ್ಲಿ ಸಂಗ್ರಹಿಸಿದ ಬಿಯರ್ ಬೆಳಕಿನ ಸಂಪರ್ಕಕ್ಕೆ ಬಂದಾಗ, ಅದರ ರುಚಿ ಕ್ಷೀಣಿಸಲು ಪ್ರಾರಂಭಿಸುತ್ತದೆ. ಅದರಿಂದಸೂರ್ಯನ ಬೆಳಕಿನ ವಿರುದ್ಧ ಹೋರಾಡಲು ಈ ಹಸಿರು ಅಥವಾ ಕಂದು ಬಣ್ಣಗಳು ಸಹಾಯ ಮಾಡುತ್ತವೆ. ಈ ಕಾರಣದಿಂದಾಗಿ ಬಿಯರ್‌ನ ರುಚಿ ಮತ್ತು ತಾಜಾತನವು ಹಾಗೇ ಉಳಿಯುತ್ತದೆ ಎಂದು ಹೇಳಲಾಗುತ್ತದೆ.
ಭಾರತದ ಅತಿದೊಡ್ಡ ಬಿಯರ್ ತಯಾರಕ ಕಂಪನಿ ಯುನೈಟೆಡ್ ಬ್ರೂವರೀಸ್ ಈ ವಿದ್ಯಮಾನವನ್ನು ‘ಲೈಟ್‌ಸ್ಟ್ರಕ್’ ಎಂದು ಕರೆಯುತ್ತದೆ, ಯುವಿ ಬೆಳಕಿಗೆ ಬಿಯರ್ ಒಡ್ಡಿಕೊಂಡಾಗ ಅಹಿತಕರ ವಾಸನೆಯನ್ನು ನೀಡುತ್ತದೆ. ಹಾಗಾಗಿ ಬಿಯರ್ ಬಾಟಲಿಗಳು ಹಸಿರು ಅಥವಾ ಕಂದು ಬಣ್ಣದಲ್ಲಿ ಇರುತ್ತವೆ.
ಕಂದು ಬಣ್ಣದ ಬಾಟಲಿಗಳು ಹಾನಿಕಾರಕ ಯುವಿ ಕಿರಣಗಳನ್ನು ಬಿಯರ್‌ಗೆ ಪ್ರವೇಶಿಸದಂತೆ ತಡೆಯುತ್ತದೆ. ಹೆಚ್ಚುವರಿಯಾಗಿ, ಬಾಟಲಿಯ ಮೂಲಕ ಹಾದುಹೋಗುವ ಯಾವುದೇ ಬೆಳಕನ್ನು ತಡೆಯುವ ಮೂಲಕ, ಇದು ರಾಸಾಯನಿಕ ಕ್ರಿಯೆಗಳಿಂದ ಬಿಯರ್‌ನಲ್ಲಿರುವ ಸೂಕ್ಷ್ಮ ಸಂಯುಕ್ತಗಳನ್ನು ರಕ್ಷಿಸುತ್ತದೆ.