Fact Check: 1632 ರಲ್ಲಿ ತಾಜ್ ಮಹಲ್ ನಿರ್ಮಾಣ ಎಂದು ವೈರಲ್ ಆಗುತ್ತಿರುವ ವಿಡಿಯೋದ ನಿಜಾಂಶ ಇಲ್ಲಿದೆ ನೋಡಿ

ತಾಜ್ ಮಹಲ್ ನಿರ್ಮಾಣ ಪ್ರಕ್ರಿಯೆಯ ದಾಖಲೀಕರಣವನ್ನು ತೋರಿಸುವ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಕೆಲವು ಯೂಟ್ಯೂಬ್ ಬಳಕೆದಾರರು ಈ ವಿಡಿಯೋವನ್ನು ತಾಜ್ ಮಹಲ್ ನಿರ್ಮಾಣದ ಕಥೆ ಎಂದು ಪೋಸ್ಟ್ ಮಾಡುತ್ತಿದ್ದಾರೆ.

Fact Check: 1632 ರಲ್ಲಿ ತಾಜ್ ಮಹಲ್ ನಿರ್ಮಾಣ ಎಂದು ವೈರಲ್ ಆಗುತ್ತಿರುವ ವಿಡಿಯೋದ ನಿಜಾಂಶ ಇಲ್ಲಿದೆ ನೋಡಿ
ಫ್ಯಾಕ್ಟ್ ಚೆಕ್
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 18, 2024 | 12:05 PM

ವಿಶ್ವ ಪರಂಪರೆಯ ಸಪ್ತಾಹವನ್ನು ಪ್ರತಿ ವರ್ಷ ನವೆಂಬರ್ 19 ರಿಂದ ನವೆಂಬರ್ 25 ರವರೆಗೆ ಆಚರಿಸಲಾಗುತ್ತದೆ. ಈ ಆಚರಣೆಯ ಭಾಗವಾಗಿ, ಪ್ರವಾಸಿಗರು ನವೆಂಬರ್ 19, 2024 ರಂದು ತಾಜ್ ಮಹಲ್, ಆಗ್ರಾ ಕೋಟೆ, ಫತೇಪುರ್ ಸಿಕ್ರಿಯಂತಹ ಐತಿಹಾಸಿಕ ಸ್ಥಳಗಳಿಗೆ ಉಚಿತ ಪ್ರವೇಶವನ್ನು ಪಡೆಯಬಹುದು. ಈ ಸ್ಮಾರಕಗಳಿಗೆ ಭೇಟಿ ನೀಡಲು ಭಾರತೀಯರು ಮತ್ತು ವಿದೇಶಿಯರಿಗೆ ಉಚಿತ ಪ್ರವೇಶವನ್ನು ನೀಡಲಾಗುತ್ತದೆ.

ಭಾರತದ ಇತರ ಐತಿಹಾಸಿಕ ಸ್ಥಳಗಳಿಗೆ ಹೋಲಿಸಿದರೆ ತಾಜ್ ಮಹಲ್ ಬಹಳ ವಿಶಿಷ್ಟವಾಗಿದೆ. ತಾಜ್ ಮಹಲ್ ವಿಶ್ವದ 7 ಅದ್ಭುತಗಳಲ್ಲಿ ಒಂದು. ಇದು ಭಾರತದ ಆಗ್ರಾದಲ್ಲಿ ಯಮುನಾ ನದಿಯ ದಡದಲ್ಲಿದೆ. ಇದನ್ನು 1632 ರಲ್ಲಿ ಚಕ್ರವರ್ತಿ ಷಹಜಹಾನ್ ತನ್ನ ಹೆಂಡತಿ ಮುಮ್ತಾಜ್ ಮಹಲ್ ನೆನಪಿಗಾಗಿ ಸ್ಥಾಪಿಸಿದನು. ತಾಜ್ ಮಹಲ್ ನಿರ್ಮಾಣವು ಸುಮಾರು 1653 ರಲ್ಲಿ 32 ಮಿಲಿಯನ್ ರೂಪಾಯಿಗಳ ಅಂದಾಜು ವೆಚ್ಚದಲ್ಲಿ ಪೂರ್ಣಗೊಂಡಿತು. ಈ ನಿರ್ಮಾಣದಲ್ಲಿ 20000 ಜನರಿಗೆ ಉದ್ಯೋಗ ದೊರೆತಿದೆ ಎಂದು ಹೇಳಲಾಗಿದೆ. ಈ ರಚನೆಯ ಸುತ್ತ ಅನೇಕ ವಾದಗಳು ಮತ್ತು ಕಥೆಗಳೂ ಇವೆ.

ಇದೀಗ ಈ ತಾಜ್ ಮಹಲ್ ನಿರ್ಮಾಣ ಪ್ರಕ್ರಿಯೆಯ ದಾಖಲೀಕರಣವನ್ನು ತೋರಿಸುವ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಕೆಲವು ಯೂಟ್ಯೂಬ್ ಬಳಕೆದಾರರು ಈ ವಿಡಿಯೋವನ್ನು ತಾಜ್ ಮಹಲ್ ನಿರ್ಮಾಣದ ಕಥೆ ಎಂದು ಪೋಸ್ಟ್ ಮಾಡುತ್ತಿದ್ದಾರೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಈ ವೈರಲ್ ವಿಡಿಯೋದಲ್ಲಿ ಯಾವುದೇ ಸತ್ಯಾಂಶವಿಲ್ಲ. ವಿಡಿಯೋವನ್ನು AI ನಿಂದ ರಚಿಸಲಾಗಿದೆ, ತಾಜ್ ಮಹಲ್ ನಿರ್ಮಾಣದ ನಿಜವಾದ ವಿಡಿಯೋ ಇದಲ್ಲ.

ನಿಜಾಂಶ ತಿಳಿಯಲು ನಾವು ವಿಡಿಯೋದ ಕೀಫ್ರೇಮ್‌ಗಳನ್ನು ಹುಡುಕುವಾಗ, ವಿಡಿಯೋವನ್ನು AI ನಿಂದ ನಿರ್ಮಿಸಲಾಗಿದೆ ಎಂದು ಹಲವಾರು ಪ್ರಮುಖ ಮಾಧ್ಯಮಗಳು ವರದಿ ಮಾಡಿರುವುದು ನಮಗೆ ಸಿಕ್ಕಿದೆ. ಟಿವಿ9 ತೆಲುಗು ಕೂಡ ತನ್ನ ಎಕ್ಸ್ ಖಾತೆಯಲ್ಲಿ ಇದು ಎಐ ರಚಿತ ವಿಡಿಯೋ ಎಂದು ಪೋಸ್ಟ್ ಮಾಡಿದೆ.

ವರದಿಗಳ ಪ್ರಕಾರ, ತಾಜ್ ಮಹಲ್ ನಿರ್ಮಾಣವನ್ನು ಪೂರ್ಣಗೊಳಿಸಲು 22 ವರ್ಷಗಳನ್ನು ತೆಗೆದುಕೊಳ್ಳಲಾಗಿತ್ತು. ಆದರೆ AI ಈ ನಿರ್ಮಾಣಕ್ಕಾಗಿ ಕೇವಲ 54 ಸೆಕೆಂಡುಗಳಲ್ಲಿ ದೃಶ್ಯೀಕರಿಸಿದೆ. ಇಲ್ಲಿ ಸಾವಿರಾರು ಕಾರ್ಮಿಕರು ಹಗಲು ರಾತ್ರಿ ಕೆಲಸ ಮಾಡಿದರು. ಅಂದಿನ ದಿನಗಳಲ್ಲಿ ಅಂತಹ ಪವಾಡವನ್ನು ನಿರ್ಮಿಸುವುದು ಎಷ್ಟು ಕಷ್ಟಕರವಾಗಿತ್ತು ಎಂಬುದನ್ನು ವಿಡಿಯೋ ತೋರಿಸುತ್ತದೆ. ಹೆಚ್ಚಿನ ಹುಡುಕಾಟ ನಡೆಸಿದಾಗ, ನವೆಂಬರ್ 3, 2024 ರಂದು ಇನ್​ಸ್ಟಾಗ್ರಾಮ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ ವಿಡಿಯೋವನ್ನು ಸಹ ನಾವು ಕಂಡುಕೊಂಡಿದ್ದೇವೆ. ‘ಆಗ್ರಾ ನಗರದಲ್ಲಿ ತಾಜ್ ಮಹಲ್ ನಿರ್ಮಾಣ’ ಎಂಬ ಶೀರ್ಷಿಕೆಯ AI- ರಚಿತವಾದ ವಿಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ಈ ಪೋಸ್ಟ್ ಅಡಿಯಲ್ಲಿರುವ ಕಾಮೆಂಟ್‌ಗಳನ್ನು ಪರಿಶೀಲಿಸಿದಾಗ, ಇದು AI ಟೂಲ್ ಬಳಸಿ ರಚಿಸಲಾಗಿದೆ ಎಂದು ಹೇಳಲಾಗುತ್ತದೆ.

ಹಾಗೆಯೆ Jayprints ಎಂಬ ಇನ್​ಸ್ಟಾಗ್ರಾಮ್ ಬಳಕೆದಾರರು ಕೂಡ ಇದೇ ವಿಡಿಯೋವನ್ನು ಹಂಚಿಕೊಂಡು ಹ್ಯಾಶ್​ಟ್ಯಾಗ್​ನಲ್ಲಿ ಎಐ ಎಂದು ಬರೆದುಕೊಂಡಿದ್ದಾರೆ. ಇದರ ನಿರ್ಮಾಣ ಪ್ರಕ್ರಿಯೆಯಲ್ಲಿ, ಸಮಾಧಿಯನ್ನು ರಚಿಸಲು ದೂರದ ಸ್ಥಳಗಳಿಂದ ಕಲ್ಲುಗಳನ್ನು ವರ್ಷಗಳವರೆಗೆ ತರಲಾಗಿತ್ತು. ಯಮುನಾ ನದಿಯ ದಡದಿಂದ, 20,000 ಕುಶಲಕರ್ಮಿಗಳು ಮತ್ತು 1,000 ಕ್ಕೂ ಹೆಚ್ಚು ಆನೆಗಳು ಈ ಮೇರುಕೃತಿಯನ್ನು ರಚಿಸಲು ಅವಿರತವಾಗಿ ಶ್ರಮಿಸಿದವು. ತಾಜ್ ಮಹಲ್ ಪೂರ್ಣಗೊಳ್ಳಲು 22 ವರ್ಷಗಳನ್ನು ತೆಗೆದುಕೊಂಡಿತು, ಅದರ ಸೌಂದರ್ಯವು ಶತಮಾನಗಳಿಂದ ಉಳಿದುಕೊಂಡು ಬಂದಿದೆ ಎಂದು ಬರೆದುಕೊಂಡಿದ್ದಾರೆ.

View this post on Instagram

A post shared by Jay Pirabakaran (@jayprints)

ಈ ಬಳಕೆದಾರರ ಬಯೋವನ್ನು ಪರಿಶೀಲಿಸಿದಾಗ, ಅವರು AI ಕಲಾವಿದ ಎಂದು ನಾವು ಕಂಡುಕೊಂಡಿದ್ದೇವೆ, ಅವರು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ AI- ರಚಿತವಾದ ಅನೇಕ ಚಿತ್ರಗಳು ಮತ್ತು ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದಾರೆ. ಆದ್ದರಿಂದ, ವೈರಲ್ ವಿಡಿಯೋವನ್ನು AI ತಂತ್ರಜ್ಞಾನವನ್ನು ಬಳಸಿ ರಚಿಸಲಾಗಿದೆ. ಇದು ನಿಜವಾದ ವಿಡಿಯೋ ಅಲ್ಲ ಎಂದು ನಾವು ಖಚಿತವಾಗಿ ಹೇಳುತ್ತೇವೆ.

ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ