World Food Safety Day 2025: ತಳ್ಳುಗಾಡಿಗಳಲ್ಲಿ ಸಿಗುವ ಆಹಾರ ರುಚಿಯಾಗಿರುತ್ತೆ ಎನ್ನುವವರು ಈ ಸ್ಟೋರಿ ಓದಿ
ವಿಶ್ವ ಆಹಾರ ಸುರಕ್ಷತೆ ದಿನ: ತಂತ್ರಜ್ಞಾನ ಆಧಾರಿತ ವ್ಯವಸ್ಥೆಯಲ್ಲಿ ಮಾನವ ಹಿಂದೆಂದಿಗಿಂತಲೂ ಶರವೇಗದ ಸಾಧನೆ ಮಾಡುತ್ತಿದ್ದಾನೆ. ಇವೆಲ್ಲ ಹೆಮ್ಮೆ ವಿಷಯವೇ ಆದರೆ ಮಾಲಿನ್ಯ, ಕಲುಷಿತ ವಾಗುತ್ತಿರುವ ನೀರು ಹಾಗೂ ಆಹಾರಗಳು ನಮ್ಮ ಎಲ್ಲ ಸಾಧನೆಗಳನ್ನು ಶೂನ್ಯಕ್ಕೆ ತಂದಿಳಿಸುತ್ತದೆ. ಅದರಲ್ಲಿಯೂ ಜನ ತಾವು ಸೇವಿಸುವ ಆಹಾರದ ಬಗ್ಗೆ ಹೆಚ್ಚಿನ ಗಮನ ಹರಿಸದಿದ್ದಾಗ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಲೇ ಇರುತ್ತದೆ. ಹಾಗಾಗಿ ನಾವು ಆಹಾರ ಸೇವನೆ ಮಾಡುವುದರೊಂದಿಗೆ ಅವುಗಳ ಸುರಕ್ಷತೆಯ ಬಗ್ಗೆಯೂ ಕಾಳಜಿ ವಹಿಸಬೇಕಾಗುತ್ತದೆ.

ಮನುಷ್ಯನಿಗೆ ಎಷ್ಟೇ ದುಡ್ಡಿದ್ದರೂ ಆರೋಗ್ಯ ಸರಿಯಿಲ್ಲ ಎಂದರೆ ಏನಿದ್ದು ಏನು ಪ್ರಯೋಜನ ಎಂಬತಾಗುತ್ತದೆ. ಇನ್ನು ನಮ್ಮ ಆರೋಗ್ಯ (Health) ಕಾಪಾಡಿಕೊಳ್ಳಲು ನಾವು ಸೇವನೆ ಮಾಡುವ ಆಹಾರವೇ ಬಹಳ ಮುಖ್ಯವಾಗುತ್ತದೆ. ಕೇವಲ ಆಹಾರಕ್ರಮ ಸರಿಯಾಗಿ ಇದ್ದರೆ ಸಾಲುವುದಿಲ್ಲ ಅವುಗಳ ಸುರಕ್ಷತೆಯ ಬಗ್ಗೆಯೂ ಗಮನ ಹರಿಸಬೇಕಾಗುತ್ತದೆ. ಏಕೆಂದರೆ ಶಾಲೆ, ಹಾಸ್ಟೆಲ್, ಹೋಟೆಲ್ ಸೇರಿದಂತೆ ಹಲವೆಡೆ ಆಹಾರ ಸೇವಿಸಿಯೇ ಅಸ್ವಸ್ಥಗೊಳ್ಳುತ್ತಿರುವ ಘಟನೆಗಳು ರಾಜ್ಯದಲ್ಲಿ ನಡೆಯುತ್ತಿರುವುದರಿಂದ ಕಲುಷಿತ ಆಹಾರಗಳ ಬಗ್ಗೆ ಜನರಿಗೆ ಸರಿಯಾದ ಅರಿವು ಮೂಡಿಸುವುದು ಬಹಳ ಅನಿವಾರ್ಯವಾಗಿದೆ. ಈ ಕಾರಣಕ್ಕಾಗಿಯೇ ವಿಶ್ವ ಆರೋಗ್ಯ ಸಂಸ್ಥೆಯು (WHO) ಜೂನ್ 7 ಅನ್ನು ವಿಶ್ವ ಆಹಾರ ಸುರಕ್ಷತಾ ದಿನವನ್ನಾಗಿ (World Food Safety Day) ಆಚರಿಸುತ್ತ ಬಂದಿದೆ.
ಬೀದಿಬದಿ ಆಹಾರ ಸೇವನೆ ಮಾಡಿದರೆ ಏನಾಗುತ್ತದೆ?
ತಂತ್ರಜ್ಞಾನ ಆಧಾರಿತ ವ್ಯವಸ್ಥೆಯಲ್ಲಿ ಮಾನವ ಹಿಂದೆಂದಿಗಿಂತಲೂ ಶರವೇಗದ ಸಾಧನೆ ಮಾಡುತ್ತಿದ್ದಾನೆ. ಇವೆಲ್ಲ ಹೆಮ್ಮೆ ವಿಷಯವೇ ಆದರೆ ಮಾಲಿನ್ಯ, ಕಲುಷಿತ ವಾಗುತ್ತಿರುವ ನೀರು ಹಾಗೂ ಆಹಾರಗಳು ನಮ್ಮ ಎಲ್ಲ ಸಾಧನೆಗಳನ್ನು ಶೂನ್ಯಕ್ಕೆ ತಂದಿಳಿಸುತ್ತದೆ. ಜನ ತಾವು ಸೇವಿಸುವ ಆಹಾರ ಬಗ್ಗೆ ಅವುಗಳ ಸ್ವಚ್ಛತೆಯ ಬಗ್ಗೆ ಗಮನ ಹರಿಸದಿರುವುದು ಆರೋಗ್ಯ ಸಮಸ್ಯೆ ಹೆಚ್ಚಳವಾಗುವುದಕ್ಕೆ ಕಾರಣವಾಗಿದೆ. ಬೀದಿಬದಿ ತಳ್ಳುಗಾಡಿಗಳಲ್ಲಿ ಸಿಗುವ ಆಹಾರಗಳು ಬಹಳ ರುಚಿಯಾಗಿರುತ್ತದೆ ಎಂದು ಅವುಗಳನ್ನೇ ಹೆಚ್ಚು ಹೆಚ್ಚು ಸೇವನೆ ಮಾಡುತ್ತಾರೆ. ಅಂಗಡಿಯವನು ಬಳಸಿದ ಎಣ್ಣೆಯನ್ನೇ ಪದೇ ಪದೆ ಬಳಸಿ ಬಜ್ಜಿ, ಬೋಂಡಾ ಮಾಡುತ್ತಿದ್ದರೆ ಅವನು ಮಾಡುವ ಆಹಾರವೇ ನಮಗೆ ತಿನ್ನಬೇಕು ಎನಿಸುತ್ತದೆ. ಆದರೆ ಈ ರೀತಿಯ ಅಭ್ಯಾಸವೇ ಆರೋಗ್ಯದ ಗಂಭೀರ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂಬುದನ್ನು ನಾವು ಮರೆಯುತ್ತಿದ್ದೇವೆ. ಈ ರೀತಿ ಕಲುಷಿತ ಆಹಾರವನ್ನು ಸೇವನೆ ಮಾಡುವುದರಿಂದ ದೇಹವನ್ನು ಪ್ರವೇಶಿಸುವ ಬ್ಯಾಕ್ಟೀರಿಯಾ, ವೈರಸ್‌ಗಳು, ಪರಾವಲಂಬಿಗಳು ಅಥವಾ ರಾಸಾಯನಿಕ ಪದಾರ್ಥಗಳಿಂದ ಊಹಿಸಲೂ ಅಸಾಧ್ಯವಾದಷ್ಟು ರೋಗಗಳು ಹರಡುತ್ತವೆ.
ಇದನ್ನೂ ಓದಿ: ಶಾಲೆ ಜತೆ ಮಳೆಯ ಆರಂಭ, ಮಕ್ಕಳ ಆರೋಗ್ಯ ಮುಂಜಾಗೃತೆ ಹೇಗೆ? ಇಲ್ಲಿದೆ ನೋಡಿ ಡಾ. ಭರತ್ ಸಲಹೆ
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅಂಕಿ ಅಂಶಗಳ ಪ್ರಕಾರ, ವಿಶ್ವಾದ್ಯಂತ ಪ್ರತಿ ಹತ್ತು ಜನರಲ್ಲಿ ಒಬ್ಬರು ಕಲುಷಿತ ಆಹಾರ ಸೇವನೆ ಮಾಡಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಹೊರಗಡೆ ಆಹಾರ ಸೇವನೆ ಮಾಡಿ ಐದು ವರ್ಷದೊಳಗಿನ ಮಕ್ಕಳಲ್ಲಿ ಬೇರೆ ಬೇರೆ ರೀತಿಯ ರೋಗಗಳು ಹರಡುತ್ತಿವೆ. ಅದಲ್ಲದೆ ಅಸುರಕ್ಷಿತ ಆಹಾರದಿಂದ ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ಸಾವು ಸಂಭವಿಸುತ್ತಿವೆ. ನಮ್ಮ ಬಳಿ ಕೊಂಡುಕೊಳ್ಳಲು ಬಹಳ ದುಡ್ಡಿದೆ ಆದರೆ ನಾವು ಸೇವನೆ ಮಾಡುವ ಆಹಾರ ದಿನದಿಂದ ದಿನಕ್ಕೆ ಕಲಬೆರಕೆಯಾಗುತ್ತಿದೆ. ಯಾವುದೇ ಶಕ್ತಿ ನಿಮ್ಮ ತಿಂಡಿ ಊಟಗಳಿಂದ ಸಿಗುವುದಿಲ್ಲ. ಹಾಗಾಗಿ ನಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರೆ ನಾವು ಸೇವನೆ ಮಾಡುವ ಆಹಾರವೂ ಚೆನ್ನಾಗಿರಬೇಕು. ಬಾಯಿಯ ರುಚಿಗಾಗಿ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ