AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Miss Universe 2022: ಮಿಸ್ ಯೂನಿವರ್ಸ್​ನಲ್ಲಿ ಸ್ಪರ್ಧೆಗೂ ಮುನ್ನವೇ ವಿಶ್ವದ ಮನಗೆದ್ದ ಮಿಸ್ ಥೈಲ್ಯಾಂಡ್

71ನೇ ಮಿಸ್ ಯೂನಿವರ್ಸ್ (ವಿಶ್ವ ಸುಂದರಿ) ಪಟ್ಟ ಇಂದು(ಜ.14) ನಡೆಯಲ್ಲಿದ್ದು, ತಾನು ಧರಿಸುವ ಬಟ್ಟೆಯ ಮೂಲಕವೇ ವಿಶ್ವದ ಮನಗೆದ್ದಿದ್ದಾಳೆ ಮಿಸ್ ಥೈಲ್ಯಾಂಡ್.

Miss Universe 2022: ಮಿಸ್ ಯೂನಿವರ್ಸ್​ನಲ್ಲಿ ಸ್ಪರ್ಧೆಗೂ ಮುನ್ನವೇ ವಿಶ್ವದ ಮನಗೆದ್ದ ಮಿಸ್ ಥೈಲ್ಯಾಂಡ್
ಸಾಂದರ್ಭಿಕ ಚಿತ್ರImage Credit source: Instagram
TV9 Web
| Updated By: ಅಕ್ಷತಾ ವರ್ಕಾಡಿ|

Updated on: Jan 14, 2023 | 2:03 PM

Share

71ನೇ ವಿಶ್ವ ಸುಂದರಿ(Miss Universe) ಪಟ್ಟ ಲೂಸಿಯಾನದ ನ್ಯೂ ಓರ್ಲಿಯನ್ಸ್‌ನಲ್ಲಿರುವ ನ್ಯೂ ಓರ್ಲಿಯನ್ಸ್ ಮೋರಿಯಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ಇಂದು(ಜ.14) ನಡೆಯಲಿದೆ. ಕರ್ನಾಟಕದ ದಿವಿತಾ ರೈ ಈ ವರ್ಷ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ವಿಶ್ವದ ಹೊಸ ವಿಶ್ವ ಸುಂದರಿ ಯಾರು? ಎಂಬ ಕುತೂಹಲ ಒಂದೆಡೆಯಾದರೆ, ಥೈಲ್ಯಾಂಡ್​​ನಿಂದ ಪ್ರತಿನಿಧಿಸಿಸುವ ಅನ್ನಾ ಸುಯಾಂಗಮ್ ಈಗಾಗಲೇ ತನ್ನ ಇನ್ಸ್ಟಾಗ್ರಾಮ್​​ ಆ ಒಂದು ಪೋಸ್ಟ್ ಮೂಲಕ ಸಾಕಷ್ಟು ಜನರ ಮನ ಗೆದ್ದಿದ್ದಾಳೆ. ಅಷ್ಟಕ್ಕೂ ಆಕೆ ಹಂಚಿಕೊಂಡಿರುವ ಪೋಸ್ಟ್ ಎನು? ಈ ಸ್ಟೋರಿ ಪೂರ್ತಿಯಾಗಿ ಓದಿ.

ವಿಶ್ವ ಸುಂದರಿ ಸ್ಪರ್ಧೆ ಎಂದರೆ ಹಾಗೇ ಇಲ್ಲಿ ಮುಖದ ಸೌಂದರ್ಯಕ್ಕಿಂತ ಆಕೆಯ ಮಾತುಗಾರಿಕೆ, ಆಕೆಯ ಕ್ರಿಯಾತ್ಮಕ ಆಯೋಚನೆಗಳೇ ಮೊದಲು ಗೆಲ್ಲುತ್ತದೆ. ವಿಶ್ವದ ಪ್ರತಿಯೊಂದು ದೇಶಗಳಿಂದ ಸ್ಪರ್ಧಿಸುವುದರಿಂದ ವಿಶ್ವ ಸುಂದರಿ ಪಟ್ಟವನ್ನು ಗಿಟ್ಟಿಸಿಕೊಳ್ಳುವುದು ಅಷ್ಟೋಂದು ಸುಲಭವಲ್ಲ. ಆದರೆ ಸ್ಪರ್ಧೆಗಿಂತ ಮೊದಲೇ ಥೈಲ್ಯಾಂಡ್​​ನಿಂದ ಪ್ರತಿನಿಧಿಸಿಸುವ ಅನ್ನಾ ಸುಯಾಂಗಮ್ ಆಕೆ ಧರಿಸುವ ಬಟ್ಟೆಯ ಮೂಲಕ ಸಾಕಷ್ಟು ಜನರ ಮನ ಗೆದ್ದಿದ್ದಾಳೆ.

ಇದನ್ನೂ ಓದಿ: ಗೊಲ್ಲ ಸಮುದಾಯದ ಮಹಿಳೆಯ ಚಿತ್ರದ ವಿಶಿಷ್ಟ ನೇಯ್ಗೆ, ಗೊಲ್ಲಭಾಮ ಸೀರೆ

ಕುಡಿದು ಬಿಸಾಡಿದ ಆಲ್ಯೂಮಿನಿಯಂ ಡ್ರಿಂಕ್ ಕ್ಯಾನ್‌ಗಳನ್ನು ಮರುಬಳಸಿ ಸುಂದರವಾದ ಗೌನ್ ತಯಾರಿಸಿದ್ದು, ಇದನ್ನು ಆಕೆ ಧರಿಸುವುದಾಗಿ ಹೇಳಿಕೊಂಡಿದ್ದಾಳೆ. ಜೊತೆಗೆ ತನ್ನ ಬಾಲ್ಯದ ಜೀವನದ ಬಗ್ಗೆ ಹೇಳಿಕೊಂಡಿದ್ದಾಳೆ. ಹೌದು ನನ್ನ ತಂದೆ ಕಸ ಸಂಗ್ರಹಿಸುವ ಕೆಲಸ ಮಾಡುತ್ತಿದ್ದರು. ಬಾಲ್ಯದಿಂದ ಅವರ ಆ ಕೆಲಸದ ಸಂಬಳದಿಂದಲೇ ನನ್ನನ್ನು ಬೆಳೆಸಿದ್ದಾರೆ. ಆದ್ದರಿಂದ ತಾನು ಮರುಬಳಕೆಯ ವಸ್ತುಗಳಿಂದ ತಯಾರಿಸಿದ ಗೌನ್ ಧರಿಸಿ, ಮಿಸ್ ಯೂನಿವರ್ಸ್​ನಲ್ಲಿ ಪ್ರತಿನಿಧಿಸುತ್ತೇನೆ. ಅನೇಕರಿಂದ ನಿಷ್ಪ್ರಯೋಜಕವೆಂದು ಪರಿಗಣಿಸಲ್ಪಟ್ಟಿರುವುದು ತನ್ನದೇ ಆದ ಮೌಲ್ಯ ಮತ್ತು ಸೌಂದರ್ಯವನ್ನು ಹೊಂದಿದೆ ಎಂದು ವಿಶ್ವಕ್ಕೆ ಪ್ರಸ್ತುತಪಡಿಸಲು ನಾನು ಬಯಸುತ್ತೇನೆ ಎಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಈಗಾಗಲೇ ಸಾಕಷ್ಟು ಮಟ್ಟದಲ್ಲಿ ವೈರಲ್ ಆಗಿದ್ದು, ನೀನಿ ಈಗಾಗಲೇ ನಮ್ಮ ಮನವನ್ನು ಗೆದ್ದಿದ್ದಿ ಎಂದು ಕಾಮೆಂಟ್ ಮೂಲಕ ಸಾಕಷ್ಟು ಜನ ಪ್ರತಿಕ್ರಿಯಿಸಿದ್ದಾರೆ.

ಮಿಸ್ ಯೂನಿವರ್ಸ್ ಥೈಲ್ಯಾಂಡ್‌ನ ಇನ್‌ಸ್ಟಾಗ್ರಾಮ್ ಖಾತೆಯ ಪ್ರಕಾರ, ಈ ಉಡುಪನ್ನು ಹಿಡನ್ ಪ್ರೆಶಿಯಸ್ ಡೈಮಂಡ್ ಡ್ರೆಸ್ ಎಂದು ಕರೆಯಲಾಗಿದೆ. ಆಕೆ ಪೋಸ್ಟ್ ಅಪ್ಲೋಡ್ ಮಾಡಿದ ನಂತರ, ಕೆಲವೇ ಕ್ಷಣಗಳಲ್ಲಿ ಲಕ್ಷಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ ಮತ್ತು ಹಲವಾರು ಜನರು ಕಾಮೆಂಟ್‌ಗಳಲ್ಲಿ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: