Priyanka Chopra: ‘ಪ್ರಿಯಾಂಕಾ ಚೋಪ್ರಾ ವಿಶ್ವ ಸುಂದರಿ ಆಗಿದ್ದು ಮೋಸದಿಂದ’; 22 ವರ್ಷಗಳ ಬಳಿಕ ಗಂಭೀರ ಆರೋಪ

Miss World 2000: ಈ ರೀತಿ ಆರೋಪ ಮಾಡಿದಕ್ಕೆ ಲೆಲಾನಿ ಮೆಕೊನಿ ಅವರು ಕೆಲವು ಕಾರಣಗಳನ್ನು ನೀಡಿದ್ದಾರೆ. ಅವರ ಪ್ರಕಾರ, ಪ್ರಿಯಾಂಕಾ ಚೋಪ್ರಾ ಗೆಲುವು ಪಕ್ಷಪಾತದಿಂದ ಆಗಿತ್ತು.

Priyanka Chopra: ‘ಪ್ರಿಯಾಂಕಾ ಚೋಪ್ರಾ ವಿಶ್ವ ಸುಂದರಿ ಆಗಿದ್ದು ಮೋಸದಿಂದ’; 22 ವರ್ಷಗಳ ಬಳಿಕ ಗಂಭೀರ ಆರೋಪ
ಪ್ರಿಯಾಂಕಾ ಚೋಪ್ರಾ, ಲೆಲಾನಿ ಮೆಕೊನಿ
Follow us
| Updated By: Digi Tech Desk

Updated on:Nov 04, 2022 | 12:40 PM

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಮೊದಲು ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದು, ನಂತರ ಬಾಲಿವುಡ್​ಗೆ ಕಾಲಿಟ್ಟು, ಬಳಿಕ ಹಾಲಿವುಡ್​ನಲ್ಲೂ ಖ್ಯಾತಿ ಗಳಿಸಿದ ಅವರ ಸಾಧನೆ ಸಣ್ಣದಲ್ಲ. 2000ನೇ ಇಸವಿಯಲ್ಲಿ ಅವರು ಮಿಸ್​ ವರ್ಲ್ಡ್​ (Miss World 2000) ಕಿರೀಟ ಮುಡಿಗೇರಿಸಿಕೊಂಡಿದ್ದರು. ಅದರಿಂದ ಅವರ ಬದುಕು ಬದಲಾಯಿತು. ಹಲವು ಸಿನಿಮಾ ಮಾಡಿ ಸೈ ಎನಿಸಿಕೊಂಡರು. ಆದರೆ ವಿಶ್ವ ಸುಂದರಿ ಪಟ್ಟ ಗೆದ್ದು 22 ವರ್ಷಗಳು ಕಳೆದ ಬಳಿಕ ಪ್ರಿಯಾಂಕಾ ಚೋಪ್ರಾ ಅವರ ಮೇಲೆ ಆರೋಪವೊಂದು ಎದುರಾಗಿದೆ. ಅವರು ‘ಮಿಸ್​ ವರ್ಲ್ಡ್​ 2000’ ಕಿರೀಟ ಗೆದ್ದಿದ್ದು ಪಕ್ಷಪಾತದಿಂದ ಎಂದು ಮಾಜಿ ಮಿಸ್​ ಬಾರ್ಬೆಡೋಸ್​ ಲೆಲಾನಿ ಮೆಕೊನಿ (Leilani McConney) ಅವರು ಆರೋಪ ಮಾಡಿದ್ದಾರೆ.

‘ಮಿಸ್​ ಯುಎಸ್​ಎ 2022’ ಸ್ಪರ್ಧೆಯಲ್ಲಿ ಪಕ್ಷಪಾತ ಮಾಡಲಾಗಿದೆ ಎಂಬ ಬಗ್ಗೆ ಚರ್ಚೆ ಜೋರಾಗಿದೆ. ಈ ವಿಚಾರದ ಬಗ್ಗೆ ಮಾತನಾಡಿರುವ ಲೆಲಾನಿ ಮೆಕೊನಿ ಅವರು 2000ನೇ ಇಸವಿಯ ‘ಮಿಸ್​ ವರ್ಲ್ಡ್​’ ಸ್ಪರ್ಧೆಯ ಬಗ್ಗೆ ಟೀಕೆ ಮಾಡಿದ್ದಾರೆ. ಆ ಸ್ಪರ್ಧೆಯಲ್ಲಿ ಪ್ರಿಯಾಂಕಾ ಚೋಪ್ರಾ ಜೊತೆ ಲೆಲಾನಿ ಮೆಕೊನಿ ಕೂಡ ಭಾಗವಹಿಸಿದ್ದರು. ಆದರೆ ಪ್ರಿಯಾಂಕಾ ಚೋಪ್ರಾ ಅವರು ಆ ವರ್ಷ ಕಿರೀಟ ಗೆದ್ದಿದ್ದು ಪಕ್ಷಪಾತದಿಂದ ಎಂಬುದು ಲೆಲಾನಿ ಮೆಕೊನಿ ಆರೋಪ.

ಈ ರೀತಿ ಆರೋಪ ಮಾಡಿದಕ್ಕೆ ಲೆಲಾನಿ ಮೆಕೊನಿ ಅವರು ಕೆಲವು ಕಾರಣಗಳನ್ನು ಕೂಡ ನೀಡಿದ್ದಾರೆ. ಅವರ ಪ್ರಕಾರ, ಪ್ರಿಯಾಂಕಾ ಚೋಪ್ರಾ ಅವರ ಗೌನ್​ಗಳನ್ನು ಚೆನ್ನಾಗಿ ವಿನ್ಯಾಸ ಮಾಡಲಾಗಿತ್ತು. ಅವರಿಗೆ ವಿಶೇಷ ಸೌಕರ್ಯಗಳನ್ನು ನೀಡಲಾಗಿತ್ತು. ಪತ್ರಿಕೆಯಲ್ಲಿ ಪ್ರಿಯಾಂಕಾ ಫೋಟೋಗಳು ದೊಡ್ಡದಾಗಿ ಬಿತ್ತರ ಆಗಿದ್ದವು. ಇನ್ನುಳಿದ ಸ್ಪರ್ಧಿಗಳ ಗ್ರೂಪ್​ ಫೋಟೋ ಹಾಕಲಾಗಿತ್ತು. ಅಲ್ಲದೇ, ಆ ವರ್ಷದ ಮಿಸ್​ ವರ್ಲ್ಡ್​ ಪ್ರಯೋಜಕರು ಭಾರತದವರೇ ಆಗಿದ್ದರು. ಈ ಎಲ್ಲ ಕಾರಣಗಳನ್ನು ನೀಡಿದ ಲೆಲಾನಿ ಮೆಕೊನಿ ಅವರು ‘ಪ್ರಿಯಾಂಕಾ ಚೋಪ್ರಾ ಗೆದ್ದಿದ್ದು ಪಕ್ಷಪಾತದಿಂದ’ ಎಂದು ಆರೋಪ ಹೊರಿಸಿದ್ದಾರೆ.

ಇದನ್ನೂ ಓದಿ
Image
Priyanka Chopra: ಫ್ಯಾನ್ಸ್​ ವಾವ್​ ಎನ್ನುವಂತೆ ಗ್ಲಾಮರ್​ ವೇಷ ಧರಿಸಿದ ಪ್ರಿಯಾಂಕಾ ಚೋಪ್ರಾ; ಇಲ್ಲಿವೆ ಫೋಟೋಗಳು
Image
ಶಾಕಿಂಗ್​ ಸತ್ಯದ ಜತೆ ಮೊದಲ ಬಾರಿ ಮಗು ಫೋಟೋ ತೋರಿಸಿದ ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಸ್​
Image
ಪ್ರಿಯಾಂಕಾ ಚೋಪ್ರಾ ಮಗಳ ಹೆಸರು ಮಾಲ್ತಿ ಮೇರಿ ಚೋಪ್ರಾ ಜೋನಸ್​; ಏನು ಇದರ ಅರ್ಥ?
Image
ಕಪ್ಪು ಸೀರೆ ಧರಿಸಿ ‘ಪ್ರೀ ಆಸ್ಕರ್​ ಪಾರ್ಟಿ’ಯಲ್ಲಿ ಮಿಂಚಿದ ‘ದೇಸಿ ಗರ್ಲ್​’ ಪ್ರಿಯಾಂಕಾ ಚೋಪ್ರಾ

ಲೆಲಾನಿ ಮೆಕೊನಿ ಅವರು ತಮ್ಮದೇ ಯೂಟ್ಯೂಬ್​ ಚಾನೆಲ್​ ಹೊಂದಿದ್ದಾರೆ. ಆ ಚಾನೆಲ್​ನಲ್ಲಿ ಅವರು ಇಷ್ಟೆಲ್ಲ ಟೀಕೆ ಮಾಡಿದ್ದಾರೆ. ಇದಕ್ಕೆ ನೆಟ್ಟಿಗರು ಹಲವು ಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಲೆಲಾನಿ ಮೆಕೊನಿ ಮಾಡಿದ ಆರೋಪಗಳಿಗೆ ಪ್ರಿಯಾಂಕಾ ಚೋಪ್ರಾ ಅವರು ಪ್ರತಿಕ್ರಿಯೆ ನೀಡುತ್ತಾರಾ ಅಥವಾ ಮೌನ ವಹಿಸುತ್ತಾರಾ ಎಂಬುದನ್ನು ಕಾದು ನೋಡಬೇಕು.

ಗಾಯಕ ನಿಕ್​ ಜೋನಸ್​ ಅವರನ್ನು ಮದುವೆ ಆದ ಬಳಿಕ ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕದಲ್ಲಿ ನೆಲೆಸಿದ್ದಾರೆ. ಹಿಂದಿ ಸಿನಿಮಾಗಳಿಗಿಂತಲೂ ಹಾಲಿವುಡ್​ ಚಿತ್ರಗಳನ್ನೇ ಅವರು ಹೆಚ್ಚಾಗಿ ಒಪ್ಪಿಕೊಳ್ಳುತ್ತಿದ್ದಾರೆ. ಖಾಸಗಿ ಕಾರ್ಯಕ್ರಮದ ನಿಮಿತ್ತ ಪ್ರಿಯಾಂಕಾ ಅವರು 3 ವರ್ಷದ ಬಳಿಕ ಭಾರತಕ್ಕೆ ಮರಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:49 am, Fri, 4 November 22