AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Priyanka Chopra: ಪ್ರಿಯಾಂಕಾ ಚೋಪ್ರಾ ಬರ್ತ್​ಡೇ: ದೇಸಿ ಗರ್ಲ್​ ನೋಡಿ ಫ್ಯಾನ್ಸ್​ ಕಲಿಯಬಹುದಾದ 5 ಪಾಠಗಳು

Priyanka Chopra Birthday: ನಟಿ ಪ್ರಿಯಾಂಕಾ ಚೋಪ್ರಾ ಹುಟ್ಟುಹಬ್ಬಕ್ಕೆ ಎಲ್ಲರಿಂದ ಶುಭಾಶಯ ಹರಿದುಬರುತ್ತಿದೆ. ವಿಶ್ವಾದ್ಯಂತ ಅವರು ಅಭಿಮಾನಿಗಳನ್ನು ಹೊಂದಿದ್ದಾರೆ.

Priyanka Chopra: ಪ್ರಿಯಾಂಕಾ ಚೋಪ್ರಾ ಬರ್ತ್​ಡೇ: ದೇಸಿ ಗರ್ಲ್​ ನೋಡಿ ಫ್ಯಾನ್ಸ್​ ಕಲಿಯಬಹುದಾದ 5 ಪಾಠಗಳು
ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್
TV9 Web
| Updated By: ಮದನ್​ ಕುಮಾರ್​|

Updated on:Jul 18, 2022 | 7:05 AM

Share

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಅನೇಕರಿಗೆ ಮಾದರಿ. ಬಣ್ಣದ ಲೋಕದಲ್ಲಿ ಅವರ ಸಾಧನೆ ಅಪಾರ. ಇಂದು (ಜುಲೈ 18) ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಪ್ರಿಯಾಂಕಾ ಚೋಪ್ರಾ ಜನ್ಮದಿನಕ್ಕೆ (Priyanka Chopra Birthday) ಅಭಿಮಾನಿಗಳು, ಸೆಲೆಬ್ರಿಟಿಗಳು, ಆಪ್ತರು ಶುಭ ಕೋರುತ್ತಿದ್ದಾರೆ. ಚಿತ್ರರಂಗದಲ್ಲಿ ಬರೋಬ್ಬರಿ 20 ವರ್ಷಗಳ ಅನುಭವ ಅವರಿಗೆ ಇದೆ. ಈ ಜರ್ನಿಯಲ್ಲಿ ಹಲವು ಏಳು-ಬೀಳುಗಳನ್ನು ಅವರು ಕಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ ಈಗ ಅಮೆರಿಕದಲ್ಲೇ ಸೆಟ್ಲ್​ ಆಗಿದ್ದಾರೆ. ಪತಿ ನಿಕ್​ ಜೋನಸ್​ (Nick Jonas) ಜೊತೆಗೆ ಅವರು ಹಾಯಾಗಿ ದಿನ ಕಳೆಯುತ್ತಿದ್ದಾರೆ. ಬಾಡಿಗೆ ತಾಯಿ ಮೂಲಕ ಈ ದಂಪತಿ ಮುದ್ದಾದ ಹೆಣ್ಣು ಮಗುವನ್ನು ಪಡೆದಿದ್ದಾರೆ. ಈವರೆಗಿನ ಸಿನಿಪಯಣದಲ್ಲಿ ಪ್ರಿಯಾಂಕಾ ಚೋಪ್ರಾ ಅವರನ್ನು ನೋಡಿ ಫ್ಯಾನ್ಸ್​ ಕಲಿಯಬಹುದಾದ ಕೆಲವು ಪಾಠಗಳಿವೆ..

ನಿಮ್ಮ ಮೂಲವನ್ನು ಮರೆಯದಿರಿ: ಸಾಧನೆ ಮಾಡಿದ ಬಳಿಕ ತಮ್ಮ ಮೂಲವನ್ನು ಮರೆಯುವವರೇ ಹೆಚ್ಚು. ಆದರೆ ಪ್ರಿಯಾಂಕಾ ಚೋಪ್ರಾ ಹಾಗೆ ಮಾಡಿಲ್ಲ. ಬಾಲಿವುಡ್​ನಿಂದ ವೃತ್ತಿಜೀವನ ಆರಂಭಿಸಿ, ಹಾಲಿವುಡ್​ವರೆಗೆ ತಲುಪಿದರೂ ಕೂಡ ಅವರು ತಮ್ಮ ಮೂಲವನ್ನು ಮರೆತಿಲ್ಲ. ಭಾರತದ ಹಬ್ಬಗಳನ್ನು ಅವರು ಇಂದಿಗೂ ಆಚರಿಸುತ್ತಾರೆ. ತಾಯ್ನಾಡಿನ ಬಗ್ಗೆ ಕಾಳಜಿ ತೋರುತ್ತಾರೆ.

ನಿಮಗೆ ನೀವೇ ಮಿತಿ ಹೇರಿಕೊಳ್ಳಬೇಡಿ: ‘ಮಿಸ್ ವರ್ಲ್ಡ್​’ ಕಿರೀಟ ಗೆದ್ದ ಬಳಿಕ ಪ್ರಿಯಾಂಕಾ ಚೋಪ್ರ ಸುಮ್ಮನಾಗಲಿಲ್ಲ. ಬಾಲಿವುಡ್​ನಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡರು. ನಂತರ ಹಾಲಿವುಡ್​ಗೂ ಕಾಲಿಟ್ಟು ಗುರುತಿಸಿಕೊಂಡರು. ತಮ್ಮ ಸಾಮರ್ಥ್ಯದ ವ್ಯಾಪ್ತಿ ವಿಸ್ತರಿಸಿಕೊಳ್ಳುವ ವಿಚಾರದಲ್ಲಿ ಅಭಿಮಾನಿಗಳಿಗೆ ಅವರು ಮಾದರಿ ಆಗಿದ್ದಾರೆ.

ಇದನ್ನೂ ಓದಿ
Image
Priyanka Chopra: ಫ್ಯಾನ್ಸ್​ ವಾವ್​ ಎನ್ನುವಂತೆ ಗ್ಲಾಮರ್​ ವೇಷ ಧರಿಸಿದ ಪ್ರಿಯಾಂಕಾ ಚೋಪ್ರಾ; ಇಲ್ಲಿವೆ ಫೋಟೋಗಳು
Image
ಶಾಕಿಂಗ್​ ಸತ್ಯದ ಜತೆ ಮೊದಲ ಬಾರಿ ಮಗು ಫೋಟೋ ತೋರಿಸಿದ ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಸ್​
Image
ಪ್ರಿಯಾಂಕಾ ಚೋಪ್ರಾ ಮಗಳ ಹೆಸರು ಮಾಲ್ತಿ ಮೇರಿ ಚೋಪ್ರಾ ಜೋನಸ್​; ಏನು ಇದರ ಅರ್ಥ?
Image
ಕಪ್ಪು ಸೀರೆ ಧರಿಸಿ ‘ಪ್ರೀ ಆಸ್ಕರ್​ ಪಾರ್ಟಿ’ಯಲ್ಲಿ ಮಿಂಚಿದ ‘ದೇಸಿ ಗರ್ಲ್​’ ಪ್ರಿಯಾಂಕಾ ಚೋಪ್ರಾ

ರಿಸ್ಕ್​ ತೆಗೆದುಕೊಳ್ಳಲು ಹಿಂಜರಿಯಬೇಡಿ: ವೃತ್ತಿಜೀವನದಲ್ಲಿ ಅನೇಕ ರಿಸ್ಕ್​ಗಳನ್ನು ಪ್ರಿಯಾಂಕಾ ಚೋಪ್ರಾ ತೆಗೆದುಕೊಂಡಿದ್ದಾರೆ. ಪಾತ್ರಗಳ ಆಯ್ಕೆ, ತಮಗಿಂತ ಕಿರಿಯ ವ್ಯಕ್ತಿ ಜೊತೆ ಮದುವೆ, ವೃತ್ತಿಜೀವನದ ಉತ್ತುಂಗದಲ್ಲಿ ಇರುವಾಗ ಮಗು ಪಡೆದಿದ್ದು.. ಹೀಗೆ ಅನೇಕ ವಿಚಾರಗಳಲ್ಲಿ ಪ್ರಿಯಾಂಕಾ ರಿಸ್ಕ್​ ತೆಗೆದುಕೊಂಡಿದ್ದಾರೆ.

ಆಡಿಕೊಳ್ಳುವವರ ಮಾತಿಗೆ ಕಿವಿಗೊಡಬೇಡಿ: ಪ್ರಿಯಾಂಕಾ ಚೋಪ್ರಾ ಅವರ ಬಗ್ಗೆ ಕೇಳಿಬಂದ ಗಾಸಿಪ್​ಗಳು ಒಂದೆರಡಲ್ಲ. ಇನ್ನು, ಅವರನ್ನು ಟ್ರೋಲ್​ ಮಾಡುವವರಿಗೂ ಕೊರತೆ ಇಲ್ಲ. ಆದರೆ ಅಂಥವರ ಮಾತುಗಳಿಗೆ ಕಿವಿಗೊಡುವ ಬದಲು ಕೆಲಸದ ಮೇಲೆ ಪ್ರಿಯಾಂಕಾ ಗಮನ ಹರಿಸಿದ್ದೇ ಹೆಚ್ಚು.

ತಪ್ಪುಗಳಿಂದ ಕಲಿತುಕೊಳ್ಳಿ: ಇಷ್ಟು ವರ್ಷಗಳ ವೃತ್ತಿಜೀವನದಲ್ಲಿ ಪ್ರಿಯಾಂಕಾ ಚೋಪ್ರಾ ತಪ್ಪುಗಳೇ ಮಾಡಿಲ್ಲ ಎಂದೇನೂ ಅಲ್ಲ. ಆದರೆ ಅವುಗಳಿಂದಲೂ ಅವರು ಪಾಠ ಕಲಿತುಕೊಂಡು ಮುಂದೆ ಸಾಗಿದ್ದಾರೆ. ಈ ಎಲ್ಲ ಕಾರಣಗಳಿಂದ ಅವರು ಯಶಸ್ವಿ ಮಹಿಳೆಯಾಗಿ ಅನೇಕರಿಗೆ ಮಾದರಿ ಆಗಿದ್ದಾರೆ.

Published On - 7:05 am, Mon, 18 July 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ