Kodi Mutt Seer Prediction: ಕೋಡಿಮಠದ ಶ್ರೀ ಹೊಸ ಭವಿಷ್ಯ – ಕರ್ನಾಟಕದಲ್ಲಿ ಒಂದು ಪಕ್ಷ ಮಾತ್ರ ಅಧಿಕಾರಕ್ಕೆ ಬರುತ್ತದೆ, ದೊಡ್ಡ ತಲೆಗಳು ಉರುಳುತ್ತವೆ

ಕೊರೊನಾ ಬಂದ್ರೂ ಕೂಡ ಅಂತಹ ತೊಂದರೆಯಾಗಲ್ಲ. ಸಂಕ್ರಾಂತಿ- ಯುಗಾದಿಯ ಬಳಿಕ ಮತ್ತೆ ಮಳೆಯಾಗುತ್ತದೆ. ಕಳೆದ ಬಾರಿ ಹೇಗೆ ಆಯಿತೋ ಹಾಗೆಯೇ ಆಗುತ್ತದೆ -ಕೋಡಿಮಠದ ಶ್ರೀ

Kodi Mutt Seer Prediction: ಕೋಡಿಮಠದ ಶ್ರೀ ಹೊಸ ಭವಿಷ್ಯ - ಕರ್ನಾಟಕದಲ್ಲಿ ಒಂದು ಪಕ್ಷ ಮಾತ್ರ ಅಧಿಕಾರಕ್ಕೆ ಬರುತ್ತದೆ, ದೊಡ್ಡ ತಲೆಗಳು ಉರುಳುತ್ತವೆ
ಕರ್ನಾಟಕದಲ್ಲಿ ಒಂದು ಪಕ್ಷ ಮಾತ್ರ ಅಧಿಕಾರಕ್ಕೆ ಬರುತ್ತದೆ - ಕೋಡಿಮಠದ ಶ್ರೀ ಹೊಸ ಭವಿಷ್ಯ
Follow us
TV9 Web
| Updated By: Digi Tech Desk

Updated on:Jan 13, 2023 | 6:08 PM

ವಿಜಯನಗರ: ಕೋಡಿಮಠದ ಶ್ರೀಗಳಿಗೆ (Kodi Mutt Seer Sri Shivananda Shivayogi Rajendra Swamiji) ಹೊಸಪೇಟೆಯಲ್ಲಿ ಭಕ್ತ ಕುಟುಂಬದವರು ಇಂದು ಶುಕ್ರವಾರ ಪಾದಪೂಜೆ ಮಾಡಿದ್ದಾರೆ. ಪಾದಪೂಜೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೋಡಿಮಠದ ಶ್ರೀ ಮಾರ್ಮಿಕವಾಗಿ ಭವಿಷ್ಯ (Prediction) ನುಡಿದಿದ್ದಾರೆ. ಒಲೆ ಹೊತ್ತಿ ಉರಿದರೆ ನಿಲ್ಲಬಹುದು, ಧರೆ ಹೊತ್ತಿ ಉರಿದರೆ ನಿಲ್ಲದು ಎಂದಿದ್ದಾರೆ. ಇದೇ ವರ್ಷ 2023ಕ್ಕೆ ಜಾಗತಿಕ ಮಟ್ಟದಲ್ಲಿ ಈ ರೀತಿಯ ಸಮಸ್ಯೆ ಎದುರಾಗಲಿದೆ. ಸಾಧು ಸಂತರಿಗೆ ಸಮಸ್ಯೆಯಾಗೋದಿದೆ. ಜಾಗತಿಕವಾಗಿ ಬಹಳ ದೊಡ್ಡ ಸಮಸ್ಯೆ ಕಾಡುತ್ತದೆ ಎಂದಿದ್ದಾರೆ. ವಿಜಯನಗರ ಜಿಲ್ಲೆ ಹೊಸಪೇಟೆಯ ಬಿಜೆಪಿ ನಾಯಕಿ ರಾಣಿ‌ ಸಂಯುಕ್ತ ಅವರ ನಿವಾಸದಲ್ಲಿ ಪಾದಪೂಜೆ ಸ್ವೀಕರಿಸಿದ ಬಳಿಕ ಶ್ರೀಗಳು (Kodi Mutt Seer) ಈ ಹೇಳಿಕೆ ನೀಡಿದ್ದಾರೆ.

ಇನ್ನು ರಾಜಕೀಯವಾಗಿಯೂ ಮಾತನಾಡಿರುವ ಕೋಡಿ ಶ್ರೀ ರಾಜ್ಯದಲ್ಲಿ ಒಂದು ಪಕ್ಷ ಮಾತ್ರ ಅಧಿಕಾರಕ್ಕೆ ಬರುತ್ತದೆ (Karnataka Assembly Elections 2023). ಸಮ್ಮಿಶ್ರ ಸರ್ಕಾರ ಅಧಿಕಾರ‌ ಮಾಡಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದು, ಎರಡ್ಮೂರು ದೊಡ್ಡ ದೊಡ್ಡ ತಲೆಗಳು ಉರುಳುತ್ತವೆ ಎಂದು ಭವಿಷ್ಯ ನುಡಿದಿದ್ದಾರೆ.

Kodi Mutt Seer another Prediction single party will come in to power in Karnataka Assembly Elections 2023

ಕೊರೊನಾ ಬಂದ್ರೂ ಕೂಡ ಅಂತಹ ತೊಂದರೆಯಾಗಲ್ಲ. ಸಂಕ್ರಾಂತಿ- ಯುಗಾದಿಯ ಬಳಿಕ ಮತ್ತೆ ಮಳೆಯಾಗುತ್ತದೆ. ಕಳೆದ ಬಾರಿ ಹೇಗೆ ಆಯಿತೋ ಹಾಗೆಯೇ ಆಗುತ್ತದೆ. ಸಂಕ್ರಾಂತಿಗೆ ಇನ್ನೂ ಎರಡು ದಿನಗಳಿವೆ, ಸಂಕ್ರಾಂತಿ ಭವಿಷ್ಯ, ಯುಗಾದಿ ಭವಿಷ್ಯ ಆ ಕಾಲಕ್ಕೆ ಹೇಳಬೇಕಿದೆ ಎಂದು ಕೋಡಿಮಠದ ಪೀಠಾಧ್ಯಕ್ಷ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಸದ್ಯದಲ್ಲೇ ಮತ್ತೊಂದು ಭವಿಷ್ಯ ನುಡಿಯುವ ಸೂಚನೆ ನೀಡಿದರು.

ಕಳೆದ ವರ್ಷ ಅಕ್ಟೋಬರ್​​ ತಿಂಗಳಲ್ಲಿ ಕೋಡಿಮಠದ ಪೀಠಾಧ್ಯಕ್ಷ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಈ ಭವಿಷ್ಯ ನುಡಿದಿದ್ದರು:

ಕಾರ್ತಿಕ ಮಾಸದಲ್ಲಿ ಕರ್ನಾಟಕಕ್ಕೆ ಕಂಟಕ, ಮುಂದಿನ ಯುಗಾದಿವರೆಗೆ ಹಲವು ಕಾಯಿಲೆಗಳ ತಾಂಡವವಾಡಲಿವೆ. ಕಾರ್ತಿಕ ಮಾಸದಲ್ಲಿ ತೊಂದರೆಯಾಗುವ ಲಕ್ಷಣವಿದೆ. ಮಳೆ, ರೋಗ, ಭೂಮಿಯಿಂದ ತೊಂದರೆಯಾಗುವ ಲಕ್ಷಣವಿದೆ ಎಂದು ಕೋಡಿ ಶ್ರೀ ಭವಿಷ್ಯ ಹೇಳಿದ್ದರು.

ಅದಕ್ಕೂ ಮುನ್ನ ಆಗಸ್ಟ್ ತಿಂಗಳಲ್ಲಿ ಕೋಡಿಮಠದ ಸ್ವಾಮೀಜಿ ಸ್ಫೋಟಕ ಭವಿಷ್ಯ ವಾಣಿ ನುಡಿದಿದ್ದರು. ಅದನ್ನು ನೆನಪಿಸಿಕೊಂಡು ಅಂದು ಮಾತನಾಡಿದ್ದ ಸ್ವಾಮೀಜಿ, 2022 ಸಂವತ್ಸರದ ಪ್ರಾರಂಭದಲ್ಲಿಯೇ ನಾನು ಭವಿಷ್ಯ ಹೇಳಿದ್ದೆ. ಮಳೆ, ಸಿಡಿಲು, ಬೆಂಕಿ ಕಾಟ, ಮತಾಂಧತೆ ಹೆಚ್ಚುತ್ತೆ, ಸಾವು-ನೋವು ಆಗುತ್ತೆ ಅಂತಾ ಹೇಳಿದ್ದೆ. ಜನ ಅಶಾಂತಿಯಿಂದ ಇರುತ್ತಾರೆ. ಭೂಮಿ ಕುಸಿಯುತ್ತೆ ಎಂದು ಹೇಳಿದ್ದೆ. ಈಗ ನಾವು ಹೇಳಿದಂತೆಯೇ ಆಗಿದೆ. ಇನ್ನು ಮುಂದೆಯೂ ಮಳೆ ಆಗುವ ಲಕ್ಷಣ ಇದೆ. ಕಾರ್ತಿಕ ಮಾಸದಲ್ಲಿ ತೊಂದರೆಯಾಗುವ ಲಕ್ಷಣವಿದೆ. ಮಳೆ, ರೋಗ, ಭೂಮಿಯಿಂದ ತೊಂದರೆಯಾಗೋ ಲಕ್ಷಣವಿದೆ ಎಂದು ಭವಿಷ್ಯ ನುಡಿದಿದ್ದಾರೆ. ಕಾಡಿನಿಂದ ನಾಡಿಗೆ ಪ್ರಾಣಿಗಳು ಹೆಚ್ಚಾಗಿ ಬರುತ್ತವೆ. ವಿಷಜಂತುಗಳು ಹೊರಗೆ ಬಂದು ತೊಂದರೆ ಕೊಡುತ್ತವೆ. ಪ್ರಕೃತಿಯಿಂದ ಅಲ್ಲೊಲ ಕಲ್ಲೋಲ ಆಗುತ್ತೆ. ರಾಜ್ಯಕ್ಕೆ ಒಂದು ಅವಘಡ ಆಗಲಿದೆ. ಅದನ್ನು ಕೂಡ ಕಾದು ನೋಡಿ. ಬೆಂಕಿಯಿಂದ ಹೆಚ್ಚೆಚ್ಚು ಸಮಸ್ಯೆ ಆಗಲಿದೆ. ಮತಾಂಧತೆ, ಜಾತೀಯತೆ, ಆಕ್ರೋಶ ಹೆಚ್ಚಾಗುತ್ತದೆ ಎನ್ನುವ ಮೂಲಕ ಕಾರ್ತಿಕ ಮಾಸದಲ್ಲಿ ಗಂಡಾಂತರ ಎದುರಾಗಲಿದೆ ಎಂದು ಎಚ್ಚರಿಸಿದ್ದರು.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 5:45 pm, Fri, 13 January 23

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ