Women’s Health: ಮುಟ್ಟಿನ ಸಮಯದಲ್ಲಿ ಚರ್ಮದಲ್ಲಾಗುವ ಬದಲಾವಣೆಯ ಬಗ್ಗೆ ತಿಳಿದುಕೊಳ್ಳಿ

ಮುಟ್ಟಿನ ಸಮಯದಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಾಕಷ್ಟು ಬದಲಾವಣೆಗಳು ಉಂಟಾಗುತ್ತದೆ. ಆದರೆ ಚರ್ಮದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ತಿಳಿದಿದೆಯೇ?

Women's Health: ಮುಟ್ಟಿನ ಸಮಯದಲ್ಲಿ ಚರ್ಮದಲ್ಲಾಗುವ ಬದಲಾವಣೆಯ ಬಗ್ಗೆ ತಿಳಿದುಕೊಳ್ಳಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷತಾ ವರ್ಕಾಡಿ

Updated on:Jan 15, 2023 | 10:58 AM

ಮುಟ್ಟಿನ ಸಮಯ(Menstrual Cycle) ದಲ್ಲಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಾಕಷ್ಟು ಬದಲಾವಣೆಗಳು ಉಂಟಾಗುತ್ತದೆ. ಆದರೆ ಚರ್ಮ(Skin)ದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ತಿಳಿದಿದೆಯೇ? ಮುಟ್ಟಿನ ಸಮಯದಲ್ಲಿ ನಿಮ್ಮ ಚರ್ಮದಲ್ಲಿ ಉಂಟಾಗುವ ಬದಲಾವಣೆಯ ಕುರಿತು ಆರೋಗ್ಯ ತಜ್ಞರಾದ ಡಾ ಗೀತಿಕಾ ಮಿತ್ತಲ್ ವಿವರಿಸುತ್ತಾರೆ.ಮುಟ್ಟಿನ ಸಮಯದಲ್ಲಿ ನಿಮ್ಮ ದೇಹದಲ್ಲಿ ಈಸ್ಟ್ರೊಜೆನ್ ಮಟ್ಟದಲ್ಲಿ ಬದಲಾವಣೆ ಉಂಟಾಗುತ್ತದೆ. ಇದು ನಿಮ್ಮ ಚರ್ಮದ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಎರಡು ರೀತಿಯಲ್ಲೂ ಪರಿಣಾಮ ಬೀರಬಹುದು.

ಈ ಸಮಯದಲ್ಲಿ ನಿಮ್ಮ ಚರ್ಮವು ತೇವಾಂಶವನ್ನು ಕಳೆದುಕೊಂಡಿರುತ್ತದೆ. ಇದರಿಂದಾಗಿ ಮೊಡವೆಗಳು ಕಂಡುಬರುತ್ತದೆ. ಆದ್ದರಿಂದ ನೀವು ಆ ಸಮಯದಲ್ಲಿ ಯಾವ ರೀತಿಯ ಆಹಾರ ಕ್ರಮಗಳನ್ನು ತೆಗೆದುಕೊಳ್ಳುತ್ತೀರಿ ಎಂಬುದು ಅತ್ಯಂತ ಮುಖ್ಯವಾಗಿರುತ್ತದೆ. ಈ ಸಮಯದಲ್ಲಿ ಆದಷ್ಟು ದೇಹಕ್ಕೆ ತಂಪು ನೀಡುವ ಆಹಾರವನ್ನು ತೆಗೆದುಕೊಳ್ಳಿ ಎಂದು ಇವರು ಸಲಹೆ ನೀಡುತ್ತಾರೆ.

ಋತುಸ್ರಾವದ ಅವಧಿಗಳು ಕೇವಲ ಹೊಟ್ಟೆ ನೋವು ಮಾತ್ರವಲ್ಲದೇ, ಹಾರ್ಮೋನುಗಳ ಅಸಮತೋಲನ, ಮನಸ್ಥಿತಿ ಬದಲಾವಣೆಗಳು, ತೀವ್ರವಾದ ಆಹಾರದ ಕಡುಬಯಕೆಗಳು ಮತ್ತು ಚರ್ಮದಲ್ಲಿನ ಬದಲಾವಣೆಗಳನ್ನು ಕಾಣಬಹುದು. ನಿಮ್ಮ ತ್ವಚೆಯಲ್ಲಿ ಉಂಟಾಗುವ ಬದಲಾವಣೆಯ ಬಗ್ಗೆ ಸಾಕಷ್ಟು ಜನರಿಗೆ ತಿಳಿದಿಲ್ಲ. ಇಂತಹ ಬದಲಾವಣೆಗೆ ಪ್ರಮುಖ ಕಾರಣವೆಂದರೆ ಈಸ್ಟ್ರೊಜೆನ್ ಮಟ್ಟದಲ್ಲಿನ ಬದಲಾವಣೆ.

ಇದನ್ನೂ ಓದಿ: ಭಾರತದ ಗರ್ಭಕಂಠದ ಕ್ಯಾನ್ಸರ್ ಲಸಿಕೆ ಮಹಿಳೆಯರನ್ನು ರಕ್ಷಿಸಬಹುದೇ?

ಮುಟ್ಟಿನ ಸಮಯದಲ್ಲಿನ ಚರ್ಮದ ಬದಲಾವಣೆಗಳು:

  • ಮುಟ್ಟಿನ ಸಮಯದ ಮೊದಲ ಆರು ದಿನಗಳು ಹಾರ್ಮೋನ್ ಮಟ್ಟದಲ್ಲಿನ ಕುಸಿತದಿಂದಾಗಿ ಚರ್ಮವು ಶುಷ್ಕ ಮತ್ತು ಮಂದವಾಗುತ್ತದೆ. ಚರ್ಮವನ್ನು ಹೈಡ್ರೇಟ್ ಮತ್ತು ಕಾಂತಿಯುತವಾಗಿರಿಸಲು ಹೈಲುರಾನಿಕ್ ಆಮ್ಲ ಮತ್ತು ಸಮೃದ್ಧವಾದ ಮಾಯಿಶ್ಚರೈಸರ್, ಜೊತೆಗೆ ದೇಹಕ್ಕೆ ತಂಪು ನೀಡುವ ಆಹಾರವನ್ನು ಸೇವಿಸಿ ಎಂದು ತಜ್ಞರು ಸಲಹೆ ನೀಡುತ್ತಾರೆ.
  • ನಂತರದ 7 ರಿಂದ 11 ದಿನಗಳಲ್ಲಿ ಈಸ್ಟ್ರೊಜೆನ್ ಉತ್ಪಾದನೆಯ ಮಟ್ಟವು ಹೆಚ್ಚಾಗುತ್ತದೆ. ಆದ್ದರಿಂದ ಈ ಸಮಯದಲ್ಲಿ ನಿಮ್ಮ ತ್ವಚೆಯ ಕಾಂತಿಯನ್ನು ಕಾಪಾಡಲು ಎಫ್ಫೋಲಿಯೇಟ್ ಮಾಡಬೇಕು ಎಂದು ಮಿತ್ತಲ್ ಹೇಳುತ್ತಾರೆ.
  • 12 ರಿಂದ 16 ನೇ ದಿನದಗಳಲ್ಲಿ ಈಸ್ಟ್ರೊಜೆನ್ ಉತ್ಪಾದನೆಯ ಮಟ್ಟ ಇನ್ನಷ್ಟು ಅಧಿಕವಾಗುತ್ತದೆ. ಇದು ಚರ್ಮವನ್ನು ಹೊಳೆಯುವಂತೆ ಮತ್ತು ಕಾಂತಿಯುತವಾಗಿರುವಂತೆ ಮಾಡುತ್ತದೆ.
  • ನಂತರದ 17 ರಿಂದ 24ಗಳ ನಡುವಿನಲ್ಲಿ ಪ್ರೊಜೆಸ್ಟರಾನ್ ಮಟ್ಟವು ಹೆಚ್ಚಾಗುತ್ತದೆ. ಇದು ತ್ವಚೆಯ ಮೇಲಿನ ರಂಧ್ರಗಳನ್ನು ಮುಚ್ಚಿಹಾಕುತ್ತದೆ. ಜೊತೆಗೆ ತ್ವಚೆಯೂ ಎಣ್ಣೆಯುಕ್ತವಾಗುತ್ತವೆ. ಆದ್ದರಿಂದ ಈ ಸಮಯದಲ್ಲಿ ಮುಲ್ತಾನಿ ಮಿಟ್ಟಿಯಂತಹ ಫೇಸ್ ಪ್ಯಾಕ್​ಗಳನ್ನು ಬಳಸಿ ಎಂದು ಸಲಹೆ ನೀಡುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 10:58 am, Sun, 15 January 23