Benefits of Essential Oils: ಮುಟ್ಟಿನ ಸಮಯದ ಬೆನ್ನು ನೋವು, ಮೈಗ್ರೇನ್‌ ಸಮಸ್ಯೆಗೆ ಮನೆಮದ್ದುಇಲ್ಲಿದೆ

ಮುಟ್ಟಿನ ಸಮಯದಲ್ಲಿ ಹೊಟ್ಟೆಯ ಸೆಳೆತ, ಸಾಕಷ್ಟು ಕಿರಿ ಕಿರಿಯ ಅನುಭವ, ಆತಂಕ, ಬೆನ್ನು ನೋವು, ಮೈಗ್ರೇನ್‌ಗಳವರೆಗೆ ಸಾಕಷ್ಟು ಆರೋಗ್ಯದ ಸಮಸ್ಯೆಗಳು ಇರುತ್ತದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಇಲ್ಲಿವೆ.

Benefits of Essential Oils: ಮುಟ್ಟಿನ ಸಮಯದ ಬೆನ್ನು ನೋವು, ಮೈಗ್ರೇನ್‌ ಸಮಸ್ಯೆಗೆ ಮನೆಮದ್ದುಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
ಅಕ್ಷತಾ ವರ್ಕಾಡಿ
|

Updated on:Feb 25, 2023 | 2:14 PM

ಮುಟ್ಟಿನ ಸಮಯದಲ್ಲಿ ಹೊಟ್ಟೆಯ ಸೆಳೆತ, ಸಾಕಷ್ಟು ಕಿರಿ ಕಿರಿಯ ಅನುಭವ, ಆತಂಕ, ಬೆನ್ನು ನೋವು, ಮೈಗ್ರೇನ್‌ಗಳವರೆಗೆ ಸಾಕಷ್ಟು ಆರೋಗ್ಯದ ಸಮಸ್ಯೆಗಳು ಇರುತ್ತದೆ. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಇಲ್ಲಿವೆ. ಮುಟ್ಟಿನ ಸಮಸ್ಯೆಗೆ ಕೆಲವೊಂದಿಷ್ಟು ಆರೋಗ್ಯಕರ ಎಣ್ಣೆಯಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ. ಸಾರಯುಕ್ತ ತೈಲಗಳು ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದಂತೆ ಅಗ್ರಸ್ಥಾನದಲ್ಲಿದೆ. ಈ ತೈಲಗಳು ಮುಟ್ಟಿನ ಸಮಯದ ಸೆಳೆತಗಳನ್ನು ಕಡಿಮೆ ಮಾಡಲು ಮತ್ತು ಇದರ ಸುವಾಸನೆಯಿಂದ ಮಾನಸಿಕವಾಗಿ ಆರೋಗ್ಯವಾಗಿರಲು ಸಹಾಯಕವಾಗಿದೆ.

ಮುಟ್ಟಿನ ಸಮಯದ ಸಮಸ್ಯೆಯನ್ನು ಶಮನಗೊಳಿಸುವ ತೈಲಗಳು ಈ ಕೆಳಗಿನಂತಿವೆ:

ತುಳಸಿ ಎಣ್ಣೆ:

ತುಳಸಿಯಿಂದ ಸಾಕಷ್ಟು ಪ್ರಯೋಜನಗಳಿವೆ ಎಂಬುದು ಈಗಾಗಲೇ ನಿಮಗೆ ತಿಳಿದಿರುವ ವಿಷಯ. ಆದರೆ ತುಳಸಿ ಎಣ್ಣೆ ಮುಟ್ಟಿನ ಸಮಯದಲ್ಲಿ ಯಾವ ರೀತಿ ಸಹಾಯಕವಾಗಿದೆ ಎಂದು ನಿಮಗೆ ತಿಳಿದಿದೆಯೇ? ತುಳಸಿ ಎಣ್ಣೆಯೂ ಮುಟ್ಟಿನ ಸಮಯದಲ್ಲಿ ಕಂಡುಬರುವ ಮೈಗ್ರೇನ್‌ನಂತಹ ಸಮಸ್ಯೆಗಳನ್ನು ನಿವಾರಿಸಲು ಸಹಾಯಕವಾಗಿದೆ. ಜೊತೆಗೆ ಈ ಸಮಯದಲ್ಲಿ ನಿಮ್ಮ ದಣಿದ ಮತ್ತು ಒತ್ತಡದ ಸ್ನಾಯುಗಳಿಗೆ ಈ ತುಳಸಿ ಎಣ್ಣೆಯು ಸಾಕಷ್ಟು ವಿಶ್ರಾಂತಿಯ ಅನುಭವವನ್ನು ನೀಡುತ್ತದೆ.

ಲ್ಯಾವೆಂಡರ್ ಎಣ್ಣೆ:

ಸುವಾಸನೆಯಿಂದ ಕೂಡಿರುವ ಲ್ಯಾವೆಂಡರ್ ಎಣ್ಣೆಯು ಉರಿಯೂತಕ್ಕೆ ಸಹಾಯ ಮಾಡುತ್ತದೆ ನಿಮಗೆ ವಿಶ್ರಾಂತಿಯ ಅನುಭವವನ್ನು ನೀಡುತ್ತದೆ. ಜೊತೆಗೆ ಶಿಲೀಂಧ್ರ ಸೋಂಕುಗಳು ಮತ್ತು ಮುಟ್ಟಿನ ಸೆಳೆತಗಳಿಗೆ ಚಿಕಿತ್ಸೆ ನೀಡುತ್ತದೆ. ಇದು ನರಗಳನ್ನು ಶಾಂತಗೊಳಿಸಲು ಸಹ ಸಹಾಯ ಮಾಡುತ್ತದೆ. ಇದರ ಸುವಾಸನೆಯೂ ನಿಮ್ಮನ್ನು ಮುಟ್ಟಿನ ಸಮಯದಲ್ಲಿನ ಕಿರಿ ಕಿರಿಯಿಂದ ಮುಕ್ತಿ ನೀಡುತ್ತದೆ.

ಶ್ರೀಗಂಧದ ಎಣ್ಣೆ:

ಇದು ಸುಗಂಧ ದ್ರವ್ಯಗಳು ಮತ್ತು ಏರ್ ಫ್ರೆಶ್ನರ್​​ಗಳನ್ನು ತಯಾರಿಸಲು ಮಾತ್ರವಲ್ಲದೆ ಔಷಧೀಯ ಗುಣಗಳನ್ನು ಹೊಂದಿದೆ. ಇದು ನೆಗಡಿ, ಮೂತ್ರನಾಳದ ಸೋಂಕು, ಜೀರ್ಣಾಂಗವ್ಯೂಹದ ಸಮಸ್ಯೆಗಳು, ಮುಟ್ಟಿನ ಸಮಯದ ಸ್ನಾಯುಗಳ ಸಮಸ್ಯೆ ಇತ್ಯಾದಿಗಳನ್ನು ಗುಣಪಡಿಸುತ್ತದೆ.

ಇದನ್ನೂ ಓದಿ: ಮಹಿಳೆಯರು ಯಾಕೆ ಹೆಚ್ಚು ಥೈರಾಯ್ಡ್ ಅಸ್ವಸ್ಥತೆಗೆ ಒಳಗಾಗುತ್ತಾರೆ?

ಪುದೀನಾ ಎಣ್ಣೆ:

ಮುಟ್ಟಿನ ಸಮಯದಲ್ಲಿ ದೇಹಕ್ಕೆ ತಂಪಾಗಿಸುವ ಸಂವೇದನೆಯು ಅಗತ್ಯವಾಗಿರುತ್ತದೆ. ಆ ಸಮಯದಲ್ಲಿ ಪುದೀನಾ ಎಣ್ಣೆಯು ಅತ್ಯಂತ ಪ್ರಯೋಜನಕಾರಿಯಾಗಿದೆ. ಇದು ನೈಸರ್ಗಿಕ ಶಕ್ತಿಯ ವರ್ಧಕವನ್ನು ನೀಡುತ್ತದೆ ಮತ್ತು ನಿಮ್ಮ ಸ್ನಾಯುಗಳು ಮತ್ತು ನರಗಳಿಗೆ ವಿಶ್ರಾಂತಿ ನೀಡುತ್ತದೆ. ಜೊತೆಗೆ ತಲೆನೋವಿನ ವಿರುದ್ಧವೂ ಪರಿಣಾಮಕಾರಿಯಾಗಿದೆ.

ರೋಸ್ ಆಯಿಲ್:

ಅದರ ಸುಂದರವಾದ ಸುಗಂಧದ ಹೊರತಾಗಿ, ಗುಲಾಬಿ ಹೂವಿನಿಂದ ತಯಾರಿಸಲಾಗುವ ಎಣ್ಣೆಯು ನಿಮ್ಮ ಸ್ವಯಂ-ಆರೈಕೆ ಅವಧಿಯನ್ನು ಪ್ರಾರಂಭಿಸಲು ಅತ್ಯುತ್ತಮವಾಗಿದೆ. ಇದು ನಿಮ್ಮ ಚರ್ಮವನ್ನು ಶಮನಗೊಳಿಸಲು ಮತ್ತು ಶಾಂತಗೊಳಿಸಲು ಸಹಾಯ ಮಾಡುತ್ತದೆ ಮತ್ತು ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ.

ಶುಂಠಿ ಎಣ್ಣೆ:

ನೀವು ಸ್ನಾಯು ಸೆಳೆತವನ್ನು ಎದುರಿಸುತ್ತಿದ್ದರೆ, ಶುಂಠಿ ಎಣ್ಣೆಯು ಅದನ್ನು ನಿಭಾಯಿಸಲು ಉತ್ತಮ ಮಾರ್ಗವಾಗಿದೆ. ಇದು ಆತಂಕವನ್ನು ನಿವಾರಿಸುತ್ತದೆ ಮತ್ತು ಉರಿಯೂತದ ಚಿಕಿತ್ಸೆಯಲ್ಲಿ ಸಹಾಯ ಮಾಡುತ್ತದೆ.

ಇದನ್ನೂ ಓದಿ: ಪ್ರತಿ ಮಹಿಳೆಯೂ ಕರುಳಿನ ಆರೋಗ್ಯಕ್ಕೆ ಹೆಚ್ಚು ಒತ್ತು ಕೊಡಲೇಬೇಕು, ತಜ್ಞರು ಈ ಕುರಿತು ಹೇಳುವುದೇನು?

ಟೀ ಟ್ರೀ ಆಯಿಲ್:

ಹಲವಾರು ಔಷಧೀಯ ಗುಣಗಳನ್ನು ಹೊಂದಿರುವ ಟೀ ಟ್ರೀ ಆಯಿಲ್, ಆಸ್ಟ್ರೇಲಿಯಾದಲ್ಲಿ ಬೆಳೆಯುವ ಮೆಲಲಿಯುಕಾ ಆಲ್ಟರ್ನಿಫೋಲಿಯಾ ಎಂಬ ಜಾತಿಯ ಮರದ ಎಲೆಗಳಿಂದ ತಯಾರಿಸಲಾಗುತ್ತದೆ. ಇದು ಆರೋಗ್ಯಕರ ಮತ್ತು ಸ್ಪಷ್ಟ ಚರ್ಮವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಮತ್ತು ಅಲರ್ಜಿಗಳು ಮತ್ತು ಉಸಿರಾಟದ ಸಮಸ್ಯೆಗಳನ್ನು ಎದುರಿಸಲು ಉತ್ತಮ ಮಾರ್ಗವಾಗಿದೆ. ಮುಟ್ಟಿನ ಸಮಯದಲ್ಲಿ ಕೆಲವೊಬ್ಬರಿಗೆ ಅಲರ್ಜಿಗಳು ಕಂಡುಬರುತ್ತದೆ. ಅಂತಹ ಸಮಸ್ಯೆಗಳಿಗೆ ಇದು ಉತ್ತಮ ಔಷಧಿಯಾಗಿದೆ.

ಕ್ಲಾರಿ ಸೇಜ್ ಆಯಿಲ್:

ಮೆಡಿಟರೇನಿಯನ್ ಜಲಾನಯನ ಪ್ರದೇಶಕ್ಕೆ ಸ್ಥಳೀಯವಾಗಿ ಹೂಬಿಡುವ ಸಸ್ಯಗಳ ಎಲೆಗಳು ಮತ್ತು ಮೊಗ್ಗುಗಳಿಂದ ಈ ಎಣ್ಣೆಯನ್ನು ತಯಾರಿಸಲಾಗುತ್ತದೆ.ಈ ಎಣ್ಣೆಯು ಹಾರ್ಮೋನ್ ಸಮತೋಲನದಲ್ಲಿಡಲು ಸಹಾಯ ಮಾಡುತ್ತದೆ. ಜೊತೆಗೆ ನರಗಳನ್ನು ಶಾಂತಗೊಳಿಸುವಲ್ಲಿ ಪರಿಣಾಮಕಾರಿಯಾಗಿದೆ. ಇದು ಒತ್ತಡ ಮತ್ತು ಜೀರ್ಣಕ್ರಿಯೆಯನ್ನು ನಿಭಾಯಿಸಲು ಸಹಾಯಕವಾಗಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: 

Published On - 6:42 pm, Wed, 11 January 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ