Osteoporosis Symptoms: ಮುಟ್ಟಿನ ಸಮಯದಲ್ಲಿ ನಿಮಗೆ ಗೊತ್ತಿಲ್ಲದೆ ಈ ಲಕ್ಷಣ ಕಂಡುಬರಬಹುದು, ಎಚ್ಚರ ವೈದ್ಯರ ಈ ಸಲಹೆ ಪಾಲಿಸಿ

ಋತುಚಕ್ರದ ಸಂದರ್ಭದಲ್ಲಿ ಮಹಿಳೆಯಲ್ಲಿ ಈಸ್ಟ್ರೋಜೆನ್ ಮಟ್ಟ ಕಡಿಮೆಯಾಗುತ್ತಿದೆ ಎಂದು ಸೂಚಿಸುತ್ತದೆ. ಆದರೆ ನೀವು ಕಡಿಮೆ ಈಸ್ಟ್ರೋಜೆನ್ ಮಟ್ಟಗಳಿಗೆ ಒಡ್ಡಿಕೊಂಡರೆ, ನಿಮ್ಮ ಓಸ್ಟಿಯೋಪೊರೋಸಿಸ್ (ಅಸ್ಥಿ ರಂದ್ರತೆ) ಅಪಾಯ ಹೆಚ್ಚಾಗುತ್ತದೆ.

Osteoporosis Symptoms: ಮುಟ್ಟಿನ ಸಮಯದಲ್ಲಿ ನಿಮಗೆ ಗೊತ್ತಿಲ್ಲದೆ ಈ ಲಕ್ಷಣ ಕಂಡುಬರಬಹುದು, ಎಚ್ಚರ ವೈದ್ಯರ ಈ ಸಲಹೆ ಪಾಲಿಸಿ
ಸಾಂದರ್ಭಿಕ ಚಿತ್ರ Image Credit source: google image
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Jan 06, 2023 | 5:10 PM

ಋತುಚಕ್ರದ ಸಂದರ್ಭದಲ್ಲಿ ಮಹಿಳೆಯಲ್ಲಿ ಈಸ್ಟ್ರೋಜೆನ್ (Estrogen) ಮಟ್ಟ ಕಡಿಮೆಯಾಗುತ್ತಿದೆ ಎಂದು ಸೂಚಿಸುತ್ತದೆ. ಆದರೆ ನೀವು ಕಡಿಮೆ ಈಸ್ಟ್ರೋಜೆನ್ ಮಟ್ಟಗಳಿಗೆ ಒಡ್ಡಿಕೊಂಡರೆ, ನಿಮ್ಮ ಓಸ್ಟಿಯೋಪೊರೋಸಿಸ್ (Osteoporosis) (ಅಸ್ಥಿ ರಂದ್ರತೆ) ಅಪಾಯ ಹೆಚ್ಚಾಗುತ್ತದೆ. ಋತುಬಂಧಕ್ಕೊಳಗಾದಾಗಿನ ಓಸ್ಟಿಯೋಪೊರೋಸಿಸ್‍ನ ಕಾರಣಗಳು, ಲಕ್ಷಣಗಳು ಮತ್ತು ಅದರ ಚಿಕಿತ್ಸೆಯ ಬಗ್ಗೆ ತಿಳಿದುಕೊಳ್ಳೋಣಾ. ಋತುಬಂಧಕ್ಕೊಳಗಾದ ಮಹಿಳೆಯರಲ್ಲಿ ಓಸ್ಟಿಯೋಪೊರೋಸಿಸ್ ಸಾಮಾನ್ಯ ಘಟನೆ ಎಂದು ನಿಮಗೆ ತಿಳಿದಿದೆಯೇ? ಪ್ರತಿಯೊಬ್ಬ ಮಹಿಳೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಮತ್ತು ತನ್ನ ಮೂಳೆಗಳ ಬಗ್ಗೆ ಕಾಳಜಿ ವಹಿಸುವುದು ಕಡ್ಡಾಯವಾಗಿದೆ. ಏಕೆಂದರೆ ಹಾಗೆ ಮಾಡದಿದ್ದರೆ ನೀವು ತೊಂದರೆಗೆ ಸಿಲುಕಬಹುದು. ಓಸ್ಟಿಯೋಪೊರೋಸಿಸ್‍ನ್ನು ಮೂಳೆಗಳನ್ನು ದುರ್ಬಲಗೊಳಿಸುವ ಮತ್ತು ಮುರಿತದ ಸಾಧ್ಯತೆಯನ್ನು ಹೆಚ್ಚಿಸುವ ಕಾಯಿಲೆ ಎಂದು ಕರೆಯಬಹುದು.

ನವ ಮುಂಬಯಿಯ ಮೆಡಿಕೋವರ್ ಆಸ್ಪತ್ರೆಗಳ ಪ್ರಸೂತಿ ಸಲಹೆಗಾರ ಹಾಗೂ ಸ್ತ್ರೀ ರೋಗ ತಜ್ಞರಾದ ಡಾ. ಅನು ವಿಜ್ ಹೇಳುವಂತೆ ‘ಓಸ್ಟಿಯೋಪೊರೋಸಿಸ್ ಎಂದರೆ ಸರಂಧ್ರ ಮೂಳೆ. ಇದು ಮೂಳೆಯ ದ್ರವ್ಯರಾಶಿ ಮತ್ತು ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಯಾವುದೇ ರೋಗಲಕ್ಷಣಗಳು ಅಥವಾ ನೋವುಗಳಿಲ್ಲದೆ ಈ ಸ್ಥಿತಿಯು ಮುಂದುವರಿಯುತ್ತದೆ. ಬಹುತೇಕ ಬಾರಿ ಮೂಳೆಗಳು ಬೆನ್ನು ಅಥವಾ ಸೊಂಟದ ಭಾಗದಲ್ಲಿ ನೋವಿನ ಮುರಿತಗಳಿಗೆ ಕಾರಣವಾದಾಗ ಈ ಸ್ಥಿತಿಯನ್ನು ತಡವಾಗಿ ಕಂಡುಹಿಡಿಯಲಾಗುತ್ತದೆ. ದುರಾದೃಷ್ಟವತ್ ಒಮ್ಮೆ ಓಸ್ಟಿಯೋಪೊರೋಸಿಸ್‍ನಿಂದ ಮೂಳೆ ಮುರಿದರೆ ಇದು ಹೆಚ್ಚಿನ ಅಪಾಯವನ್ನು ತರುವ ಸಾಧ್ಯತೆಯಿರುತ್ತದೆ. ಇದು ನಿಮ್ಮ ಒಟ್ಟಾರೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಮತ್ತು ಜೀವನ ಗುಣಮಟ್ಟವನ್ನು ಕಡಿಮೆ ಮಾಡಬಹುದು.

ಇದನ್ನು ಓದಿ:Eye health tips: ಕಣ್ಣಿನ ಯಾವುದೇ ಸಮಸ್ಯೆ ಮಧುಮೇಹದ ಲಕ್ಷಣವಾಗಿರಬಹುದು; ಇದನ್ನು ತಡೆಗಟ್ಟುವ ವಿಧಾನಗಳು ಇಲ್ಲಿವೆ

ವಯಸ್ಸಾಗುವಿಕೆಯ ಪ್ರಕ್ರಿಯೆಯಲ್ಲಿ ಮೂಳೆಯ ಸ್ಥಗಿತವು ಮೂಳೆಯ ರಚನೆಯನ್ನು ಮೀರಲು ಪ್ರಾರಂಭಿಸುತ್ತದೆ, ಮೂಳೆ ದ್ರವ್ಯರಾಶಿಯನ್ನು ಕಳೆದುಕೊಳ್ಳುವ ಅಪಾಯವನ್ನು ಉಂಟುಮಾಡುತ್ತದೆ. ಈ ಮೂಳೆಯ ನಷ್ಟವು ಒಂದು ನಿರ್ದಿಷ್ಟ ಹಂತವನ್ನು ತಲುಪಿದ ನಂತರ ಮಹಿಳೆಗೆ ಓಸ್ಟಿಯೋಪೊರೋಸಿಸ್ ಇದೆ ಎಂಬುವುದು ಕಂಡುಬರುತ್ತದೆ. ಇದಲ್ಲದೆ ಋತುಬಂಧಕ್ಕೊಳಗಾದ ಸುಮಾರು 50%ನಷ್ಟು ಜನರು ಓಸ್ಟಿಯೋಪೊರೋಸಿಸ್ ಹೊಂದಿರುತ್ತಾರೆ ಮತ್ತು ಋತುಬಂಧವು ಓಸ್ಟಿಯೋಪೊರೋಸಿಸ್‍ಗೆ ಸಾಮಾನ್ಯ ಕಾರಣವಾಗಿದೆ.

ಋತುಬಂಧ ಮತ್ತು ಓಸ್ಟಿಯೋಪೊರೋಸಿಸ್ ನಡುವಿನ ಸಂಬಂಧವನ್ನು ಡಿಕೋಡ್ ಮಾಡುತ್ತಾ, ಆರೋಗ್ಯ ತಜ್ಞರು ಹೇಳುತ್ತಾರೆ. ಋತುಬಂಧವು ಮುಟ್ಟನ್ನು ಹೊಂದಿಲ್ಲ. ಋತುಚಕ್ರದ ಅಂತ್ಯವು ಮಹಿಳೆಯ ಈಸ್ಟ್ರೋಜೆನ್ ಮಟ್ಟವು ಕಡಿಮೆಯಾಗುತ್ತಿದೆ ಎಂದು ಸೂಚಿಸುತ್ತದೆ. ಏಕೆಂದರೆ ಅವರ ಅಂಡಾಶಯಗಳು ಋತುಚಕ್ರವನ್ನು ಉತ್ತೇಜಿಸಲು ಈಸ್ಟ್ರೋಜೆನ್‍ನ್ನು ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಈಸ್ಟ್ರೋಜೆನ್ ಒಂದು ಹಾರ್ಮೋನ್ ಆಗಿದ್ದು, ಅದು ಮೂಳೆಯ ಬಲವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮತ್ತು ಮೂಳೆಗಳು ಹೊಡೆಯುವುದನ್ನು ನಿಧಾನಗೊಳಿಸುತ್ತದೆ. ನೀವು ಕಡಿಮೆ ಕಡಿಮೆ ಈಸ್ಟ್ರೋಜೆನ್ ಮಟ್ಟಗಳಿಗೆ ಒಡ್ಡಿಕೊಂಡತೆ ನಿಮ್ಮ ಓಸ್ಟಿಯೋಪೊರೋಸಿಸ್ ಅಪಾಯವು ಹೆಚ್ಚಾಗುತ್ತದೆ.

ಅತಿಯಾದ ಆಲ್ಕೋಹಾಲ್ ಸೇವನೆ, ಸಿಗರೇಟ್ ಸೇವನೆ ಕುಟುಂಬದ ಇತಿಹಾಸ ಮತ್ತು ಕೆಲವು ಔಷಧಿಗಳನ್ನು ತೆಗೆದುಕೊಳ್ಳುವುದರಿಂದ ಇವು ಮೂಳೆಯ ಮೇಲೆ ಪರಿಣಾಮ ಬೀರುತ್ತವೆ ಮತ್ತು ಮೂಳೆ ನಷ್ಟವನ್ನು ಉಂಟು ಮಾಡುತ್ತವೆ. ಇದಲ್ಲದೆ ಸಂಧಿವಾತ, ಹೈಪರ್ಪ್ಯಾರಾಥೈರಾಯ್ಡಿಸಮ್ ಮತ್ತು ಮಧುಮೇಹ ಮೆಲ್ಲಿಟಸ್ ಸಹ ಓಸ್ಟಿಯೋಪೊರೋಸಿಸ್‍ನ್ನು ಆಹ್ವಾನಿಸುತ್ತದೆ ಎಂದು ಡಾ. ಅನು ವಿಜ್ ಹೇಳುತ್ತಾರೆ.

ಓಸ್ಟಿಯೋಪೊರೋಸಿಸ್‍ನ್ನು ನಿರ್ವಹಿಸಲು ಜೀವನಶೈಲಿಯ ಬದಲಾವಣೆ ಮಾಡಬೇಕಾಗುತ್ತದೆ. ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಹೊಂದಿರುವ ಆಹಾರವನ್ನು ತೆಗೆದುಕೊಳ್ಳಬೇಕು. ಡೈರಿ ಉತ್ಪನ್ನಗಳು, ಬಾದಮಿ, ತೋಫು, ಕಿತ್ತಳೆ ರಸ ಮತ್ತು ಧಾನ್ಯಗಳಂತಹ ಕ್ಯಾಲ್ಸಿಯಂ ಒಳಗೊಂಡಿರುವ ಆಹಾರವನ್ನು ಸೇವಿಸಬೇಕು. ವಿಟಮಿನ್ ಡಿ ಭರಿತ ಆಹಾರಗಳಾದ ಸಾಲ್ಮನ್, ಟ್ಯೂನ, ಸಾರ್ಡೀನ್ ಮೀನುಗಳು ಮತ್ತು ಮೊಟ್ಟೆಯ ಹಳದಿಯನ್ನು ಸೇವಿಸಬೇಕು. ಮೂಳೆಯನ್ನು ಬಲಪಡಿಸುವ ವ್ಯಾಯಾಮವನ್ನು ಮಾಡಬೇಕು ಹಾಗೂ ಧೂಪಪಾನ ಮದ್ಯಪಾನದಿಂದ ದೂರವಿರಬೇಕು. ಆರೋಗ್ಯಕರ ಜೀವನ ಶೈಲಿಯನ್ನು ಪಾಲಿಸಬೇಕು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:09 pm, Fri, 6 January 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ