Brain Stroke: ಚಳಿಗಾಲದಲ್ಲಿ ಶೇ.30ರಷ್ಟು ಹೆಚ್ಚಾದ ಬ್ರೈನ್ ಸ್ಟ್ರೋಕ್ ಪ್ರಕರಣಗಳು: ಯಾರ್ಯಾರಿಗೆ ಅಪಾಯ, ಲಕ್ಷಣಗಳೇನು ತಿಳಿಯಿರಿ

ಚಳಿಗಾಲದಲ್ಲಿ ಬ್ರೈನ್ ಸ್ಟ್ರೋಕ್ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ. ಈ ಬಾರಿಯ ದಾಖಲೆಯ ಚಳಿಯಿಂದಾಗಿ ಬ್ರೈನ್ ಸ್ಟ್ರೋಕ್ ಪ್ರಕರಣಗಳು ಶೇಕಡಾ 30 ರಷ್ಟು ಹೆಚ್ಚಾಗಿದೆ.

Brain Stroke: ಚಳಿಗಾಲದಲ್ಲಿ ಶೇ.30ರಷ್ಟು ಹೆಚ್ಚಾದ ಬ್ರೈನ್ ಸ್ಟ್ರೋಕ್ ಪ್ರಕರಣಗಳು: ಯಾರ್ಯಾರಿಗೆ ಅಪಾಯ, ಲಕ್ಷಣಗಳೇನು ತಿಳಿಯಿರಿ
ಬ್ರೈನ್ ಸ್ಟ್ರೋಕ್
Follow us
TV9 Web
| Updated By: ನಯನಾ ರಾಜೀವ್

Updated on: Jan 12, 2023 | 10:58 AM

ಚಳಿಗಾಲದಲ್ಲಿ ಬ್ರೈನ್ ಸ್ಟ್ರೋಕ್ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ. ಈ ಬಾರಿಯ ದಾಖಲೆಯ ಚಳಿಯಿಂದಾಗಿ ಬ್ರೈನ್ ಸ್ಟ್ರೋಕ್ ಪ್ರಕರಣಗಳು ಶೇಕಡಾ 30 ರಷ್ಟು ಹೆಚ್ಚಾಗಿದೆ. RIMS ನ ನ್ಯೂರೋ ಸರ್ಜರಿ ವಿಭಾಗದಲ್ಲಿ, ಶೀತದಿಂದ ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಹೆಚ್ಚುತ್ತಿರುವ ಚಳಿಯಲ್ಲಿ ರಕ್ತದೊತ್ತಡ ಹೆಚ್ಚಾಗುವ ಬಹುದೊಡ್ಡ ಸಮಸ್ಯೆ ತಲೆದೋರಿದೆ. ಇದರಿಂದಾಗಿ ವೃದ್ಧರು ಹಾಗೂ ಯುವಕರಲ್ಲಿ ಈ ಸಮಸ್ಯೆ ಕಂಡು ಬರುತ್ತಿದೆ.

ಅಧಿಕ ಬಿಪಿ ಇರುವ ರೋಗಿಗಳು ಚಳಿಗಾಲದಲ್ಲಿ ಹೆಚ್ಚು ಜಾಗರೂಕರಾಗಿರಬೇಕು ನ್ಯೂರೋ ಸರ್ಜರಿಯ ಎಚ್‌ಒಡಿ ಡಾ.ಅನಿಲ್ ಕುಮಾರ್, ರಕ್ತದೊತ್ತಡ ಹೊಂದಿರುವ ರೋಗಿಗಳು ಶೀತದಲ್ಲಿ ಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತಾರೆ. ಇದರಲ್ಲೂ ಬಿಪಿ ಔಷಧಿಯನ್ನು ಮಧ್ಯದಲ್ಲೇ ಬಿಟ್ಟ ರೋಗಿಗಳು ಪಾರ್ಶ್ವವಾಯುವಿಗೆ ತುತ್ತಾಗುವ ಪ್ರಮಾಣ ಗಣನೀಯವಾಗಿ ಹೆಚ್ಚುತ್ತದೆ. ಈ ಸಮಸ್ಯೆಗಳಿಂದ ಮುಕ್ತಿ ಹೊಂದಲು ಚಿಕ್ಕ ವಯಸ್ಸಿನವರೂ ಬಿಪಿ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ. ಇದರೊಂದಿಗೆ ಬಿಪಿಯ ಔಷಧ ಬಿಟ್ಟವರು ವೈದ್ಯರನ್ನು ಭೇಟಿಯಾಗಿ ಮತ್ತೆ ಆರಂಭಿಸಬೇಕು.

ಶೀತದಲ್ಲಿ ತಲೆನೋವು ಹೆಚ್ಚಾಗುತ್ತದೆ, ಪ್ಯಾನಿಕ್ ಆಗಬೇಡಿ ಶೀತದಲ್ಲಿ ತಲೆನೋವು ಹೆಚ್ಚಾಗುವ ಸಮಸ್ಯೆ ಇದೆ. ಈ ಋತುವಿನಲ್ಲಿ ತಲೆನೋವಿನ ಸಮಸ್ಯೆ ಹೆಚ್ಚುತ್ತದೆ, ಆದರೆ ಗಾಬರಿಪಡುವ ಅಗತ್ಯವಿಲ್ಲ ಎಂದು ಡಾ.ಅನಿಲ್ ಕುಮಾರ್ ವಿವರಿಸುತ್ತಾರೆ. ವೈದ್ಯರ ಸಲಹೆ ಮೇರೆಗೆ ನೋವು ನಿವಾರಕಗಳನ್ನು ತೆಗೆದುಕೊಳ್ಳಬಹುದು. ಇದರೊಂದಿಗೆ ಬಿಪಿ, ಶುಗರ್ ರೋಗಿಗಳ ಬಗ್ಗೆ ವಿಶೇಷ ಗಮನ ಹರಿಸಬೇಕು. ಈ ಚಳಿಯನ್ನು ತಪ್ಪಿಸುವುದೊಂದೇ ಆರೋಗ್ಯವಾಗಿರಲು ಇರುವ ಮಂತ್ರ. ದೇಹವನ್ನು ಹೇಗಾದರೂ ಬೆಚ್ಚಗಿಡಲು ಪ್ರಯತ್ನಿಸಿ ಮತ್ತು ವಿಪರೀತ ಚಳಿಯಲ್ಲಿ ಇದ್ದಕ್ಕಿದ್ದಂತೆ ಹೊರಗೆ ಹೋಗಬೇಡಿ.

ಮತ್ತಷ್ಟು ಓದಿ: ಈ 5 ವಿಷಯಗಳು ಹೃದಯಾಘಾತ ಹಾಗೂ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು

ಮಕ್ಕಳಲ್ಲಿ ನ್ಯುಮೋನಿಯಾದ ಅಪಾಯವು ಶೀತದಲ್ಲಿ ಹೆಚ್ಚು ಶೀತ-ಕೆಮ್ಮು, ಅತಿಸಾರ ಮತ್ತು ನ್ಯುಮೋನಿಯಾದಂತಹ ಸೋಂಕುಗಳ ಅಪಾಯವೂ ಶೀತದಲ್ಲಿ ಹೆಚ್ಚಾಗಿದೆ. ಅದರಲ್ಲೂ ಕೊರೊನಾ ಸೋಂಕಿತರಿಗೆ ವೈರಲ್‌ ಜ್ವರ ಬರುತ್ತಿದೆ. ಶೀತವು ರಕ್ತದೊತ್ತಡ ಮತ್ತು ಸಂಧಿವಾತದಂತಹ ಕಾಯಿಲೆಗಳಿಗೆ ಕಾರಣವಾಗಬಹುದು. ಸದರ್ ಆಸ್ಪತ್ರೆಯ ಉಪ ಅಧೀಕ್ಷಕ ಡಾ.ಖೈತಾನ್, ಶೀತ ವಾತಾವರಣದಲ್ಲಿ ಬ್ರೈನ್ ಸ್ಟ್ರೋಕ್ ಹೆಚ್ಚಾಗುತ್ತದೆ.

ಈ ಕಾರಣದಿಂದ ಚಳಿಗಾಲದಲ್ಲಿ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ವಿಶೇಷವಾಗಿ ಈ ಋತುವಿನಲ್ಲಿ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಏಕೆಂದರೆ ಈ ಸಮಯದಲ್ಲಿ ನ್ಯುಮೋನಿಯಾ ಅಪಾಯವಿದೆ. ಬೆಳಗಿನ ನಡಿಗೆಗೆ ಸೂರ್ಯ ಉದಯಿಸಿದ ನಂತರವೇ ಮನೆಯಿಂದ ಹೊರಬನ್ನಿ. ಇದು ಮೆದುಳಿನ ಮತ್ತು ಹೃದಯಾಘಾತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ನೋವು, ಪಾರ್ಶ್ವವಾಯು ಅಪಾಯವು ವಯಸ್ಸಾದವರಲ್ಲಿ ಹೆಚ್ಚು. ಸ್ಥೂಲಕಾಯತೆ, ಮೆಟಾಬಾಲಿಕ್ ಸಿಂಡ್ರೋಮ್, ಜಡ ಜೀವನಶೈಲಿ, ಆಮ್ಲಜನಕ ಕೊರತೆ ಹಾಗೂ ಅತಿಯಾದ ಧೂಮಪಾನವು ಬ್ರೈನ್ ಸ್ಟ್ರೋಕ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್