Banana Hair Mask: ಸದೃಡ ಹಾಗೂ ಹೊಳಪಿನ ಕೂದಲಿಗಾಗಿ ಬಾಳೆಹಣ್ಣಿನ ಹೇರ್ ಮಾಸ್ಕ್ ಬಳಸಿ
ಬಾಳೆಹಣ್ಣು ಹಲವಾರು ಆರೋಗ್ಯ ಪ್ರಯೋಜನ ಹೊಂದಿದ್ದು, ಕೂದಲಿನ ಆರೈಕೆಯಲ್ಲೂ ಕೂಡ ಪ್ರಮುಖವಾಗಿದೆ. ಬಾಳೆಹಣ್ಣಿನಲ್ಲಿ ಹೆಚ್ಚಿನ ಪೊಟ್ಯಾಸಿಯಮ್ ಅಂಶವಿದ್ದು, ಇದು ಕೂದಲು ಮತ್ತು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ.
ಇಂದಿನ ಒತ್ತಡದ ಜೀವನಶೈಲಿ ಹಾಗೂ ಧೂಳು ಮಾಲಿನ್ಯಗಳಿಂದ ಕೂದಲು ಉದುರುವಿಕೆ ಸಮಸ್ಯೆ ಸಾಮಾನ್ಯವಾಗಿ ಬಿಟ್ಟಿದೆ. ಆದ್ದರಿಂದ ಕೂದಲು ಉದುರುವಿಕೆ ಸಮಸ್ಯೆ ಹಾಗೂ ಆರೋಗ್ಯಕರ ಕೂದಲನ್ನು ಪಡೆಯಲು ನೈಸರ್ಗಿಕ ಮನೆ ಮದ್ದು ತಯಾರಿಸಿ. ಬಾಳೆಹಣ್ಣು ಹಲವಾರು ಆರೋಗ್ಯ ಪ್ರಯೋಜನ ಹೊಂದಿದ್ದು, ಕೂದಲಿನ ಆರೈಕೆಯಲ್ಲೂ ಕೂಡ ಪ್ರಮುಖವಾಗಿದೆ. ಬಾಳೆಹಣ್ಣಿನಲ್ಲಿ ಹೆಚ್ಚಿನ ಪೊಟ್ಯಾಸಿಯಮ್ ಅಂಶವಿದ್ದು, ಇದು ಕೂದಲು ಮತ್ತು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಇದಲ್ಲದೇ ವಿಟಮಿನ್ ಸಿ, ವಿಟಮಿನ್ ಎ, ವಿಟಮಿನ್ ಬಿ ,ಕಬ್ಬಿಣಾಂಶ ಮತ್ತು ಮ್ಯಾಂಗನೀಸ್ ಸಮೃದ್ದವಾಗಿದೆ. ಆದ್ದರಿಂದ ನೀವು ಬಾಳೆಹಣ್ಣಿನಿಂದ ಹೇರ್ ಮಾಸ್ಕ್ ತಯಾರಿಸಿ ಸದೃಡ ಹೊಳೆಯುವ ಕೂದಲನ್ನು ಪಡೆಯಿರಿ.
ಕೂದಲಿನ ಆರೈಕೆಯಲ್ಲಿ ಬಾಳೆಹಣ್ಣಿನ ಪ್ರಯೋಜನಗಳು:
ಕೂದಲಿಗೆ ಹೊಳಪನ್ನು ನೀಡುತ್ತದೆ:
ಒತ್ತಡದ ಜೀವನಶೈಲಿ ಮತ್ತು ಧೂಳಿನಿಂದಾಗಿ ಕೂದಲು ಒಣಗಲು ಮತ್ತು ಹಾನಿಗೊಳಗಾಗಲು ಕಾರಣವಾಗಬಹುದು. ಬಾಳೆಹಣ್ಣುಗಳು ನೈಸರ್ಗಿಕ ತೈಲಗಳನ್ನು ಹೊಂದಿದ್ದು ಅದು ಕೂದಲಿಗೆ ಆಳವಾದ ಕಂಡೀಷನಿಂಗ್ ಒದಗಿಸುತ್ತದೆ ಮತ್ತು ಕೂದಲಿನ ಎಳೆಗಳಿಗೆ ಹೊಳಪನ್ನು ನೀಡುತ್ತದೆ. ಒಂದು ಬಾಳೆಹಣ್ಣು ಮತ್ತು 2 ರಿಂದ 3 ಚಮಚ ಜೇನುತುಪ್ಪ ಬಳಸಿ ನೀವು ಹೇರ್ ಮಾಸ್ಕ್ ತಯಾರಿಸಿ. ಹಿಸುಕಿದ ಬಾಳೆಹಣ್ಣಿಗೆ ಜೇನುತುಪ್ಪ ಮತ್ತು ಓಟ್ ಮೀಲ್ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ ಮತ್ತು 10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಬಿಡಿ.
ತಲೆ ಹೊಟ್ಟು ನಿವಾರಿಸುತ್ತದೆ:
ಚಳಿಗಾಲದಲ್ಲಿ ತಲೆ ಹೊಟ್ಟಿನ ಸಮಸ್ಯೆ ಸಾಕಷ್ಟು ಜನರಲ್ಲಿ ಕಂಡುಬರುತ್ತದೆ. ಇದು ನೆತ್ತಿಯ ಚರ್ಮದ ತೇವಾಂಶವನ್ನು ಕಳೆದುಕೊಂಡು, ತುರಿಕೆಗೂ ಕಾರಣವಾಗುತ್ತದೆ. ಆದ್ದರಿಂದ ನೆತ್ತಿಯ ಮೇಲೆ ಬಾಳೆಹಣ್ಣನ್ನು ಬಳಸುವುದರಿಂದ ಒಣ ನೆತ್ತಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಒಂದು ಮಾಗಿದ ಬಾಳೆಹಣ್ಣನ್ನು ಹಿಸುಕಿ ಮತ್ತು ಅದಕ್ಕೆ 2 ಟೀ ಚಮಚ ನಿಂಬೆ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ತಲೆಗೆ ಹಚ್ಚಿ ಹಾಗೂ 20-30 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯಿರಿ.
ಇದನ್ನೂ ಓದಿ: ಕೂದಲು ಹಾಗೂ ಚರ್ಮಕ್ಕೆ ಅಲೋವೆರಾದಿಂದಾಗುವ ಪ್ರಯೋಜನಗಳ ತಿಳಿಯಿರಿ
ಕೂದಲನ್ನು ಸದೃಡಗೊಳಿಸುತ್ತದೆ:
ಬಾಳೆಹಣ್ಣಿನಲ್ಲಿರುವ ವಿಟಮಿನ್ ಬಿ ಅಂಶವು ನಿಮ್ಮ ಕೂದಲನ್ನು ಸದೃಡವಾಗಿ ಬೆಳೆಯುವಂತೆ ಮಾಡುತ್ತದೆ. ಬಾಳೆಹಣ್ಣು ಮತ್ತು ಅರ್ಗಾನ್ ಎಣ್ಣೆಯೊಂದಿಗೆ ಸರಳವಾದ ಹೇರ್ ಮಾಸ್ಕ್ ತಯಾರಿಸಿ, ಕೂದಲಿಗೆ ಹಚ್ಚಿ ಮತ್ತು 15 ರಿಂದ 20 ನಿಮಿಷಗಳ ವರೆಗೆ ಹಾಗೆಯೇ ಬಿಡಿ.
ಕೂದಲ ಬೇರಿನಿಂದ ಪೋಷಣೆ ನೀಡುತ್ತದೆ:
ಬಾಳೆಹಣ್ಣಿನ ಸಿಲಿಕಾ ಅಂಶವು ಕೂದಲಿನ ಎಳೆಗಳ ವಿನ್ಯಾಸವನ್ನು ಸುಧಾರಿಸುತ್ತದೆ. ಹಣ್ಣಿನಲ್ಲಿರುವ ನೈಸರ್ಗಿಕ ತೈಲಗಳು ಕೂದಲಿನ ಕಾಂಡಗಳನ್ನು ರಕ್ಷಿಸುತ್ತದೆ. ಬಾಳೆಹಣ್ಣು ಮತ್ತು ಆಲಿವ್ ಎಣ್ಣೆಯೊಂದಿಗೆ ಮೊಟ್ಟೆಯನ್ನು ಬಳಸಿ ಹೇರ್ ಮಾಸ್ಕ್ ತಯಾರಿಸಿ. ಇದು ನಿಮ್ಮ ಕೂದಲಿಗೆ ಬೇರಿನಿಂದಲೇ ಪೋಷಣೆ ನೀಡಿ, ಸದೃಡವಾಗಿ ಬೆಳೆಯುವಂತೆ ಮಾಡುತ್ತದೆ. ನಿಮ್ಮ ಕೂದಲಿಗೆ ಬಾಳೆಹಣ್ಣಿನ ಮಾಸ್ಕ್ ಅನ್ನು ಬಳಸುವುದರಿಂದ ನೆತ್ತಿಗೆ ಅಗತ್ಯವಾದ ಎಣ್ಣೆ ಮತ್ತು ಪೋಷಣೆಯನ್ನು ಒದಗಿಸುತ್ತದೆ. ಜೊತೆಗೆ ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಬಾಳೆಹಣ್ಣು ಮತ್ತು ಒಂದು ಕಪ್ ಪಪ್ಪಾಯವನ್ನು ಬಳಸಿ ಹೇರ್ ಮಾಸ್ಕ್ ತಯಾರಿಸಿ. ಇದು ಕೂಡ ನಿಮ್ಮ ಕೂದಲಿಗೆ ಉತ್ತಮ ಪೋಷಣೆಯನ್ನು ನೀಡುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 3:56 pm, Sun, 15 January 23