Travel: ಗೋಕರ್ಣ ಪ್ರವಾಸ ಮಾಡುವವರು ಈ ವಿಷಯಗಳನ್ನು ನೆನೆಪಿನಲ್ಲಿಡಿ! ಪ್ರವಾಸಕ್ಕೆ ಅನುಕೂಲವಾಗಲು ಇಲ್ಲಿದೆ ಮಾಹಿತಿ

Gokarna: ಕರ್ನಾಟಕದ ಒಂದು ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಗೋಕರ್ಣವು ಒಂದಾಗಿದ್ದು, ನೀವೇನಾದರೂ ಭೇಟಿ ನೀಡುವ ಪ್ಲಾನ್ ಮಾಡಿಕೊಂಡಿದ್ದರೆ, ಧಾರ್ಮಿಕ ಸ್ಥಳಗಳ ಜೊತೆಗೆ ಬೀಚ್​​​ಗಳಿಗೂ ಹೋಗಿ ಬರಬಹುದು. ಜೊತೆಗೆ ಕೆಲವು ವಿಷಯಗಳನ್ನು ನೆನೆಪಿನಲ್ಲಿಡುವುದು ಒಳ್ಳೆಯದು. ಈ ಬಗ್ಗೆ ಇಲ್ಲಿದೆ ಮಾಹಿತಿ.

Travel: ಗೋಕರ್ಣ ಪ್ರವಾಸ ಮಾಡುವವರು ಈ ವಿಷಯಗಳನ್ನು ನೆನೆಪಿನಲ್ಲಿಡಿ! ಪ್ರವಾಸಕ್ಕೆ ಅನುಕೂಲವಾಗಲು ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 03, 2023 | 1:41 PM

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಪ್ರಶಾಂತ ಪಟ್ಟಣವಾದ ಗೋಕರ್ಣವು ಬ್ಯಾಕ್ಪ್ಯಾಕರ್​​ಗಳ ಸ್ವರ್ಗವಾಗಿತ್ತು. ಆದರೆ ಈಗ ಇಲ್ಲ. ಬೀಚ್ ಸರ್ಫಿಂಗ್​​​ನಿಂದ ಹಿಡಿದು ಪ್ರಾಚೀನ ದೇವಾಲಯಕ್ಕೆ ಭೇಟಿ ನೀಡುವವರೆಗೆ ಹಲವಾರು ಚಟುವಟಿಕೆಗಳನ್ನು ಮಾಡಲು ಇಷ್ಟ ಪಡುವವರಿಗೆ ಹೇಳಿ ಮಾಡಿಸಿದ ತಾಣವಾಗಿದ್ದು, ನೀವು ಈ ಪಟ್ಟಣಕ್ಕೆ ಹೋದಾಗ ಮಾಡಬೇಕಾದ ಅನೇಕ ವಿಷಯಗಳಿವೆ. ಗೋಕರ್ಣವು ಸುಂದರವಾದ ಕಡಲತೀರ ಮತ್ತು ಪ್ರಸಿದ್ಧ ದೇವಾಲಯಗಳನ್ನು ಹೊಂದಿರುವ ಆಕರ್ಷಕ ನಗರ. ಇಲ್ಲಿನ ಸಂಜೆ ಮತ್ತು ಬೆಳಗು ಎರಡು ಕೂಡ ಒಂದು ಅದ್ಭುತವೇ ಸರಿ. ಎಲ್ಲ ಕಡೆ ಸೂರ್ಯೋದಯ, ಸೂರ್ಯಾಸ್ತ ಒಂದೇ ಆದರೂ ಇಲ್ಲಿನ ಆ ನೋಟ ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

ಗೋಕರ್ಣವು ಸ್ನೇಹಿತರೊಂದಿಗೆ ಹಾಗೂ ಕುಟುಂಬದ ಜೊತೆ ಪ್ರವಾಸ ಕೈಗೊಳ್ಳಲು ಹೇಳಿ ಮಾಡಿಸಿದಂತಹ ಜಾಗ. ಇಲ್ಲಿನ ಬೀಚ್‌, ಜಲಕ್ರೀಡೆಗಳು ನಿಮ್ಮ ಗೋಕರ್ಣ ಪ್ರವಾಸವನ್ನು ಸಂಪೂರ್ಣವಾಗಿಸುತ್ತದೆ. ಬಹಳಷ್ಟು ಜನರು ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಸಹ ಗೋಕರ್ಣಕ್ಕೆ ಬರುತ್ತಾರೆ. ಕಡಲತೀರದ ಪಟ್ಟಣವಾದ್ದರಿಂದ ನಿಮ್ಮ ಸಮಯ ಖಂಡಿತವಾಗಿಯೂ ಸಾಲುವುದಿಲ್ಲ ಹಾಗಾಗಿ ಪ್ರವಾಸ ಕೈಗೊಳ್ಳುವ ಮೊದಲು ಎಲ್ಲಿಗೆ ಹೋಗಬೇಕು ಎಂಬುದನ್ನು ಲಿಸ್ಟ್ ಮಾಡಿಕೊಳ್ಳಿ. ಇಲ್ಲಿ ಪ್ರಶಾಂತ ಕಡಲತೀರದ ಜೊತೆಗೆ ಹಲವಾರು ಭಕ್ತರು ಭೇಟಿ ನೀಡುವ ಕೆಲವು ಪ್ರಸಿದ್ಧ ದೇವಾಲಯಗಳನ್ನು ಸಹ ಹೊಂದಿದೆ. ಸಮುದ್ರದಲ್ಲಿ ಈಜುವುದು, ಸರ್ಫಿಂಗ್ ಮತ್ತು ಯೋಗದಂತಹ ಇತರ ಚಟುವಟಿಕೆಗಳಲ್ಲಿ ಸಹ ನೀವು ಪಾಲ್ಗೊಳ್ಳಬಹುದು. ಈ ಪ್ರದೇಶದಲ್ಲಿ ಡಾಲ್ಫಿನ್ ಗಳನ್ನು ತೋರಿಸುವುದಾಗಿ ಹೇಳಿಕೊಳ್ಳುವ ಮಾರಾಟಗಾರರು ಇದ್ದರೂ, ನೋಡುವ ಸಾಧ್ಯತೆಗಳು ತುಂಬಾ ಕಡಿಮೆ. ಹಾಗಾಗಿ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

ಗೋಕರ್ಣದಲ್ಲಿ ನೋಡಬಹುದಾದ ಕೆಲವು ಸ್ಥಳಗಳು:

-ಮಹಾಬಲೇಶ್ವರ ದೇವಸ್ಥಾನ ಶಿವನಿಗೆ ಸಮರ್ಪಿತವಾದ ಪಟ್ಟಣವಾಗಿದ್ದು ಅತಿ ಹೆಚ್ಚು ಭೇಟಿ ನೀಡುವ ಮತ್ತು ಅತಿದೊಡ್ಡ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಾಲಯವು ಕ್ರಿ.ಶ 4 ನೇ ಶತಮಾನದಷ್ಟು ಹಳೆಯದಾಗಿದೆ ಮತ್ತು ದ್ರಾವಿಡ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ಮಹಾ ಗಣಪತಿ ದೇವಾಲಯವನ್ನು ‘ಸಿದ್ಧ ಗಣಪತಿ’ ದೇವಾಲಯ ಎಂದೂ ಕರೆಯಲಾಗುತ್ತದೆ, ಹೆಸರೇ ಹೇಳುವಂತೆ ಗಣೇಶನಿಗೆ ಸಮರ್ಪಿತವಾಗಿದೆ. ಮುಖ್ಯ ಶಿವ ದೇವಾಲಯದಿಂದ ಕೆಲವೇ ಗಜಗಳಷ್ಟು ದೂರದಲ್ಲಿದೆ. ಮೊದಲು ಗಣೇಶ ದೇವಸ್ಥಾನಕ್ಕೆ ಭೇಟಿ ನೀಡುವುದು ಮತ್ತು ನಂತರ ಶಿವ ದೇವಾಲಯಕ್ಕೆ ಹೋಗುವುದು ಸಾಮಾನ್ಯ ಅಭ್ಯಾಸ. ನೀವು ಕೂಡ ಹಾಗೆಯೇ ಮಾಡಬಹುದು.

-ಮಹಾಬಲೇಶ್ವರ ದೇವಸ್ಥಾನಕ್ಕೆ ಸಮೀಪದಲ್ಲಿರುವ ಕೋಟಿ ತೀರ್ಥವು ಪ್ರವಾಸಿಗರು ಮತ್ತು ಯಾತ್ರಾರ್ಥಿಗಳು ಹೆಚ್ಚು ಭೇಟಿ ನೀಡುವ ಸ್ಥಳವಾಗಿದೆ. ಮಾನವ ನಿರ್ಮಿತ ನೀರಿನ ಟ್ಯಾಂಕ್ ಅನೇಕ ಬುಗ್ಗೆಗಳ ಮೂಲವೆಂದು ನಂಬಲಾಗಿದೆ.

-ಮಿರ್ಜಾನ್ ಕೋಟೆ ನಿಮಗೆ ಇತಿಹಾಸದಲ್ಲಿ ಆಸಕ್ತಿ ಇಲ್ಲದವರಿಗೂ ಕೂಡ, 16 ನೇ ಶತಮಾನದ ಈ ಕೋಟೆ ಖಂಡಿತವಾಗಿಯೂ ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಗೋಕರ್ಣದಿಂದ ಕೇವಲ 22 ಕಿ.ಮೀ ದೂರದಲ್ಲಿರುವ ಈ ಕೋಟೆಯು ಪೆಪ್ಪರ್ ಕ್ವೀನ್ ಎಂಬ ಪೋರ್ಚುಗೀಸ್ ರಾಣಿಗೆ ಸೇರಿದ್ದು ಎಂದು ನಂಬಲಾಗಿದೆ.

-ಗೋಕರ್ಣ ಕಡಲ ತೀರದ ಸ್ಪಷ್ಟ ನೀಲಿ ನೀರಿನಲ್ಲಿ ಸರ್ಫಿಂಗ್ ಮಾಡುವುದು ವಿಶೇಷವಾಗಿ ಆರಂಭಿಕರಿಗೆ ಸರ್ಫಿಂಗ್ ಮಾಡಲು ಸೂಕ್ತವಾದ ಸ್ಥಳವಾಗಿದೆ. ಕಡಲ ತೀರದಲ್ಲೇ ಒಂದೆರಡು ಏಜೆನ್ಸಿಗಳು ಆರಂಭಿಕರಿಗೆ ತರಗತಿಗಳನ್ನು ನಡೆಸುತ್ತವೆ.

-ಸುಂದರವಾದ ಕಡಲತೀರ ಇರುವ ಹಿನ್ನೆಲೆಯಲ್ಲಿ ಯೋಗ ತರಗತಿಗೆ ಸೇರುವ ಮೂಲಕ ನೀವು ನಿಮ್ಮ ದಿನವನ್ನು ಪ್ರಾರಂಭಿಸಬಹುದು ಅಥವಾ ಕೊನೆಗೊಳಿಸಬಹುದು. ಇಲ್ಲಿ ಯೋಗದ ವಿವಿಧ ರೂಪಗಳನ್ನು ಹೇಳಿಕೊಡುವ ಒಂದೆರಡು ಯೋಗ ಶಾಲೆಗಳಿವೆ.

-ಯಾಣ ಗುಹೆಗಳು ದೇವಾಲಯ ಪಟ್ಟಣದಿಂದ ಕೇವಲ 27 ಕಿ.ಮೀ ದೂರದಲ್ಲಿರುವ ಈ ಸ್ಥಳ ಸಾಹಸ, ವನ್ಯಜೀವಿ ಮತ್ತು ಧರ್ಮಕ್ಕೆ ಹೆಸರು ವಾಸಿಯಾಗಿದೆ. ಚಾರಣಿಗರು, ಪಾದಯಾತ್ರಿಕರು ಮತ್ತು ಸಾಹಸ ಅನ್ವೇಷಕರಿಗೆ ಸ್ವರ್ಗವಾಗಿದೆ, ಇದನ್ನು ಖಂಡಿತವಾಗಿಯೂ ಛಾಯಾಗ್ರಾಹಕರು ಆನಂದಿಸದೇ ಇರಲಾರದು.

-ಗೋಕರ್ಣದಲ್ಲಿ ಮಾಡಬೇಕಾದ ಅತ್ಯಂತ ಮೋಜಿನ ಕೆಲಸಗಳಲ್ಲಿ ಬನಾನಾ ಬೋಟಿಂಗ್ ಕೂಡ ಒಂದಾಗಿದೆ. ಓಂ ಬೀಚ್‌ನಲ್ಲಿ ನೀವು ಬನಾನ ಬೋಟಿಂಗ್ ಟ್ರೈ ಮಾಡಬಹುದು. ಪ್ರತೀ ದಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಈ ಕ್ರೀಡೆ ಆಯೋಜಿಸಲಾಗುತ್ತದೆ. ಪ್ರತೀ 15 ನಿಮಿಷಕ್ಕೆ ಒಬ್ಬರಿಗೆ 300 ರೂ. ಟಿಕೇಟ್ ಪಡೆಯಬೇಕು. (ದರ ಬದಲಾವಣೆ ಆಗಲುಬಹುದು)

-ಗೋಕರ್ಣ ಬೀಚ್‌ನಲ್ಲಿ ನೀವು ಕ್ಯಾಂಪಿಂಗ್ ಅನುಭವ ಪಡೆಯಬಹುದು. ಇದು ಗೋಕರ್ಣ ಬಸ್‌ ನಿಲ್ದಾಣದಿಂದ 7.3 ಕಿ.ಮೀ ದೂರದಲ್ಲಿದೆ. ಕ್ಯಾಂಪಿಂಗ್‌ಗೆ 1500 ರೂ. ಆಗುತ್ತದೆ. (ದರ ಬದಲಾವಣೆ ಆಗಲುಬಹುದು)

-ನೋಡಬಹುದಾದ ಬೀಚ್ಗಳು: ಓಂ ಬೀಚ್, ಕುಡ್ಲೆ ಬೀಚ್, ಹಾಫ್ ಮೂನ್ ಬೀಚ್, ಗೋಕರ್ಣ ಬೀಚ್, ಪ್ಯಾರಡೈಸ್ ಬೀಚ್.

ಇದನ್ನೂ ಓದಿ:Travel Tips: ಭಾರತದಲ್ಲಿ ಪ್ಯಾರಾಗ್ಲೈಡಿಂಗ್ ಅನುಭವ ಪಡೆಯಲು ಸೂಕ್ತ ತಾಣಗಳ ವಿವರ ಇಲ್ಲಿವೆ

ಗೋಕರ್ಣಕ್ಕೆ ತಲುಪುವುದು ಹೇಗೆ?

ಕರಾವಳಿಯಲ್ಲಿರುವ ಒಂದು ಸಣ್ಣ ಯಾತ್ರಾ ಸ್ಥಳವಾದ ಗೋಕರ್ಣವು ರಸ್ತೆ ಮತ್ತು ರೈಲು ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ.

ವಾಯುಮಾರ್ಗದ ಮೂಲಕ

ಸುಮಾರು 145 ಕಿ.ಮೀ ದೂರದಲ್ಲಿರುವ ಹತ್ತಿರದ ವಿಮಾನ ನಿಲ್ದಾಣವೆಂದರೆ ಗೋವಾದ ದಾಬೋಲಿಮ್ ಬಳಿಕ ಗೋಕರ್ಣಕ್ಕೆ ರಸ್ತೆಯ ಮೂಲಕ ತಲುಪಬಹುದು. ಇತರ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳೆಂದರೆ ಮಂಗಳೂರು ಮತ್ತು ಬೆಂಗಳೂರು ಕ್ರಮವಾಗಿ 250 ಕಿ.ಮೀ ಮತ್ತು 487 ಕಿ.ಮೀ ದೂರದಲ್ಲಿವೆ.

ರೈಲು ಮೂಲಕ

ಗೋಕರ್ಣವು ರೈಲು ನಿಲ್ದಾಣವನ್ನು ಹೊಂದಿದ್ದರೂ ಸಹ ಇದು ಪ್ರಮುಖ ನಗರಗಳೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಿಲ್ಲ ಮತ್ತು ಎಲ್ಲಾ ರೈಲುಗಳು ಇಲ್ಲಿ ನಿಲ್ಲುವುದಿಲ್ಲ. ಗೋಕರ್ಣದಿಂದ ಸುಮಾರು 20 ಕಿ.ಮೀ ದೂರದಲ್ಲಿರುವ ಅಂಕೋಲಾ ಹತ್ತಿರದ ಪ್ರಮುಖ ರೈಲ್ವೆ ನಿಲ್ದಾಣವಾಗಿದೆ ಮತ್ತು ರಸ್ತೆ ಮೂಲಕ ಸಾರ್ವಜನಿಕ ಸಾರಿಗೆ ಅಥವಾ ಕ್ಯಾಬ್ ಮೂಲಕ ಸುಲಭವಾಗಿ ತಲುಪಬಹುದು.

ರಸ್ತೆ ಮೂಲಕ

ಗೋಕರ್ಣವನ್ನು ರಸ್ತೆಯ ಮೂಲಕ ತಲುಪಬಹುದು. ಮುಂದಿನ ಪ್ರಮುಖ ಪಟ್ಟಣವಾದ ಕಾರವಾರದಿಂದ ಗೋಕರ್ಣಕ್ಕೆ ಸುಮಾರು 59 ಕಿ.ಮೀ ದೂರದಲ್ಲಿದೆ. ಗೋವಾ ಮತ್ತು ಮಹಾರಾಷ್ಟ್ರದಿಂದ ಬರುವವರಾಗಿದ್ದರೆ ಹತ್ತಿರದ ಪ್ರಮುಖ ಪಟ್ಟಣಗಳಿಂದ ನೀವು ಕ್ಯಾಬ್ ಅನ್ನು ಬಾಡಿಗೆಗೆ ಪಡೆಯಬಹುದು. ಕ್ಯಾಬ್​​​ಗಳು ಅಥವಾ ಬಸ್ಸುಗಳಂತಹ ಸಾರ್ವಜನಿಕ / ಖಾಸಗಿ ಸಾರಿಗೆಯನ್ನು ಆಯ್ದು ಕೊಳ್ಳಬಹುದು. ಅಥವಾ ಸ್ವಂತ ವಾಹನದಲ್ಲಿಯೂ ಬರಬಹುದು.

ಇಲ್ಲಿನ ದೇವಾಲಯ, ಬೀಚ್​​​ಗಳು ಹತ್ತಿರ ಹತ್ತಿರ ವಿದ್ದು 20 ನಿಮಿಷ ನಡೆದರೆ ಇನ್ನೊಂದು ಸ್ಥಳವನ್ನು ನೋಡಬಹುದು. ಹಾಗಾಗಿ ಗೋಕರ್ಣ ತುಲುಪಿದ ಮೇಲೆ ನೀವು ನಡಿಗೆಯಲ್ಲಿಯೇ ಪ್ರವಾಸ ಮುಗಿಸಬಹುದು. ಸ್ವಲ್ಪ ದೂರವೆನಿಸಿದರೆ ಆಟೋ ರಿಕ್ಷಾದಲ್ಲಿ ಹೋಗಬಹುದು.

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ