AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fashion Tips: ವಿವಿಧ ಉಡುಗೆಗಳೊಂದಿಗೆ ಸರಿಯಾದ ಬ್ಯಾಗ್ ಆಯ್ಕೆ ಮಾಡಲು ಇಲ್ಲಿದೆ ಟಿಪ್ಸ್!

ನಿಮ್ಮ ಬ್ಯಾಗ್​​​​ನೊಂದಿಗೆ ನೀವು ತೊಟ್ಟ ಉಡುಗೆ ಮ್ಯಾಚ್ ಆಗಬೇಕು ಎಂದು ಬಯಸುವಿರಾ? ಯಾವ ಉಡುಗೆಗೆ ಯಾವ ಬ್ಯಾಗ್ ಆಯ್ಕೆ ಮಾಡಿಕೊಳ್ಳುದು ಒಳ್ಳೆಯದು. ಇಲ್ಲಿದೆ ಮಾಹಿತಿ.

Fashion Tips: ವಿವಿಧ ಉಡುಗೆಗಳೊಂದಿಗೆ ಸರಿಯಾದ ಬ್ಯಾಗ್ ಆಯ್ಕೆ ಮಾಡಲು ಇಲ್ಲಿದೆ ಟಿಪ್ಸ್!
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​|

Updated on: Jun 02, 2023 | 4:58 PM

Share

ಫ್ಯಾಷನ್ ಪ್ರಿಯರು ಇಲ್ಲದವರುಂಟೇ? ಎನ್ನುವ ಹಾಗೇ ಎಲ್ಲರಲ್ಲಿಯೂ ತಾವು ಚೆನ್ನಾಗಿ ಕಾಣಬೇಕು ಎನ್ನುವ ಹಂಬಲ ಇದ್ದೇ ಇರುತ್ತದೆ. ಅದು ತಪ್ಪೇನಲ್ಲ. ಇರುವ ಸೌಂದರ್ಯದ ಜೊತೆ ಇನ್ನೊಂದಿಷ್ಟು ಮೆರಗು ನೀಡಲು ನಾವು ಕೆಲವು ವಸ್ತುಗಳನ್ನು ಬಳಸುಸಬೇಕಾಗುತ್ತದೆ. ಉದಾಹರಣೆಗೆ ಬೇರೆ ಬೇರೆ ಶೈಲಿಯ ಸುಂದರವಾದ ಬಟ್ಟೆ, ಸರ, ಬಳೆ, ಬ್ಯಾಗ್ ಈ ರೀತಿ ನಾವು ದಿನಂಪ್ರತಿ ಸಂದರ್ಭಕ್ಕೆ ತಕ್ಕಂತೆ ನಮ್ಮ ಲುಕ್ ಬದಲಾಯಿಸುತ್ತೇವೆ ಆದರೆ ಇದೆಲ್ಲದರ ಗುಂಗಿನಲ್ಲಿ ಯಾವ ಬಟ್ಟೆ ತೊಟ್ಟಾಗ ಯಾವ ರೀತಿ ಕಾಣಬೇಕು ಎಂಬುದನ್ನು ಮರೆಯುತ್ತಿದ್ದೇವೆ. ಎಲ್ಲಾದರೂ ಹೊರಡುವಾಗ ನಿಮ್ಮ ಉಡುಗೆಗೆ ಅಂತಿಮ ಸ್ಪರ್ಶ ನೀಡುವುದರ ಜೊತೆಗೆ ಹ್ಯಾಂಡ್ ಬ್ಯಾಗ್ ಕೂಡ ನಿಮ್ಮ ಲುಕ್ ನ ಒಂದು ಭಾಗ ವಾಗಿರುತ್ತದೆ ಎಂಬುದನ್ನು ಮರೆಯಬಾರದು. ನೀವು ಯಾವ ರೀತಿಯ ಬಟ್ಟೆಗೆ ಎಂತಹ ಬ್ಯಾಗ್ ಹಾಕಿಕೊಂಡಿದ್ದೀರಿ ಎಂಬುದರ ಆಧಾರದ ಮೇಲೆ ನಿಮ್ಮ ನೋಟ ಮ್ಯಾಟರ್ ಆಗುತ್ತದೆ. ಪ್ರತಿಯೊಂದು ಉಡುಗೆಯು ಕೆಲವು ದೇಹದ ಪ್ರಕಾರಗಳಿಗೆ ಉತ್ತಮವಾಗಿ ಕಾಣುವಂತೆ, ಬ್ಯಾಗ್ ಗಾತ್ರ ಮತ್ತು ಸಂದರ್ಭ ಮುಖ್ಯವಾಗಿರುತ್ತದೆ.

ವಿಭಿನ್ನ ಶೈಲಿಯ ಉಡುಪುಗಳೊಂದಿಗೆ ಧರಿಸಬೇಕಾದ ಬ್ಯಾಗ್ ವಿಧಗಳ ಪಟ್ಟಿ ಇಲ್ಲಿದೆ:

ಟೋಟ್ ಬ್ಯಾಗ್:

ಟೋಟ್ ಬ್ಯಾಗ್ ಎಂಬುದು ಮಧ್ಯಮ ಅಥವಾ ದೊಡ್ಡ ಗಾತ್ರದಲ್ಲಿ ಬರುವ ಬ್ಯಾಗ್​​​​​ಗಳಾಗಿದ್ದು ಇದು ಸಮಾನವಾದ ಹ್ಯಾಂಡಲ್ ಗಳನ್ನು ಹೊಂದಿದೆ. ನೀವು ಇದನ್ನು ಉಪಯೋಗಿಸುತ್ತಿರಬಹುದು. ಇಂತಹ ಬ್ಯಾಗ್ ನಿಮಗೆ ತುಂಬಾ ವಸ್ತುಗಳನ್ನು ತೆಗದುಕೊಂಡು ಹೋಗಬೇಕು ಅಥವಾ ಖರೀದಿ ಮಾಡಬೇಕಿಂದಿದ್ದಲ್ಲಿ ತುಂಬಾ ಉಪಯೋಗಕ್ಕೆ ಬರುತ್ತದೆ.

ಮಾಡಬೇಕಾದ ಕೆಲಸಗಳು:

-ಔಪಚಾರಿಕ ಉಡುಗೆ ತೊಟ್ಟಾಗ, ಕೆಲಸಕ್ಕೆ ಹೋಗುವಾಗ ತಟಸ್ಥ ಬಣ್ಣದ ಟೋಟ್ ಬ್ಯಾಗ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಜೊತೆಗೆ ಶಾಪಿಂಗ್ ಮಾಡುವಾಗ ಅಥವಾ ಪ್ರಯಾಣಿಸುವಾಗ, ವಿಶಾಲವಾದ ಟೋಟ್ ಬ್ಯಾಗ್ ಲಾಭ ಪಡೆದುಕೊಳ್ಳಬಹುದು.

ಮಾಡಬಾರದ ಕೆಲಸಗಳು:

-ಟೋಟ್ ಬ್ಯಾಗ್ ಅನ್ನು ಗೌನ್ ಅಥವಾ ಪಾರ್ಟಿ ಡ್ರೆಸ್ ನೊಂದಿಗೆ ಎಂದಿಗೂ ಜೋಡಿಸಬೇಡಿ. ಅದು ನಿಮ್ಮ ಉಡುಪಿನ ಅಂದವನ್ನು ಹೋಗಲಾಡಿಸಿ ಅದನ್ನು ಕ್ಯಾಶುಯಲ್ ಮಾಡುತ್ತದೆ. ಹಾಗಾಗಿ ಸಂದರ್ಭಕ್ಕೆ ಅನುಗುಣವಾಗಿ ಬ್ಯಾಗ್ ಆರಿಸಿಕೊಳ್ಳಿ.

ಇದನ್ನೂ ಓದಿ:Summer Fashion: ಈ ಬೇಸಿಗೆಯಲ್ಲಿ ಹಾಟ್ ಆಗಿ ಕಾಣಲು ಇಲ್ಲಿವೆ ಕೆಲವು ಫ್ಯಾಷನ್ ಟಿಪ್ಸ್

ಶೋಲ್ಡರ್ ಬ್ಯಾಗ್:

ಮೆಸೆಂಜರ್ ಬ್ಯಾಗ್ ಎಂದೂ ಕರೆಯಲ್ಪಡುವ ಈ ಬ್ಯಾಗ್ ಉದ್ದವಾದ ಸ್ಟ್ರಾಪ್ ಅನ್ನು ಹೊಂದಿದ್ದು, ನಿಮ್ಮ ಭುಜಕ್ಕೆ ಸರಿಹೊಂದುವಂತೆ ಇರುತ್ತದೆ.

ಮಾಡಬೇಕಾದ ಕೆಲಸಗಳು:

-ಏಕವರ್ಣದ ಉಡುಪನ್ನು ಧರಿಸುವಾಗ, ಉಡುಗೆಗೆ ವಿರುದ್ಧ ಬಣ್ಣದ ಬ್ಯಾಗ್ ಆರಿಸಿ. -ಬ್ಯಾಗ್ ಸ್ಟ್ರಾಪ್ ತುಂಬಾ ಉದ್ದವಾಗಿಲ್ಲ ಎಂಬುದು ತಿಳಿದಿರಲಿ. ನಿಮಗೆ ಬೇಕಾದಂತೆ ಸ್ಟ್ರಾಪ್ ಅನ್ನು ಸರಿ ಹೊಂದಿಸಿಕೊಳ್ಳಿ, ಅಂದರೆ ಬ್ಯಾಗ್ ನಿಮ್ಮ ಸೊಂಟಕ್ಕಿಂತ ಕೆಳಕ್ಕೆ ಬರುವುದಿಲ್ಲ.

ಮಾಡಬಾರದ ಕೆಲಸಗಳು:

-ಈ ಬ್ಯಾಗ್ ಅರೆ ಕ್ಯಾಶುಯಲ್ ಬಟ್ಟೆಗಳೊಂದಿಗೆ ತುಂಬಾ ಚೆನ್ನಾಗಿ ಒಪ್ಪುತ್ತವೆ. ಆದರೆ ಕ್ಯಾಶುಯಲ್ ಉಡುಗೆಯೊಂದಿಗೆ ತೊಡುವುದು ಉಚಿತವಲ್ಲ. ಅವು ಚೆನ್ನಾಗಿ ಕಾಣುವುದಿಲ್ಲ. ಜೊತೆಗೆ ಗೌನ್ ಅಥವಾ ಔಪಚಾರಿಕ ಉಡುಗೆಯೊಂದಿಗೂ ಇದು ಒಪ್ಪುವುದಿಲ್ಲ.

ಸ್ಲಿಂಗ್ ಬ್ಯಾಗ್:

ಇತರ ಬ್ಯಾಗ್ ಗಳಿಗಿಂತ ಸ್ವಲ್ಪ ಚಿಕ್ಕದಾಗಿರುವ ಈ ಬ್ಯಾಗ್ ಸರಿಹೊಂದಿಸಬಹುದಾದ ಉದ್ದನೆಯ ಪಟ್ಟಿಗಳನ್ನು ಹೊಂದಿದೆ. ಸ್ಲಿಂಗ್ ಬ್ಯಾಗ್ ಅನ್ನು ಕ್ರಾಸ್ ಬಾಡಿ ಬ್ಯಾಗ್ ಎಂದೂ ಕರೆಯಲಾಗುತ್ತದೆ.

ಮಾಡಬೇಕಾದ ಕೆಲಸಗಳು:

-ಪ್ರಯಾಣ ಮಾಡುವಾಗ ಅಥವಾ ಕ್ಯಾಶುಯಲ್ ಉಡುಗೆಗಳೊಂದಿಗೆ ಈ ಚೀಲವನ್ನು ಒಯ್ಯಿರಿ ಏಕೆಂದರೆ ಇದು ಚೆನ್ನಾಗಿ ಕಾಣುವುದರ ಜೊತೆಗೆ ಆರಾಮದಾಯಕವಾಗಿದೆ.

ಮಾಡಬಾರದ ಕೆಲಸಗಳು:

-ಗೌನ್​​​ಗಳು ಅಥವಾ ಔಪಚಾರಿಕ ಉಡುಗೆಯೊಂದಿಗೆ ಈ ಬ್ಯಾಗ್​​​ಗಳನ್ನು ಧರಿಸಬೇಡಿ. ಏಕೆಂದರೆ ಇದು ಇಡೀ ನೋಟವನ್ನೇ ಹಾಳು ಮಾಡುತ್ತದೆ.

ಈವಿನಿಂಗ್ ಬ್ಯಾಗ್/ ಕ್ಲಚ್​​ಗಳು:

ಹೆಚ್ಚು ಅಲಂಕೃತ ಬ್ಯಾಗ್ ಪಾರ್ಟಿ ಡ್ರೆಸ್ಸಿಂಗ್ ಸಂದರ್ಭಗಳಿಗಾಗಿ ಬಳಸಲಾಗುತ್ತದೆ.

ಮಾಡಬೇಕಾದ ಕೆಲಸಗಳು:

-ರೈನ್ ಸ್ಟೋನ್, ಸಕ್ವಿನ್ ಅಥವಾ ಅಲಂಕೃತ ಬ್ಯಾಗ್ ಗಳನ್ನು ಗೌನ್ ತೊಟ್ಟಾಗ ಬಳಸಬಹುದು.

ಇದನ್ನು ಮಾಡಬೇಡಿ:

-ನಿಮ್ಮ ಚೀಲದಲ್ಲಿ ಹೆಚ್ಚು ವಸ್ತುಗಳನ್ನು ಒಯ್ಯಬೇಡಿ, ಅದನ್ನು ಓವರ್ಲೋಡ್ ಮಾಡುವ ಮೂಲಕ ಸುಂದರವಾದ ಬ್ಯಾಗ್ ರಚನೆಯನ್ನು ಹಾಳು ಮಾಡಬೇಡಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ