Kabirdas Jayanti 2023: ಕಬೀರದಾಸ ಜಯಂತಿ – ಇತಿಹಾಸ, ಮಹತ್ವ ಮತ್ತು ಆಚರಣೆ

ಸಂತ ಕಬೀರರು ಪ್ರಮುಖ ಕವಿ, ಸಮಾಜ ಸುಧಾರಕ ಮತ್ತು ಶ್ರೇಷ್ಠ ಚಿಂತಕರಾಗಿದ್ದವರು. ಅವರು ವಿಶೇಷವಾಗಿ ತಮ್ಮ ದ್ವಿಪದಿಗಳಿಗೆ ಹೆಸರುವಾಸಿಯಾಗಿದ್ದಾರೆ. ಅದರ ಮೂಲಕ ಅವರು ಸಮಾಜದಲ್ಲಿ ಚಾಲ್ತಿಯಲ್ಲಿದ್ದ ಸಮಸ್ಯೆಗಳು ಮತ್ತು ಮೂಢ ನಂಬಿಕೆಗಳನ್ನು ಎತ್ತಿ ತೋರಿಸಿದರು. ಇಂತಹ ಮಹಾನ್ ಕವಿಯ ಜೀವನದ ಪ್ರಮುಖ ಸಂಗತಿಗಳ ಕುರಿತ ಮಾಹಿತಿ ಇಲ್ಲಿದೆ.

Kabirdas Jayanti 2023: ಕಬೀರದಾಸ ಜಯಂತಿ - ಇತಿಹಾಸ, ಮಹತ್ವ ಮತ್ತು ಆಚರಣೆ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: Digi Tech Desk

Updated on:Jun 02, 2023 | 4:15 PM

ಪ್ರತಿ ವರ್ಷ ಜ್ಯೇಷ್ಠ ಮಾಸದ ಹುಣ್ಣಿಮೆಯ ದಿನದಂದು ಸಂತ ಕಬೀರದಾಸರ ಜನ್ಮದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ಕಬೀರದಾಸರ ಜಯಂತಿಯನ್ನು ಜೂನ್ 4 ರಂದು ಆಚರಿಸಲಾಗುತ್ತದೆ. ಕಬೀರದಾಸರು 15 ನೇ ಶತಮಾನದ ಪ್ರಸಿದ್ಧ ಕವಿಯಾಗಿದ್ದು, ತಮ್ಮ ಬರಹಗಳ ಮೂಲಕ ಸಮಾಜದಲ್ಲಿ ಹರಡಿದ್ದ ಆಡಂಬರದ ವಿರುದ್ಧ ಧ್ವನಿ ಎತ್ತಿದವರು. ಸಂತ ಕಬೀರರು ತಮ್ಮ ಜೀವನದುದ್ದಕ್ಕೂ ಸಮಾಜದಲ್ಲಿ ಹರಡಿದ್ದ ಅನಿಷ್ಟ ಮತ್ತು ಮೂಢನಂಬಿಕೆಗಳನ್ನು ಖಂಡಿಸುತ್ತಲೇ ಇದ್ದರು. ಕಬೀರರು ಒಬ್ಬ ಸಂತ ಮಾತ್ರವಲ್ಲದೆ ಶ್ರೇಷ್ಠ ಚಿಂತಕ ಮತ್ತು ಸಮಾಜ ಸುಧಾರಕರೂ ಆಗಿದ್ದರು. ಅವರು ತಮ್ಮ ದ್ವಿಪದಿಗಳ ಮೂಲಕ ಜೀವನದ ಅನೇಕ ಪಾಠಗಳನ್ನು ತಿಳಿಸಿಕೊಟ್ಟಿದ್ದಾರೆ. ಇವರ ದ್ವಿಪದಿಗಳನ್ನು ಕಬೀರ್ ಕೆ ದೋಹೆಎಂದು ಕರೆಯಲಾಗುತ್ತದೆ. ಅವರ ದ್ವಿಪದಿಗಳು ಅತ್ಯಂತ ಸರಳವಾದ ಭಾಷೆಯಲ್ಲಿದ್ದವು, ಇದರಿಂದಾಗಿ ಆ ದ್ವಿಪದಿಗಳನ್ನು ಯಾರಾದರೂ ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಇಂದಿಗೂ ಈ ದ್ವಿಪದಿಗಳನ್ನು ಜನರು ಗುನುಗುತ್ತಿರುತ್ತಾರೆ. ಕಬೀರದಾಸರ ಜಯಂತಿಯು ಇನ್ನೇನು ಸಮೀಪಿಸುತ್ತಿದ್ದು, ಈ ಶುಭ ಸಂದರ್ಭದಲ್ಲಿ ಅವರ ಜೀವನಕ್ಕೆ ಸಂಬಂಧಿಸಿದ ಮಹತ್ವದ ಸಂಗತಿಗಳನ್ನು ತಿಳಿದುಕೊಳ್ಳೋಣ.

ಕಬೀರದಾಸರ ಜೀವನದ ಸಂಗತಿಗಳು:

ದಂತಕಥೆಗಳ ಪ್ರಕಾರ, ಸಂತ ಕಬೀರದಾಸರು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಜನಿಸಿದರು. ವೃತ್ತಿಯಲ್ಲಿ ನೇಕಾರರಾಗಿದ್ದ ಮುಸ್ಲಿಂ ದಂಪತಿಗಳು ಅವರನ್ನು ಬೆಳೆಸಿದರು. ನಂತರ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಅವರು ಆಧ್ಯಾತ್ಮಿಕತೆಯ ಕಡೆಗೆ ತಿರುಗಿದರು. ಅವರು ತಮ್ಮನ್ನು ಭಗವಾನ್ ರಾಮ ಮತ್ತು ಅಲ್ಲಾನ ಮಗು ಎಂದು ಕರೆದರು. ಅವರು ಎಲ್ಲಾ ಧರ್ಮಗಳನ್ನು ಸ್ವೀಕರಿಸಿದರು ಮತ್ತು ಯಾವುದೇ ಧಾರ್ಮಿಕ ತಾರತಮ್ಯಗಳನ್ನು ನಂಬಲಿಲ್ಲ. ಇದಲ್ಲದೆ ಎಲ್ಲಾ ಧರ್ಮದಲ್ಲಿಯೂ ಒಂದೇ ಪರಮಾತ್ಮನ ಅಸ್ತಿತ್ವವಿದೆ ಎಂದು ವಿವರಿಸಿದರು. ಅವರು 15ನೇ ಶತಮಾನದ ಪ್ರಸಿದ್ಧ ಕವಿ ಮಾತ್ರವಲ್ಲದೆ ಸಮಾಜ ಸುಧಾರಕರಾಗಿದ್ದರು. ಸಮಾಜದಲ್ಲಿ ಅಸ್ತಿತ್ವದಲ್ಲಿ ಮೂಢನಂಬಿಕೆಗಳನ್ನು ಖಂಡಿಸಿದರು ಮತ್ತು ಅವರ ಬರಹಗಳು ಭಕ್ತಿ ಚಳುವಳಿಯ ಮೇಲೆ ಗಮನಾರ್ಹವಾಗಿ ಪ್ರಭಾವ ಬೀರಿದವು. ಅಲ್ಲದೆ ಕಬೀರದಾಸರು ‘ಕಬೀರ್ ಪಂಥ್’ ಎಂಬ ಆಧ್ಯಾತ್ಮಿಕ ಸಮುದಾಯವನ್ನು ಸ್ಥಾಪಿಸಿದರು.

ಇದನ್ನೂ ಓದಿ: Narasimha Jayanti 2023: ಅಸುರರ ರಾಜ ಹಿರಣ್ಯಕಷಿಪುವಿನ ಸಂಹಾರಕ್ಕಾಗಿ ನರಸಿಂಹನಾದ ಮಹಾವಿಷ್ಣು

ಕಬೀರ ಜಯಂತಿಯ ಆಚರಣೆಗಳು:

ಸಂತ ಕಬೀರರ ಅನುಯಾಯಿಗಳು, ಕಬೀರ ಜಯಂತಿಯ ದಿನವನ್ನು ಸಂಪೂರ್ಣವಾಗಿ ಅವರ ಸ್ಮರಣಾರ್ಥವಾಗಿ ಆಚರಿಸುತ್ತಾರೆ. ಧಾರ್ಮಿಕ ನಂಬಿಕೆಗಳ ಪ್ರಕಾರ ಈ ಹಬ್ಬ ಪ್ರತಿ ವರ್ಷ ಜ್ಯೇಷ್ಠ ಮಾಸದ ಹುಣ್ಣಿಮೆಯಂದು ಬರುತ್ತದೆ. ವಾರಣಾಸಿಯಲ್ಲಿ ಎರಡು ದೇವಾಲಯಗಳಿವೆ. ಒಂದು ಹಿಂದೂ ಒಂದು ಮುಸ್ಲಿಂ ಇವೆರಡು ದೇವಾಲಯಗಳು ಸಂತ ಕಬೀರರಿಗೆ ಅರ್ಪಿತವಾಗಿದೆ. ಅವರ ಜನ್ಮ ದಿನವನ್ನು ಈ ದೇವಾಲಯಗಳಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಮತ್ತು ವಿವಿಧ ಭಾಗಗಳಿಂದ ಸಂತ ಕಬೀರರ ಅನುಯಾಯಿಗಳು ಈ ದೇವಾಲಯಗಳಿಗೆ ಬೇಟಿ ನೀಡುತ್ತಾರೆ ಮತ್ತು ಈ ದೇವಾಲಯಗಳಲ್ಲಿ ಆಚರಿಸಲಾಗುವ ಆರತಿ, ಕವಿತೆ ಪಠಣ ಮತ್ತು ಇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಮತ್ತು ವಿಶೇಷ ಪ್ರಸಾದವನ್ನು ತಯಾರಿಸಿ ಭಕ್ತರಿಗೆ ಹಂಚಲಾಗುತ್ತದೆ. ಹಲವೆಡೆ ಅವರ ಅನುಯಾಯಿಗಳು ಒಟ್ಟಿಗೆ ಸೇರಿ ಸತ್ಸಂಗಗಳನ್ನು ಏರ್ಪಡಿಸುತ್ತಾರೆ. ಇದು ವಿಶೇಷವಾಗಿ ಸಂತ ಕಬೀರರ ಜನ್ಮ ಸ್ಥಳವಾದ ವಾರಣಾಸಿಯಲ್ಲಿ ಇರುವ ಕಬೀರ ಮಠದಲ್ಲಿ ಪೂರ್ಣ ಉತ್ಸಾಹದಿಂದ ಆಚರಿಸಲಾಗುತ್ತದೆ.

ಕಬೀರದಾಸ ಜಯಂತಿಯ ದಿನ, ತಿಥಿ, ಸಮಯ:

ಈ ಬಾರಿ ಕಬೀರ ಜಯಂತಿಯನ್ನು ಜೂನ್ 4 ರಂದು ಆಚರಿಸಲಾಗುತ್ತದೆ. ಪೂರ್ಣಿಮೆ ತಿಥಿ ಜೂನ್ 3ನೇ ತಾರೀಕಿನಂದು ಬೆಳಗ್ಗೆ 11:16 ಕ್ಕೆ ಆರಂಭವಾಗಿ ಜೂನ್ 4 ನೇ ತಾರೀಕಿನಂದು 9:11 ಕ್ಕೆ ಕೊನೆಗೊಳ್ಳುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 12:52 pm, Fri, 2 June 23

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ