Aati Amavasya 2023: ತುಳುನಾಡಿನಲ್ಲಿ ಆಟಿ ಅಮವಾಸ್ಯೆ ಸಂಭ್ರಮ, ಪಾಲೆ ಕಷಾಯ ಏಕೆ ಸೇವಿಸಬೇಕು? ಅದರ ಹಿನ್ನೆಲೆ ಏನು?

ಆಟಿ ಅಮವಾಸ್ಯೆಯ ಪವಿತ್ರ ದಿನದಂದು ತುಳುವರು ಔಷಧೀಯ ಗುಣವಿರುವ ಹಾಲೆ ಮರದ ತೊಗಟೆಯ ಕಷಾಯವನ್ನು ಸೇವಿಸುತ್ತಾರೆ. ಈ ಕಷಾಯವನ್ನು ಏಕೆ ಸೇವಿಸಲಾಗುತ್ತದೆ. ಆ ಆಚರಣೆಯ ವೈಜ್ಞಾನಿಕ ಹಿನ್ನೆಲೆ ಏನೆಂಬುದರ ಮಾಹಿತಿ ಇಲ್ಲಿದೆ.

Aati Amavasya 2023: ತುಳುನಾಡಿನಲ್ಲಿ ಆಟಿ ಅಮವಾಸ್ಯೆ ಸಂಭ್ರಮ, ಪಾಲೆ ಕಷಾಯ ಏಕೆ ಸೇವಿಸಬೇಕು? ಅದರ ಹಿನ್ನೆಲೆ ಏನು?
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 17, 2023 | 11:31 AM

ತುಳುನಾಡು ತನ್ನ ಶ್ರೀಮಂತ ಆಚರಣೆ ಮತ್ತು ಸಂಸ್ಕೃತಿಗೆ ಹೆಸರಾದ ಬೀಡು. ಇಲ್ಲಿ ಪ್ರತಿಯೊಂದು ಆಚರಣೆಯನ್ನು ಕೂಡಾ ಶಿಸ್ತುಬದ್ಧವಾಗಿ ಪಾಲಿಸಲಾಗುತ್ತದೆ. ಪ್ರತಿಯೊಂದು ಮಾಸದಲ್ಲೂ ಬರುವ ಹಬ್ಬ ಹರಿದಿನಗಳನ್ನು ಬಹಳ ಶ್ರದ್ಧೆಯಿಂದ ಆಚರಿಸುತ್ತಾರೆ. ಅದರಂತೆ ಇಂದಿನಿಂದ ತುಳುವರಿಗೆ ಆಟಿ ತಿಂಗಳು ಆರಂಭ. ಆಟಿ ತಿಂಗಳಿನ ಆಟಿ ಅಮವಾಸ್ಯೆಯ ದಿನ ಔಷಧೀಯ ಗುಣವಿರುವ ಹಾಲೆ (ಪಾಲೆ) ಮರದ ತೊಗಟೆಯ ಕಷಾಯ ಕುಡಿಯುವ ಪದ್ದತಿ ಇದೆ. ಪ್ರಸ್ತುತ ಕಾಲಘಟ್ಟದಲ್ಲಿ ಅನೇಕರು ನಮ್ಮ ಹಿರಿಯರು ಆಚರಿಸಿಕೊಂಡು ಬಂದಂತಹ ಆರಣೆಗಳನ್ನು ಮೂಢನಂಬಿಕೆ ಎಂದು ದೂರುತ್ತಾರೆ. ಆದರೆ ಇಂತಹ ಆಚರಣೆಗಳ ಹಿಂದೆ ಅದರದ್ದೆ ಆದ ವೈಜ್ಞಾನಿಕ ಕಾರಣಗಳಿವೆ. ಅಷ್ಟಕ್ಕೂ ಈ ಕಷಾಯವನ್ನು ಜನರು ಏಕೆ ಸೇವಿಸುತ್ತಾರೆ, ಇದರ ಹಿನ್ನೆಲೆ ಏನೆಂಬುದನ್ನು ಇಂದು ತಿಳಿಯೋಣಾ.

ಪಾಲೆ ಕಷಾಯ ಏಕೆ ಸೇವಿಸಲಾಗುತ್ತದೆ:

ತುಳುನಾಡಿನ ಜನರು ಹಿಂದಿನಿಂದಲೂ ಆಟಿ ಅಮವಾಸ್ಯೆಯ ಈ ದಿನದಂದು ಮುಂಜಾನೆ ಬೇಗ ಎದ್ದು, ಔಷಧಿಯ ಮರವಾದ ಹಾಲೆ (ಪಾಲೆ)ಮರದ ತೊಗಟೆಗಳನ್ನು ತಂದು ಅದರಿಂದ ಕಷಾಯ ಮಾಡಿ, ಖಾಲಿ ಹೊಟ್ಟೆಯಲ್ಲಿ ಮನೆಯ ಪ್ರತಿಯೊಬ್ಬ ಸದಸ್ಯರೂ ಕಷಾಯವನ್ನು ಸೇವಿಸುತ್ತಾರೆ. ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯು ಕುಂಠಿತವಾಗುತ್ತದೆ, ಆದ್ದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಯಾವುದೇ ರೀತಿಯ ಹೊಟ್ಟೆ ಸಂಬಂಧಿ ಸಮಸ್ಯೆಗಳು ಬಾರದಂತೆ ತಡೆಯಲು, ಪವಿತ್ರ ಆಟಿ ಅಮವಾಸ್ಯೆಯ ದಿನದಂದು ಪಾಲೆ ಕಷಾಯವನ್ನು ಸೇವಿಸುವ ಪದ್ಧತಿ ರೂಢಿಯಲ್ಲಿದೆ. ಸಾಮಾನ್ಯವಾಗಿ ಆಟಿ ತಿಂಗಳು ಕಳೆದ ನಂತರ ಹಬ್ಬ ಹರಿದಿನಗಳು, ಜಾತ್ರೆಗಳು ಆರಂಭವಾಗುತ್ತದೆ, ಆ ಸಮಯದಲ್ಲಿ ಜನರು ಅನೇಕ ರುಚಿಕರವಾದ ಭಕ್ಷ್ಯಗಳನ್ನು ತಯಾರಿಸಿ ಸವಿಯುತ್ತಾರೆ, ಹೀಗಿರುವಾಗ ಆಟಿ ಅಮವಾಸ್ಯೆಯ ಈ ದಿನದಂದು ಪಾಲೆ ಕಷಾಯ ಕುಡಿಯುವದರಿಂದ ಅನಗತ್ಯ ಹೊಟ್ಟೆಗೆ ಸಂಬಂಧಿ ಕಾಯಿಲೆಗಳನ್ನು ತಡೆಯಬಹುದು ಎಂಬ ಕಾರಣಕ್ಕೆ ಪಾಲೆ ತೊಗಟೆಯ ಕಷಾಯವನ್ನು ಕುಡಿಯುವ ಆಚರಣೆಯು ಬಂದಿದೆ.

ಆಟಿ ಅಮವಾಸ್ಯೆಯ ದಿನದಂದು ಪಾಲೆ ಕೆತ್ತೆಯ ಕಷಾಯವನ್ನು ಸೇವಿಸಿದ ನಂತರ ಮೆಂತ್ಯೆ ಗಂಜಿಯನ್ನು ಸೇವಿಸುವ ಪದ್ಧತಿಯಿದೆ. ಇದು ಅಕ್ಕಿ, ಮೆಂತ್ಯ ಮತ್ತು ಬೆಲ್ಲದಿಂದ ತಯಾರಿಸಲಾದ ಒಂದು ಪೌಷ್ಟಿಕಾಂಶಯುಕ್ತ ಭಕ್ಷ್ಯವಾಗಿದೆ.

ಆಟಿ ಅಮವಾಸ್ಯೆ ಆಚರಣೆಯ ಹಿಂದಿನ ಇತಿಹಾಸ:

ಒಂದು ನಂಬಿಕೆಯ ಪ್ರಕಾರ, ಈ ದಿನದಂದು ಶಿವ ದೇವರು, ಪಾರ್ವತಿಯ ಭಕ್ತಿಗೆ ಒಳಿದು ಪಾರ್ವತಿಯನ್ನು ಪತ್ನಿಯಾಗಿ ಸ್ವೀಕರಿಸಿದರಂತೆ. ಹಾಗಾಗಿ ಈ ಆಟಿ ಅಮವಾಸ್ಯೆಯ ದಿನದಂದು ಭಕ್ತರು ಮುಂಜಾನೆ ಶಿವ ದೇವಾಲಕ್ಕೆ ಹೋಗಿ ಪವಿತ್ರ ತೀರ್ಥ ಸ್ನಾನ ಮಾಡಿ ದೇವರ ಕೃಪೆಗೆ ಪಾತ್ರರಾಗುತ್ತಾರೆ.

ಆಟಿ ಅಮವಾಸ್ಯೆಯ ದಿನ ಪಾಲೆ ಕಷಾಯವನ್ನು ಏಕೆ ಸೇವಿಸುತ್ತಾರೆ ಎಂಬುದರ ಹಿನ್ನೆಲೆ ನೋಡುವುದಾದರೆ, ಆಟಿ ತಿಂಗಳು ಧಾರಾಕಾರವಾಗಿ ಮಳೆ ಸುರಿಯುವ ಸಮಯ. ಹಿಂದಿನ ಕಾಲದಲ್ಲಿ ಈ ಸಮಯದಲ್ಲಿ ಎಡೆಬಿಡದೆ ಸುರಿಯುವ ಮಳೆಯ ಕಾರಣದಿಂದ ಜನರು ಮನೆಯಿಂದ ಹೊರಗೆ ಕಾಲಿಡಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ ರೋಗನಿರೋಧಕ ಶಕ್ತಿಯ ಕೊರತೆಯ ಕಾರಣದಿಂದಾಗಿ, ಈ ಸಮಯದಲ್ಲಿ ಜನರು ಅನೇಕ ಬಾರಿ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರು. ಈ ರೋಗಗಳು ಮತ್ತು ಕಾಯಿಲೆಗಳನ್ನು ಹೋಗಲಾಡಿಸಲು ಆಟಿ ಅಮವಾಸ್ಯೆಯ ದಿನ ವಿಶೇಷ ಔಷಧಿಯ ಶಕ್ತಿಯನ್ನು ಪಡೆಯುವ ಪಾಲೆ ಮರದ ತೊಗಟೆಯ ಕಷಾಯ ಮಾಡಿ ಸೇವಿಸುತ್ತಿದ್ದರು. ಇಂದಿಗೂ ಈ ಪದ್ಧತಿ ಆಚರಣೆಯಲ್ಲಿದೆ.

ಪಾಲೆ ಮರದ ತೊಗಟೆಯಿಂದ ತಯಾರಿಸಲಾಗುವ ಕಷಾಯ ಮುಂದಿನ ಆಟಿ ತಿಂಗಳಿನವರೆ ದೇಹಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ದೂರ ಮಾಡುವ ಶಕ್ತಿ ಹೊಂದಿದೆ ಎಂದು ನಂಬಲಾಗಿದೆ. ಇದಲ್ಲದೆ, ಪಾಲೆ ಮರದ ತೊಗಟೆಯನ್ನು ಆಯುರ್ವೇದದಲ್ಲಿ ಚರ್ಮದ ಕಾಯಿಲೆಗಳು, ಮಲೇರಿಯಾ ಜ್ವರ, ಭೇದಿ, ಅತಿಸಾರ, ಹಾವು ಕಡಿತ ಇತ್ಯಾದಿಗಳಿಗೆ ಚಿಕಿತ್ಸೆ ನೀಡಲು ಕಹಿ ಸಂಕೋಚಕ ಮೂಲಿಕೆಯಾಗಿ ಬಳಸಲಾಗುತ್ತದೆ.

ಇದನ್ನೂ ಓದಿ: 8+8+8 ನಿಯಮದ ಬಗ್ಗೆ ನಿಮಗೆ ತಿಳಿದಿದೆಯೇ? ಬದುಕಿನಲ್ಲಿ ಸಮಯದ ಸದುಪಯೋಗ ಪಡಿಸಿಕೊಳ್ಳಲು ಈ ಸರಳ ನಿಯಮ ಪಾಲಿಸಿ

ಪಾಲೆದ ಕಷಾಯ ತಯಾರಿ:

ಒಂದು ನಂಬಿಕೆಯ ಪ್ರಕಾರ, ಪಾಲೆ (ಹಾಲೆ) ಮರ ಆಟಿ ಅಮವಾಸ್ಯೆಯ ಈ ದಿನದಂದು ಮಾತ್ರ ವಿಶೇಷ ಔಷದೀಯ ಗುಣವನ್ನು ಹೊಂದಿರುತ್ತದೆಯಂತೆ. ಈ ದಿನ ಜನರು ಮುಂಜಾನೆ ಬೇಗ ಎದ್ದು, ಪಾಲೆ ಮರದ ಬಳಿ ಹೋಗಿ, ಚೂಪಾದ ಕಲ್ಲಿನ ಸಹಾಯದಿಂದ ಮರದ ತೊಗಟೆಯನ್ನು ಸೀಳಿ, ಆ ತೊಗಟೆಗಳನ್ನು ಮನೆಗೆ ತರುತ್ತಾರೆ. ನಂತರ ಅದನ್ನು ಸ್ವಚ್ಛ ಗೊಳಿಸಲಾಗುತ್ತದೆ. ಬಳಿಕ ಪಾಲೆ ಕೆತ್ತೆ, ಮೆಣಸು, ಕರಿ ಮೆಣಸು ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ, ಕಲ್ಲಿನಲ್ಲಿ ಅರೆಯಲಾಗುತ್ತದೆ. ನಂತರ ‘ಬೊಳ್ಳು ಕಲ್ಲು’ (ಬಿಳಿ ಕಲ್ಲು) ಎನ್ನುವ ಕಲ್ಲನ್ನು ಬೆಂಕಿಯಲ್ಲಿ ಚೆನ್ನಾಗಿ ಬಿಸಿ ಮಾಡಿ, ತಯಾರಿಸಿಟ್ಟ ರಸಕ್ಕೆ ಆ ಕಲ್ಲನ್ನು ಹಾಕುತ್ತಾರೆ, ಏಕೆಂದರೆ ಅದರಲ್ಲಿ ಏನಾದರೂ ವಿಷಾಂಶವಿದ್ದರೆ ಅದು ಹೋಗಲಿ ಎಂಬ ಕಾರಣಕ್ಕೆ. ನಂತರ ಖಾಲಿ ಹೊಟ್ಟೆಯಲ್ಲಿ ಈ ಕಹಿಯಾದ ಕಷಾಯವನ್ನು ಸೇವಿಸಿ, ವಾಡಿಕೆ ಪ್ರಕಾರ ಮೆಂತ್ಯೆ ಗಂಜಿಯನ್ನು ಸೇವಿಸಲಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ