Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship Tips: ಪುರುಷರ ಈ ರಹಸ್ಯಗಳನ್ನು ಮಹಿಳೆಯರು ತಿಳಿದುಕೊಂಡ್ರೆ ಸಂಸಾರ ಸ್ವರ್ಗವಾದಂತೆ

ದಾಂಪತ್ಯ ಜೀವನವೇ ಇರಲಿ, ಪ್ರೇಮ ಸಂಬಂಧವಿರಲಿ ಮಹಿಳೆಯರಂತೆ ಪುರುಷರು ಕೆಲವು ರಹಸ್ಯಗಳನ್ನು ಕಾಪಾಡಿಕೊಳ್ಳುತ್ತಾರಂತೆ. ಕೆಲವು ವಿಚಾರಗಳನ್ನು ಸಮಯ ಸಂದರ್ಭ ನೋಡಿ ಹೇಳುತ್ತಾರೆ. ಇನ್ನು ಕೆಲ ವಿಷಯಗಳು ತಮ್ಮ ಪತ್ನಿ ಹಾಗೂ ಪ್ರೇಯಸಿಗೆ ತಿಳಿದರೆ ಏನಂದುಕೊಳ್ಳುತ್ತಾರೋ ಎನ್ನುವ ಭಯದಿಂದ ಬಾಯಿಬಿಡುವುದೇ ಇಲ್ಲ. ಹೀಗಾಗಿ ಹೆಚ್ಚಿನ ವಿಷಯಗಳನ್ನು ತಮ್ಮಲ್ಲಿಯೇ ಇಟ್ಟುಕೊಂಡು ಅದು ಯಾರಿಗೂ ತಿಳಿಯದಂತೆ ಕಾಪಾಡಿಕೊಳ್ಳುತ್ತಾರೆ. ಹಾಗಾದ್ರೆ ಪುರುಷರ ಸಪ್ತ ರಹಸ್ಯಗಳೇನು? ಎನ್ನುವ ಕುತೂಹಲಕಾರಿ ಮಾಹಿತಿ ಇಲ್ಲಿದೆ.

Relationship Tips: ಪುರುಷರ ಈ ರಹಸ್ಯಗಳನ್ನು ಮಹಿಳೆಯರು ತಿಳಿದುಕೊಂಡ್ರೆ ಸಂಸಾರ ಸ್ವರ್ಗವಾದಂತೆ
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 31, 2025 | 4:26 PM

ಹೆಣ್ಣು ತನ್ನ ಪತ್ನಿ ಅಥವಾ ಪ್ರೇಯಸಿಯನ್ನು ಅತಿಯಾಗಿ ಪ್ರೀತಿಸಬಲ್ಲನು. ತನ್ನವಳಿಗಾಗಿ ಏನು ಮಾಡಲು ಸಿದ್ಧವಿರುತ್ತಾನೆ. ಆದರೆ ತನ್ನವಳು ಕೈಕೊಟ್ಟರೆ ಅಥವಾ ಬಿಟ್ಟು ಹೋದರೆ ಎನ್ನುವ ಭಯ ಗಂಡಸಿನಲ್ಲಿ ಇದ್ದೆ ಇರುತ್ತದೆ. ಅದಲ್ಲದೇ, ಈ ರಹಸ್ಯಗಳು ಅವಳಿಗೆ ತಿಳಿದರೆ ಆಕೆ ಯಾವ ರೀತಿ ವರ್ತಿಸುತ್ತಾಳೆ, ಅಥವಾ ತನ್ನ ಬಗ್ಗೆ ತಪ್ಪು ತಿಳಿದುಕೊಂಡರೆ ಏನು ಮಾಡುವುದು ಎನ್ನುವ ಆತಂಕವಿರುತ್ತದೆ. ಹೀಗಾಗಿ ಕೆಲವು ವಿಷಯಗಳನ್ನು ಆಕೆಗೆ ಗೊತ್ತಾಗದಂತೆ ಕಾಪಾಡುತ್ತಾನೆ.

  • ಪತ್ನಿಯ ಈ ಗುಣಗಳು ಇಷ್ಟವಾಗುತ್ತೆ : ಪತಿಗೆ ತನ್ನ ಪತ್ನಿಯೂ ಏನು ಮಾಡಿದರೂ ಇಷ್ಟ ಪಡುತ್ತಾನೆ. ಆದರೆ ಆ ಬಗ್ಗೆ ನೇರವಾಗಿ ಹೆಂಡತಿಯ ಬಳಿ ಹೇಳದೇ ಇರಬಹುದು. ಧರಿಸುವ ಬಟ್ಟೆ, ಊಟ ತಿಂಡಿ, ಹೇರ್ ಸ್ಟೈಲ್, ತನ್ನೊಂದಿಗೆ ನಡೆದುಕೊಳ್ಳುವ ರೀತಿ, ಪಟ ಪಟ ಮಾತನಾಡುವುದು ಈ ಎಲ್ಲವೂ ಇಷ್ಟವೇ. ನಿಮ್ಮ ಈ ಗುಣಗಳನ್ನು ಕಂಡು ಒಳಗೊಳಗೇ ಖುಷಿ ಪಡುತ್ತಾನೆ.
  • ಪುರುಷನು ಮಾನಸಿಕವಾಗಿ ಬಲಹೀನ : ಗಂಡು ಎಷ್ಟೇ ದೇಹದಲ್ಲಿ ಬಲದಲ್ಲಿ ಗಟ್ಟಿ ಮುಟ್ಟಾಗಿದ್ದರೂ ಮಾನಸಿಕವಾಗಿ ಬಲಹೀನನಾಗಿರುತ್ತಾನೆ. ಆದರೆ ಹೆಣ್ಣು ಎಲ್ಲಾ ಸಂದರ್ಭದಲ್ಲಿ ಧೈರ್ಯ ಕಳೆದುಕೊಳ್ಳುವುದಿಲ್ಲ. ಒಂದು ಕ್ಷಣ ಈ ಜೀವನವೇ ಬೇಡಪ್ಪ ಎಂದು ನಿಟ್ಟಿಸಿರು ಬಿಟ್ಟರೂ ಆಕೆಯಲ್ಲಿ ಎಲ್ಲಾ ನಿಭಾಯಿಸುವ ಮಾನಸಿಕವಾಗಿ ಗಟ್ಟಿಯಾಗಿರುತ್ತಾಳೆ. ಆದರೆ ಗಂಡು ಮಕ್ಕಳು ಸನ್ನಿವೇಶಗಳಲ್ಲಿ ಏನು ಮಾಡಲು ಆಗದೇ ಕೈ ಕಟ್ಟಿ ಕೊಂಡು ಕುಳಿತುಕೊಳ್ಳಬೇಕಾಗುತ್ತದೆ. ಈ ವೇಳೆ ಹೆಣ್ಣಿನ ಬೆಂಬಲ, ನೆರವು ಆಕೆಗೆ ಬೇಕೇ ಬೇಕು. ಆದರೆ ತನ್ನನ್ನು ಮಾನಸಿಕವಾಗಿ ಬಲಹೀನ ಎಂದು ತೋರಿಸಿಕೊಳ್ಳಲು ಇಷ್ಟ ಪಡುವುದಿಲ್ಲ. ತನ್ನ ಬಲಹೀನತೆ ತಿಳಿದರೆ ತನ್ನಾಕೆ ಹೇಗೆ ಸ್ವೀಕರಿಸುತ್ತಾಳೋ ಎನ್ನುವುದಿರುತ್ತದೆ.
  • ಮಕ್ಕಳಂತೆ ಮುದ್ದಾಡುವುದೆಂದರೆ ಇಷ್ಟ : ಪ್ರತಿಯೊಬ್ಬ ಗಂಡಸಿಗೆ ತನ್ನ ಪತ್ನಿಯೂ ರಾಣಿಯಂತೆ ಕಾಣಿಸಿಕೊಳ್ಳುತ್ತಾಳೆ. ಆಕೆಯ ಪ್ರೀತಿ ಸಂಪಾದಿಸಲು ನಾನಾ ರೀತಿಯ ಪ್ರಯತ್ನ ಮಾಡುತ್ತಿರುತ್ತಾನೆ ತನ್ನ ಮಗುವಿನಂತೆ ಕಾಳಜಿ ವಹಿಸುವ ಗಂಡನಿಗೆ ಪತ್ನಿಯನ್ನು ಮಕ್ಕಳಂತೆ ಮುದ್ದಾಡುವುದೆಂದರೆ ಇಷ್ಟ. ಆದರೆ ಈ ಬಗ್ಗೆ ಆಕೆಯ ಬಳಿ ಹೇಳಿಕೊಳ್ಳುವುದೇ ಇಲ್ಲ. ಒಂದು ವೇಳೆ ಈ ವಿಷಯ ತಿಳಿದರೆ ಆಕೆಯ ತನ್ನ ಬಗ್ಗೆ ತಪ್ಪಾಗಿ ತಿಳಿದುಕೊಂಡರೆ ಎನ್ನುವುದಿರುತ್ತದೆ ಹಾಗೂ ತನ್ನ ಸಂಕೋಚ ಸ್ವಭಾವದಿಂದಲೂ ಈ ಬಗ್ಗೆ ಹೇಳಿಕೊಳ್ಳುವುದೇ ಇಲ್ಲ.
  • ತನ್ನವಳನ್ನು ಖುಷಿಪಡಿಸುವುದೇ ಪುರುಷನ ಪರಮಗುರಿ : ತನ್ನವಳನ್ನು ಖುಷಿಯಾಗಿಟ್ಟುಕೊಳ್ಳುವುದು ಪ್ರತಿಯೊಬ್ಬ ಪುರುಷರ ಗುರಿಯಾಗಿರುತ್ತಾನೆ. ಹೀಗಾಗಿ ಸಮಯ ಸಂದರ್ಭಕ್ಕೆ ಅನುಗುಣವಾಗಿ ಉಡುಗೊರೆಗಳನ್ನು ಕೊಡುತ್ತಾನೆ. ತನ್ನವಳ ಮನಗೆಲ್ಲಲು ನಾನಾ ರೀತಿಯ ಕಸರತ್ತು ಹಾಗೂ ಸಾಹಸಗಳನ್ನು ಮಾಡುತ್ತಿರುತ್ತಾನೆ.
  • ಪತ್ನಿ ತುಂಟಾಟ ಪತಿಗೆ ಅಚ್ಚುಮೆಚ್ಚು : ಪ್ರತಿಯೊಬ್ಬ ಗಂಡಸು ಬಯಸುವುದು ತನ್ನ ಹೆಂಡತಿ ತನ್ನೊಂದಿಗೆ ನಗು ನಗುತ್ತಾ ಇರಲಿ. ಅದಲ್ಲದೇ ಪುರುಷರು ತುಂಟಾಟ ಮಾಡುತ್ತಾ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕವು ಪ್ರೇಮ ಪಕ್ಷಿ ವಿಹಾರಿಸಿಬೇಕೆನ್ನುವುದಿರುತ್ತದೆ. ಜೊತೆಗೆ ಇದ್ದಾಗ ಮಾಡಿದ ತಮಾಷೆ, ತುಂಟಾಟದ ಮಾತುಗಳನ್ನು ಸದಾ ನೆನೆಪಿಸಿಕೊಳ್ಳುತ್ತಾನೆ. ಆದರೆ ಈ ಬಗ್ಗೆ ಮಹಿಳೆಯ ಬಳಿ ಹೇಳಿಕೊಳ್ಳುವುದೇ ಇಲ್ಲ.
  • ಪುರುಷನಿಗೂ ಬೇಕು ಹೊಗಳಿಕೆ : ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಕೆಲಸ ಕಾರ್ಯಗಳನ್ನು ಎಲ್ಲರೂ ಮೆಚ್ಚಿ ಹೊಗಳಬೇಕು ಎನ್ನುವುದಿರುತ್ತದೆ. ಈ ವಿಷಯದಲ್ಲಿ ಪುರುಷನು ಕೂಡ ಹೊರತಾಗಲ್ಲ. ತನ್ನ ಮನದರಸಿ ತಾನು ಮಾಡು ಕೆಲಸಗಳಿಗೆ ಮೆಚ್ಚುಗೆ ವ್ಯಕ್ತಪಡಿಸಲಿ, ಹೊಗಳಿ ಎಂದು ಬಯಸುತ್ತಾನೆ. ಆದರೆ ಈ ಬಗ್ಗೆ ಬಾಯಿಬಿಟ್ಟು ಹೇಳುವುದಿಲ್ಲ. ಆದರೆ ಪತಿಯೂ ತನ್ನವಳಿಂದ ಹೊಗಳಿಕೆ ಬಯಸುತ್ತಾನೆ.
  • ಈ ವಿಚಾರಗಳಿಗೆ ಹೆದರುವುದೇ ಹೆಚ್ಚು : ಗಂಡು ಹೆಣ್ಣನ್ನು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಬಲ್ಲನು. ಆದರೆ ತನ್ನ ಸಂಗಾತಿಯ ಆರೋಗ್ಯ ಕೈಕೊಟ್ಟರೆ ಅದನ್ನು ಸಹಿಸಿಕೊಳ್ಳಲು ಆಗುವುದಿಲ್ಲ. ಅದರಲ್ಲಿ ಮುಟ್ಟಿನ ಸಂದರ್ಭದಲ್ಲಿ ಆಕೆಯೂ ಅನುಭವಿಸುವ ನೋವನ್ನು ನೋಡಲಾಗದು. ಅದಲ್ಲದೇ ಸಣ್ಣ ಪುಟ್ಟ ವಿಷಯಕ್ಕೂ ಸಿಡುಕುವುದು, ವಾದ ವಿವಾದಗಳಿಗೆ ಪುರುಷನ್ನು ಸಹಜವಾಗಿ ಹೆದರುತ್ತಾನೆ. ಇಂತಹ ಸಂದರ್ಭದಲ್ಲಿ ಏರ್ಪಟ್ಟಾಗ ತಾನೇ ಸೋಲು ಪರಿಸ್ಥಿತಿಯನ್ನು ತಿಳಿಯಾಗಿಸಲು ಮುಂದಾಗುತ್ತಾನೆ. ಆದರೆ ಈ ಸೂಕ್ಷ್ಮ ವಿಚಾರದ ಬಗ್ಗೆ ತನ್ನ ಪತ್ನಿ ಅಥವಾ ಪ್ರೇಯಸಿ ಬಳಿ ಹೇಳಿಕೊಳ್ಳುವುದಿಲ್ಲ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ಮಾರ್ಚ್​ 22ರಂದು ಅಖಂಡ ಕರ್ನಾಟಕ ಬಂದ್​ಗೆ ಕರೆ: ಯಾರೆಲ್ಲಾ ಬೆಂಬಲ?
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ವಿಶ್ವವಿಖ್ಯಾತ ಹಂಪಿ ಉತ್ಸವ ಕಳೆದ ಸಲಕ್ಕಿಂತ ಅದ್ದೂರಿಯಾಗಿದೆ: ಜಮೀರ್ ಅಹ್ಮದ್
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದೇವರ ಮೇಲಿರೋ ಹೂ ಕೊಡಿ; ತುಳುವಿನಲ್ಲಿ ಮುದ್ದಾಗಿ ಕೇಳಿದ ಶಿಲ್ಪಾ ಶೆಟ್ಟಿ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ದುಬಾರಿ ಬೈಕ್​ಗಳು ಕಳ್ಳನ ಪ್ರಥಮ ಆದ್ಯತೆ, ಅವು ಸಿಗದಿದ್ದರೆ ಬೇರೆಯವೂ ಓಕೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್​ನಿಂದ ಹಲ್ಲೆ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಶಾಲು ಹೊದಿಸಿದ ವಿಜಯೇಂದ್ರರ ಬೆನ್ನುತಟ್ಟಿದ ಮುಖ್ಯಮಂತ್ರಿ ಸಿದ್ದರಾಮಯ್ಯ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
Shilpa Shetty: ಕಟೀಲು ದೇವಾಲಯಕ್ಕೆ ಬಂದ ನಟಿ ಶಿಲ್ಪಾ ಶೆಟ್ಟಿ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ತಮ್ಮ ಹೇಳಿಕೆಯಲ್ಲಿ ಶ್ರೀರಾಮುಲು ಶಿಂಧೆಯನ್ನು ಹತ್ತಾರು ಬಾರಿ ನೆನೆಯುತ್ತಾರೆ
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್
ಕ್ರಿಕೆಟ್ ತಂಡದ ಜೊತೆ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಸುದೀಪ್