AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನ್ಯೂಜಿಲೆಂಡ್​ನಲ್ಲಿ ತಮ್ಮ ಮಫ್ಲರ್ ಕತೆ ಹೇಳುತ್ತಾ ಭಾವುಕರಾದ ಪ್ರಧಾನಿ ಮೋದಿ

ನ್ಯೂಜಿಲೆಂಡ್​ನಲ್ಲಿ ತಮ್ಮ ಮಫ್ಲರ್ ಕತೆ ಹೇಳುತ್ತಾ ಭಾವುಕರಾದ ಪ್ರಧಾನಿ ಮೋದಿ

ಸುಷ್ಮಾ ಚಕ್ರೆ
|

Updated on: Jul 11, 2026 | 6:45 PM

Share

ಆ ದಿನ ಸಾಮಾನ್ಯ ಪ್ರಜೆಯಾಗಿ ನ್ಯೂಜಿಲೆಂಡ್​ಗೆ ಬಂದಿದ್ದ ನಾನು ಈ ಬಾರಿ ಪ್ರಧಾನಿಯಾಗಿ ಆಗಮಿಸಿದ್ದೇನೆ. ಅಂದು ನ್ಯೂಜಿಲೆಂಡ್​ನ ಪ್ರಜೆ ನನಗೆ ನೀಡಿದ್ದ ಮಫ್ಲರ್, ಟೋಪಿಯನ್ನು ಇಂದಿಗೂ ನಾನು ಇಟ್ಟುಕೊಂಡಿದ್ದೇನೆ ಎಂದು ಮೋದಿ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ. ನ್ಯೂಜಿಲೆಂಡ್‌ಗೆ 2 ದಿನಗಳ ಅಧಿಕೃತ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ, ಆಕ್ಲೆಂಡ್‌ನಲ್ಲಿ ನಡೆದ ಅದ್ಧೂರಿ ಸಮುದಾಯ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಪ್ರಧಾನಿಯಾಗಿ ಇದು ತಮ್ಮ ಮೊದಲ ಭೇಟಿಯಾಗಿದ್ದರೂ, ಈ ಪ್ರವಾಸವು 25ರಿಂದ 30 ವರ್ಷಗಳ ಹಿಂದಿನ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ ಎಂದರು.

ಆಕ್ಲೆಂಡ್, ಜುಲೈ 11: ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi in New Zealand) ಇಂದು ನ್ಯೂಜಿಲೆಂಡ್‌ನಲ್ಲಿರುವ ಅನಿವಾಸಿ ಭಾರತೀಯರೊಂದಿಗೆ ಅತ್ಯಂತ ಭಾವನಾತ್ಮಕ ಕ್ಷಣವೊಂದನ್ನು ಹಂಚಿಕೊಂಡಿದ್ದಾರೆ. ಸುಮಾರು 30 ವರ್ಷಗಳ ಹಿಂದೆ ನರೇಂದ್ರ ಮೋದಿಯಿನ್ನೂ ರಾಜಕೀಯಕ್ಕೆ ಕಾಲಿಡದ ಸಂದರ್ಭದಲ್ಲಿ ನ್ಯೂಜಿಲೆಂಡ್​ಗೆ ಬಂದಿದ್ದರಂತೆ. ಆಗ ನ್ಯೂಜಿಲೆಂಡ್ ಪ್ರಜೆಯೊಬ್ಬರು ಅವರಿಗೆ ಉಡುಗೊರೆಯಾಗಿ ಮಫ್ಲರ್, ಟೋಪಿ, ಹ್ಯಾಂಡ್ ಗ್ಲೌಸ್ ಕೊಟ್ಟಿದ್ದಂತೆ. ಆ ಮಫ್ಲರ್ ಅನ್ನೇ ಇಂದು ಧರಿಸಿಕೊಂಡು ಬಂದಿದ್ದೇನೆ ಎಂದು ಮೋದಿ ತಾವು ಹಾಕಿಕೊಂಡು ಬಂದಿದ್ದ ಮಫ್ಲರ್ ಅನ್ನು ಅನಿವಾಸಿ ಭಾರತೀಯರ ಮುಂದೆ ಎತ್ತಿ ಹಿಡಿದಿದ್ದಾರೆ. ಈ ವೇಳೆ ಅಲ್ಲಿದ್ದ ಭಾರತೀಯರು ಭಾರೀ ಕರತಾಡನ ಮಾಡಿದ್ದಾರೆ.

ಆ ದಿನ ಸಾಮಾನ್ಯ ಪ್ರಜೆಯಾಗಿ ನ್ಯೂಜಿಲೆಂಡ್​ಗೆ ಬಂದಿದ್ದ ನಾನು ಈ ಬಾರಿ ಪ್ರಧಾನಿಯಾಗಿ ಆಗಮಿಸಿದ್ದೇನೆ. ಅಂದು ನ್ಯೂಜಿಲೆಂಡ್​ನ ಪ್ರಜೆ ನನಗೆ ನೀಡಿದ್ದ ಮಫ್ಲರ್, ಟೋಪಿಯನ್ನು ಇಂದಿಗೂ ನಾನು ಇಟ್ಟುಕೊಂಡಿದ್ದೇನೆ ಎಂದು ಮೋದಿ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.

“ನಿಮ್ಮ ಕಣ್ಣೆದುರಿಗಿರುವ ಈ ಮಫ್ಲರ್ ಅನ್ನು 25-30 ವರ್ಷಗಳ ಹಿಂದೆ ಒಬ್ಬ ನ್ಯೂಜಿಲೆಂಡ್ ಪ್ರಜೆ ನನಗೆ ಉಡುಗೊರೆಯಾಗಿ ನೀಡಿದ್ದರು. ಕಳೆದ ಇಷ್ಟು ವರ್ಷಗಳಲ್ಲಿ ನಾನು ಇದನ್ನು ಹಲವು ಬಾರಿ ಬಳಸಿದ್ದೇನೆ ಮತ್ತು ನಿಮ್ಮ ಪ್ರೀತಿಯನ್ನು ನಾನು ಹೇಗೆ ಜೋಪಾನವಾಗಿಟ್ಟಿದ್ದೇನೋ, ಹಾಗೆಯೇ ಈ ಮಫ್ಲರ್ ಅನ್ನು ಇಂದಿಗೂ ಅತ್ಯಂತ ಜಾಗರೂಕತೆಯಿಂದ ಕಾಯ್ದುಕೊಂಡಿದ್ದೇನೆ” ಎಂದು ಮೋದಿ ಭಾವುಕರಾಗಿ ನುಡಿದರು.

ನ್ಯೂಜಿಲೆಂಡ್‌ಗೆ 2 ದಿನಗಳ ಅಧಿಕೃತ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ, ಆಕ್ಲೆಂಡ್‌ನಲ್ಲಿ ನಡೆದ ಅದ್ಧೂರಿ ಸಮುದಾಯ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಪ್ರಧಾನಿಯಾಗಿ ಇದು ತಮ್ಮ ಮೊದಲ ಭೇಟಿಯಾಗಿದ್ದರೂ, ಈ ಪ್ರವಾಸವು 25ರಿಂದ 30 ವರ್ಷಗಳ ಹಿಂದಿನ ನೆನಪುಗಳನ್ನು ಮರುಕಳಿಸುವಂತೆ ಮಾಡಿದೆ ಎಂದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More