ಬಿಗಿಯಾದ ಜೀನ್ಸ್ ಧರಿಸುವುದರಿಂದ ಕಾಡಬಹುದು ಆರೋಗ್ಯ ಸಮಸ್ಯೆ
ಜೀನ್ಸ್ ಎಂದಿಗೂ ಮಾಸದ ಫ್ಯಾಷನ್ ಆಗಿದೆ. ಅದರಲ್ಲೂ ಇತ್ತೀಚಿಗೆ ಬಿಗಿಯಾದ ಜೀನ್ಸ್ ಧರಿಸುವುದು ಹೊಸ ಟ್ರೆಂಡ್ ಆಗಿದ್ದು, ಎಲ್ಲಾ ಉಡುಪುಗಳ ಜೊತೆಗೆ ಹೊಂದಿಕೊಳ್ಳುವ ಈ ಬಿಗಿಯಾದ ಜೀನ್ಸ್ ಧರಿಸುವುದರಿಂದ ಆರೋಗ್ಯದ ಸಮಸ್ಯೆಗಳು ಕಾಡಬಹುದು. ಬಿಗಿಯಾದ ಜೀನ್ಸ್ ಧರಿಸುವುದಕ್ಕೂ ಆರೋಗ್ಯಕ್ಕೂ ಏನು ಸಂಬಂಧ ಅಂತಾ ನೀವು ಯೋಚನೆ ಮಾಡುತ್ತಿದ್ದರೆ, ಇದು ಯಾವ ರೀತಿಯಾಗಿ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುತ್ತದೆ ಎಂಬ ಮಾಹಿತಿ ಇಲ್ಲಿದೆ.
ಜೀನ್ಸ್ ಎಂದೂ ಮಾಸದ ಫ್ಯಾಷನ್ ಆಗಿದೆ. ಬೆಲ್ ಬಾಟಮ್, ಬಾಯ್ ಫ್ರೆಂಡ್ ಜೀನ್ಸ್, ಫ್ಲೇರ್ ಜೀನ್ಸ್, ಬಿಯಾದ ಜೀನ್ಸ್ (Skinny jeans) ಹೀಗೆ ಅನೇಕ ಬಗೆಯ ಜೀನ್ಸ್ಗಳಿವೆ. ಆಧುನಿಕತೆ ಮತ್ತು ಫ್ಯಾಷನ್ ಹೆಸರಿನಲ್ಲಿ ಇತ್ತೀಚಿಗೆ ಹೆಚ್ಚಿನ ಜನರು ಟೈಟ್ ಜೀನ್ಸ್ಗಳನ್ನು ಧರಿಸುತ್ತಿದ್ದಾರೆ. ಇಂದು ಇದು ಫ್ಯಾಷನ್ ಸಂಕೇತವಾಗಿ ಮಾರ್ಪಟ್ಟಿದೆ. ಹುಡುಗರಿಗಿಂತ ಹುಡುಗಿಯರು ಹೆಚ್ಚು ಬಿಗಿಯಾದ ಜೀನ್ಸ್ ಧರಿಸುತ್ತಾರೆ. ಬಿಗಿಯಾದ ಜೀನ್ಸ್ ಸುಂದರವಾದ ನೋಟವನ್ನು ನೀಡುವ ಕಾರಣ ಹಾಗೂ ಇದು ಹೆಚ್ಚಾಗಿ ಎಲ್ಲಾ ಉಡುಗೆಗಳೊಂದಿಗೂ ಹೊಂದಿಕೊಳ್ಳುವ ಕಾರಣ ಅನೇಕ ಮಹಿಳೆಯರು ಹೆಚ್ಚಾಗಿ ಬಿಗಿಯಾದ ಜೀನ್ಸ್ ಧರಿಸಲು ಇಷ್ಟಪಡುತ್ತಾರೆ. ಬಿಗಿಯಾದ ಜೀನ್ಸ್ ಧರಿಸುವುದು ಸುಂದರವಾಗಿ ಕಾಣಿಸಬಹುದು ನಿಜ. ಆದರೆ ಇದು ಆರೋಗ್ಯಕದ ಮೇಲೂ ಅಡ್ಡಪರಿಣಾಮವನ್ನು ಉಂಟುಮಾಡಬಹುದು. ಬಿಗಿಯಾದ ಜೀನ್ಸ್ ಧರಿಸುವುದು ಆರೋಗ್ಯಕ್ಕೆ ಹೇಗೆ ಅಡ್ಡಪರಿಣಾಮ ಬೀರುತ್ತದೆ ಎಂಬ ಬಗ್ಗೆ ನೀವು ಯೋಚಿಸುತ್ತಿದ್ದೀರಾ, ಈ ಕುರಿತ ಮಾಹಿತಿ ಇಲ್ಲಿದೆ.
ಬಿಗಿಯಾದ ಜೀನ್ಸ್ ಧರಿಸುವುದರಿಂದ ಕಾಡುವ ಆರೋಗ್ಯ ಸಮಸ್ಯೆಗಳು
ಸೋಂಕಿನ ಅಪಾಯ:
ವಾಸ್ತವವಾಗಿ ಬಿಗಿಯಾದ ಜೀನ್ಸ್ ಧರಿಸುವುದು ನಿಮ್ಮ ನರಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಮತ್ತು ಇದು ನಿಮ್ಮ ಚರ್ಮದ ಮೇಲೆ ಸೋಂಕಿನ ಅಪಾಯವನ್ನು ಕೂಡ ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ ಬಿಗಿಯಾದ ಜೀನ್ಸ್ ಧರಿಸಿದ ನಂತರ ಅನೇಕ ಜನರು ಚರ್ಮದ ಮೇಲೆ ಊತ ಮತ್ತು ದದ್ದುಗಳಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇದಲ್ಲದೆ ಬಿಗಿಯಾದ ಜೀನ್ಸ್ನ್ನು ದೀರ್ಘಕಾಲದವರೆಗೆ ಧರಿಸುವುದರಿಂದ ತೊಡೆಯ ಭಾಗದ ರಕ್ತ ಪರಿಚಲನೆಯೂ ಹದಗೆಡುತ್ತದೆ. ಮತ್ತು ಆ ಪ್ರದೇಶದಲ್ಲಿ ದದ್ದುಗಳು ಕಾಣಿಸಿಕೊಳ್ಳುವ ಅಪಾಯವೂ ಕೂಡ ಹೆಚ್ಚಿರುತ್ತದೆ. ಏಕೆಂದರೆ ಬಿಗಿಯಾದ ಜೀನ್ಸ್ ಚರ್ಮಕ್ಕೆ ಅಂಟಿಕೊಳ್ಳುವ ಕಾರಣ, ದೇಹದ ಬೆವರು ಒಣಗುವುದಿಲ್ಲ, ಇದರಿಂದ ತುರಿಗೆ ಪ್ರಾರಂಭವಾಗಿ ಸೋಂಕಿಗೆ ಕಾರಣವಾಗುತ್ತದೆ.
ಸ್ನಾಯುಗಳ ದೌರ್ಬಲ್ಯ:
ಬಿಗಿಯಾದ ಜೀನ್ಸ್ಗಳನ್ನು ನಿರಂತರವಾಗಿ ಧರಿಸುವುದರಿಂದ ಹೊಟ್ಟೆಯ ಕೆಳಭಾಗ ಮತ್ತು ಸೊಂಟದ ಸ್ನಾಯುಗಳು ಕ್ರಮೇಣ ದುರ್ಬಲಗೊಳ್ಳುತ್ತವೆ. ಬಿಗಿಯಾದ ಜೀನ್ಸ್ ಧರಿಸಿದಾಗ ಚರ್ಮಕ್ಕೆ ಅದರ ಅಂಟುಕೊಳ್ಳುವಿಕೆಯು ತುಂಬಾ ವೇಗವಾಗಿರುತ್ತದೆ. ಇದು ಮೂಳೆಗಳು ಮತ್ತು ಕೀಲುಗಳ ಚಲನೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ ಮತ್ತು ಇದರಿಂದಾಗಿ ಬೆನ್ನು ಮತ್ತು ಸೊಂಟ, ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.
ಇದನ್ನೂ ಓದಿ: ಶಾರ್ಟ್ ಕುರ್ತಾ ಜೊತೆ ಜೀನ್ಸ್ ಪ್ಯಾಂಟ್ ಟ್ರೆಂಡ್
ತ್ವಚೆಯಲ್ಲಿ ತುರಿಕೆ ಮತ್ತು ಉರಿ:
ದೀರ್ಘಕಾಲ ಬಿಗಿಯಾದ ಜೀನ್ಸ್ ಧರಿಸುವುದರಿಂದ ಚರ್ಮದಲ್ಲಿ ತೀವ್ರ ತುರಿಕೆ ಮತ್ತು ಉರಿ ಉಂಟಾಗುತ್ತದೆ. ಅಲ್ಲದೆ ಈ ಜೀನ್ಸ್ ಧರಿಸುವುದರಿಂದ ಚರ್ಮಕ್ಕೆ ಗಾಳಿಯ ಹರಿವು ಇರುವುದಿಲ್ಲ. ಇದರಿಂದ ಬೆವರು ಒಣಗದೆ, ಚರ್ಮದಲ್ಲಿ ತೇವಾಂಶ ಹಾಗೆಯೇ ಉಳಿದುಬಿಡುತ್ತದೆ. ಇದು ತ್ವಚೆಯಲ್ಲಿ ತುರಿಕೆ ಮತ್ತು ಉರಿ ಉಂಟಾಗಲು ಕಾರಣವಾಗುತ್ತದೆ. ಅಷ್ಟೇ ಅಲ್ಲ ಬಿಗಿಯಾದ ಜೀನ್ಸ್ ಧರಿಸುವುದರಿಂದ ಮಹಿಳೆಯರಲ್ಲಿ ವಲ್ವಡಿನಿಯಾ ಎಂಬ ಕಾಯಿಲೆಯ ಅಪಾಯವೂ ಹೆಚ್ಚಾಗುತ್ತದೆ.
ಕಿಬ್ಬೊಟ್ಟೆಯ ನೋವು:
ಬಿಗಿಯಾದ ಜೀನ್ಸ್ ಧರಿಸುವುದರಿಂದ ಕಿಬ್ಬೊಟ್ಟೆಯ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಇದರಿಂದಾಗಿ ರಕ್ತಪರಿಚಲನೆ ನಿಧಾನವಾಗುತ್ತದೆ. ಸಹಜವಾಗಿ ಇದು ಕಿಬ್ಬೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳಲು ಕಾರಣವಾಗುತ್ತದೆ. ಹಾಗಾಗಿ ನಿಯಮಿತವಾಗಿ ಬಿಗಿಯಾದ ಬೀನ್ಸ್ ಪ್ಯಾಂಟ್ ಧರಿಸುವುದನ್ನು ತಪ್ಪಿಸಿ.
ಮೂತ್ರದ ಸೋಂಕುಗಳು:
ಬಿಗಿಯಾದ ಜೀನ್ಸ್ ಧರಿಸಿದಾಗ ಅದು ಬೆವರನ್ನು ಒಣಗಲು ಬಿಡದೆ ತೇವಾಂಶವನ್ನು ಹಾಗೆಯೆ ಹಿಡಿದಿಟ್ಟುಕೊಳ್ಳುತ್ತದೆ. ಇದರಿಂದ ಬ್ಯಾಕ್ಟೀರಿಯಾಗಳು ಬೆಳವಣಿಗೆಯಾಗುತ್ತವೆ. ಈ ಬ್ಯಾಕ್ಟೀರಿಯಾಗಳ ಹೆಚ್ಚಾಗಿ ಮಹಿಳೆಯರಲ್ಲಿ ಮೂತ್ರದ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ