Updated on:Jun 15, 2023 | 12:47 PM
ಶಾರ್ಟ್ ಕುರ್ತಾಗಳೊಂದಿಗೆ ಜೀನ್ಸ್ ಧರಿಸುವುದು ನಿಮ್ಮನ್ನು ಸಿಂಪಲ್ ಆಗಿ ಕೂಡ ಸುಂದರವಾಗಿ ಕಾಣುವಂತೆ ಮಾಡುತ್ತದೆ. ಜೊತೆಗೆ ಸಾಕಷ್ಟು ಆರಾಮದಾಯಕವೂ ಹೌದು.
ನೀವು ಆಫೀಸ್ ಅಥವಾ ಕಾಲೇಜಿಗೆ ಪ್ರತಿದಿನ ಧರಿಸಬಹುದಾಗಿದೆ. ಫ್ಯಾಷನ್ ವಿಚಾರಕ್ಕೆ ಬಂದರೆ, ಈ ರೀತಿಯ ಸಂಯೋಜನೆಯ ಉಡುಪು ನಿಮಗೆ ಸಂಪ್ರದಾಯಿಕ ಲುಕ್ ನೀಡುತ್ತದೆ.
ಕಾಟನ್ಗಳಲ್ಲಿಯೂ ಕುರ್ತಿಗಳು ಲಭ್ಯವಿರುವುದರಿಂದ ಈ ಬೇಸಿಗೆಯಲ್ಲಿ ಸುಡು ಬಿಸಿಲು, ಬೆವರಿದ್ದರೂ ಕೂಡ ಸಾಕಷ್ಟು ಆರಾಮ ನೀಡುತ್ತದೆ.
ಟ್ರೆಂಡ್‌ಗಳು ಬರಬಹುದು ಮತ್ತು ಹೋಗಬಹುದು, ಆದರೆ ಮಹಿಳೆಯರಿಗೆ ಕುರ್ತಾದ ಕ್ರೇಜ್ ಎಂದಿಗೂ ಕಡಿಮೆಯಾಗಲ್ಲ.
ಶಾರ್ಟ್ ಕುರ್ತಾಗಳೊಂದಿಗೆ ಜೀನ್ಸ್ ಧರಿಸುವುರಿಂದ ಸ್ಟೈಲಿಶ್ ಲುಕ್ ನೀಡುತ್ತದೆ ಜೊತೆಗೆ ಜೀನ್ಸ್ಗಳಲ್ಲಿ ಪಾಕೆಟ್ ಇರುವುರಿಂದ ಮೊಬೈಲ್ ಅಥವಾ ಅಗತ್ಯ ವಸ್ತುಗಳನ್ನು ಇಟ್ಟುಕೊಳ್ಳಬಹುದು.
ಶಾರ್ಟ್ ಕುರ್ತಾಗಳು ಸಾಮಾನ್ಯವಾಗಿ ಮೊಣಕಾಲಿನಿಂದ ಸ್ವಲ್ಪ ಮೇಲಕ್ಕೆ ಇರುತ್ತದೆ. ಜೊತೆಗೆ ಸಾಕಷ್ಟು ಬಣ್ಣಗಳಲ್ಲಿಯೂ ಕೂಡ ಲಭ್ಯವಿರುತ್ತದೆ. ನಿಮ್ಮ ನೆಚ್ಚಿನ ಬಣ್ಣದ ಕುರ್ತಾ ಆಯ್ಕೆ ಮಾಡಿಕೊಳ್ಳಬಹುದು.
Published On - 12:45 pm, Thu, 15 June 23