- TV9 Kannada Kannada News Photos Beauty Tips: Let's try these tricks to keep your Kajal last all day long
Beauty Tips: ಕಣ್ಣಿಗೆ ಕಾಡಿಗೆ ಹಚ್ಚುತ್ತೀರಾ? ಹಾಗಿದ್ದರೆ ಈ ಟಿಪ್ಸ್ ಫಾಲೋ ಮಾಡಿ
ನಿಮ್ಮ ಕಣ್ಣಿನ ಅಂದವನ್ನು ಹೆಚ್ಚಿಸುವ ಕಾಡಿಗೆಯನ್ನು ಹಚ್ಚುವ ಸರಿಯಾದ ಕ್ರಮದ ಬಗ್ಗೆ ತಿಳಿದುಕೊಳ್ಳಿ. ಇದು ದಿನ ಪೂರ್ತಿ ಕಾಡಿಗೆ ಉಳಿದುಕೊಳ್ಳಲು ಸಹಾಯ ಮಾಡುತ್ತದೆ.
Updated on:Jun 15, 2023 | 11:46 AM

ಕಣ್ಣಿನ ಅಂದವನ್ನು ಹೆಚ್ಚಿಸುವಲ್ಲಿ ಕಾಡಿಗೆ ಮುಖ್ಯ ಪಾತ್ರವನ್ನು ವಹಿಸುತ್ತದೆ. ಆದರೆ ಹಚ್ಚಿದ ಕಾಡಿಗೆ ದಿನ ಪೂರ್ತಿ ಉಳಿಯುವುದಿಲ್ಲ ಎಂಬುದೇ ಸಾಕಷ್ಟು ಮಹಿಳೆಯರು ಹೇಳುವ ಸಮಸ್ಯೆಯಾಗಿದೆ.

ಕಾಡಿಗೆ ಮಹಿಳೆಯರ ಅತ್ಯಂತ ಪ್ರೀತಿಯ ಮೇಕಪ್ ಕಿಟ್ಗಳಲ್ಲಿ ಒಂದಾಗಿದೆ. ಆದರೆ ಕಣ್ಣಿನಲ್ಲಿ ನೀರು ಬರುವುದು, ಕಣ್ಣನ್ನು ಉಜ್ಜಿಕೊಳ್ಳುವುದರಿಂದ ಹಚ್ಚಿರುವ ಕಾಡಿಗೆ ದೀರ್ಘಕಾಲದ ವರೆಗೆ ಉಳಿದುಕೊಳ್ಳುವುದಿಲ್ಲ.

ಆದ್ದರಿಂದ ನಿಮ್ಮ ಕಣ್ಣಿನ ಅಂದವನ್ನು ಹೆಚ್ಚಿಸುವ ಕಾಡಿಗೆಯನ್ನು ಹಚ್ಚುವ ಸರಿಯಾದ ಕ್ರಮದ ಬಗ್ಗೆ ತಿಳಿದುಕೊಳ್ಳಿ. ಇದು ದಿನ ಪೂರ್ತಿ ಕಾಡಿಗೆ ಉಳಿದುಕೊಳ್ಳಲು ಸಹಾಯ ಮಾಡುತ್ತದೆ.

ಕಾಡಿಗೆ ಹಚ್ಚುವ ಮೊದಲು ನಿಮ್ಮ ಕಣ್ಣಿನ ಪ್ರದೇಶವು ಸ್ವಚ್ಛವಾಗಿ ಎಣ್ಣೆ ಮುಕ್ತವಾಗಿರಬೇಕು. ಮುಖ ತೊಳೆದ ನಂತರ ಎಣ್ಣೆ-ಮುಕ್ತವಾಗಿರುವ ಟೋನರನ್ನು ಬಳಸುವುದು ಸೂಕ್ತ.

ಕಾಡಿಗೆಯನ್ನು ಕಣ್ಣಿನ ಒಳಭಾಗದಲ್ಲಿ ಹಚ್ಚದಿರಿ. ಇದು ಕಣ್ಣು ಉರಿ ಬರಲು ಕಾರಣವಾಗುತ್ತದೆ. ಆದ್ದರಿಂದ ಕಣ್ಣಿನ ರೆಪ್ಪೆಗೂದಲಿನ ಮಧ್ಯೆ ಹಚ್ಚಿ.

ಕಣ್ಣಿಗೆ ಕಾಡಿಗೆ ಹಚ್ಚಿದ ನಂತರ ಐಶ್ಯಾಡೋ ಬ್ರೆಶ್ ಅಥವಾ ಬೆರಳುಗಳಿಂದ ಕಣ್ಣಿನ ಅಂಚಿನಲ್ಲಿ ತೆಳುವಾಗಿ ಪೌಡರ್ ಹಚ್ಚಿ. ಇದು ನಿಮ್ಮ ಕಾಡಿಗೆ ದಿನ ಪೂರ್ತಿ ಉಳಿಯಲು ಸಹಾಯ ಮಾಡುತ್ತದೆ.
Published On - 11:41 am, Thu, 15 June 23

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.
Read More