50ನೇ ವಯಸ್ಸಲ್ಲೂ ಪ್ರೀತಿ ಜಿಂಟಾಗೆ ಹೇಗೆ ಇಷ್ಟೆಲ್ಲ ಗ್ಲಾಮರ್? ಅವರು ಫಾಲೋ ಮಾಡೋ ವಿಧಾನ ಇಲ್ಲಿದೆ
ಪ್ರೀತಿ ಜಿಂಟಾ ಅವರ ಯೌವನದ ಕಾಂತಿಯ ರಹಸ್ಯವೇನು? ಅವರು ದಿನಕ್ಕೆ ಆರು ರಿಂದ ಏಳು ಸಣ್ಣ ಊಟಗಳನ್ನು ಸೇವಿಸುತ್ತಾರೆ, ಹಣ್ಣುಗಳು, ತರಕಾರಿಗಳು ಮತ್ತು ಮೊಳಕೆ ಕಾಳುಗಳನ್ನು ಆದ್ಯತೆ ನೀಡುತ್ತಾರೆ. ನಿತ್ಯ 3 ಲೀಟರ್ ನೀರು ಮತ್ತು ತಾಜಾ ಹಣ್ಣಿನ ರಸ ಸೇವಿಸುವುದು, 8 ಗಂಟೆಗಳ ನಿದ್ದೆ ಮತ್ತು ಯೋಗ, ಜಿಮ್ ವ್ಯಾಯಾಮ ಅವರ ಆರೋಗ್ಯಕರ ಜೀವನಶೈಲಿಯ ಭಾಗ.

ನಟಿ ಪ್ರೀತಿ ಜಿಂಟಾ ಅವರು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದವರು. 90ರ ದಶಕದಲ್ಲಿ ಹುಟ್ಟಿ ಬೆಳೆದವರಿಗೆ ಅವರ ಪರಿಚಯ ಚೆನ್ನಾಗಿಯೇ ಇರುತ್ತದೆ. ಅವರ ಕೆನ್ನೆಯ ಮೇಲಿರೋ ಡಿಂಪಲ್ಗೆ ಫಿದಾ ಆಗದವರೇ ಇಲ್ಲ. ಅವರಿಗೆ ಇಂದು (ಜನವರಿ 31) ಜನ್ಮದಿನ. ಈ ವಯಸ್ಸಲ್ಲೂ ಅವರಿಗೆ ಇಷ್ಟೊಂದು ಬ್ಯೂಟಿ ಇರೋದು ಹೇಗೆ? ಅವರು ಫಾಲೋ ಮಾಡೋದು ಏನನ್ನು? ಅವರು ಏನು ತಿನ್ನುತ್ತಾರೆ ಎನ್ನುವ ಬಗ್ಗೆ ಇಲ್ಲಿದೆ ವಿವರ.
ಪ್ರೀತಿ ಜಿಂಟಾ ಅವರು ಚರ್ಮವನ್ನು ಯಾವಾಗಲೂ ಮಾಯ್ಚರೈಸ್ ಮಾಡಿಟ್ಟುಕೊಳ್ಳುತ್ತಾರೆ. ಅವರು ಆರೋಗ್ಯಕರ ಆಹಾರ ಸೇವನೆ ಮಾಡುತ್ತಾರೆ. ಅವರು ಹೆಚ್ಚೆಚ್ಚು ಮಾಯ್ಚಿರೈಸರ್ ಬಳಸುತ್ತಾರೆ. ಅವರು ಊಟದಲ್ಲಿ ಪೌಷ್ಟಿಕತೆ ಇರುವಂತೆ ನೋಡಿಕೊಳ್ಳುತ್ತಾರೆ. ಹಣ್ಣು, ಸಲಾಡ್, ಮೊಳಕೆ ಕಾಳುಗಳನ್ನು ಹೆಚ್ಚು ಸೇವನೆ ಮಾಡುತ್ತಾರೆ. ಸಕ್ಕರೆ ಹಾಕದೇ ಮಾಡಿದ ಜ್ಯೂಸ್ ಕುಡಿಯುತ್ತಾರೆ.
6-7 ಊಟ
ನಿತ್ಯ ಪ್ರೀತಿ ಜಿಂಟಾ ಅವರು ಆರರಿಂದ ಏಳು ಸಣ್ಣ ಊಟವನ್ನು ಮಾಡುತ್ತಾರೆ. ಜೊತೆಗೆ ಮೂರು ಸಾಮಾನ್ಯ ಊಟ ಮಾಡುತ್ತಾರೆ. ಬ್ರೆಡ್, ಅನ್ನದಿಂದ ದೂರ ಇರುತ್ತಾರೆ. ಇದು ಅವರ ಚರ್ಮದ ಆರೋಗ್ಯವನ್ನು ಉತ್ತಮವಾಗಿಸಿದೆ.
ಪ್ರೀತಿ ಜಿಂಟಾ ಸದಾ ನೀರನ್ನು ಕುಡಿಯುತ್ತಾರೆ. ಇದರಿಂದ ಅವರ ಚರ್ಮದ ಕಾಂತಿ ಹೆಚ್ಚಿದೆ. ಅವರ ಕಾಂತಿಯುತ ಚರ್ಮಕ್ಕೆ ಇದೂ ಒಂದು ಕಾರಣ. ಅವರು ನಿತ್ಯ 3 ಲೀಟರ್ ನೀರು ಕುಡಿಯುತ್ತಾರೆ. ಇದರ ಜೊತೆಗೆ ತಾಜಾ ಹಣ್ಣಿನ ಜ್ಯೂಸ್ ಹಾಗೂ ಎಳನೀರು ಕುಡಿಯುತ್ತಾರೆ. ಎಳನೀರು ಕುಡಿಯುವುದರಿಂದ ಅವರ ದೇಹ ಸದಾ ತಂಪಾಗಿರುತ್ತದೆ. ರಾತ್ರಿ ಮಲಗುವಾಗ ಕ್ರೀಮ್ ಹಚ್ಚಿ ಪ್ರೀತಿ ಮಲಗುತ್ತಾರೆ.
ಆರೋಗ್ಯ ಚೆನ್ನಾಗಿರಬೇಕು ಎಂದರೆ ನಿದ್ದೆ ತುಂಬಾನೇ ಮುಖ್ಯ. ಅದರಲ್ಲೂ ರಾತ್ರಿಯ ನಿದ್ದೆ ಪ್ರಮುಖವಾಗುತ್ತದೆ. ಅವರು ನಿತ್ಯ 8 ಗಂಟೆ ನಿದ್ದೆ ಮಾಡುತ್ತಾರೆ. ರಾತ್ರಿ 9 ಗಂಟೆಗೆ ನಿದ್ರಿಸೋ ಅವರು ಆರು ಗಂಟೆಗೆ ಎದ್ದು ಯೋಗ ಹಾಗೂ ಜಿಮ್ ಮಾಡುತ್ತಾರೆ.
ಇದನ್ನೂ ಓದಿ: ಪ್ರೀತಿ ಜಿಂಟಾ ಧರಿಸಿರುವ ಈ ಬೆಳ್ಳಗಿನ ಗೌನ್ ಬೆಲೆ ಕೆಲವು ಲಕ್ಷ ರೂಪಾಯಿಗಳು
ಪ್ರೀತಿ ಜಿಂಟಾ ಇಷ್ಟು ವರ್ಷ ಚಿತ್ರರಂಗದಿಂದ ದೂರವೇ ಇದ್ದರು. ಈಗ ಅವರು ನಟನೆಗೆ ಮರಳಿದ್ದಾರೆ. ‘ಲಾಹೋರ್ 1947’ ಚಿತ್ರದಲ್ಲಿ ಸನ್ನಿ ಡಿಯೋಲ್ ಜೊತೆ ಅವರು ತೆರೆ ಹಂಚಿಕೊಂಡಿದ್ದಾರೆ. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಅವರು ಐಪಿಎಲ್ನಲ್ಲಿ ‘ಪಂಜಾಬ್ ಕಿಂಗ್ಸ್’ ಚಿತ್ರದ ಮಾಲಕಿ ಕೂಡ ಹೌದು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.