Horoscope 20 August: ದಿನಭವಿಷ್ಯ, ಆರೋಗ್ಯದ ಬಗ್ಗೆ ಗಮನಕೊಡಿ ಹಳೆಯ ರೋಗವು ಮತ್ತೆ ಕಾಣಿಸಿಕೊಳ್ಳಬಹುದು

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ಆಗಸ್ಟ್ 20) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Horoscope 20 August: ದಿನಭವಿಷ್ಯ, ಆರೋಗ್ಯದ ಬಗ್ಗೆ ಗಮನಕೊಡಿ ಹಳೆಯ ರೋಗವು ಮತ್ತೆ ಕಾಣಿಸಿಕೊಳ್ಳಬಹುದು
ಪ್ರಾತಿನಿಧಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Aug 20, 2023 | 12:02 AM

ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ನೋಡುವುದು ಕೆಲವರಿಗೆ ಅಭ್ಯಾಸ. ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿದುಕೊಳ್ಳುತ್ತಾರೆ. ಜೊತೆಗೆ ಪಂಚಾಂಗವನ್ನು ಸಹ ಓದುತ್ತಾರೆ. ಹಾಗಾದರೆ ಇಂದಿನ (2023 ಆಗಸ್ಟ್ 20) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಸಿಂಹ ಮಾಸ, ಮಹಾನಕ್ಷತ್ರ: ಮಘಾ, ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಚತುರ್ಥಿ, ನಿತ್ಯನಕ್ಷತ್ರ: ಹಸ್ತಾ, ಯೋಗ: ಸಾಧ್ಯ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 20 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 51 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 05:15 ರಿಂದ 06:51ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:36 ರಿಂದ 02:10ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:43 ರಿಂದ 05:17ರ ವರೆಗೆ.

ಮೇಷ ರಾಶಿ: ದೂರದ ಬಂಧುವನ್ನು ನೀವು ಭೇಟಿಯಾಗಿ ಪರಿಚಯ ಮಾಡಿಕೊಳ್ಳುವಿರಿ. ಸಂಗಾತಿಯ ಮಾತನ್ನು ಕೇಳದೇ ಇದ್ದುದಕ್ಕೆ ಬೇಸರವಾಗಬಹುದು. ವಿವಾಹದ ಮಾತುಕತೆಗೆ ಕುಟುಂಬದ ಜೊತೆ ತೆರಳುವಿರಿ. ನೀವು ಸ್ವತಂತ್ರವಾಗಿದ್ದುದು ನೆಮ್ಮದಿಯಿಂದ ಇರುವಿರಿ. ಭೂಮಿಯ ವ್ಯವಹಾರದಿಂದ ಲಾಭವು ಕಡಿಮೆ ಆಗುವುದು. ಆದಾಯದ ಮೂಲವನ್ನು ಹೆಚ್ಚು ಮಾಡಿಕೊಳ್ಳುವಿರಿ. ನಿಮಗೆ ಬೇಡ ಎನಿಸಿದ ವಿಚಾರದ ಬಗ್ಗೆ ನೀವು ಏನನ್ನೂ ಹೇಳದೇ ಇರುವಿರಿ. ಕಲಾವಿದರಾಗುವ ಕನಸು ನನಸಾಗುವುದು. ಕಾರ್ತಿಕೇಯನ ದರ್ಶನವನ್ನು ಮಾಡಿ.

ವೃಷಭ ರಾಶಿ: ನಿದ್ರೆಯಲ್ಲಿ ಕಂಡ ಕನಸಿನಿಂದ ನಿಮಗೆ ಭಯವಾಗುವುದು. ಧಾರ್ಮಿಕ ವಿಚಾರದಲ್ಲಿ ನಿಮಗೆ ಭಕ್ತಿಯು ಕಡಿಮೆ ಆಗಬಹುದು. ಆಹಾರದಿಂದ ಆರೋಗ್ಯವು ಕೆಡುವುದು. ನಿಮಗೆ ಬೇಕಾದ ವಸ್ತುವೇ ಆದರೂ ಅದನ್ನು ಕೇಳಿದವರಿಗೆ ಕೊಡುವಿರಿ. ನಿಮ್ಮ ನಂಬಿಕೆಗೆ ಘಾಸಿಯಾಗುವ ಸಾಧ್ಯತೆ ಇದೆ. ಖರ್ಚಿನ ಬಗ್ಗೆ ನಿರ್ದಿಷ್ಟ ಮಿತಿ ಇರಲಿ. ಸಹಾಯವನ್ನು ಕೇಳಿದವರಿಗೆ ಇಲ್ಲ ಎನ್ನಲು ಮನಸ್ಸು ಬಾರದು. ಯಾರನ್ನೋ ಹೋಲಿಸಿಕೊಂಡು ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವಿರಿ. ಎಲ್ಲರೂ ಇದ್ದರೂ ಏಕಾಂಗಿ ಎಂದು ಅನ್ನಿಸಬಹುದು. ನಾಗ ದೇವರ ಆರಾಧನೆಯನ್ನು ಮಾಡಿ.

ಮಿಥುನ ರಾಶಿ: ನಿಮ್ಮ ಕಾರ್ಯಕ್ಕೆ ವಿಘ್ನವು ಬರಲಿದ್ದು ನಕಾರಾತ್ಮಕ ನಿಮ್ಮಲ್ಲಿ ಆತಂಕವು ಸೃಷ್ಟಿಯಾಗಬಹುದು. ಕೆಲವು ವಿಚಾರಗಳನ್ನು ನೀವು ನಿರ್ಲಕ್ಷ್ಯಿಸದಿದ್ದರೆ ಅದು ದೊಡ್ಡದಾಗಬಹುದು. ಆಪ್ತರ ಸಲಹೆಯನ್ನು ಪಡೆಯಲು ನಿಮಗೆ ಮುಜುಗರವಾದೀತು. ಮಕ್ಕಳ ಬಗ್ಗೆ ನಿಮಗೆ ಅನುಕಂಪ ಬರುವುದು. ಎಲ್ಲರೂ ನಿಮ್ಮನ್ನೇ ಗುರಿ ಮಾಡಿಕೊಂಡು ಮಾತನಾಡುವರು. ಮರೆಯಾಗಿದ್ದ ಸ್ಥಿರಾಸ್ತಿಯ ಕಲಹವು ಮತ್ತೆ ಹುಟ್ಟಕೊಳ್ಳುವುದು. ಯಾರೂ ನಿಮ್ಮನ್ನು ನೋಡಿಕೊಳ್ಳುವುದಿಲ್ಲ ಎಂದು ಅನ್ನಿಸಬಹುದು. ಆಪ್ತರಿಗೆ ಅಮೂಲ್ಯವಾದ ಕೊಡುಗೆಯನ್ನು ಕೊಡುವಿರಿ. ಕಳೆದ ದುಃಖದ ಸಮಯವನ್ನು ಮತ್ತೆ ನೆನಪಿಸಿಕೊಳ್ಳುವಿರಿ.

ಕರ್ಕ ರಾಶಿ: ನಿಮ್ಮವರನ್ನು ಕಳೆದುಕೊಳ್ಳುತ್ತೇನೆ ಎಂಬ ಭಯವು ಇರುವುದು. ವಾಸ್ತವದಲ್ಲಿ ಬದುಕುವುದನ್ನು ಕಲಿಯಿರಿ. ನಿಮ್ಮ ನೋವನ್ನು ಕೇಳಲು ಯಾರೂ ಇಲ್ಲವೆಂದು ಬೇಸರವಾಗುವುದು. ಸಿಟ್ಟನ್ನು ನಿಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳಿ. ಕೃಷಿಯಲ್ಲಿ ನಿಮಗೆ ಆಸಕ್ತಿಯು ಹೆಚ್ಚಾಗಬಹುದು. ಇಂದಿನ‌ ನಿಮ್ಮ ಕೆಲಸವು ನೆಮ್ಮದಿಯನ್ನು ಕೊಡುವುದು. ನಿಮ್ಮ ಉದ್ಯಮವನ್ನು ವಿಸ್ತರಿಸಲು ಯೋಚಿಸುವಿರಿ. ಸಂಗಾತಿಯಿಂದ ನಿಮಗೆ ಉಡುಗೊರೆಯು ಸಿಗುವುದು. ವಿದೇಶೀ ಬಂಧುಗಳ ಜೊತೆ ವ್ಯಾವಹಾರಿಕ ಮಾತುಕತೆಗಳು‌ ನಡೆಯುವುದು. ದೇವರ ದರ್ಶನಕ್ಕೆ ಹೋಗುವ ಮನಸ್ಸಾಗುವುದು.

ಸಿಂಹ ರಾಶಿ: ಹಳೆಯ ರೋಗವು ಮತ್ತೆ ಕಾಣಿಸಿಕೊಳ್ಳಬಹುದು. ಮನೆಯವರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಹಿರಿಯಿಂದ ಆಶೀರ್ವಾದವನ್ನು ಪಡೆಯುವಿರಿ. ವೈಯಕ್ತಿಕ ಕೆಲಸವನ್ನು ಮಾಡಿಕೊಳ್ಳುವಿರಿ. ನೀವು ನಿರೀಕ್ಷಿಸಿದ ಹಣವು ನಿಮಗೆ ಬಾರದೇ ಹೋಗಬಹುದು. ನಿಮ್ಮ ಹೆಸರಿನಿಂದ ಯಾರನ್ನಾದರೂ ವಂಚಿಸಿಬಹುದು. ಸಹೋದರನ ಸಹಾಯವನ್ನು ನೀವು ಕೇಳುವಿರಿ. ವಾಹನ ಖರೀದಿಸುವ ಸ್ಥಿತಿಯು ಬರಲಿದ್ದು ಸಾಲ ಮಾಡಬೇಕಾಗಬಹುದು. ಏಕಾಂತವು ನಿಮಗೆ ಬಲವನ್ನು ಕೊಡಬಹುದು. ಶಿವನ ಆರಾಧನೆಯನ್ನು ಹೆಚ್ಚು ಮಾಡಿ.

ಕನ್ಯಾ ರಾಶಿ: ಸಂಕಷ್ಟದ ನಿವಾರಣೆಗೆ ದೇವರಲ್ಲಿ ಪ್ರಾರ್ಥನೆಯನ್ನು ಮಾಡಿ. ವಿಶ್ವಾಸವನ್ನು ಗಳಿಸುವ ವಿಚಾರದಲ್ಲಿ ಸೋಲುವಿರಿ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡುವಿರಿ. ಮನೆಯಲ್ಲಿ ಅತಿಥಿಗಳು ಇರುವರು. ದೂರದಲ್ಲಿರುವ ಪ್ರೀತಿಪಾತ್ರರನ್ನು ಭೇಟಿ ಮಾಡುವಿರಿ. ವಿದ್ಯಾರ್ಥಿಗಳು ಪರೀಕ್ಷೆಯ ಭಯದಲ್ಲಿರುವರು. ವಿವಾಹದ ಸಂಭ್ರಮದಲ್ಲಿ ಭಾಗಿಯಾಗುವಿರಿ. ಆತ್ಮೀಯರ ಒಡನಾಟದಿಂದ ಸಂತೋಷವು ನೆಮ್ಮದಿಯು ಹೆಚ್ಚುವುದು. ಸಂಸಾರವು ಸುಖ ಎಂದು ಅನ್ನಿಸಬಹುದು. ಪ್ರಯಾಣದಲ್ಲಿ ಅಪರಿಚಿತರ ಸಖ್ಯವಾಗುವುದು. ನಿಮ್ಮ ಪೂರ್ಣ ಪರಿಚಯನ್ನು ಮಾಡಿಕೊಡುವುದು ಬೇಡ.

ತುಲಾ ರಾಶಿ: ಬೇರೆ ಕಡೆಯಿಂದ ಬರುವ ಅತಿಯಾದ ಒತ್ತಡದಿಂದ ಮನಸ್ಸು ಹಾಳಾಗುವುದು. ಸ್ತ್ರೀಯರ ಸಹಾಯಕ್ಕೆ ನೀವು ಹೋಗುವಿರಿ. ನೀರಿನಿಂದ ಭೀತಿಯು ಇದ್ದರೆ ನೀರಿನ‌ ಪ್ರದೇಶದ ಕಡೆ ಹೋಗುವುದು ಬೇಡ. ಯಾರದೋ ಮೂಲಕ ನಿಮ್ಮ ಕೆಲಸವನ್ನು ಮಾಡಿಕೊಳ್ಳುವಿರಿ. ಹಣಕಾಸಿನ ವಿಚಾರದಲ್ಲಿ ನಿಮಗೆ ತೃಪ್ತಿ ಇರದು. ಹೊರಗಿನ ಆಹಾರವು ನಿಮ್ಮ ಆರೋಗ್ಯವನ್ನು ಕೆಡಿಸೀತು. ಕಲಾವಿದರಿಗೆ ಅವಕಾಶಗಳು ಸಿಗಬಹುದು. ಪ್ರಯಾಣದಿಂದ ಆಯಾಸವಾಗಬಹುದು. ಕುಟುಂಬದ ಜವಾಬ್ದಾರಿಯು ಬರಬಹುದು. ಆಸ್ತಿಯ ವಿಚಾರದಲ್ಲಿ ಕಲಹವಾಗುವುದು.

ವೃಶ್ಚಿಕ ರಾಶಿ: ಇಂದು ನೀವು ಬಹಳ ಜಾಣ್ಮೆಯಿಂದ ವ್ಯವಹಾರವನ್ನು ಮಾಡುವಿರಿ. ಭೂಮಿಯ ಖರೀದಿಯನ್ನು ನೀವು ಮಾಡವ ಯೋಚನೆ ಇರಲಿದೆ. ನಿಮ್ಮ ಆರ್ಥಿಕ ಸ್ಥಿತಿಯು ನಿಮಗೆ ಸಮಾಧಾನವನ್ನು ಕೊಡುವುದು. ಹಳೆಯ ವಸ್ತುಗಳನ್ನು ನೀವು ಮಾರಾಟ ಮಾಡುವಿರಿ. ತಾಳ್ಮೆಯನ್ನು ಕಳೆದುಕೊಳ್ಳಲು ನಿಮ್ಮ ಬಗ್ಗೆ ಇರುವ ಪೂರ್ವಾಗ್ರಹವು ಬದಲಾದೀತು. ಬಲದಿಂದ‌ ಆಗದ ಕಾರ್ಯವನ್ನು ಯುಕ್ತಿಯಿಂದ ಮಾಡುವುದು ಸೂಕ್ತ. ಇಷ್ಟದೇವರ ದರ್ಶನವನ್ನು ಮಾಡುವಿರಿ. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುವರು. ಮಾತುಗಳನ್ನು ಕಡಿಮೆ ಮಾಡಿದಷ್ಟು ಒಳ್ಳೆಯದೇ.

ಧನು ರಾಶಿ: ಸಂಬಂಧಗಳನ್ನು ನಿಮ್ಮ ಬಳಸಿಕೊಳ್ಳಬಹುದು. ನಿಮ್ಮ ಕೆಲಸದಲ್ಲಿ ನೀವು ತೊಡಗಿಕೊಳ್ಳಿ. ಮನಸ್ತಾಪಗಳು ನೆಮ್ಮದಿಯನ್ನು ಹಾಳು ಮಾಡುವುದು. ನಿಮ್ಮ ನಡತೆಯ ದುರುಪಯೋಗವಾಗಲಿದೆ. ಬಂದ ಹಣವು ಮತ್ಯಾವುದೋ ರೀತಿಯಿಂದ ಹೋಗಬಹುದು. ಸಂಗಾತಿಯಿಂದ ನಿಮ್ಮ ಯೋಚನೆಗೆ ಪ್ರೋತ್ಸಾಹವು ಸಿಗಲಿದೆ‌. ಅಪರಿಚಿತ ಕರೆಗಳಿಗೆ ಸ್ಪಂದಿಸುವುದು ಬೇಡ. ನಿಮ್ಮ ಸಂತೋಷವನ್ನು ಕೆಲವರಿಗೆ ನೋಡಲಾಗದು. ಹಿರಿಯರ ಜೊತೆ ತೆರಳಿ ವಿವಾಹದ ಮಾತುಕತೆಯನ್ನು ಮಾಡುವಿರಿ. ಧಾರ್ಮಿಕ ಕಾರ್ಯಗಳಲ್ಲಿ ನೀವು ಮಗ್ನರಾಗಿರುವಿರಿ. ನಿಮ್ಮದಲ್ಲದ ವಿಚಾರವನ್ನು ಕಿವಿಗೆ ಹಾಕಿಕೊಳ್ಳುವುದು ಬೇಡ.

ಮಕರ ರಾಶಿ: ನೀವು ಇಂದು ನಿರೀಕ್ಷಿತ ಹಂತಕ್ಕೆ ಹೋಗುತ್ತಿರುವುದು ಸಂತೋಷದ ಸಂಗತಿಯಾಗಲಿದೆ. ದೂರ ಪ್ರಯಾಣವು ನಿಮಗೆ ಖುಷಿ ಕೊಡಬಹುದು. ಭೋಜನವನ್ನು ಸರಿಯಾದ ಸಮಯಕ್ಕೆ ಮಾಡಿ. ಇಲ್ಲವಾದರೆ ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರಬಹುದು. ಕಲಾವಿದರು ನಿಮ್ಮ ಬಾಳ ಸಂಗಾತಿಯಾಗಬಹುದು. ಕಾರ್ಯದಲ್ಲಿ ನಿರಾಸಕ್ತಿಯು ನಿಮ್ಮ ವ್ಯಕ್ತಿತ್ವವನ್ನು ಹೇಳುವುದು. ನೀವು ಯಾರ ನಕಾರಾತ್ಮಕ ಮಾತಿಗೂ ಉತ್ತರಿಸುವುದು ಬೇಡ. ಕಾಲ ಸರಿದಂತೆ ಎಲ್ಲವೂ ಗೊತ್ತಾಗುವುದು. ನಿಮಗೆ ಬೇಕಾದ ವಸ್ತುಗಳನ್ನು ಎಲ್ಲಿದ್ದರೂ ಪಡೆಯುವಿರಿ. ಹೂಡಿಕೆಯಿಂದ ಪ್ರಯೋಜನವಾಗದು ಎಂದು ಅನ್ನಿಸಬಹುದು.

ಕುಂಭ ರಾಶಿ: ವೃತ್ತಿ ಜೀವನದಿಂದ ನಿಮಗೆ ಗೌರವವು ಸಿಗಬಹುದು. ಆರೋಗ್ಯದ ವ್ಯತ್ಯಾಸವನ್ನು ನೀವು ನಿರ್ಲಕ್ಷ್ಯ ಮಾಡುವಿರಿ.ಅನಗತ್ಯ ಖರ್ಚಿಗೆ ಇಂದು ಹಲವು ಹಾದಿಗಳು ಇರಲಿವೆ. ಹೊಸದಾದ ವ್ಯವಹಾರವು ನಿಮಗೆ ಅಧಿಕವಾದ ಅರ್ಥಿಕಲಾಭವನ್ನು ಕೊಡದು. ಅವಶ್ಯಕ ವಸ್ತುವನ್ನು ಕಳೆದುಕೊಳ್ಳುವಿರಿ. ಯಾರ ಜೊತೆಯೂ ನೋವಾಗುವಂತೆ ವರ್ತಿಸುವುದು ಬೇಡ. ನಿಮಗೆ ಸೋಲನ್ನು ಒಪ್ಪಿಕೊಳ್ಳುವುದು ಕಷ್ಟವಾದೀತು. ಗಳಿಕೆ ಅಲ್ಪ ಭಾಗವನ್ನು ಉಳಿತಾಯಕ್ಕೆ ಇಡುವುದು ಉತ್ತಮ ಎನಿಸುವುದು. ನಿಮ್ಮದಲ್ಲದ ವಸ್ತುವಿನ ಬಗ್ಗೆ ಮೋಹವು ಇರಲಿದೆ. ಮನೋರಂಜನೆಗೆ ಖರ್ಚು ಮಾಡುವಿರಿ.

ಮೀನ ರಾಶಿ: ಇಂದು ನಿಮ್ಮ ಪ್ರಯತ್ನದಿಂದ ಯಶಸ್ಸು ಸಿಗುವುದು. ಆರೋಗ್ಯದ ಮೇಲೆ ಸಣ್ಣ ಸಮಸ್ಯೆಗಳು ಬರಬಹುದು. ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕಿಲ್ಲ. ಶತ್ರುಗಳು ನಿಮ್ಮ ವಿರುದ್ಧ ಏನನ್ನಾದರೂ ಮಾಡಲಿಕ್ಕೆ ಇರುವರು. ಇಂದಿನ ನಿಮ್ಮ ವ್ಯಾಪರವು ಇಂದು ಅಲ್ಪ ಲಾಭವನ್ನು ತಂದುಕೊಡುವುದು. ಅಶಿಸ್ತಿನಿಂದ ಇದ್ದರೆ ಯಾರಾದರೂ ಬಯ್ಯುವರು. ನಿಮ್ಮದಾದ ಯೋಜನೆಯನ್ನು ಸಿದ್ಧಪಡಿಸಲು ಅಧಿಕ ಶ್ರಮವಿರಲಿದೆ. ಉದ್ಯೋಗದ ಸ್ಥಳದಲ್ಲಿ ನೆಮ್ಮದಿಯ ಕೊರತೆ ಕಾಣಿಸುವುದು. ಆದಾಯದ ಮೂಲವು ಬದಲಾಗಬಹುದು. ಅಪಮಾನವಾದ ಸ್ಥಳದಲ್ಲಿಯೇ ಗೌರವವು ಸಿಗಲಿದೆ.

ಲೋಹಿತಶರ್ಮಾ – 8762924271 (what’s app only)

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ