AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nag Panchami 2023: ನಿಮ್ಮ ಜಾತಕದಲ್ಲಿ ರಾಹುವಿನ ಸ್ಥಾನದ ಪ್ರಕಾರ ನಾಗರ ಪಂಚಮಿ ಪೂಜಾ ವಿಧಾನ ತಿಳಿಯಿರಿ

Nag Panchami 2023: ಈ ದಿನ ನಾಗದೇವತೆಯನ್ನು ಪೂಜಿಸುವ ನಿಯಮವಿದೆ. ಈ ದಿನದಂದು ನಾಗದೇವತೆಗಳನ್ನು ಪೂಜಿಸುವುದರಿಂದ ಶಿವನ ಆಶೀರ್ವಾದವೂ ದೊರೆಯುತ್ತದೆ ಎಂದು ನಂಬಲಾಗಿದೆ.

Nag Panchami 2023: ನಿಮ್ಮ ಜಾತಕದಲ್ಲಿ ರಾಹುವಿನ ಸ್ಥಾನದ ಪ್ರಕಾರ ನಾಗರ ಪಂಚಮಿ ಪೂಜಾ ವಿಧಾನ ತಿಳಿಯಿರಿ
ನಾಗರ ಪಂಚಮಿ
ನಯನಾ ಎಸ್​ಪಿ
ನಯನಾ ಎಸ್​ಪಿ|

Updated on: Aug 19, 2023 | 12:54 PM

Share

ನಾಗರ ಪಂಚಮಿಯನ್ನು (Nag Panchami 2023) ಪ್ರತಿ ವರ್ಷ ಶ್ರಾವಣ ಮಾಸ ಶುಕ್ಲ ಪಕ್ಷದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಈ ದಿನ ನಾಗದೇವತೆಯನ್ನು ಪೂಜಿಸುವ ನಿಯಮವಿದೆ. ಈ ದಿನದಂದು ನಾಗದೇವತೆಗಳನ್ನು ಪೂಜಿಸುವುದರಿಂದ ಶಿವನ ಆಶೀರ್ವಾದವೂ ದೊರೆಯುತ್ತದೆ ಎಂದು ನಂಬಲಾಗಿದೆ. ದಕ್ಷಿಣ ಭಾರತದಲ್ಲಿ, ಪಂಚಮಿಯಂದು, ಮರದ ಕಂಬಗಳ ಮೇಲೆ ಕೆಂಪು ಚಂದನದಿಂದ ಹಾವುಗಳನ್ನು ಬರೆಯಲಾಗುತ್ತದೆ ಅಥವಾ ಹಳದಿ ಅಥವಾ ಕಪ್ಪು ಬಣ್ಣದ ಜೇಡಿಮಣ್ಣಿನ ಹಾವಿನ ವಿಗ್ರಹಗಳನ್ನು ತಯಾರಿಸಲಾಗುತ್ತದೆ ಅಥವಾ ಖರೀದಿಸಲಾಗುತ್ತದೆ ಮತ್ತು ಅವುಗಳನ್ನು ಹಾಲಿನೊಂದಿಗೆ ಪೂಜಿಸಲಾಗುತ್ತದೆ.

ಅನೇಕ ಮನೆಗಳಲ್ಲಿ ಗೋಡೆಗೆ ಹಾವಿನ ಆಕಾರವನ್ನು ಬರೆದು ಪೂಜಾಸ್ಥಳವನ್ನು ಮಾಡಿ, ಆ ಗೋಡೆಗೆ ಹಸಿ ಹಾಲಿನಲ್ಲಿ ಕಲ್ಲಿದ್ದಲನ್ನು ರುಬ್ಬಿ ಅದರಿಂದ ಮನೆಯ ಆಕಾರವನ್ನು ಮಾಡಿ ಅದರೊಳಗೆ ಸರ್ಪಗಳ ಆಕಾರವನ್ನು ಮಾಡಿ ಪೂಜಿಸುತ್ತಾರೆ. ಇದರೊಂದಿಗೆ ಕೆಲವರು ಅರಿಶಿನ, ಶ್ರೀಗಂಧದ ಲೇಪನ ಅಥವಾ ಹಸುವಿನ ಸಗಣಿಯಿಂದ ಮನೆಯ ಮುಖ್ಯ ಬಾಗಿಲಿನ ಎರಡೂ ಬದಿಗಳಲ್ಲಿ ಹಾವಿನ ಆಕಾರವನ್ನು ಮಾಡಿ ಪೂಜಿಸುತ್ತಾರೆ.

ನಿಮ್ಮ ಜಾತಕದಲ್ಲಿ ರಾಹುವಿನ ಸ್ಥಾನದ ಪ್ರಕಾರ ನಾಗರ ಪಂಚಮಿ ಪೂಜಾ ವಿಧಾನವನ್ನು ತಿಳಿಯಿರಿ:

  • ನಿಮ್ಮ ಜಾತಕದ ನಾಲ್ಕನೇ ಮನೆಯಲ್ಲಿ ರಾಹುವಿದ್ದರೆ, ನೀವು ಮನೆಯ ಉತ್ತರ ದಿಕ್ಕಿನಲ್ಲಿ ನಾಗದೇವತೆಗಳನ್ನು ಪೂಜಿಸಬೇಕು. ನೀವು ಮೊದಲು ವಾಸುಕಿ, ನಂತರ ಧನಂಜಯ, ತಕ್ಷಕ, ಕಾಳಿಂಗ, ಮಣಿಭದ್ರ, ಐರಾವತ, ಧೃತರಾಷ್ಟ್ರ ಮತ್ತು ಅಂತಿಮವಾಗಿ ಕಾರ್ಕೋಟಕನನ್ನು ಕ್ರಮವಾಗಿ ಪೂಜಿಸಬೇಕು.
  • ನಿಮ್ಮ ಜಾತಕದ ಮೂರನೇ ಮನೆಯಲ್ಲಿ ರಾಹುವಿದ್ದರೆ ನೀವು ಈಶಾನ್ಯ ದಿಕ್ಕಿನಲ್ಲಿ ಹಾವನ್ನು ಪೂಜಿಸಬೇಕು. ನೀವು ಮೊದಲು ವಾಸುಕಿ, ನಂತರ ತಕ್ಷಕ, ಕಾಳಿಂಗ, ಮಣಿಭದ್ರ, ಐರಾವತ, ಧೃತರಾಷ್ಟ್ರ, ಕಾರ್ಕೋಟಕ ಮತ್ತು ಅಂತಿಮವಾಗಿ ಧನಂಜಯನನ್ನು ಕ್ರಮವಾಗಿ ಪೂಜಿಸಬೇಕು.
  • ನಿಮ್ಮ ಜಾತಕದ ಎರಡನೇ ಮನೆಯಲ್ಲಿ ರಾಹುವಿದ್ದರೆ, ನೀವು ಮನೆಯ ಪೂರ್ವ ದಿಕ್ಕು ಉತ್ತರವನ್ನು ಸಂಧಿಸುವ ಸ್ಥಳದಲ್ಲಿ ಹಾವನ್ನು ಪೂಜಿಸಬೇಕು. ನೀವು ಮೊದಲು ವಾಸುಕಿ, ನಂತರ ತಕ್ಷಕ, ಕಾಳಿಂಗ, ಮಣಿಭದ್ರ, ಐರಾವತ, ಧೃತರಾಷ್ಟ್ರ, ಕಾರ್ಕೋಟಕ ಮತ್ತು ಅಂತಿಮವಾಗಿ ಧನಂಜಯನನ್ನು ಕ್ರಮವಾಗಿ ಪೂಜಿಸಬೇಕು.
  • ನಿಮ್ಮ ಜಾತಕದ ಮೊದಲ ಮನೆಯಲ್ಲಿ ರಾಹುವಿದ್ದರೆ, ನೀವು ಮನೆಯ ಪೂರ್ವ ದಿಕ್ಕಿನಲ್ಲಿ ಹಾವನ್ನು ಪೂಜಿಸಬೇಕು. ನೀವು ಮೊದಲು ವಾಸುಕಿ, ನಂತರ ತಕ್ಷಕ, ಕಾಳಿಂಗ, ಮಣಿಭದ್ರ, ಐರಾವತ, ಧೃತರಾಷ್ಟ್ರ, ಕಾರ್ಕೋಟಕ ಮತ್ತು ಅಂತಿಮವಾಗಿ ಧನಂಜಯನನ್ನು ಕ್ರಮವಾಗಿ ಪೂಜಿಸಬೇಕು.
  • ನಿಮ್ಮ ಜಾತಕದ ಹನ್ನೆರಡನೇ ಮನೆಯಲ್ಲಿ ರಾಹುವಿದ್ದರೆ ನೀವು ಮನೆಯ ಪೂರ್ವ ದಿಕ್ಕು ದಕ್ಷಿಣ ದಿಕ್ಕನ್ನು ಮುಟ್ಟುವ ಜಾಗದಲ್ಲಿ ನಾಗಪೂಜೆ ಮಾಡಿ. ನೀವು ಮೊದಲು ವಾಸುಕಿಯನ್ನು ಪೂಜಿಸಬೇಕು, ನಂತರ ಕಾಳಿಂಗ, ಮಣಿಭದ್ರ, ಐರಾವತ, ಧೃತರಾಷ್ಟ್ರ, ಕಾರ್ಕೋಟಕ, ಧನಂಜಯ ಮತ್ತು ಅಂತಿಮವಾಗಿ ತಕ್ಷಕನನ್ನು ಪೂಜಿಸಬೇಕು.
  • ನಿಮ್ಮ ಜಾತಕದ ಹನ್ನೊಂದನೇ ಮನೆಯಲ್ಲಿ ರಾಹುವಿದ್ದರೆ ನೀವು ಮನೆಯ ದಕ್ಷಿಣ ದಿಕ್ಕು ಪೂರ್ವ ದಿಕ್ಕನ್ನು ಮುಟ್ಟುವ ಜಾಗದಲ್ಲಿ ನಾಗಪೂಜೆ ಮಾಡಿ. ಮೊದಲು ವಾಸುಕಿಯನ್ನು ಆರಾಧಿಸಿ, ನಂತರ ಕಾಳಿಂಗ, ಮಣಿಭದ್ರ, ಐರಾವತ, ಧೃತರಾಷ್ಟ್ರ, ಕಾರ್ಕೋಟಕ, ಧನಂಜಯ ಮತ್ತು ಅಂತಿಮವಾಗಿ ತಕ್ಷಕನನ್ನು ಪೂಜಿಸಿ.
  • ನಿಮ್ಮ ಜಾತಕದ ಹತ್ತನೇ ಮನೆಯಲ್ಲಿ ರಾಹುವಿದ್ದರೆ ಮನೆಯ ದಕ್ಷಿಣ ದಿಕ್ಕಿನಲ್ಲಿ ನಾಗಪೂಜೆಯನ್ನು ಮಾಡಬೇಕು. ಮೊದಲು ವಾಸುಕಿಯನ್ನು ಪೂಜಿಸಿ, ನಂತರ ಮಣಿಭದ್ರ, ಐರಾವತ, ಧೃತರಾಷ್ಟ್ರ, ಕಾರ್ಕೋಟಕ, ಧನಂಜಯ, ತಕ್ಷಕ ಮತ್ತು ಅಂತಿಮವಾಗಿ ಕಾಳಿಂಗನನ್ನು ಕ್ರಮವಾಗಿ ಪೂಜಿಸಿ.
  • ನಿಮ್ಮ ಜಾತಕದ ಒಂಬತ್ತನೇ ಮನೆಯಲ್ಲಿ ರಾಹುವಿದ್ದರೆ ನೀವು ಮನೆಯ ದಕ್ಷಿಣ ದಿಕ್ಕು ಪಶ್ಚಿಮಕ್ಕೆ ಸ್ಪರ್ಶಿಸುವ ಸ್ಥಳದಲ್ಲಿ ಹಾವನ್ನು ಪೂಜಿಸಿ. ಮೊದಲು ವಾಸುಕಿಯನ್ನು ಪೂಜಿಸಿ, ನಂತರ ಐರಾವತ, ಧೃತರಾಷ್ಟ್ರ, ಕಾರ್ಕೋಟಕ, ಧನಂಜಯ, ತಕ್ಷಕ, ಕಾಳಿಂಗ ಮತ್ತು ಅಂತಿಮವಾಗಿ ಮಣಿಭದ್ರನನ್ನು ಕ್ರಮವಾಗಿ ಪೂಜಿಸಿ.
  • ನಿಮ್ಮ ಜಾತಕದ ಎಂಟನೇ ಮನೆಯಲ್ಲಿ ರಾಹುವಿದ್ದರೆ ನೀವು ಮನೆಯ ಪಶ್ಚಿಮ ಗೋಡೆಯು ದಕ್ಷಿಣ ದಿಕ್ಕನ್ನು ಮುಟ್ಟುವ ಜಾಗದಲ್ಲಿ ನಾಗಪೂಜೆ ಮಾಡಿ. ಮೊದಲು ವಾಸುಕಿಯನ್ನು ಪೂಜಿಸಿ, ನಂತರ ಐರಾವತ, ಧೃತರಾಷ್ಟ್ರ, ಕಾರ್ಕೋಟಕ, ಧನಂಜಯ, ತಕ್ಷಕ, ಕಾಳಿಂಗ ಮತ್ತು ಅಂತಿಮವಾಗಿ ಮಣಿಭದ್ರನನ್ನು ಕ್ರಮವಾಗಿ ಪೂಜಿಸಿ.

ಇದನ್ನೂ ಓದಿ: ಈ ವರ್ಷದ ನಾಗರ ಪಂಚಮಿ ಯಾವ ರಾಶಿಯವರಿಗೆ ಅದೃಷ್ಟ ತರಲಿದೆ ಎಂದು ತಿಳಿಯಿರಿ

  • ನಿಮ್ಮ ಜಾತಕದ ಏಳನೇ ಮನೆಯಲ್ಲಿ ರಾಹುವಿದ್ದರೆ ನೀವು ಮನೆಯ ಪಶ್ಚಿಮ ದಿಕ್ಕಿನಲ್ಲಿ ಹಾವನ್ನು ಪೂಜಿಸಬೇಕು. ಮೊದಲು ವಾಸುಕಿಯನ್ನು ಪೂಜಿಸಿ, ನಂತರ ಧೃತರಾಷ್ಟ್ರ, ಕಾರ್ಕೋಟಕ, ಧನಂಜಯ, ತಕ್ಷಕ, ಕಾಳಿಂಗ, ಮಣಿಭದ್ರ ಮತ್ತು ಅಂತಿಮವಾಗಿ ಐರಾವತವನ್ನು ಕ್ರಮವಾಗಿ ಪೂಜಿಸಿ.
  • ನಿಮ್ಮ ಜಾತಕದ ಆರನೇ ಮನೆಯಲ್ಲಿ ರಾಹುವಿದ್ದರೆ ಮನೆಯ ಪಶ್ಚಿಮ ದಿಕ್ಕು ಉತ್ತರ ದಿಕ್ಕಿಗೆ ತಾಗುವ ಸ್ಥಳದಲ್ಲಿ ನಾಗಪೂಜೆಯನ್ನು ಮಾಡಬೇಕು. ಮೊದಲು ವಾಸುಕಿಯನ್ನು ಪೂಜಿಸಿ, ನಂತರ ಕಾರ್ಕೋಟಕ, ಧನಂಜಯ, ತಕ್ಷಕ, ಕಾಳಿಂಗ, ಮಣಿಭದ್ರ, ಐರಾವತ ಮತ್ತು ಅಂತಿಮವಾಗಿ ಧೃತರಾಷ್ಟ್ರನನ್ನು ಪೂಜಿಸಿ.
  • ನಿಮ್ಮ ಜಾತಕದ ಐದನೇ ಮನೆಯಲ್ಲಿ ರಾಹುವಿದ್ದರೆ ನೀವು ಮನೆಯ ಉತ್ತರ ದಿಕ್ಕು ಪಶ್ಚಿಮಕ್ಕೆ ಸ್ಪರ್ಶಿಸುವ ಸ್ಥಳದಲ್ಲಿ ಹಾವನ್ನು ಪೂಜಿಸಬೇಕು. ಮೊದಲು ವಾಸುಕಿಯನ್ನು ಪೂಜಿಸಿ, ನಂತರ ಕಾರ್ಕೋಟಕ, ಧನಂಜಯ, ತಕ್ಷಕ, ಕಾಳಿಂಗ, ಮಣಿಭದ್ರ, ಐರಾವತ ಮತ್ತು ಅಂತಿಮವಾಗಿ ಧೃತರಾಷ್ಟ್ರನನ್ನು ಪೂಜಿಸಿ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ನಯನಾ ಎಸ್​ಪಿ
ನಯನಾ ಎಸ್​ಪಿ

ಹುಟ್ಟೂರು ದಕ್ಷಿಣ ಕನ್ನಡ ಬೆಳೆದದ್ದು ನಮ್ಮ ಬೆಂಗಳೂರಿನಲ್ಲಿ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಶಿಕ್ಷಣ, ಜೋತಿಷ್ಯ, ಉದ್ಯೋಗ, ಹೀಗೆ ಹಲವು. ಕಳೆದ ಎರಡು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಓದುಗರ ಅಭಿರುಚಿಗೆ ಅನುಗುಣವಾಗಿ ಲೇಖನಗಳನ್ನು ಬರೆಯುವುದು ನನ್ನ ಪ್ರಯತ್ನ.

ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!