ನಿದ್ದೆಯಲ್ಲಿ ಗೊರಕೆ ಹೊಡೆಯುತ್ತೀರಾ? ಈ ಅಪಾಯಗಳು ಕಾಡಬಹುದು ಎಚ್ಚರಿಕೆ

| Updated By: Pavitra Bhat Jigalemane

Updated on: Mar 15, 2022 | 10:24 AM

ದೇಹಕ್ಕೆ ಅತಿಯಾದ ಬಳಲಿಕೆಯಾದಾಗ ಗೊರಕೆ ಬರುವುದು ಸಾಮಾನ್ಯ.ಅದು ನಿರಂತರವಾಗಿದ್ದರೆ ಅಪಾಯದ ಮುನ್ಸೂಚನೆಯಾಗಿರುತ್ತದೆ. ಆದ್ದರಿಂದ ಕೊಂಚ ಗೊರಕೆಯೆಡೆಗೆ ಗಮನಹರಿಸುವುದು ಮುಖ್ಯವಾಗಿರುತ್ತದೆ.

ನಿದ್ದೆಯಲ್ಲಿ ಗೊರಕೆ ಹೊಡೆಯುತ್ತೀರಾ? ಈ ಅಪಾಯಗಳು ಕಾಡಬಹುದು ಎಚ್ಚರಿಕೆ
ಗೊರಕೆ (ಪ್ರಾತಿನಿಧಿಕ ಚಿತ್ರ)
Follow us on

ಇಡೀ ದಿನ ಕೆಲಸ ಮಾಡಿ ದಿನದ ಅಂತ್ಯಕ್ಕೆ ದೇಹದಲ್ಲಿ ಸುಸ್ತು, ಬಳಲಿಕೆ ಕಾಡುತ್ತದೆ. ಅದಕ್ಕೆ ನಿದ್ದೆ (Sleep)  ಒಂದೇ ಪರಿಹಾರ. ಹೀಗಾಗಿ ಪ್ರತೀ ವ್ಯಕ್ತಿ ಕನಿಷ್ಠ 6 ರಿಂದ 8 ಗಂಟೆಗಳ ಕಾಲ ಪ್ರತಿದಿನ ನಿದ್ದೆ ಅಗತ್ಯವಾಗಿರುತ್ತದೆ. ಆದರೆ ಈ ರೀತಿ ನಿದ್ದೆ ಮಾಡುವಾಗ ಕೆಲವರು ಗೊರಕೆ (Snoring) ಹೊಡೆಯುತ್ತಾರೆ. ದೇಹಕ್ಕೆ ಅತಿಯಾದ ಬಳಲಿಕೆಯಾದಾಗ ಗೊರಕೆ ಬರುವುದು ಸಾಮಾನ್ಯ. ಕೆಲವರಿಗೆ ಇದು ಆಗಾಗ ಕಾಡುತ್ತದೆ ಆದರೆ ಇನ್ನೂ ಕೆಲವರು ಯಾವಾಗ ಮಲಗಿದರೂ ಗಿರಕೆ ಹೊಡೆಯುತ್ತಾರೆ. ಅದು ನಿರಂತರವಾಗಿದ್ದರೆ ಅಪಾಯದ ಮುನ್ಸೂಚನೆಯಾಗಿರುತ್ತದೆ. ಆದ್ದರಿಂದ ಕೊಂಚ ಗೊರಕೆಯೆಡೆಗೆ ಗಮನಹರಿಸುವುದು ಮುಖ್ಯವಾಗಿರುತ್ತದೆ. ಹಾಗಾದರೆ ನಿರಂತರ ಗೊರಕೆ ಯಾವೆಲ್ಲಾ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಿರಬಹುದು ಎನ್ನುವುದನ್ನು ತಿಳಿದುಕೊಳ್ಳಿ. ಇಲ್ಲಿದೆ ಮಾಹಿತಿ.

ಪಾರ್ಶವಾಯು:
ನಿದ್ರೆಯ ಅಧ್ಯಯನದ ವಿಶ್ಲೇಷಣೆಯ ಪ್ರಕಾರ ಗೊರಕೆಯಿಂದ ಪ್ಲೇಕ್ ಶೇಖರಣೆಯಾಗುತ್ತದೆ, ಇದರಿಂದ ಕುತ್ತಿಗೆಯಲ್ಲಿ ಅಪಧಮನಿಗಳ ಕಿರಿದಾಗುತ್ತದೆ. ಇದರಿಂದ ದೀರ್ಘಾವಧಿಯಲ್ಲಿ ಪಾರ್ಶ್ವವಾಯುವಿಗೆ ತುತ್ತಾಗುವ  ಸಾಧ್ಯತೆಗಳಿರುತ್ತದೆ. ಆದ್ದರಿಂದ ನಿರಂತರ  ಗೊರಕೆಯ ಸಮಸ್ಯೆ ಇದ್ದರೆ ಅದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವುದು ಒಳಿತು.

ಆರ್ಹೆತ್ಮಿಯಾ:
ಆರ್ಹೆತ್ಮಿಯಾ ಅಥವಾ ಅನಿಯಮಿತ ಹೃದಯ ಬಡಿತಗಳು ದೀರ್ಘಕಾಲದ ಗೊರಕೆ ಅಥವಾ ನಿದ್ರೆಯಲ್ಲಿ ಉಸಿರುಕಟ್ಟುವಿಕೆಗೆ ಒಳಗಾಗುವ ಜನರಲ್ಲಿ ಕಂಡುಬರುತ್ತದೆ . ನಿದ್ರಾವಸ್ಥೆಯಲ್ಲಿ ಉಸಿರುಕಟ್ಟುವಿಕೆ ಹೊಂದಿರುವ ರೋಗಿಗಳು, ಅವರು ನಿದ್ದೆ ಮಾಡುವಾಗ ಗೊರಕೆ ಹೊಡೆಯುವಂತೆ ಉಸಿರುಗಟ್ಟುವಿಕೆಯನ್ನು ಅನುಭವಿಸುತ್ತಾರೆ. ಅವುಗಳಲ್ಲಿ ಒಂದು ಆರ್ಹೆತ್ಮಿಯಾದ ಸಾಮಾನ್ಯ ರೂಪವಾಗಿದೆ ಎನ್ನುತ್ತಾರೆ ತಜ್ಞರು.

ಪದೇ ಪದೇ ಎಚ್ಚರವಾಗುವುದು:
ಒಬ್ಬ ವ್ಯಕ್ತಿಯು ರಾತ್ರಿಯಲ್ಲಿ ಆಗಾಗ್ಗೆ ಮೂತ್ರ ವಿಸರ್ಜನೆಗಾಗಿ ಎಚ್ಚರಗೊಳ್ಳುವ ಸ್ಥಿತಿಯನ್ನು ನೋಕ್ಟುರಿಯಾ ಎಂದು ಕರೆಯಲಾಗುತ್ತದೆ. 55 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರು ರಾತ್ರಿಯಲ್ಲಿ ಮೂತ್ರ ವಿಸರ್ಜಿಸಲು ಆಗಾಗ್ಗೆ ಎಚ್ಚರಗೊಳ್ಳುತ್ತಾರೆ, ಅವರು ಪ್ರತಿಬಂಧಕ ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಮತ್ತು ಪ್ರಾಸ್ಟೇಟ್ ಹಿಗ್ಗುವಿಕೆಯನ್ನು ಹೊಂದಿರಬಹುದು ಎಂದು ಅಧ್ಯಯನಗಳು ಸೂಚಿಸುತ್ತವೆ.

ಆತಂಕ, ಖಿನ್ನತೆ:
ನಿರಂತರ ಗೊರಕೆಯಿಂದ ಸರಿಯಾಗಿ ನಿದ್ದೆ ಆಗಿಲ್ಲದೆ ಇರಬಹುದು. ಇಂತಹ ಸಂದರ್ಭಗಳಲ್ಲಿ ಒತ್ತಡ, ಮಾನಸಿಕ ಖಿನ್ನತೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಲ್ಲದೆ ಹಗಲು ಪ್ರಯಾಣದ ವೇಳೆ ನಿದ್ದೆ ಬಂದಂತಾಗಿ ಅಪಾಯದ ಭಯ ಕಾಡಬಹುದು,

ತಲೆನೋವು:
ನಿದ್ದೆ ಮಾಡುವಾಗ ಗೊರಕೆ ಹೊಡೆಯುವ ಜನರಲ್ಲಿ ಬೆಳಗ್ಗೆ ಏಳುವಾಗ ಸಾಮಾನ್ಯವಾಗಿ ತಲೆನೋವು ಕಾಣಿಸಿಕೊಳ್ಳುತ್ತದೆ. ಗೊರಕೆಯ ಅಭ್ಯಾಸವನ್ನು ಹೊಂದಿರುವ 268 ಜನರನ್ನು ಒಳಗೊಂಡ ಇತ್ತೀಚೆಗೆ ಪ್ರಕಟವಾದ ಅಧ್ಯಯನವು ಈ ಜನರು ಬೆಳಗ್ಗೆ ತಲೆನೋವು ಮತ್ತು ನಿದ್ರಾಹೀನತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಕಂಡುಹಿಡಿದಿದೆ.

ಅಧಿಕ ತೂಕ:
ಅಧಿಕ ತೂಕ ಹೊಂದಿರುವ ಜನರು ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಮತ್ತು ಗೊರಕೆಯ ಸಮಸ್ಯೆಗಳನ್ನು ಹೊಂದಿರುತ್ತಾರೆ. ಏಕೆಂದರೆ ರಾತ್ರಿಯಲ್ಲಿ ಸರಿಯಾಗಿ ಉಸಿರಾಡುವುದನ್ನು ತಡೆಯಲು ಕುತ್ತಿಗೆಯ ಸುತ್ತ ಹೆಚ್ಚುವರಿ ಕೊಬ್ಬು ಸಂಗ್ರಹವಾಗುತ್ತದೆ.

ಇದನ್ನೂ ಓದಿ:

ಕಲ್ಲು ಸಕ್ಕರೆ ಸೇವನೆಯಿಂದ ಪಡೆಯಿರಿ ಆರೋಗ್ಯ ಪ್ರಯೋಜನಗಳು

Published On - 10:17 am, Tue, 15 March 22