
ಆರೋಗ್ಯಕರ ಆಹಾರ ಪದ್ಧತಿಯಲ್ಲಿ ಡ್ರೈಫ್ರೂಟ್ಸ್‌ಗಳಿಗೆ ವಿಶೇಷ ಸ್ಥಾನವಿದೆ. ಅದರಲ್ಲೂ ವಾಲ್‌ನಟ್ಸ್ ಅಥವಾ ಅಕ್ರೋಟ್ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಆಹಾರವಾಗಿದೆ. ಮೆದುಳಿನ ಆಕಾರವನ್ನು ಹೋಲುವ ವಾಲ್‌ನಟ್ಸ್‌ನಲ್ಲಿ ಒಮೆಗಾ- 3 ಕೊಬ್ಬಿನಾಮ್ಲಗಳು, ನಾರಿನಾಂಶ, ಆ್ಯಂಟಿಆಕ್ಸಿಡೆಂಟ್‌ಗಳು, ವಿಟಮಿನ್‌ಗಳು ಮತ್ತು ಖನಿಜಾಂಶಗಳು ಇರುತ್ತವೆ. ಇವುಗಳನ್ನು ಮಿತವಾಗಿ ಪ್ರತಿದಿನ ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನವಾಗಬಹುದು. ಹಾಗಾದರೆ ಇದರ ಸೇವನೆಯಿಂದ ಸಿಗುವ ಪ್ರಯೋಜಗಳೇನು, ಯಾರಿಗೆ ಒಳ್ಳೆಯದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ವಾಲ್‌ನಟ್ಸ್‌ನಲ್ಲಿ ಸಸ್ಯಜನ್ಯ ಒಮೆಗಾ-3 ಕೊಬ್ಬಿನಾಮ್ಲವಾದ ಆಲ್ಫಾ-ಲಿನೋಲೆನಿಕ್ ಆಮ್ಲ (ALA) ಹೇರಳವಾಗಿದೆ. ಇದು ಹೃದಯದ ಆರೋಗ್ಯಕ್ಕೆ ಪೂರಕವಾಗಿದೆ. ನಿಯಮಿತವಾಗಿ ವಾಲ್‌ನಟ್ಸ್ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯವಾಗಬಹುದು. ಸಮತೋಲಿತ ಆಹಾರದ ಭಾಗವಾಗಿ ಇವುಗಳನ್ನು ಸೇವಿಸುವುದು ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ನೆರವಾಗುತ್ತದೆ.
ವಾಲ್‌ನಟ್ಸ್‌ನಲ್ಲಿರುವ ಒಮೆಗಾ-3 ಕೊಬ್ಬಿನಾಮ್ಲಗಳು, ವಿಟಮಿನ್ ಇ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಮೆದುಳಿನ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಇವು ಮೆದುಳಿನ ಕೋಶಗಳನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸಲು ನೆರವಾಗಬಹುದು. ಆದರೆ ವಾಲ್‌ನಟ್ಸ್ ತಿಂದರೆ ನೆನಪಿನ ಶಕ್ತಿ ಹೆಚ್ಚುತ್ತದೆ ಅಥವಾ ಅಲ್ಜೈಮರ್ಸ್ ಕಾಯಿಲೆ ತಡೆಯಬಹುದು ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ.
ಇದನ್ನೂ ಓದಿ: ಸಾಕಷ್ಟು ನೀರು ಕುಡಿದರೂ ಹೊಟ್ಟೆ ಸರಿಯಾಗಿ ಕ್ಲೀನ್ ಆಗುತ್ತಿಲ್ಲವೇ? ಒತ್ತಡವೂ ಕಾರಣವಾಗಿರಬಹುದು
ವಾಲ್‌ನಟ್ಸ್‌ನಲ್ಲಿರುವ ನಾರಿನಾಂಶ ಕರುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ. ಮಲಬದ್ಧತೆ ಕಡಿಮೆ ಮಾಡಲು ಮತ್ತು ಜೀರ್ಣಕ್ರಿಯೆ ಉತ್ತಮವಾಗಿರಲು ಇದು ಪೂರಕವಾಗಬಹುದು. ಇದರಲ್ಲಿರುವ ಆರೋಗ್ಯಕರ ಕೊಬ್ಬು ಮತ್ತು ಪ್ರೋಟೀನ್ ಹೊಟ್ಟೆ ತುಂಬಿದ ಅನುಭವ ನೀಡುವುದರಿಂದ ಅತಿಯಾಗಿ ತಿನ್ನುವುದನ್ನು ನಿಯಂತ್ರಿಸಲು ಸಹಾಯವಾಗಬಹುದು.
ವಾಲ್‌ನಟ್ಸ್‌ನಲ್ಲಿ ಕಾರ್ಬೋಹೈಡ್ರೇಟ್ ಪ್ರಮಾಣ ಕಡಿಮೆ ಇದ್ದು, ಆರೋಗ್ಯಕರ ಕೊಬ್ಬು ಮತ್ತು ನಾರಿನಾಂಶ ಇರುತ್ತದೆ. ಇವುಗಳನ್ನು ಸಮತೋಲಿತ ಆಹಾರದ ಭಾಗವಾಗಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟದ ನಿರ್ವಹಣೆಗೆ ಪೂರಕವಾಗಬಹುದು. ಆದರೆ ಇವು ಮಧುಮೇಹಕ್ಕೆ ಔಷಧಿಯಲ್ಲ.
ವಾಲ್‌ನಟ್ಸ್‌ನಲ್ಲಿ ಮೆಲಟೋನಿನ್ ಮತ್ತು ಟ್ರಿಪ್ಟೋಫಾನ್‌ನಂತಹ ಅಂಶಗಳಿವೆ. ಇವು ನಿದ್ರೆಯ ಪ್ರಕ್ರಿಯೆಗೆ ಸಂಬಂಧಿಸಿವೆ. ಆದರೆ ವಾಲ್‌ನಟ್ಸ್ ತಿನ್ನುವುದರಿಂದಲೇ ನಿದ್ರಾಹೀನತೆ ಅಥವಾ ಒತ್ತಡ ನಿವಾರಣೆಯಾಗುತ್ತದೆ ಎಂಬುದಕ್ಕೆ ಸಾಕಷ್ಟು ದೃಢವಾದ ಪುರಾವೆಗಳಿಲ್ಲ.
ಸಾಮಾನ್ಯವಾಗಿ ದಿನಕ್ಕೆ ಸುಮಾರು 2ರಿಂದ 4 ಸಂಪೂರ್ಣ ವಾಲ್‌ನಟ್ಸ್‌ಗಳನ್ನು ಅಥವಾ ನಿಮ್ಮ ಆಹಾರದ ಅಗತ್ಯಕ್ಕೆ ತಕ್ಕ ಪ್ರಮಾಣವನ್ನು ಸೇವಿಸಬಹುದು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಲೇಬೇಕು ಎಂಬ ನಿಯಮವಿಲ್ಲ. ಇತರ ಆಹಾರಗಳ ಜೊತೆಯಲ್ಲಿಯೂ ಸೇವಿಸಬಹುದು. ಅಲರ್ಜಿ ಇರುವವರು ವಾಲ್‌ನಟ್ಸ್ ಸೇವಿಸಬಾರದು. ಒಟ್ಟಿನಲ್ಲಿ, ಮಿತವಾದ ಪ್ರಮಾಣದಲ್ಲಿ ವಾಲ್‌ನಟ್ಸ್ ಸೇವಿಸುವುದು ಆರೋಗ್ಯಕರ ಆಹಾರ ಪದ್ಧತಿಗೆ ಉತ್ತಮ ಸೇರ್ಪಡೆಯಾಗಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ