ಹಣ್ಣುಗಳನ್ನು ತಿನ್ನುವ ಪ್ರಯೋಜನಗಳ ಬಗ್ಗೆ ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ರಾತ್ರಿಯಲ್ಲಿ ಊಟವಾದ ನಂತರ ಹಣ್ಣುಗಳನ್ನು ಸೇವಿಸಿದರೆ ಜೀರ್ಣಕ್ರಿಯೆ (Digestion) ಚೆನ್ನಾಗಿ ಆಗುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಕೆಲವು ಹಣ್ಣುಗಳು ರಾತ್ರಿ ವೇಳೆ ನಿಮ್ಮ ಜೀರ್ಣಾಂಗ ವ್ಯವಸ್ಥೆಯೊಂದಿಗೆ ಸರಿಯಾಗಿ ಹೊಂದಿಕೊಳ್ಳುವುದಿಲ್ಲ ಎಂದು ನಿಮಗೆ ತಿಳಿದಿದೆಯೇ? ಮಲಗುವ ಮುನ್ನ ತಿನ್ನಬಾರದ 6 ಹಣ್ಣುಗಳು ಇಲ್ಲಿವೆ.
ಬಾಳೆ ಹಣ್ಣುಗಳು:
ಬಾಳೆ ಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆಗಳು ಮತ್ತು ಫೈಬರ್ ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಇದು ಜೀರ್ಣಕಾರಿ ಸಮಸ್ಯೆಗೆ ಕಾರಣವಾಗಬಹುದು. ಮಲಗುವ ಸಮಯದಲ್ಲಿ ಇದನ್ನು ಸೇವಿಸಿದರೆ ನಿಮ್ಮ ನಿದ್ರೆಯ ಚಕ್ರವನ್ನು ಅಡ್ಡಿಪಡಿಸಬಹುದು. ಆಯುರ್ವೇದದ ಪ್ರಕಾರ, ತಡರಾತ್ರಿಯಲ್ಲಿ ಬಾಳೆಹಣ್ಣು ತಿನ್ನುವುದರಿಂದ ನಿಮ್ಮ ಗಂಟಲು ಊದಿಕೊಳ್ಳಬಹುದು.
ಇದನ್ನೂ ಓದಿ: Weight Loss: ಬೇಸಿಗೆಯಲ್ಲಿ ತೂಕ ಇಳಿಸಿಕೊಳ್ಳಲು ಈ 5 ಹಣ್ಣುಗಳನ್ನು ತಿನ್ನಿ
ಸೇಬು ಹಣ್ಣು:
ದಿನಕ್ಕೆ ಒಂದು ಸೇಬು ತಿನ್ನುವುದರಿಂದ ವೈದ್ಯರನ್ನು ದೂರವಿಡಬಹುದು. ಆದರೆ ಮಲಗುವ ಮುನ್ನ ಸೇಬನ್ನು ತಿನ್ನುವುದರಿಂದ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ಸೇಬುಗಳು ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವಾಗಿದ್ದರೂ, ಅವುಗಳ ಹೆಚ್ಚಿನ ಆಮ್ಲೀಯತೆಯ ಮಟ್ಟವು ಆಸಿಡ್ ರಿಫ್ಲಕ್ಸ್ ಅಥವಾ ಅಜೀರ್ಣವನ್ನು ಪ್ರಚೋದಿಸುತ್ತದೆ, ವಿಶೇಷವಾಗಿ ತಡರಾತ್ರಿಯಲ್ಲಿ ಸೇವಿಸಿದಾಗ ತೊಂದರೆ ಹೆಚ್ಚು.
ಚಿಕ್ಕು ಹಣ್ಣು:
ಹೆಚ್ಚಿನ ಸಕ್ಕರೆ ಅಂಶವು ಚಿಕ್ಕು ಹಣ್ಣಿನ ಫೈಬರ್ ಸಮೃದ್ಧ ಸ್ವಭಾವದೊಂದಿಗೆ ಸೇರಿಕೊಂಡು ತಡರಾತ್ರಿಯಲ್ಲಿ ತಿನ್ನುವುದು ಒಳ್ಳೆಯದಲ್ಲ. ಮಲಗುವ ಮುನ್ನ ಸಪೋಟವನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾಗಬಹುದು. ಇದು ಶಕ್ತಿಯ ಏರಿಳಿತಗಳಿಗೆ ಕಾರಣವಾಗಬಹುದು ಮತ್ತು ನಿಮ್ಮ ನಿದ್ರೆಯ ಗುಣಮಟ್ಟವನ್ನು ಕೆಡಿಸಬಹುದು.
ಕಲ್ಲಂಗಡಿ:
ಕಲ್ಲಂಗಡಿ ಹೆಚ್ಚಿನ ನೀರಿನ ಅಂಶವನ್ನು ಹೊಂದಿದೆ. ಇದು ನಿಮ್ಮ ನಿದ್ರೆಯ ಚಕ್ರವನ್ನು ಅಡ್ಡಿಪಡಿಸುತ್ತದೆ. ಕಲ್ಲಂಗಡಿ ನೈಸರ್ಗಿಕ ಸಕ್ಕರೆಗಳನ್ನು ಹೊಂದಿರುತ್ತದೆ, ಇದು ತಡರಾತ್ರಿಯಲ್ಲಿ ಸೇವಿಸಿದಾಗ ಶಕ್ತಿಯ ಮಟ್ಟದಲ್ಲಿ ಸ್ಪೈಕ್ ಅನ್ನು ಉಂಟುಮಾಡಬಹುದು.
ಇದನ್ನೂ ಓದಿ: ನೈಸರ್ಗಿಕವಾಗಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವ 6 ಹಣ್ಣುಗಳಿವು
ಪೇರಲೆ ಹಣ್ಣು:
ಪೇರಲೆಯ ಹೆಚ್ಚಿನ ಫೈಬರ್ ಅಂಶವು ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ ಮತ್ತು ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ಮೃದುವಾದ ಪೇರಲೆಯನ್ನು ರಾತ್ರಿಯಲ್ಲಿ ಸೇವಿಸಬಹುದು. ಇದು ಗ್ಯಾಸ್ ಅನ್ನು ಉಂಟುಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ ತೊಂದರೆ ಉಂಟುಮಾಡುತ್ತದೆ.
ಅನಾನಸ್:
ಅನಾನಸ್ ಬ್ರೋಮೆಲಿನ್ ಎಂಬ ಕಿಣ್ವವನ್ನು ಹೊಂದಿರುತ್ತದೆ, ಇದು ಜೀರ್ಣಾಂಗದಲ್ಲಿ ಕಿರಿಕಿರಿ ಮತ್ತು ಉರಿಯೂತವನ್ನು ಉಂಟುಮಾಡುತ್ತದೆ. ವಿಶೇಷವಾಗಿ ದೊಡ್ಡ ಪ್ರಮಾಣದಲ್ಲಿ ಅಥವಾ ಖಾಲಿ ಹೊಟ್ಟೆಯಲ್ಲಿ ಸೇವಿಸಿದಾಗ ಇದರಿಂದ ತೊಂದರೆ ಹೆಚ್ಚು. ಇದು ಅಸ್ವಸ್ಥತೆ ಅಥವಾ ಎದೆಯುರಿ ಕಾರಣವಾಗಬಹುದು. ಇದರಿಂದ ಶಾಂತಿಯುತವಾಗಿ ನಿದ್ರಿಸಲು ಕಷ್ಟವಾಗುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ