
ಮೂಗಿನ ಒಳಗೆ ಕೈಹಾಕುವ (nose picking dangers) ಅಭ್ಯಾಸ ಅನೇಕರಿಗೆ ಇರುತ್ತದೆ. ಬಾಲ್ಯದಿಂದಲೂ ಮೂಗಿನ ಒಳಗೆ ಕೈ ಹಾರುವ ಅಭ್ಯಾಸ ಕೆಲವರಿಗೆ ಇರುತ್ತದೆ. ಇದು ಕ್ರಮೇಣ ದೊಡ್ಡವರಾದ ನಂತರವೂ ಮುಂದುವರೆಯುತ್ತದೆ. ಆದರೆ ಇದು ಗಂಭೀರ ಆರೋಗ್ಯ ಅಪಾಯವನ್ನು (health risks) ಉಂಟು ಮಾಡಬಹುದು. ಮೂಗಿನ ಒಳಗಿರುವ ಸೂಕ್ಷ್ಮ ಅಂಗಾಂಶಗಳು ಮತ್ತು ರಕ್ತನಾಳಗಳು ಸೋಂಕಿಗೆ ಒಳಗಾಗಬಹುದು, ಇದರಿಂದಾಗಿ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ಸುಲಭವಾಗಿ ದೇಹವನ್ನು ಪ್ರವೇಶಿಸಬಹುದು. ಮೂಗಿನ ಒಳಗೆ ಕೈ ಹಾಕುವುದರಿಂದ ಸೈನಸ್, ಮೂಗು ಮತ್ತು ಗಂಟಲಿನ ಸೋಂಕುಗಳ ಅಪಾಯ ಹೆಚ್ಚಾಗುತ್ತದೆ. ಕೈಗಳಲ್ಲಿರುವ ಸೂಕ್ಷ್ಮಜೀವಿಗಳು ನೇರವಾಗಿ ಮೂಗಿಗೆ ತಲುಪಿ ಶೀತ, ಜ್ವರ ಅಥವಾ ಮೂಗಿನ ಉರಿಯೂತದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಇದನ್ನು ಹೊರತುಪಡಿಸಿ, ರಕ್ತದ ಸೋಂಕನ್ನು ಅಥವಾ ಮೂಗಿನ ಅಂಗಾಂಶದಲ್ಲಿ ಗಾಯಗಳನ್ನು ಉಂಟುಮಾಡುವ ಸಾಧ್ಯತೆ ಇದೆ.
ಮೂಗಿನ ಒಳಗೆ ಕೈ ಹಾಕುವ ಕಾರಣದಿಂದ ಕೈಗಳು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳಿಂದ ತುಂಬಿರುತ್ತವೆ. ಈ ಸೂಕ್ಷ್ಮಜೀವಿಗಳು ನೇರವಾಗಿ ದೇಹವನ್ನು ಪ್ರವೇಶಿಸಬಹುದು, ಆದ್ದರಿಂದ ಕೈಗಳನ್ನು ತೊಳೆಯುವುದು ಮತ್ತು ಉಗುರುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಈ ಅಭ್ಯಾಸವು ಆರೋಗ್ಯಕ್ಕೆ ಅಪಾಯಕಾರಿ ಮಾತ್ರವಲ್ಲದೆ ಸಾಮಾಜಿಕವಾಗಿ ಮುಜುಗರಕ್ಕೂ ಕಾರಣವಾಗಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಈ ಅಭ್ಯಾಸವನ್ನು ಅನುಚಿತವೆಂದು ಪರಿಗಣಿಸಲಾಗುತ್ತದೆ ಮತ್ತು ಇತರರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.
ಇದನ್ನೂ ಓದಿ: ಪ್ರತಿದಿನ ಬೆಳಗ್ಗೆ ಈ 5 ಸುಲಭ ಯೋಗಾಸನಗಳನ್ನು ಮಾಡಿ, ಆರೋಗ್ಯಕರವಾಗಿರಿ
ಈ ಅಭ್ಯಾಸವನ್ನು ಬಿಡಲು ಕೆಲವು ಸುಲಭ ವಿಧಾನಗಳನ್ನು ಅಳವಡಿಸಿಕೊಳ್ಳಬಹುದು
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ