ಪರೀಕ್ಷೆಗಳು (Exams) ಪ್ರತಿ ವಿದ್ಯಾರ್ಥಿಯ (Students) ಶೈಕ್ಷಣಿಕ ಪ್ರಯಾಣದ ಅನಿವಾರ್ಯ ಭಾಗವಾಗಿದೆ. ಈ ಪರೀಕ್ಷೆಯ ಸಮಯದಲ್ಲಿ ನಿಯಮಿತವಾದ ಮತ್ತು ಆರೋಗ್ಯಕರವಾದ ಊಟ ಮತ್ತು ತಿಂಡಿಗಳನ್ನು(Food) ತಿನ್ನುವುದು ನಿಮ್ಮ ಮಕ್ಕಳು ಓದುವಾಗ ಹೆಚ್ಚು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಬೆಳಗಿನ ಉಪಾಹಾರವು ಆಹಾರದ ಅತ್ಯಗತ್ಯ ಅಂಶವಾಗಿದೆ. ಬೆಳಗಿನ ತಿಂದಿವನ್ನು ಸೇವಿಸದೇ ಇರುವುದು ದೇಹಕ್ಕೆ ಹಾನಿಕರ. ಹೆಚ್ಚು ಹೊತ್ತು ಉಪವಾಸವಿದ್ದರೆ ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಇಳಿಕೆಗೆ ಕಾರಣವಾಗುತ್ತದೆ. ಇದು ನಿಮ್ಮ ಮಗುವಿನ ಗಮನದ ಮೇಲೆ ಪರಿಣಾಮ ಬೀರುತ್ತದೆ.
ಎಕ್ಸಾಂ ಸ್ಟ್ರೆಸ್ ಇದ್ದರೆ ನಿಮ್ಮ ಮಗುವಿಗೆ ವಾಕರಿಕೆ ಬಂದಂತೆ ಅನಿಸಬಹುದು. ಪರೀಕ್ಷೆಯ ಮೊದಲು ಆರೋಗ್ಯಕರ ಆಹಾರವನ್ನು ಹೊಟ್ಟೆ ತುಂಬ ತಿನ್ನುವುದು ಮುಖ್ಯ. ಮಕ್ಕಳ ಮೆದುಳು ಪರಿಣಾಮಕಾರಿಯಾಗಿ ಕೆಲಸ ಮಾಡಲು ಆಹಾರದಿಂದ ಸಿಗುವ ಶಕ್ತಿಯ ಅಗತ್ಯವಿರುತ್ತದೆ ಮತ್ತು ಪರೀಕ್ಷೆಯ ಮೊದಲು ಆಹಾರ ಸೇವನೆಯಿಂದ ನಿಮ್ಮ ಮಗುವಿನ ಮಾನಸಿಕ ಗಮನವನ್ನು ಪರೀಕ್ಷೆಯ ಮೇಲೆ ಇರಿಸುತ್ತದೆ.
ಇದನ್ನೂ ಓದಿ: ಚಿಪ್ಸ್, ನೂಡಲ್ಸ್, ಸಂಸ್ಕರಿಸಿದ ಆಹಾರದಿಂದ ಅಕಾಲಿಕ ಮರಣಕ್ಕೆ ಆಹ್ವಾನ; ವಿಶ್ವ ಆರೋಗ್ಯ ಸಂಘಟನೆ ವರದಿ
ಪರೀಕ್ಷಾ ಸಮಯದಲ್ಲಿ ಮಕ್ಕಳ ಡಯಟ್ನಲ್ಲಿ ಪೋಷಕರು ಸೇರಿಸಬೇಕಾದ ಆರೋಗ್ಯಕರ ಆಹಾರದ ಪಟ್ಟಿ ಇಲ್ಲಿದೆ:
Published On - 3:01 pm, Sun, 12 March 23