AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಚಿಪ್ಸ್, ನೂಡಲ್ಸ್, ಸಂಸ್ಕರಿಸಿದ ಆಹಾರದಿಂದ ಅಕಾಲಿಕ ಮರಣಕ್ಕೆ ಆಹ್ವಾನ; ವಿಶ್ವ ಆರೋಗ್ಯ ಸಂಘಟನೆ ವರದಿ

ದೇಹದಲ್ಲಿನ ನೀರು ಮತ್ತು ಖನಿಜಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸೋಡಿಯಂ ಪ್ರಮುಖ ಪೋಷಕಾಂಶವಾಗಿದೆ. ಸೋಡಿಯಂ ಅಂದರೆ ಉಪ್ಪಿನ ಅಧಿಕ ಸೇವನೆಯು ಅನೇಕ ದೀರ್ಘಕಾಲದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ

Health Tips: ಚಿಪ್ಸ್, ನೂಡಲ್ಸ್, ಸಂಸ್ಕರಿಸಿದ ಆಹಾರದಿಂದ ಅಕಾಲಿಕ ಮರಣಕ್ಕೆ ಆಹ್ವಾನ; ವಿಶ್ವ ಆರೋಗ್ಯ ಸಂಘಟನೆ ವರದಿ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on: Mar 11, 2023 | 2:43 PM

Share

ದೇಹದ ಸಮತೋಲನವನ್ನು ಕಾಪಾಡಿಕೊಳ್ಳಲು ಸೋಡಿಯಂ ಪ್ರಮುಖ ಪೋಷಕಾಂಶವಾಗಿದ್ದರೂ, ಹೆಚ್ಚಿನ ಪ್ರಮಾಣದ ಸೋಡಿಯಂ ಸೇವನೆಯು ಅನೇಕ ದೀರ್ಘಕಾಲದ ಕಾಯಿಲೆಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಇದು ಅಕಾಲಿಕ ಮರಣದ ಅಪಾಯವನ್ನು ಉಂಟುಮಾಡುತ್ತದೆ. ಹೆಚ್ಚು ಉಪ್ಪನ್ನು ತಿನ್ನುವುದರಿಂದ ಇದು ನಮ್ಮ ಹೃದಯದ ಕಾಯಿಲೆ, ಪಾರ್ಶ್ವವಾಯು ಮತ್ತು ಅಕಾಲಿಕ ಮರಣದ ಅಪಾಯವನ್ನು ಹೆಚ್ಚಿಸುತ್ತದೆ. ವಿಶ್ವಸಂಸ್ಥೆಯ ವಿಶ್ವ ಆರೋಗ್ಯ ಸಂಘಟನೆಯ ಸೋಡಿಯಂ ಸೇವನೆಯ ಕಡಿತದ ಕುರಿತ ಮೊದಲ ಜಾಗತಿಕ ವರದಿಯು 2025ರ ವೇಳೆಗೆ ಪ್ರಪಂಚವು ಸೋಡಿಯಂ ಸೇವನೆಯನ್ನು 30% ನಷ್ಟು ಕಡಿಮೆ ಮಾಡುವ ಜಾಗತಿಕ ಗುರಿಯನ್ನು ಸಾಧಿಸಲು ಹೊರಗುಳಿದಿದೆ ಎಂದು ತೋರಿಸುತ್ತದೆ. ಹಾಗೂ WHO ಸದಸ್ಯ ರಾಷ್ಟ್ರಗಳಲ್ಲಿ 5% ಮಾತ್ರ ಕಡ್ಡಾಯ ಹಾಗೂ ಸಮಗ್ರ ಸೋಡಿಯಂ ನೀತಿಯನ್ನು ಜಾರಿಗೊಳಿಸಲಾಗಿದೆ ಎಂದು ವರದಿ ಹೇಳಿದೆ.

ದೇಹದಲ್ಲಿನ ನೀರು ಮತ್ತು ಖನಿಜಗಳ ಸಮತೋಲನವನ್ನು ಕಾಪಾಡಿಕೊಳ್ಳಲು ಸೋಡಿಯಂ ಪ್ರಮುಖ ಪೋಷಕಾಂಶವಾಗಿದೆ. ಸೋಡಿಯಂ ಅಂದರೆ ಉಪ್ಪಿನ ಅಧಿಕ ಸೇವನೆಯು ಅನೇಕ ದೀರ್ಘಕಾಲದ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ ಹಾಗೂ ಅಕಾಲಿಕ ಮರಣಕ್ಕೂ ಕಾರಣವಾಗುತ್ತದೆ. ಸೋಡಿಯಂನ ಮುಖ್ಯ ಮೂಲವೆಂದರೆ ಪುಡಿ ಉಪ್ಪು (ಸೋಡಿಯಂ ಕ್ಲೋರೈಡ್), ಆದರೆ ಇದು ಸೋಡಿಯಂ ಗ್ಲುಟಮೇಟ್‌ನಂತಹ ಇತರ ಅಂಶಗಳನ್ನೂ ಹೊಂದಿದೆ. ಫಾಸ್ಟ್ ಫುಡ್, ಚಿಪ್ಸ್, ಸಂಸ್ಕರಿಸಿದ ತಿಂಡಿಗಳು, ಸೂಪ್‌ಗಳು, ಸಂಸ್ಕರಿಸಿದ ಮಾಂಸಗಳು, ಇನ್‌ಸ್ಟೆಂಟ್ ನೂಡಲ್ಸ್ ಇವೆಲ್ಲವೂ ಹೆಚ್ಚಾಗಿ ಸೋಡಿಯಂ ಗ್ಲುಟಮೇಟ್‌ನ್ನು ಹೊಂದಿರುತ್ತದೆ. ಹಾಗೂ ಇಂತಹ ಆಹಾರ ಪದಾರ್ಥಗಳ ನಿಯಮಿತ ಸೇವನೆಯು ನಮ್ಮ ಆರೋಗ್ಯದ ಮೇಲೆ ಹಾನಿಯುಂಟುಮಾಡುತ್ತವೆ.

ಇದನ್ನೂ ಓದಿ: Health Tips : ಸ್ಟಾರ್ ಹಣ್ಣಿನಿಂದ ಆರೋಗ್ಯ ವೃದ್ಧಿ

ಹೆಚ್ಚಿನ ಪ್ರಮಾಣದ ಸೋಡಿಯಂ ಸೇವನೆಯು ಗ್ಯಾಸ್ಟಿಕ್, ಕ್ಯಾನ್ಸರ್, ಸ್ಥೂಲಕಾಯತೆ, ಆಸ್ಟಿಯೊಪೊರೋಸಿಸ್ ಮತ್ತು ಮೂತ್ರಪಿಂಡದ ಕಾಯಿಲೆಯಂತಹ ಆರೋಗ್ಯ ಸಂಬಂಧಿ ಕಾಯಿಲೆಗಳು ಕಾಣಿಸಿಕೊಳ್ಳಬಹುದು ಎಂದು ವರದಿ ಹೇಳುತ್ತದೆ. ಆರೋಗ್ಯಕರವಲ್ಲದ ಆಹಾರಗಳ ಸೇವನೆಯು ಹಾಗೂ ಅತಿಯಾದ ಸೋಡಿಯಂ ಸೇವನೆಯು ಜಾಗತಿಕ ಮಟ್ಟದಲ್ಲಿ ಅಕಾಲಿಕ ಮರಣ ಮತ್ತು ಸಾವುಗಳಿಗೆ ಮುಖ್ಯ ಕಾರಣ ಎಂದು WHOನ ಮಹಾನಿರ್ದೇಶಕ ಡಾ. ಟೆಡ್ರೋಸ್ ಅಧಾನಮ್ ಘೆಬ್ರೆಯೆಸಸಸ್ ಹೇಳಿದರು.

ಹೆಚ್ಚಿನ ದೇಶಗಳಲ್ಲಿ ಇನ್ನೂ ಯಾವುದೇ ಕಡ್ಡಾಯ ಸೋಡಿಯಂ ಕಡಿತ ನೀತಿಗಳನ್ನು ಅಳವಡಿಸಿಲ್ಲ ಎಂದು WHO ವರದಿ ಹೇಳುತ್ತದೆ. ರಾಷ್ಟ್ರಗಳು ಕಠಿಣ ಕ್ರಮಗಳನ್ನು ಅನುಸರಿಸದೆ ತಮ್ಮ ಜನರನ್ನು ಹೃದಯಾಘಾತ, ಪಾರ್ಶ್ವವಾಯು ಮತ್ತು ಇತರ ಆರೋಗ್ಯ ಸಮಸ್ಯೆಗಳ ಅಪಾಯಕ್ಕೆ ಸಿಲುಕಿಸುತ್ತಿದೆ ಎಂದು ಹೇಳಿದೆ. ಸೋಡಿಯಂ ಸೇವನೆ ಕಡಿತಕ್ಕಾಗಿ ‘ಬೆಸ್ಟ್ ಬೈಸ್’ನ್ನು ಜಾರಿಗೆ ತರಲು WHO ಎಲ್ಲಾ ದೇಶಗಳಿಗೆ ಕರೆ ನೀಡಿದೆ. ಮತ್ತು ಆಹಾರ ತಯಾರಕರ ಮೇಲೆ ಸೋಡಿಯಂ ಮಟ್ಟದ ಮಾನದಂಡವನ್ನು ಅಳವಡಿಸಲು ಕೆಲವೊಂದು ನೀತಿಗಳನ್ನು ಜಾರಿಗೆ ತಂದಿದೆ.

ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ