Fatty liver disease: ನಿಮ್ಮ ಚರ್ಮದ ಮೇಲೆ ಇಂತಹ ಲಕ್ಷಣ ಕಂಡುಬಂದರೆ ಎಂದಿಗೂ ನಿರ್ಲಕ್ಷ್ಯಿಸದಿರಿ

ನಿಮ್ಮ ಚರ್ಮದ ಮೇಲಿನ ಕೆಲವೊಂದು ಬದಲಾವಣೆಗಳು ನಿಮ್ಮ ಯಕೃತ್ತಿನ ಕಾಯಿಲೆಯ ಪ್ರಾರಂಭಿಕ ಲಕ್ಷಣಗಳಾಗಿರಬಹುದು. ಆದ್ದರಿಂದ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯಿಸದಿರಿ.

Fatty liver disease: ನಿಮ್ಮ ಚರ್ಮದ ಮೇಲೆ ಇಂತಹ ಲಕ್ಷಣ ಕಂಡುಬಂದರೆ ಎಂದಿಗೂ ನಿರ್ಲಕ್ಷ್ಯಿಸದಿರಿ
ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆImage Credit source: Times Now
Follow us
ಅಕ್ಷತಾ ವರ್ಕಾಡಿ
|

Updated on:Mar 11, 2023 | 7:10 PM

ನಿಮ್ಮ ಚರ್ಮದ ಮೇಲಿನ ಕೆಲವೊಂದು ಬದಲಾವಣೆಗಳು ನಿಮ್ಮ ಯಕೃತ್ತಿನ ಕಾಯಿಲೆ(Fatty Liver Disease)ಯ ಪ್ರಾರಂಭಿಕ ಲಕ್ಷಣಗಳಾಗಿರಬಹುದು. ಆದ್ದರಿಂದ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯಿಸದಿರಿ. ಯಕೃತ್ತು(Liver) ಮಾನವ ದೇಹದಲ್ಲಿನ ಅತಿದೊಡ್ಡ ಅಂಗವಾಗಿದೆ. ಯಕೃತ್ತು ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಕೊಬ್ಬು, ಪ್ರೋಟೀನ್​, ಮತ್ತು ಕಾರ್ಬೋಹೈಡ್ರೇಟ್ ಚಯಾಪಚಯಗೊಳಿಸಲು ಹಾಗೂ ಗ್ಲೈಕೋಜೆನ್,ವಿಟಮಿನ್ ಮತ್ತು ಖನಿಜಗಳನ್ನು ಸಂಗ್ರಹಿಸುವಲ್ಲಿ ಸಹಾಯಕವಾಗಿದೆ. ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯು ಯಕೃತ್ತಿಗೆ ಸಂಬಂಧಿಸಿದ ಸಾಮಾನ್ಯ ಕಾಯಿಲೆಗಳಲ್ಲಿ ಒಂದಾಗಿದೆ. ಯಕೃತ್ತಿನಲ್ಲಿ ಕೊಬ್ಬು ಹೆಚ್ಚಾದಾಗ ಇದು ಸಂಭವಿಸುತ್ತದೆ.

ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ವಿಧಗಳು:

ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯನ್ನು ಎರಡು ವಿಧಗಳಾಗಿ ವಿಂಗಡಿಸಬಹುದು: ಆಲ್ಕೊಹಾಲ್‌ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ (NAFLD) ಮತ್ತು ಆಲ್ಕೊಹಾಲ್‌ಯುಕ್ತ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ. ಆಲ್ಕೊಹಾಲ್‌ಯುಕ್ತವಲ್ಲದ ಕಾಯಿಲೆ ಅಧಿಕ ತೂಕ ಅಥವಾ ಬೊಜ್ಜು ಹೊಂದಿರುವ ಜನರಲ್ಲಿ ಕಂಡುಬರುತ್ತದೆ. ಆಲ್ಕೊಹಾಲ್‌ಯುಕ್ತ ಕಾಯಿಲೆಯು ಅತಿಯಾದ ಕುಡಿಯುವಿಕೆಯ ಜನರಲ್ಲಿ ಕಂಡುಬರುತ್ತದೆ. ಇವೆರಡೂ ಯಕೃತ್ತಿಗೆ ಗಂಭೀರ ಹಾನಿಯನ್ನು ಉಂಟುಮಾಡಬಹುದು.

ಇದನ್ನೂ ಓದಿ: ಮಕ್ಕಳಲ್ಲಿ ಹೆಚ್ಚಾಗಿ ಕಂಡುಬರುವ ಚರ್ಮದ ಸಾಂಕ್ರಾಮಿಕ ಸೋಂಕಿಗೆ ಆರ್ಯುವೇದದ ಸಲಹೆ ಇಲ್ಲಿದೆ

ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಯ ಸಾಮಾನ್ಯ ಲಕ್ಷಣಗಳೆಂದರೆ: –

  • ಹೊಟ್ಟೆ ನೋವು ಅಥವಾ ಉಬ್ಬುವುದು,
  • ವಾಕರಿಕೆ,
  • ಹಸಿವಿನ ಕೊರತೆ ಅಥವಾ ತೂಕ ನಷ್ಟ
  • ಊದಿಕೊಂಡ ಹೊಟ್ಟೆ ಮತ್ತು ಕಾಲುಗಳು
  • ಆಯಾಸ, ವಿಪರೀತ ದಣಿವು ಅಥವಾ ಮಾನಸಿಕ ಗೊಂದಲ, ದೌರ್ಬಲ್ಯ

ನಿಮ್ಮ ಚರ್ಮದ ಮೇಲೆ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ:

ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಸಿರೋಸಿಸ್ ಕಾಯಿಲೆಗೆ ಕಾರಣವಾಗಬಹುದು. ಸಿರೋಸಿಸ್ ಯಕೃತ್ತಿನ ಸಮಸ್ಯೆಗಳ ಅತ್ಯಂತ ಮುಂದುವರಿದ ಹಂತವಾಗಿದೆ. ಎನ್​​ ಹೆಚ್​​ ಎಸ್​​ ಇನ್ಫಾರ್ಮ್ ಪ್ರಕಾರ, ಸಿರೋಸಿಸ್ ನಿರಂತರ, ದೀರ್ಘಕಾಲದ ಯಕೃತ್ತಿನ ಹಾನಿಯಿಂದ ಉಂಟಾಗುವ ಯಕೃತ್ತಿನ ಕಾಯಿಲೆ. ಇದು ಯಕೃತ್ತಿನ ಕೆಲಸಕ್ಕೆ ಅಡ್ಡಿಯುಂಟು ಮಾಡುತ್ತದೆ. ಅಂತಿಮವಾಗಿ ನಿಮ್ಮ ಯಕೃತ್ತು ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಇದನ್ನು ಪಿತ್ತಜನಕಾಂಗದ ವೈಫಲ್ಯ ಎಂದು ಕರೆಯಲಾಗುತ್ತದೆ. ಸಿರೋಸಿಸ್​​ನ ಮೂರು ಸಾಮಾನ್ಯ ಚಿಹ್ನೆಗಳು ಚರ್ಮದ ಮೇಲೆ ಉದ್ಭವಿಸಬಹುದು. ಚರ್ಮದ ತುರಿಕೆ, ಹಳದಿ ಚರ್ಮ (ಕಾಮಾಲೆ) ಇದರ ಲಕ್ಷಣಗಳಾಗಿವೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 7:10 pm, Sat, 11 March 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್