Sleeping Disorder: ಮಲಗುವ ಮುನ್ನ ಈ ಆಹಾರಗಳ ಸೇವನೆ ಮಾಡುವ ಅಭ್ಯಾಸವಿದ್ದರೆ ತೊಂದರೆ ತಪ್ಪಿದ್ದಲ್ಲ
ನಿದ್ರಾಹೀನತೆ: ಆರೋಗ್ಯ ಕಾಪಾಡಿಕೊಳ್ಳಲು ಒಳ್ಳೆಯ ಆಹಾರ ಸೇವನೆ ಮಾಡುವುದು ಮಾತ್ರವಲ್ಲ, ನಿದ್ರೆ ಸರಿಯಾಗಿ ಮಾಡುವುದು ಕೂಡ ತುಂಬಾ ಮುಖ್ಯವಾಗುತ್ತದೆ. ಆದರೆ ಪ್ರಸ್ತುತ ದಿನಗಳಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ನಿದ್ರೆಯೂ ಒಂದು. ಒಬ್ಬ ವ್ಯಕ್ತಿಯು ನಿರ್ದಿಷ್ಟ ಸಮಯಕ್ಕಿಂತ ಕಡಿಮೆ ನಿದ್ರೆ ಮಾಡಿದರೆ, ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಉದ್ಭವಿಸಬಹುದು. ಹಾಗಾಗಿ ವೈದ್ಯರು ಮಲಗುವ ಮೊದಲು ಕೆಲವು ಆಹಾರಗಳಿಂದ ದೂರವಿರಿ ಎನ್ನುತ್ತಾರೆ. ಈ ರೀತಿ ಆರೋಗ್ಯಕರ ಅಭ್ಯಾಸ ರೂಢಿಸಿಕೊಂಡರೆ ನಿದ್ರೆಯೂ ಚೆನ್ನಾಗಿ ಬರುತ್ತದೆ ಜೊತೆಗೆ ಆರೋಗ್ಯವೂ ಚೆನ್ನಾಗಿರುತ್ತದೆ.

“ನಿದ್ದೆ ಸರಿಯಾಗಿ ಮಾಡು ಆರೋಗ್ಯ (Health) ಚೆನ್ನಾಗಿರುತ್ತೆ” ಈ ರೀತಿ ಹಿರಿಯರು ಹೇಳುವ ಮಾತನ್ನು ನೀವೂ ಕೇಳಿರಬಹುದು. ಹೌದು. ಆರೋಗ್ಯ ಚೆನ್ನಾಗಿ ಇರಬೇಕು ಎಂದರೆ ನಮ್ಮ ಆಹಾರ ಕ್ರಮದ (Diet) ಜೊತೆಗೆ ನಿದ್ರೆಯೂ ಸರಿಯಾಗಿ ಮಾಡಬೇಕಾಗುತ್ತದೆ. ಆದರೆ ಪ್ರಸ್ತುತ ದಿನಗಳಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ನಿದ್ರೆಯೂ ಒಂದು. ಒಬ್ಬ ವ್ಯಕ್ತಿ ನಿರ್ದಿಷ್ಟ ಸಮಯಕ್ಕಿಂತ ಕಡಿಮೆ ನಿದ್ರೆ ಮಾಡಿದರೆ, ವಿವಿಧ ಆರೋಗ್ಯ ಸಮಸ್ಯೆಗಳು ಬೇಡ ಎಂದರೂ ಬೆನ್ನಟ್ಟಿ ಬರುತ್ತದೆ. ಅದಲ್ಲದೆ ನಾವು ಸೇವನೆ ಮಾಡುವ ಆಹಾರ (Food) ಮತ್ತು ನಿದ್ರೆಗೆ ತುಂಬಾ ಸಾಮ್ಯತೆಗಳಿರುವುದರಿಂದ, ನಿದ್ರೆ ಸರಿಯಾಗಿ ಬರದಿರುವುದಕ್ಕೆ ತಿನ್ನುವ ಆಹಾರ ಕೂಡ ಕಾರಣವಾಗಿರಬಹುದು. ಅದಕ್ಕಾಗಿಯೇ ವೈದ್ಯರು ಮಲಗುವ ಮೊದಲು ಕೆಲವು ಆಹಾರಗಳಿಂದ ದೂರವಿರಿ ಎನ್ನುತ್ತಾರೆ. ಹಾಗಾದರೆ ಯಾವ ಆಹಾರಗಳು ನಮ್ಮ ನಿದ್ರೆಯನ್ನು ಹಾಳು ಮಾಡುತ್ತದೆ (Sleeping Disorder) ಎಂಬುದನ್ನು ತಿಳಿದುಕೊಳ್ಳಿ.
ಮಾಂಸಾಹಾರ:
ಸಾಮಾನ್ಯವಾಗಿ ಕೊಬ್ಬು ಮತ್ತು ಪ್ರೋಟೀನ್ ಅಂಶಗಳು ಮಾಂಸದಲ್ಲಿ ಅಧಿಕವಾಗಿರುತ್ತವೆ. ಇದು ಜೀರ್ಣವಾಗಲು ಸಹ ಬಹಳ ಸಮಯ ತೆಗೆದುಕೊಳ್ಳುತ್ತದೆ. ಅದಕ್ಕಾಗಿಯೇ ರಾತ್ರಿ ಸಮಯದಲ್ಲಿ ಮಾಂಸಾಹಾರದಿಂದ ದೂರವಿರುವುದು ಉತ್ತಮ ಎಂದು ಹೇಳಲಾಗುತ್ತದೆ.
ಮಸಾಲೆಯುಕ್ತ ಆಹಾರ:
ಪ್ರತಿನಿತ್ಯ ಯಾವುದೇ ಸಮಯವಾದರೂ ಸರಿ, ಮಸಾಲೆಯುಕ್ತ ಆಹಾರವನ್ನು ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಅದರಲ್ಲಿಯೂ ರಾತ್ರಿಯ ಊಟಕ್ಕೆ ಮಸಾಲೆಯುಕ್ತ ಆಹಾರಗಳನ್ನು ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಹೆಚ್ಚು ಕಷ್ಟಕರವಾಗಬಹುದು. ಇದು ಆಮ್ಲೀಯತೆಯ ಸಮಸ್ಯೆಗಳಿಗೂ ಕಾರಣವಾಗಬಹುದು.
ಚಹಾ ಅಥವಾ ಕಾಫಿ:
ಕೆಲವರು ರಾತ್ರಿ ಊಟ ಮಾಡಿದ ನಂತರ ಚಹಾ ಅಥವಾ ಕಾಫಿ ಕುಡಿಯುತ್ತಾರೆ. ಇವೆರಡರಲ್ಲಿಯೂ ಕೆಫೀನ್ ಇರುತ್ತದೆ. ಮಲಗುವ ಮುನ್ನ ಚಹಾ ಅಥವಾ ಕಾಫಿ ಕುಡಿಯುವುದರಿಂದ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಜೊತೆಗೆ ನಿದ್ರಾಹೀನತೆಯಂತಹ ಸಮಸ್ಯೆಗೆ ಕಾರಣವಾಗುತ್ತದೆ. ಅದಕ್ಕಾಗಿ ಬೆಳಿಗ್ಗೆ ಅಥವಾ ಮಧ್ಯಾಹ್ನದ ಸಮಯ ಕಾಫಿ ಕುಡಿಯಿರಿ. ಆದರೆ ರಾತ್ರಿ ಸಮಯದಲ್ಲಿ ಇವುಗಳ ಸೇವನೆ ಒಳ್ಳೆಯದಲ್ಲ.
ಇದನ್ನೂ ಓದಿ: ಪ್ರತಿದಿನ ನೀವು ಮಾಡುವ ಈ 4 ತಪ್ಪುಗಳು ರಾತ್ರಿಯ ನಿದ್ರೆಗೆ ಭಂಗ ತರುತ್ತೆ
ಜಂಕ್ ಫುಡ್:
ಹೆಚ್ಚಿನ ಪ್ರಮಾಣದಲ್ಲಿ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರು ಜಂಕ್ ಫುಡ್ ಗಳು ಸುಲಭವಾಗಿ ಜೀರ್ಣವಾಗುವುದಿಲ್ಲ. ಹಾಗಾಗಿ ರಾತ್ರಿ ಸಮಯದಲ್ಲಿ ಜಂಕ್ ಫುಡ್ ತಿನ್ನುವುದರಿಂದ ನಿದ್ರೆಗೆ ತೊಂದರೆಯಾಗುತ್ತದೆ. ಅದಲ್ಲದೆ ಈ ರೀತಿಯ ಅಭ್ಯಾಸ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ